Asianet Suvarna News Asianet Suvarna News

ಕ್ರೂಸ್ ಶಿಪ್‌ನಲ್ಲಿ 12ವರ್ಷಕ್ಕೆ ಅಪಾರ್ಟ್‌ಮೆಂಟ್ ಲೀಸ್‌ಗೆ ಪಡೆದ ಮೆಟಾ ಉದ್ಯೋಗಿ

ವರ್ಕ್ ಫ್ರಮ್ ಹೋಂ ಕೆಲಸ ಗಿಟ್ಟಿಸಿಕೊಂಡ ಯುವಕನೋರ್ವ ಈಗ ಕೆಲಸ ಮಾಡುವುದಕ್ಕಾಗಿಯೇ ಐಷಾರಾಮಿ ಕ್ರೂಸ್ ಶಿಪ್‌ನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಲೀಸ್‌ಗೆ ಪಡೆದಿದ್ದಾನೆ. 

A Meta employee who booked an apartment for 12 years on a cruise ship to travel the world while working akb
Author
First Published Dec 26, 2022, 8:45 PM IST

ಕೋವಿಡ್ ಸಾಂಕ್ರಾಮಿಕದ ನಂತರ ಕೆಲಸ ಮಾಡುವ ಸ್ಥಿತಿಯೇ ಬದಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕೊಟ್ಟವು. ಇದರಿಂದ ಉದ್ಯೋಗಿಗಳು ತಮಗೆ ಬೇಕಾದಲ್ಲಿಂದ ಕೆಲಸ ಮಾಡಲು ಶುರು ಮಾಡಿದರು. ಇದರಿಂದ ಕೆಲಸದ ವಾಸ್ತವ ಚಿತ್ರಣವೇ ಬದಲಾಗಿದ್ದು, ಇದನ್ನು ಬಳಸಿಕೊಂಡಿರುವ ಅನೇಕರು ಕೆಲಸದೊಂದಿಗೆ ಪ್ರವಾಸವನ್ನು ಕೂಡ ಮಾಡುತ್ತಿದ್ದಾರೆ. ಅದೇ ರೀತಿ ವರ್ಕ್ ಫ್ರಮ್ ಹೋಂ ಕೆಲಸ ಗಿಟ್ಟಿಸಿಕೊಂಡ ಯುವಕನೋರ್ವ ಈಗ ಕೆಲಸ ಮಾಡುವುದಕ್ಕಾಗಿಯೇ ಐಷಾರಾಮಿ ಕ್ರೂಸ್ ಶಿಪ್‌ನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಲೀಸ್‌ಗೆ ಪಡೆದಿದ್ದಾನೆ. 

28 ವರ್ಷದ ಮೆಟಾ ಉದ್ಯೋಗಿಯೊಬ್ಬ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಇಡೀ ಅಪಾರ್ಟ್‌ಮೆಂಟ್‌ನ್ನು 12 ವರ್ಷಗಳ ಅವಧಿಗೆ ಲೀಸ್‌ಗೆ ಪಡೆದಿದ್ದಾನೆ. ಈ ಮೂಲಕ ಕೆಲಸ ಮಾಡುತ್ತಾ ಜಗತ್ತು ಸುತ್ತುವ ಕನಸನ್ನು ಅವರು ಈಡೇರಿಸಿಕೊಂಡಿದ್ದಾರೆ. ಮೆಟಾಸ್ ರಿಯಾಲಿಟಿ ಲ್ಯಾಬ್ಸ್‌ನ (Meta’s Reality Labs) ಉದ್ಯೋಗಿಯಾಗಿರುವ ಆಸ್ಟಿನ್ ವೆಲ್ಸ್ (Austin Wells) ಎಂಬುವವರೇ ಹೀಗೆ ಕ್ರೂಸ್‌ನಲ್ಲಿ ಅಪಾರ್ಟ್‌ಮೆಂಟ್ ಬುಕ್ ಮಾಡಿಕೊಂಡ ವ್ಯಕ್ತಿ. ಇವರು ಕಾಂಡೋ ಆನ್ ಎಂವಿ ನರೇಟಿವ್ (condo on MV Narrative) ಎಂಬ ಮೆಗಾ ಕ್ರೂಸ್ ಶಿಪ್‌ನಲ್ಲಿ 12 ವರ್ಷಗಳಿಗೆ ಅಪಾರ್ಟ್‌ಮೆಂಟ್ ಬುಕ್ ಮಾಡಿದ್ದಾರೆ. ಈ ಶಿಪ್‌ನಲ್ಲಿ 500 ಖಾಸಗಿ ರೂಮ್‌ಗಳು ಹಾಗೂ ಅಪಾರ್ಟ್‌ಮೆಂಟ್‌ಗಳು ಇವೆ. 

