5 Cool Destinations in Kerala: ಕೇರಳದಲ್ಲಿ ಒಂದು ದಿನದಲ್ಲಿ ಸುತ್ತಾಡಿ ಬರಬಹುದಾದ ಹಲವು ತಾಣಗಳಿವೆ. ಆ ಪ್ರವಾಸಿ ತಾಣಗಳು ಯಾವವು ಎಂದು ನೋಡೋಣ ಬನ್ನಿ
Kerala Travel: ಕೆಲಸದ ಒತ್ತಡದಿಂದ ಮುಕ್ತಿ ಪಡೆದು ಕುಟುಂಬ ಅಥವಾ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುವವರು ಹಲವರಿದ್ದಾರೆ. ಹಲವು ಕಾರಣಗಳಿಂದ ಇಂತಹ ಪ್ರವಾಸಗಳು ಆಗಾಗ ಸಾಧ್ಯವಾಗುವುದಿಲ್ಲ ಎಂದು ಹೇಳುವವರೂ ಇದ್ದಾರೆ. ನೀವು ಒಂದು ದಿನ ನೆಮ್ಮದಿಯಾಗಿ ಕಳೆಯಲು ಇಷ್ಟಪಡುತ್ತಿದ್ರೆ ಸಮೀಪದ ಕೇರಳ ರಾಜ್ಯದ ಈ ಸ್ಥಳಗಳಿಗೆ ಭೇಟಿ ನೀಡಬಹುದು. ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಒಮ್ಮೆ ಈ ರೀತಿಯ ಚುಟುಕು ಪ್ರವಾಸ ಕೈಗೊಳ್ಳುವುದರಿಂದ ಮನಸ್ಸು ರಿಲಾಕ್ಸ್ ಆಗುತ್ತದೆ. ಈ ಪ್ರವಾಸಿ ಸ್ಥಳಗಳಿಗೆ ಏಕಾಂಗಿಯಾಗಿಯೂ ತೆರಳಬಹುದು ಅಥವಾ ಕುಟುಂಬಸ್ಥರೊಂದಿಗೆ ಭೇಟಿ ನೀಡಬಹುದಾಗಿದೆ. ಆ ಐದು ಸ್ಥಳಗಳ ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಉತ್ತಮ ರೀತಿಯಲ್ಲಿ ಸಮಯ ಕಳೆಯಲು ಮತ್ತು ಒತ್ತಡ ನಿವಾರಿಸಲು ಒಂದು ದಿನದ ಪ್ರವಾಸ ಉತ್ತಮ ಆಯ್ಕೆ. ಕೇರಳದಲ್ಲಿ ಒಂದು ದಿನದಲ್ಲಿ ಸುತ್ತಾಡಿ ಬರಬಹುದಾದ ಹಲವು ತಾಣಗಳಿವೆ. ಅಂತಹ 5 ಉತ್ತಮ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.
1. ಕುಮಾರಕೊಮ್

ವೇಂಬನಾಡ್ ಕಾಯಲಿನ ಪೂರ್ವ ತುದಿಯಲ್ಲಿರುವ ದ್ವೀಪ ಸಮೂಹವೇ ಕುಮಾರಕೊಮ್. ವೇಂಬನಾಡ್ ಕಾಯಲಿನ ಅತ್ಯಂತ ಸುಂದರ ಭಾಗಗಳು ಇಲ್ಲಿದೆ. ರುಚಿಕರವಾದ ಕಾಯಲ್ ತಿನಿಸುಗಳನ್ನು ಸವಿಯಬಹುದು, ದೋಣಿ ವಿಹಾರ, ಪುರವಂಚಿ, ಕೆಟ್ಟುವಗಳಲ್ಲಿ ಸಮಯ ಕಳೆಯಬಹುದು. ಮೀನು ಹಿಡಿಯಲು ಇಷ್ಟಪಡುವವರಿಗೂ ಇದು ಉತ್ತಮ ತಾಣ. ಪಕ್ಷಿ ಪ್ರಿಯರಿಗೂ ಇದು ಸ್ವರ್ಗ. ಇಲ್ಲಿಯ ದೋಣಿಯ ವಿಹಾರ ಅದ್ಭುತವಾದ ಅನುಭವವನ್ನು ನಿಮಗೆ ನೀಡುತ್ತದೆ.
2. ವಯನಾಡ್

