ಶಾಂಘೈನ ಕ್ಯಾನೋಪಿಯಾ ರೆಸ್ಟೋರೆಂಟ್ ಆನೆ ಸಗಣಿಯಿಂದ ಲಡ್ಡು ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ. 42 000 ರೂ. ಬೆಲೆಯ ವಿಶೇಷ ಥಾಲಿಯಲ್ಲಿ ಈ ಲಡ್ಡು ಸೇರಿದಂತೆ 14 ಖಾದ್ಯಗಳಿವೆ. ಸಂಶೋಧನೆ ಆಧರಿಸಿ ತಯಾರಿಸಿದ ಈ ಆಹಾರದ ವಿಡಿಯೋ ವೈರಲ್ ಆಗಿದ್ದು, ಅಸಹ್ಯಕರ ಎಂಬ ಟೀಕೆ ವ್ಯಕ್ತವಾಗಿದೆ. ಸ್ಥಳೀಯರೇ ಇದನ್ನು ತಿನ್ನುವುದಿಲ್ಲ ಎಂದಿದ್ದಾರೆ.
ವಿಚಿತ್ರ ಅಡುಗೆಯಿಂದಲೇ ಚೀನಾ (China) ಪ್ರಸಿದ್ಧಿ ಪಡೆದಿದೆ. ಜಿರಲೆ, ಹಾವು, ನಾಯಿ ಯಾವ್ದನ್ನೂ ಅವರು ಬಿಡೋದಿಲ್ಲ ಎನ್ನುವ ಮಾತಿದೆ. ತಿನ್ನಬಾರದ ತಿಂಡಿಯನ್ನೆಲ್ಲ ತಿಂದು ಹೊಸ ರೋಗ ಬರಿಸಿಕೊಳ್ಳೋದ್ರಲ್ಲಿ ಕೂಡ ಚೀನಾ ಮೇಲುಗೈ ಸಾಧಿಸಿದೆ. ಈಗ ಚೀನಾದ ಇನ್ನೊಂದು ರೆಸ್ಟೋರೆಂಟ್ (Restaurant) ಸುದ್ಧಿಯಲ್ಲಿದೆ. ಅಲ್ಲಿ ಸಿಗುವ ಆಹಾರ ತಿನ್ನಲು ಜನರು ಕ್ಯೂನಲ್ಲಿ ನಿಲ್ಲುತ್ತಾರೆ. ದುಬಾರಿ ಬೆಲೆ ನೀಡಿ ಆಹಾರದ ರುಚಿ ನೋಡ್ತಿದ್ದಾರೆ. ಆದ್ರೆ ನಿಯಮಕ್ಕೆ ವಿರುದ್ಧವಾಗಿ ಆಹಾರ ನೀಡ್ತಿದೆ ಎನ್ನುವ ಕಾರಣಕ್ಕೆ ರೆಸ್ಟೋರೆಂಟ್ ಕೆಲವರ ವಿರೋಧಕ್ಕೂ ಕಾರಣವಾಗಿದೆ. ಚೀನಾದ ಆ ರೆಸ್ಟೋರೆಂಟ್ ಯಾವ್ದು, ಅಲ್ಲಿ ಯಾವ ಆಹಾರ ಸರ್ವ್ ಮಾಡಲಾಗ್ತಿದೆ ಗೊತ್ತಾ?
ಆನೆ ಲದ್ದಿ (elephant dung )ಯಿಂದ ಲಡ್ಡು : ಶಾಂಘೈ ನಗರದಲ್ಲಿರುವ ಕ್ಯಾನೋಪಿಯಾ ಎಂಬ ರೆಸ್ಟೋರೆಂಟ್ ಪರಿಸರ ಸ್ನೇಹಿ ರೆಸ್ಟೋರೆಂಟ್ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಆನೆ ಸಗಣಿಯಿಂದ ಲಡ್ಡು ಮಾಡಿ ಸರ್ವ್ ಮಾಡಲಾಗುತ್ತದೆ. ಮರದ ಎಲೆಗಳು, ಜೇನುತುಪ್ಪ ಲೇಪಿತ ಐಸ್ ಕ್ಯೂಬ್ಗಳು, ರಾಫ್ಲೆಸಿಯಾ ಹೂವುಗಳು ಮತ್ತು ಒಣಗಿದ ಆನೆಯ ಸಗಣಿಯಿಂದ ಸಿಹಿತಿಂಡಿಗಳನ್ನು ಈ ರೆಸ್ಟೋರೆಂಟ್ ತಯಾರಿಸುತ್ತದೆ. ಆನೆ ಲದ್ದಿಯ ಲಡ್ಡು ಮಾತ್ರವಲ್ಲ ರೆಸ್ಟೋರೆಂಟ್ ನಲ್ಲಿ ಇನ್ನೂ 14 ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ 14 ಖಾದ್ಯಗಳ ಥಾಲಿ, ರೆಸ್ಟೋರೆಂಟ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಥಾಲಿಯ ಬೆಲೆ 3,888 ಯುವಾನ್ ಅಂದ್ರೆ ಸರಿಸುಮಾರು 47,000 ರೂಪಾಯಿ. ಈ ಥಾಲಿ ತಿನ್ನಲು ಜನರು ತಮ್ಮ ಇಡೀ ಕುಟುಂಬದೊಂದಿಗೆ ಇಲ್ಲಿಗೆ ಬರ್ತಾರೆ. ರೆಸ್ಟೋರೆಂಟ್ ಮುಂದೆ ದೊಡ್ಡ ಕ್ಯೂವನ್ನು ಕಾಣ್ಬಹುದು.
