ಅಬುಧಾಬಿಯಲ್ಲಿ ದೃಷ್ಟಿಹೀನರಿಗಾಗಿ ಮೀಸಲು ಬೀಚ್ ತೆರೆಯಲಾಗಿದೆ. ನಡಿಗೆ ಮಾರ್ಗ, ಈಜು ಮಾರ್ಗಸೂಚಿ, ಹಗ್ಗ-ಗಂಟೆ ವ್ಯವಸ್ಥೆ, ಲೈಫ್‌ಗಾರ್ಡ್ಸ್, ವೈದ್ಯಕೀಯ ನೆರವು, ತೇಲುವ ಬೀಚ್ ಕುರ್ಚಿಗಳು, ಉಚಿತ ಸಾರಿಗೆ ಮುಂತಾದ ಸೌಲಭ್ಯಗಳಿವೆ. ಜಾಯೆದ್ ಹೈಯರ್ ಆರ್ಗನೈಸೇಶನ್ ಸಹಯೋಗದೊಂದಿಗೆ ಈ ಅಂಗವೈಕಲ್ಯ ಸ್ನೇಹಿ ಬೀಚ್ ನಿರ್ಮಿಸಲಾಗಿದೆ.
ದೃಷ್ಟಿಹೀನ (visually impaired )ಜನರು, ಪ್ರಪಂಚದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮದೆ ಕಲ್ಪನಾ ಲೋಕ ಸೃಷ್ಟಿಸಿಕೊಂಡು ಅದ್ರಲ್ಲಿ ಜೀವಿಸ್ತಾರೆ. ಸಮುದ್ರದ ಅಲೆ ಹೇಗೆ ಬರುತ್ತ, ಸಮುದ್ರದ ಕಿನಾರೆ ಹೇಗೆ ಕಾಣಿಸುತ್ತೆ ಎಂಬುದನ್ನು ಅವರು ಓದಿ, ಕೇಳಿ ತಿಳಿಯಬಲ್ಲರು. ಆದ್ರೆ ಅದನ್ನು ನೋಡಲು ಸಾಧ್ಯವಿಲ್ಲ. ಅನುಭವ ಕೂಡ ಅನೇಕರಿಗೆ ಕಷ್ಟಸಾಧ್ಯ. ಆದ್ರೆ ಇನ್ಮುಂದೆ ದೃಷ್ಟಿಹೀನರು ಯಾವುದೇ ಹಿಂಜರಿಗೆ ಇಲ್ಲದೆ ಬೀಚ್ ನಲ್ಲಿ ವಿಶ್ರಾಂತಿ ಪಡೆಯಬಹುದು. ಸಮುದ್ರದ ಕಿನಾರೆಯಲ್ಲಿ ಆಡ್ಬುಹುದು. ಅಬುಧಾಬಿ (Abu Dhabi) ಇದಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ದೃಷ್ಟಿಹೀನರು ಸಮುದ್ರದ ಕಿನಾರೆ (beach )ಯಲ್ಲಿ ಮಿಂದೇಳಲು, ಅದ್ರ ನೈಜ ಅನುಭವ ಪಡೆಯಲು ಹೊಸ ಯೋಜನೆ ಶುರು ಮಾಡಿದೆ.
ದೃಷ್ಟಿ ಹೀನರು ಮತ್ತು ಅವರ ಕುಟುಂಬಗಳಿಗಾಗಿ ಯುಎಇ (UAE)ಯ ಮೊದಲ ಮೀಸಲು ಬೀಚ್ ಉದ್ಘಾಟನೆಗೊಂದಿದೆ. ಗೇಟ್ 3 ಬಳಿಯ ಕಾರ್ನಿಚೆಯಲ್ಲಿರುವ ಈ 1,000 ಚದರ ಮೀಟರ್ ಸ್ವರ್ಗ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಪ್ರಮುಖ ಬದಲಾವಣೆ ತಂದಿದೆ. ಇದು ಕೇವಲ ಬೀಚ್ ಅಲ್ಲ. ಇದು ಎಲ್ಲರಿಗೂ ಸೇರಿದ ಭಾವನೆಯನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾದ, ಎಲ್ಲರೂ ಪ್ರವೇಶಿಸಬಹುದಾದ, ಸ್ವಾಗತಾರ್ಹ ಪ್ರವಾಸಿ ತಾಣವಾಗಿದೆ.
ರೈಲು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡೋ ಮುನ್ನ IRCTC ಸ್ಪಷ್ಟನೆ ನೋಡಿ!