ಪ್ರಕೃತಿ ಸೌಂದರ್ಯ, ತಂಪಾದ ವಾತಾವರಣ, ಮಂಜು, ಹಸಿರು ಎಲ್ಲವನ್ನೂ ಅನುಭವಿಸಲು ಬಯಸಿದರೆ ವಯನಾಡ್ ಗೆ ಭೇಟಿ ನೀಡಿ. ಟ್ರೆಕ್ಕಿಂಗ್, ದೋಣಿ ವಿಹಾರ, ಕಯಾಕಿಂಗ್, ಗುಹೆಗಳನ್ನು ಅನ್ವೇಷಿಸುವುದು, ವನ್ಯಜೀವಿಗಳನ್ನು ನೋಡುವುದು, ಇವೆಲ್ಲವೂ ವಯನಾಡಿನಲ್ಲಿ ಸಾಧ್ಯ. ಸಾಹಸ ಪ್ರಿಯರಿಗೆ ಇದು ಉತ್ತಮ ಆಯ್ಕೆ. ಬೈಕ್ ರೈಡರ್‌ಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರಿನಿಂದ ವಯನಾಡಿಗೆ ನೇರ ಸಾರಿಗೆ ಸಂಪರ್ಕವಿದೆ. ರಾತ್ರಿ ಹೊರಟರೆ ಬೆಳಗ್ಗೆ ವಯನಾಡು ತಲುಪಬಹುದಾಗಿದೆ. ಇಡೀ ದಿನ ವಯನಾಡಿನ ಪ್ರಕೃತಿ ಸೌಂದರ್ಯ ಆನಂದಿಸಿ ಮರುದಿನ ಬೆಳಗ್ಗೆ ಬೆಂಗಳೂರು ತಲುಪಬಹುದಾಗಿದೆ.
3. ತ್ರಿಶೂರ್

ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶೂರ್ ಒಂದು ದಿನದ ಪ್ರವಾಸಕ್ಕೆ ಸೂಕ್ತ. ಉತ್ಸವಗಳ ಸಮಯದಲ್ಲಿ ಇಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಆನೆ ಪಾಲನಾ ಕೇಂದ್ರ, ಮೃಗಾಲಯ, ಪುರಾತತ್ವ ಸಂಗ್ರಹಾಲಯ, ಆತಿರಪಳ್ಳಿ ಜಲಪಾತ, ವಾಜಾಚಲ್ ಜಲಪಾತ, ತೇಕ್ಕಿಂಕಾಡ್ ಮೈದಾನ ಇವು ತ್ರಿಶೂರಿನ ಪ್ರಮುಖ ಆಕರ್ಷಣೆಗಳು. ಇಲ್ಲಿಯ ಜಲಪಾತಗಳ ಬಳಿ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿವೆ.
4. ಕೋಝಿಕ್ಕೋಡ್

ಕೋಝಿಕ್ಕೋಡ್ ಎಂದಾಕ್ಷಣ ಬೀಚ್ ಮತ್ತು ಮಿಠಾಯಿ ತೆರು ನೆನಪಾಗುತ್ತದೆ. ಮಲಬಾರ್ ರುಚಿ ಸವಿಯಲು ಕೋಝಿಕ್ಕೋಡ್ ಗೆ ಭೇಟಿ ನೀಡಿ. ಕಲ್ಲುಮ್ಮಕ್ಕಾಯ, ಚಟ್ಟಿಪತ್ತಿರಿ, ವಿವಿಧ ರೀತಿಯ ಜಿಲೇಬಿ, ಹಲ್ವಾಗಳನ್ನು ಇಲ್ಲಿ ಸವಿಯಬಹುದು. ಹಳೆಯ ದೀಪಸ್ತಂಭ, ಬೀಚ್, ಮನಾಂಚಿರಾ ಚೌಕ, ಸರೋವರಂ ಬಯೋ ಪಾರ್ಕ್ ಇವು ನೋಡಲೇಬೇಕಾದ ತಾಣಗಳು.
5. ಕೊಚ್ಚಿ

ಒಂದು ದಿನದ ಪ್ರವಾಸಕ್ಕೆ ಕೊಚ್ಚಿಯೂ ಉತ್ತಮ ಆಯ್ಕೆ. ಚೀನಾ ಬಲೆ ಮೀನುಗಾರಿಕೆ, ಕೆಫೆಗಳು, ಬೀಚ್ ಗಳು, ಕಾಯಲ್ ತೀರಗಳು, ದೇವಸ್ಥಾನಗಳು, ವಸ್ತು ಸಂಗ್ರಹಾಲಯಗಳು, ಅರಮನೆಗಳು, ಭಾರತೀಯ ಮತ್ತು ವಿದೇಶಿ ಸಂಸ್ಕೃತಿಗಳ ಪ್ರಭಾವ ಎಲ್ಲವೂ ಕೊಚ್ಚಿಯಲ್ಲಿದೆ. ವಾಟರ್ ಮೆಟ್ರೋ, ಮರೈನ್ ಡ್ರೈವ್, ಬೋಲ್ಗಟ್ಟಿ ಅರಮನೆ, ಫೋರ್ಟ್ ಕೊಚ್ಚಿ ಹೀಗೆ ಹಲವು ಆಕರ್ಷಣೆಗಳು ಇಲ್ಲಿವೆ.
