ಪವಿತ್ರ ಅಮರನಾಥ ಯಾತ್ರೆ ಆರಂಭ, ಹಿಮಾಲಯದಲ್ಲಿ ಬಿಗಿ ಭದ್ರತೆ
ಪವಿತ್ರ ಅಮರನಾಥ ಯಾತ್ರೆ (Amarnath Yatra) ಇಂದಿನಿಂದ ಪ್ರಾರಂಭವಾಗಿದೆ. 2,750 ಯಾತ್ರಾರ್ಥಿಗಳ ತಂಡ ಇಂದು ನಸುಕಿನ ಜಾವ ಮೂಲ ಶಿಬಿರದಿಂದ ಹೊರಟಿದೆ. ಆನ್‌ಲೈನ್ (Online) ಮೂಲಕ ಈಗಾಗಲೇ 3 ಲಕ್ಷ ಭಕ್ತರು ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹಿಂದೂಗಳ ಪವಿತ್ರ ಕ್ಷೇತ್ರವಾದ ಅಮರನಾಥ ಯಾತ್ರೆ (Amarnath Yatra) ಇಂದಿನಿಂದ ಆರಂಭವಾಗಿದೆ. 2,750 ಯಾತ್ರಾರ್ಥಿಗಳ ತಂಡ ಇಂದು ನಸುಕಿನ ಜಾವ ಮೂಲ ಶಿಬಿರದಿಂದ ಹೊರಟಿದ್ದು ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ ನುನ್ವಾನ್ ಮೂಲ ಶಿಬಿರದಿಂದ ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲ ಯಾತ್ರೆಗೆ ಚಾಲನೆ ನೀಡಿದರು. ಶಿವನ ಅಮರನಾಥ ದೇವಾಲಯವು ಜಮ್ಮು ಮತ್ತು ಕಾಶ್ಮೀರದ (Jammu kashmir) ಹಿಮಾಲಯದ ಮೇಲ್ಭಾಗದಲ್ಲಿ 3,880 ಮೀಟರ್ ಎತ್ತರದಲ್ಲಿದೆ. ಆಗಸ್ಟ್ 11ರಂದು ರಕ್ಷಾ ಬಂಧನದಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ಅಮರನಾಥ ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಾಶ್ಮೀರ ಕಣಿವೆಯಲ್ಲಿ ನಿನ್ನೆ ಹಸಿರು ನಿಶಾನೆ ತೋರಿದ್ದರು. ಬಿಗಿ ಭದ್ರತಾ ವ್ಯವಸ್ಥೆ ನಡುವೆ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಯಾತ್ರೆ ಆರಂಭವಾಯಿತು. ಕಾಶ್ಮೀರ ಕಣಿವೆಯಲ್ಲಿರುವ ಅಮರನಾಥ ಗುಹ ದೇವಾಲಯಕ್ಕೆ ಈ ವರ್ಷದ 43 ದಿನಗಳ ವಾರ್ಷಿಕ ಯಾತ್ರೆ ಇಂದಿನಿಂದ ಕಾಶ್ಮೀರ ಕಣಿವೆಯ ಪಹಲ್‌ಗಾಮ್ ಮತ್ತು ಬಲ್‌ತಾಲ್ ಮಾರ್ಗಗಳಿಂದ ಆರಂಭವಾಗಲಿದೆ.