ಈ ವಿಚಾರದ ಕುರಿತಾಗಿ ಮೆಟಾ ಆಸ್ಟಿನ್ ವೆಲ್ಸ್ ಸಿಎನ್‌ಬಿಸಿ ಜೊತೆ ಮಾತನಾಡಿದ್ದು, ಕೆಲಸದ ಜೊತೆಯೇ ಹೊಸ ಸ್ಥಳಗಳನ್ನು ಅನ್ವೇಷಿಸಲು ತಾವು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಇದರಲ್ಲಿ ನನ್ನನ್ನು ಹೆಚ್ಚು ಉತ್ಸಾಹಗೊಳಿಸುವ ವಿಷಯವೆಂದರೆ ಜಗತ್ತನ್ನು ನೋಡಲು ನಾನು ನನ್ನ ದಿನಚರಿಯನ್ನು ಮುಂದೂಡಬೇಕಾಗಿಲ್ಲ ಎಂಬುದು ಎಂದು ಹೇಳಿದ್ದಾರೆ.  ನೀವು ಎಲ್ಲೋ ಹೋಗಬೇಕೆಂದು ಬಯಸಿದರೆ ನೀವು ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ಹೊರಡುತ್ತೀರಿ ವಿಮಾನದಲ್ಲಿ ಹೋಗುತ್ತೀರಿ, ರೂಮ್ ಬಾಡಿಗೆ ಪಡೆಯುತ್ತೀರಿ. ಆದರೆ ಈಗಿನಿಂದ ಇದೆಲ್ಲವೂ ಬದಲಾಗಲಿದೆ. ನನ್ನ ಜಿಮ್, ನನ್ನ ವೈದ್ಯರು ಮತ್ತು ದಂತವೈದ್ಯರು, ನನ್ನ ಎಲ್ಲಾ ದಿನಸಿ ಅಂಗಡಿಗಳು ಇವೆಲ್ಲವೂ ನನ್ನೊಂದಿಗೆ ಜಗತ್ತು ಸುತ್ತುತ್ತವೆ ಎಂದು ಅವರು ಹೇಳಿದ್ದಾರೆ. ಕಾಂಡೋ ಆನ್ ಎಂವಿ ನರೇಟಿವ್ ಮೆಗಾ ಶಿಪ್‌ನಲ್ಲಿ 12 ವರ್ಷಕ್ಕೆ ಅಪಾರ್ಟ್‌ಮೆಂಟ್ ಲೀಸ್‌ಗೆ ಪಡೆಯಲು ಅವರು 300,000 ಡಾಲರ್ ಅಂದರೆ ಅಂದಾಜು 2.4 ಕೋಟಿ ರೂ ಪಾವತಿಸಿದ್ದಾರೆ.

ಈ ಕ್ರೂಸ್ ಹಡಗು 11 ವಿಧದ ರೀತಿಯ ಮಹಡಿಗಳನ್ನು ಹೊಂದಿದ್ದು, ಅತ್ಯಂತ ಅದ್ದೂರಿ  ಆಗಿರುವುದಕ್ಕೆ ಗ್ಲೋಬಲ್ ಎಂದು ಕರೆಯಲಾಗುತ್ತದೆ. ಇದು 1,970 ಚದರ ಅಡಿ ವಿಸ್ತೀರ್ಣ ಹೊಂದಿದ್ದು,  ನಾಲ್ಕು ಮಲಗುವ ಕೋಣೆಗಳು, ಊಟದ ಸ್ಥಳ ಎರಡು ಸ್ನಾನಗೃಹಗಳು ಮತ್ತು ಬಾಲ್ಕನಿಯನ್ನು ಒಳಗೊಂಡಿದೆ. ಇತ್ತ ಮೆಟಾ ಉದ್ಯೋಗಿ ವೆಲ್ಸ್ ಪಡೆದಿರುವ ಸಾಧಾರಣವೆನಿಸಿದ ಮತ್ತೊಂದು ಅಪಾರ್ಟ್‌ಮೆಂಟ್‌ಗೆ ಡಿಸ್ಕವರಿ ಎಂಬ ಹೆಸರಿದ್ದು, 237 ಚದರ ಅಡಿ ವಿಸ್ತ್ರೀರ್ಣವಿದೆ. ಇದರಲ್ಲಿ ಪೋಲ್ಡಿಂಗ್ ಬೆಡ್, ಪ್ಯಾಂಟ್ರಿ, ಸ್ನಾನಗೃಹಗಳಿವೆ. ಜೊತೆಗೆ ಜಿಮ್(gym), ಸ್ಪಾ (spa) , ವೈದ್ಯಕೀಯ ಸೇವೆಗಳು (medical services) ಮತ್ತು 24 ಗಂಟೆಗಳ ಡೋರ್ ಸರ್ವೀಸ್ ನೀಡುತ್ತದೆ. 

Follow Us:
Download App:
  • android
  • ios