ಜಾಯೆದ್ ಹೈಯರ್ ಆರ್ಗನೈಸೇಶನ್ ಸಹಯೋಗದೊಂದಿಗೆ ಈ ಬೀಚ್ ಪ್ರಾರಂಭಿಸಲಾಗಿದೆ. ಇದು, ಸಮಾನತೆ, ಘನತೆ ಮತ್ತು ಜವಾಬ್ದಾರಿ ಹಂಚಿಕೆಯನ್ನು ಪ್ರತಿಬಿಂಬಿಸುತ್ತದೆ. ಸರಳವಾಗಿ ಹೇಳೋದಾದ್ರೆ ಇದು ಪ್ರತಿಯೊಬ್ಬರೂ, ಅವರ ಸಾಮರ್ಥ್ಯಗಳನ್ನು ಲೆಕ್ಕಿಸದೆ, ಬೇರೆಯವರಂತೆ ವಿಶ್ರಾಂತಿ ಪಡೆಯಬಹುದು, ಬೀಚ್ ನಲ್ಲಿ ಆನಂದಿಸಬಹುದು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಈ ಬೀಚ್ ವಿಶೇಷತೆ ಏನು? : ದೃಷ್ಟಿಹೀನರು ಈ ಬೀಚ್ ನಲ್ಲಿ ಆರಾಮವಾಗಿ ಸುತ್ತಾಡಬಹುದು, ವಿಶ್ರಾಂತಿ ಪಡೆಯಬಹುದು. ಅವರಿಗೆ ಅನುಕೂಲವಾಗುವಂತೆ ಈ ಬೀಚ್ ವಿನ್ಯಾಸಗೊಳಿಸಲಾಗಿದೆ. ಪ್ರವಾಸಿಗರಿಗೆ ಬೆಂಬಲ ನೀಡಲು ವಿಶೇಷ ಸಾರಿಗೆ ಸೇವೆ ಲಭ್ಯವಿದೆ. ಅಲ್ಲದೆ ಅವರಿಗೆ ವಿಶೇಷ ನಡಿಗೆ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ಸುಲಭ ಮತ್ತು ಆರಾಮವಾಗಿ ಈಜಲು ಅನುಕೂಲವಾಗುವಂತೆ ಈಜು ಮಾರ್ಗಸೂಚಿ ಸೂಚನಾ ಫಲಕವಿದೆ. ಅಲ್ಲದೆ ಸಮುದ್ರದ ಕಡೆಗೆ ಇವರು ಹೋಗಲು ಅನುಕೂಲವಾಗುವಂತೆ ರಸ್ತೆ ಪಕ್ಕದಲ್ಲಿ ಹಗ್ಗ ಹಾಗೂ ಗಂಟೆ ಕಟ್ಟಿದ್ದಾರೆ. ಅದ್ರ ಸಹಾಯದಿಂದ ಪ್ರವಾಸಿಗರು ಸುಲಭವಾಗಿ ಸಮುದ್ರದ ಕಿನಾರ ತಲುಪಬಹುದು. ಸುರಕ್ಷತೆ ದೃಷ್ಟಿಯಿಂದ ವೃತ್ತಿಪರ ಲೈಫ್ ಗಾರ್ಡ್ಸ್ ಇಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ಪ್ರವಾಸಿಗರ ಮೇಲೆ ನಿರಂತರ ಗಮನ ಹರಿಸಲಿದ್ದಾರೆ.
ಆನೆ ಲದ್ದಿಯನ್ನೂ ಬಿಟ್ಟಿಲ್ಲ ಚೀನಾ, ಇದ್ರಿಂದ ಸಿದ್ಧವಾಗಿದೆ ಲಡ್ಡು!
ಈ ಸ್ಥಳದಲ್ಲಿ ಭದ್ರತೆ ಮತ್ತು ವೈದ್ಯಕೀಯ ಬೆಂಬಲ ಲಭ್ಯವಿದೆ. ಅರ್ಹ ನರ್ಸ್ ಯಾವಾಗಲೂ ಲಭ್ಯ ಇರುತ್ತಾರೆ. ವಿಶ್ವ ಅಂಗವೈಕಲ್ಯ ಒಕ್ಕೂಟವು ಇದನ್ನು ಅಧಿಕೃತವಾಗಿ ಅಂಗವೈಕಲ್ಯ ಸ್ನೇಹಿ ಬೀಚ್ ಎಂದು ನಾಮಕರಣ ಮಾಡಿದೆ. ಈ ಬೀಚ್ ಗೆ ಹೋಗಲು ದೃಷ್ಟಿಹೀನರಿಗೆ ಉಚಿತ ಪ್ರವೇಶ ಲಭ್ಯವಿದೆ. ತೇಲುವ ಬೀಚ್ ಕುರ್ಚಿಗಳನ್ನು ಇಲ್ಲಿ ಅಳವ ಸಲಾಗಿದೆ. ಶೌಚಾಲಯ, ಉಚಿತ ನೀರಿನ ವ್ಯವ ಇದ್ದು, ಬೀಚ್ ಒಳಗೆ ಮತ್ತು ಹೊರಗೆ ಉಚಿತ ಸಾರಿಗೆ ಸೇವೆ ಲಭ್ಯವಿದೆ. ಅಲ್ಲದೆ, ಪ್ರವೇಶದ್ವಾರದ ಬಳಿ ಕಾಯ್ದಿರಿಸಿದ ಪಾರ್ಕಿಂಗ್ ಸ್ಥಳಗಳಿವೆ. ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಈ ಬೀಚ್ ತೆರೆದಿರುತ್ತದೆ . ಸೂರ್ಯಾಸ್ತದವರೆಗೆ ಅಂದ್ರೆ ಸುಮಾರು 6 ಗಂಟೆಯವರೆಗೆ ಈಜಲು ಅವಕಾಶವಿದೆ. ಪ್ರವಾಸಿಗರು ತಮ್ಮದೇ ರೀತಿಯಲ್ಲಿ ಬೀಚ್ ಆನಂದ ಪಡೆಯಲು ಇದನ್ನು ವ್ಯವಸ್ಥೆ ಮಾಡಲಾಗಿದೆ.