ಪ್ರವಾಸಿಗರನ್ನು ಸೆಳೆಯುತ್ತಿದೆ ಕಾಶ್ಮೀರದ ಗಡಿಯಲ್ಲಿ ಭಾರತೀಯ ಸೇನೆ ನಡೆಸ್ತಿರೋ ಕೆಫೆ
ಪವಿತ್ರ ಯಾತ್ರೆ ಅಮರನಾಥ ಯಾತ್ರೆ ಅತ್ಯಂತ ಜನಪ್ರಿಯ
ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಮಂಜುಗಡ್ಡೆಯಿಂದ ನಿರ್ಮಿತವಾಗಿರುವ ಲಿಂಗದ ದರ್ಶನವನ್ನು ಮಾಡುವ ಪವಿತ್ರ ಯಾತ್ರೆ ಅಮರನಾಥ ಯಾತ್ರೆ ಅತ್ಯಂತ ಜನಪ್ರಿಯವಾಗಿದೆ. ಪ್ರತಿವರ್ಷ ಸಾವಿರಾರು ಮಂದಿ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಶೀಶ್ನಗ್ ಮತ್ತು ಪಂಚತರ್ನಿ ಮಾರ್ಗವಾಗಿ ಬಹುತೇಕ ಕಾಲ್ನಡಿಗೆಯಲ್ಲಿ ಹೋಗುವ ಯಾತ್ರೆಗೆ ಮೂರು ದಿನ ರಾತ್ರಿ ಹಗಲು ತೆಗೆದುಕೊಳ್ಳುತ್ತದೆ. 43 ದಿನಗಳ ಅಮರನಾಥ ಯಾತ್ರೆ ಸುಗಮವಾಗಿ ಸಾಗಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಯಾತ್ರಿಗಳು ಶಾಂತಿಯಿಂದ ಸುಲಭವಾಗಿ ಭದ್ರತೆ, ಸುರಕ್ಷತೆಯೊಂದಿಗೆ ಹೋಗುವುದು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಮರನಾಥ ದೇಗುಲ ಮಂಡಳಿ ಭಕ್ತಾದಿಗಳಿಗೆ ಆನ್ ಲೈನ್ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.
ಆನ್‌ಲೈನ್ ಮೂಲಕ 3 ಲಕ್ಷ ಭಕ್ತರಿಂದ ನೋಂದಣಿ
ಆನ್‌ಲೈನ್ (Online) ಮೂಲಕ ಈಗಾಗಲೇ 3 ಲಕ್ಷ ಭಕ್ತರಿಂದ ಅಮರನಾಥ ಯಾತ್ರೆಗೆ ನೋಂದಣಿ (Registration) ಮಾಡಿಕೊಂಡಿದ್ದಾರೆ. ಈಗಾಗಲೇ ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗದಲ್ಲಿ ಭಾರೀ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಯಾತ್ರೆ ಆರಂಭಗೊಂಡರೂ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ. ಈಗಲೂ ಭಕ್ತರಿಗೆ ಯಾತ್ರೆಗೆ ನೋಂದಣಿ ಮಾಡಲು ಅವಕಾಶವಿದೆ ಎಂದು ಅಮರನಾಥ ಯಾತ್ರಾ ಬೋರ್ಡ್ ಹೇಳಿದೆ. ಕೊರೋನಾ ಕಾರಣದಿಂದ ಕಳೆದ 2 ವರ್ಷ ಅಮರನಾಥ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಿದೆ.
ಮೂರು ವರ್ಷದ ಹಿಂದೆ ಏರ್‌ಪೋರ್ಟ್‌ನಲ್ಲಿ ಕಳೆದುಕೊಂಡ ಬ್ಯಾಗ್ ಮರಳಿ ಸಿಕ್ಕಿದ್ದೆ ವಿಚಿತ್ರ!
ಎರಡು ದಾರಿಗಳ ಮೂಲಕ ಅಮರನಾಥ ಯಾತ್ರೆ ನಡೆಯಲಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ನುವಾನ್‌ನಿದ 48 ಕಿಲೋಮೀಟರ್ ದೂರದ ಯಾತ್ರೆ ಹಾಗೂ ಕೇಂದ್ರ ಕಾಶ್ಮೀರದ ಗುಂದೆರ್ಬಾಲ್‌ನಿಂದ 14 ಕಿಲೋಮೀಟರ್ ದೂರದ ಯಾತ್ರೆ ಮತ್ತೊಂದು ದಾರಿಯಾಗಿದೆ. ಸಾಧುಗಳು ಸೇರಿದ ಮೊದಲ ತಂಡ ಕಾಶ್ಮೀರದ ಭಗವತಿ ನಗರ ಹಾಗೂ ಜಮ್ಮು ರಾಮಮಂದಿರದಿಂದ ತೆರಳಲಿದೆ. ಅಮರನಾಥ ಯಾತ್ರೆಗೆ 13 ವರ್ಷಕ್ಕಿಂತ ಕೆಳಗಿನವರು, 75 ವರ್ಷಕ್ಕಿಂತ ಮೇಲಿನವರು ಹಾಗೂ 6 ವಾರಕ್ಕಿಂತ ಹೆಚ್ಚಿನ ಗರ್ಭಿಣಿಯರಿಗೆ ನಿರ್ಬಂಧ ಹೇರಲಾಗಿದೆ.