Vijayanagara: ಐತಿಹಾಸಿಕ ಹಂಪಿಯ ಸ್ಮಾರಕದ ಸೌಂದರ್ಯಕ್ಕೆ ಮನಸೋತ ಜೆಪಿ ನಡ್ಡಾ
ಐತಿಹಾಸಿಕ ಹಂಪಿಯನ್ನು ನೋಡೋದೇ ಒಂದು ಆನಂದ. ಇದಕ್ಕಾಗಿ ದೇಶ ವಿದೇಶಗಳಿಂದ ಜನರು ಬರೋದು ವಾಡಿಕೆ. ಅದೆಷ್ಟೇ ಬಾರಿ ನೋಡಿದರೂ ಯಾವುದಾದರೊಂದು ಕೆಲಸಕ್ಕೆ ಹೊಸಪೇಟೆ ಬಂದ್ರೂ ಮತ್ತೊಮ್ಮೆ ಹಂಪಿಯನ್ನು ನೀಡಬೇಕೆಂದು ಜನರು ಬರುತ್ತಾರೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ (ಏ.18): ಐತಿಹಾಸಿಕ ಹಂಪಿಯನ್ನು (Historic Hampi) ನೋಡೋದೇ ಒಂದು ಆನಂದ. ಇದಕ್ಕಾಗಿ ದೇಶ ವಿದೇಶಗಳಿಂದ ಜನರು ಬರೋದು ವಾಡಿಕೆ. ಅದೆಷ್ಟೇ ಬಾರಿ ನೋಡಿದರೂ ಯಾವುದಾದರೊಂದು ಕೆಲಸಕ್ಕೆ ಹೊಸಪೇಟೆ ಬಂದ್ರೂ ಮತ್ತೊಮ್ಮೆ ಹಂಪಿಯನ್ನು ನೀಡಬೇಕೆಂದು ಜನರು ಬರುತ್ತಾರೆ. ಹೀಗೆ ಇವತ್ತು ವಿಶ್ವ ವಿಖ್ಯಾತ ಹಂಪಿಗಿಂದು ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ (BJP President JP Nadda) ಕುಟುಂಬ ಸಮೇತರಾಗಿ ಆಗಮಿಸಿ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತರು.
ವಿಜಯನಗರ ಸಾಮ್ರಾಜ್ಯದ ವೈಭವ ಕಣ್ತುಂಬಿಕೊಂಡ್ರು: ವಿಜಯನಗರ ಸಾಮ್ರಾಜ್ಯದ ವೈಭವ ಕಂಡು ಅಚ್ಚರಿ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರಧ್ಯಕ್ಷ ನಡ್ಡಾ ಸಪ್ತ ಸ್ವರಗಳಗಳಿಗೆ ಕಿವಿಗೊಟ್ಟು ಆಲಿಸಿದರು. ಹೌದು! ಹಂಪಿಯ ಸೊಬಗು. ಸ್ಮಾರಕಗಳ ಕಲಾವೈಭವ. ಸಾಲು ಕಂಬಗಳು. ಸಾವಿರಾರು ಸ್ಮಾರಕಗಳು ನೋಡುವುದೇ ಕಣ್ಣಿಗೆ ಹಬ್ಬ. ಅಂತಹ ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಗಿಂದು ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ ಕುಟುಂಬ (Family) ಸಮೇತರಾಗಿ ಭೇಟಿ ಇಡೀ ದಿನ ಸ್ಮಾರಕಗಳನ್ನು ವೀಕ್ಷಿಸಿ ಬೆರಗಾದರು. ನಿನ್ನೆ ಇಡೀ ದಿನ ಹೊಸಪೇಟೆಯಲ್ಲಿ ನಡೆದ ಬಿಜೆಪಿ (BJP) ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬ್ಯೂಸಿಯಾಗಿದ್ದ ಜೆಪಿ ನಡ್ಡಾ ಇಂದು ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯೊಂದಿಗೆ ಹಂಪಿಗೆ ಭೇಟಿ ನೀಡಿ ಸ್ಮಾರಕಗಳ ವೀಕ್ಷಣೆ ಮಾಡಿದರು.
ಭಾವನಾತ್ಮಕ ವಿಚಾರಗಳಷ್ಟೇ ಚುನಾವಣೆ ಗೆಲ್ಲಿಸಲ್ಲ: ಜೆಪಿ ನಡ್ಡಾ
ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ: ಬೆಳ್ಳ ಬೆಳ್ಳಿಗ್ಗೆ ಹಂಪಿಯ ವಿರುಪಾಕ್ಷೇಶ್ವರ ದೇವಾಲಯಕ್ಕೆ ಆಗಮಿಸಿದ ಜೆಪಿ ನಡ್ಡಾಗೆ ವಿರುಪಾಕ್ಷೇಶ್ವರ ದೇಗುಲದ ಆನೆಯಿಂದ ಮಾರ್ಲಾಪಣೆ ಮಾಡಿಸಲಾಯಿತು. ನಂತರ ವಿರೂಪಾಕ್ಷೇಶ್ವರನಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹಂಪಿ ವಿದ್ಯಾರಣ್ಯ ಪೀಠದ ಭಾರತೀ ಸ್ವಾಮೀಜಿಗಳಿಂದ ವಿಜಯನಗರದ ಇತಿಹಾಸ ಮತ್ತು ವಿರೂಪಾಕ್ಷೇಶ್ವರನಿಗೆ ಶ್ರೀಕೃಷ್ಣ ದೇವರಾಯ ಅರ್ಪಿಸಿದ ಬಂಗಾರದ ಮುಖವಾಡದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಉದ್ದಾನ ವೀರಭದ್ರೇಶ್ವರ, ಉಗ್ರ ನಾರಸಿಂಹ, ಕಡಲೆಕಾಳು ಗಣಪ. ಸಾಸಿವೆ ಕಾಳು ಗಣಪ. ಕಮಲ್ ಮಹಲ್ ಮಹಾನವಮಿ ದಿಬ್ಬ ವೀಕ್ಷಣೆ ಮಾಡಿದರು.