ಕರಿಬೇವಿನ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು, ಆದರೆ ಇವರು ಸೇವಿಸಬಾರದು!
ರೆಸ್ಟೋರೆಂಟ್ ವಿಶೇಷತೆ ಏನು? : ಚೀನಾದ ಬ್ಲಾಂಗ್ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಈ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಫ್ರಾನ್ಸ್ನ ಅಡುಗೆಯವರು ಇಲ್ಲಿ ಕೆಲ್ಸ ಮಾಡ್ತಿದ್ದಾರೆ. ಆನೆ ಲದ್ದಿಯನ್ನು ಸಂಗ್ರಹಿಸಿ, ಅದನ್ನು ಚೆನ್ನಾಗಿ ಒಣಗಿಸಲಾಗುತ್ತದೆ. ಲದ್ದಿಯಲ್ಲಿರುವ ಸೂಕ್ಷ್ಮಜೀವಿಗಳನ್ನು ಸಾಯಿಸಿ ನಂತ್ರ ಲಡ್ಡನ್ನು ತಯಾರಿಸಲಾಗುತ್ತದೆ. ಲದ್ದಿಯನ್ನು ಪುಡಿ ಮಾಡಿ ಖಾದ್ಯ ತಯಾರಿಸಲಾಗುತ್ತದೆ. ಆನೆಯ ಸಗಣಿಯಿಂದ ತಯಾರಿಸಿದ ಲಡ್ಡು ತುಂಬಾ ರುಚಿಕರ ಎನ್ನಲಾಗುತ್ತದೆ. ಆನೆಯ ಸಗಣಿ ಜೊತೆಗೆ ಕ್ಯಾನೋಪಿಯಾ ರೆಸ್ಟೋರೆಂಟ್ ಅನೇಕ ಸಿಹಿತಿಂಡಿಗಳನ್ನು ತಯಾರಿಸುತ್ತದೆ. ಅದಕ್ಕೆ ಗಿಡಮೂಲಿಕೆಗಳ ಸುಗಂಧ ದ್ರವ್ಯಗಳು, ಹಣ್ಣಿನ ಜಾಮ್ಗಳು, ಪರಾಗ ಮತ್ತು ಜೇನು ತುಪ್ಪದ ಶರಬತ್ತುಗಳನ್ನು ಬಳಸಲಾಗುತ್ತದೆ.
ರಷ್ಯನ್ ಚಾಯ್ವಾಲಿಗೆ ಭಾರೀ ಡಿಮಾಂಡ್: ಚಹಾ ಕುಡಿದ್ರೆ ಸೆಲ್ಫೀ
ಮಾಧ್ಯಮ ವರದಿಗಳ ಪ್ರಕಾರ, ರೆಸ್ಟೋರೆಂಟ್ನ ಸ್ಥಾಪಕರು ಯುನ್ನಾನ್ ಪ್ರಾಂತ್ಯದ ಮಳೆಕಾಡಿನಲ್ಲಿ ಸುಮಾರು 7 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದರು. ಈ ಸಂಶೋಧನೆಯ ಆಧಾರದ ಮೇಲೆ, ರೆಸ್ಟೋರೆಂಟ್ಗಾಗಿ ಭಕ್ಷ್ಯಗಳನ್ನು ತಯಾರಿಸಿದ್ದಾರೆ. ಆಹಾರದ ಬ್ಲಾಗರ್ ಒಬ್ಬರು ಈ ವೀಡಿಯೊ ಹಂಚಿಕೊಂಡಿದ್ದಾರೆ. ಊಟದ ಆರಂಭದಲ್ಲಿ, ಬ್ಲಾಗರ್ಗೆ ಶಾಸ್ತ್ರೋಕ್ತವಾಗಿ ಮಡಕೆಯಲ್ಲಿ ಇಟ್ಟ ಗಿಡದಿಂದ ಕಿತ್ತು ತೆಗೆದ ಎಲೆಯನ್ನು ಸಾಸ್ನಲ್ಲಿ ಅದ್ದಿ ಹಸಿಯಾಗಿ ತಿನ್ನಲು ನೀಡಲಾಗುತ್ತದೆ. ಇದಾದ ನಂತ್ರ ಅನೇಕ ವಿಚಿತ್ರ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಜೇನುತುಪ್ಪವನ್ನು ನೆಕ್ಕಲು ಐಸ್ ಕ್ಯೂಬ್ ನೀಡಲಾಗಿತ್ತು. ನಂತ್ರ ಆನೆ ಲದ್ದಿಯಿಂದ ಮಾಡಿದ ಲಡ್ಡು ಸೇರಿದಂತೆ ದುರ್ವಾಸನೆ ಬರುವ ಆಹರವನ್ನೂ ಸರ್ವ್ ಮಾಡಲಾಯ್ತು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಜನರು ಅನೇಕ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅಸಹ್ಯಕರ ಮತ್ತು ಭಯಾನಕ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಯುನ್ನಾನ್ ಮೂಲದ ವ್ಯಕ್ತಿಯೊಬ್ಬ ನಾವು ಇಲ್ಲಿ ಆನೆ ಸಗಣಿ ತಿನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