ಸಪ್ತಸ್ವರ ಕಂಬಕ್ಕೆ ಕಿವಿಗೊಟ್ಟ ನಡ್ಡಾ: ಹಂಪಿಯ ಐತಿಹಾಸಿಕ ಐಕಾನ್ ವಿಜಯ ವಿಠ್ಠಲ ದೇಗುಲದಲ್ಲಿನ ಕಲ್ಲಿನ ತೇರು ವೀಕ್ಷಣೆ ಮಾಡಿದರು. ಈ ವೇಳೆ 50 ರೂಪಾಯಿ ನೋಟಿನಲ್ಲಿರುವ ಕಲ್ಲಿನ ತೇರಿನ ಭಾವಚಿತ್ರ ನೋಡಿ ಬೆರಗಾದ ನಡ್ಡಾ, ನೋಟಿನೊಂದಿಗೆ ಕಲ್ಲಿನ ರಥದ ಪೋಟೋ ತಗೆಸಿಕೊಂಡರು. ಸಪ್ತ ಸ್ವರಗಳ ಕಂಬಗಳ ನಿನಾದ ಆಲಿಸಿದ ನಡ್ಡಾ ಹಾಗೂ ಕುಟುಂಬಸ್ಥರು ಕಿವಿಗೊಟ್ಟು ಸ್ವರ ಕಂಬದಲ್ಲಿ ಬರೋ ಸ್ವರ ಆಲಿಸಿದರು. ಹಂಪಿ ವೀಕ್ಷಣೆ ನಂತರ ಮಾತನಾಡಿದ ಜೆ.ಪಿ ನಡ್ಡಾ, ಐತಿಹಾಸಿಕ ದೃಷ್ಟಿಯಿಂದ ನಮ್ಮ ಪೂರ್ವಜರು ಋಷಿ ಮುನಿಗಳು ಎಷ್ಟೊಂದು ಜ್ಞಾನಿ ಮಾಹಿತಿಯುಳ್ಳವರು ಎಂದು ತಿಳಿಯಬಹುದು. ಹಂಪಿಯನ್ನು ಯುನಸ್ಕೋ ಪಟ್ಟಿಯಲ್ಲಿ ಸೇರಿಸಲಾಗಿರೋದು ನಮ್ಮ ಹೆಮ್ಮಯ ಸಂಗತಿ. ಹಂಪಿಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.
ಬೊಮ್ಮಾಯಿ ಸಚಿವ ಸಂಪುಟದ ಕಸರತ್ತಿನ ಚೆಂಡು ಮತ್ತೆ ಹೈಕಮಾಂಡ್ ಅಂಗಳಕ್ಕೆ
ಪ್ರವಾಸಿಗರೊಂದಿಗೆ ಪೋಟೋ: ಹಂಪಿ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರೊಂದಿಗೆ ಉಭಯ ಕುಶಲೋಪರಿಯಾಗಿ ಚರ್ಚಿಸಿದ ನಡ್ಡಾ ಪ್ರವಾಸಿಗರು, ಸ್ಥಳೀಯ ಬಿಜೆಪಿ ನಾಯಕರು ಕಾರ್ಯಕರ್ತರೊಂದಿಗೆ ನಗು ಮೊಗದಿಂದಲೇ ಪೋಟೋ ತಗೆಸಿಕೊಂಡರು. ಜೆಪಿ ನಡ್ಡಾ ಹಾಗೂ ಕುಟುಂಬಸ್ಥರು ಹಂಪಿ ಸ್ಮಾರಕಗಳ ವೀಕ್ಷಣೆ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಬಿಜೆಪಿ ರಾಜಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಪ್ರವಾಸೋದ್ಯಮ ಸಚಿವ ಆನಂದಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಜೀ, ಹೆಜ್ಜೆ ಹೆಜ್ಜೆಗೂ ನಡ್ಡಾ ಕುಟುಂಬಕ್ಕೆ ಹಂಪಿಯ ಇತಿಹಾಸದ ಬಗ್ಗೆ ವಿವರಿಸಿದರು.
ಪುಲ್ ರಿಲ್ಯಾಕ್ಸ್: ಸದಾ ರಾಜಕಾರಣದಲ್ಲಿ ಬ್ಯುಸಿಯಾಗಿರುತ್ತಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಇಂದು ಕುಟುಂಬದೊಂದಿಗೆ ಫುಲ್ ರಿಲಾಕ್ಸ್ ಮೂಡ್‌ನಲ್ಲಿ ಹಂಪಿ ವೀಕ್ಷಣೆ ಮಾಡಿ ಎಂಜಾಯ್ ಮಾಡಿದ್ದು, ವಿಶೇಷವಾಗಿತ್ತು.