Asianet Suvarna News Asianet Suvarna News

Viral News: ಮೊದಲ ಬಾರಿಗೆ ವಿಮಾನ ಪ್ರಯಾಣ, ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ಯುವಕ

ರೆಕ್ಕೆ ಬಿಚ್ಚಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುವ ವಿಮಾನವನ್ನು ನೋಡುವುದೇ ಚೆಂದ. ಬಾನಂಗಳದಲ್ಲಿ ಹಾರುವ ಲೋಹದ ಹಕ್ಕಿಯಲ್ಲಿ ಸಂಚರಿಸಬೇಕೆಂಬುದು ಪ್ರತಿಯೊಬ್ಬರ ಕನಸು. ಆದ್ರೆ ಹಣಕಾಸಿನ ಸಮಸ್ಯೆಯಿಂದ ಎಲ್ಲರಿಂದಲೂ ಅದು ಸಾಧ್ಯವಾಗುವುದಿಲ್ಲ. ಹೀಗಿರುವಾಗ 27 ವರ್ಷದ ವ್ಯಕ್ತಿಯೊಬ್ಬ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದು, ತನ್ನ ಖುಷಿಯನ್ನು ಹಂಚಿಕೊಂಡಿದ್ದಾನೆ

27 year old man travels in flight for the first time, netizens love his moment of joy Vin
Author
First Published Feb 2, 2023, 9:12 AM IST

ದೂರ ಪ್ರಯಾಣಕ್ಕೆ ಹೆಚ್ಚಿನವರು ರೈಲು ಅಥವಾ ವಿಮಾನ ಪ್ರಯಾಣವನ್ನು ಆರಿಸುತ್ತಾರೆ. ಜನಸಾಮಾನ್ಯರು ಸಂಚಾರಕ್ಕೆ ಸಾಮಾನ್ಯವಾಗಿ ರೈಲು ಮಾರ್ಗವನ್ನು ಬಳಸುತ್ತಾರೆ. ಇದಲ್ಲದೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಂಚರಿಸಬೇಕಾದವರು ವಿಮಾನಯಾನವನ್ನು ಆಯ್ದುಕೊಳ್ಳುತ್ತಾರೆ. ಆದರೆ ವಿಮಾನ ಪ್ರಯಾಣ ಎಲ್ಲರ ಕೈಗೆಟುಕುವಂತಿಲ್ಲ. ಜನಸಾಮಾನ್ಯರಿಗಂತೂ ವಿಮಾನದಲ್ಲಿ ಸಂಚರಿಸುವುದು ಕನಸಿನ ಮಾತು. ಕೆಲವೊಬ್ಬರು ಚಿಕ್ಕಂದಿನಲ್ಲೇ ವಿಮಾನ ಪ್ರಯಾಣ ಮಾಡಿರುತ್ತಾರೆ. ಇನ್ನು ಕೆಲವರು ಉದ್ಯೋಗ ಸಿಕ್ಕ ಬಳಿಕ ತಮ್ಮ ಸ್ಯಾಲರಿಯಲ್ಲಿ ವಿಮಾನ ಪ್ರಯಾಣ ಮಾಡುತ್ತಾರೆ. ವಿಮಾನಯಾನ ದರ ತುಂಬಾ ಕಡಿಮೆಯಿಲ್ಲದ ಕಾರಣ ಹೆಚ್ಚಿನವರು ಫ್ಲೈಟ್ ಹತ್ತುವುದು ಒಂದು ಕನಸು ಎಂಬಂತೆಯೇ ಅಂದುಕೊಳ್ಳುತ್ತಾರೆ.

ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಖುಷಿ
ಇಲ್ಲೊಬ್ಬ ವ್ಯಕ್ತಿ ತಮ್ಮ  27ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನ (Flight) ಹತ್ತಿದ್ದಾರೆ. ಫಸ್ಟ್ ಫ್ಲೈಟ್ ಖುಷಿಯನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡದ್ದಾರೆ. ಟ್ವಿಟರ್ ಬಳಕೆದಾರ ಹೇಮಂತ್ ಅವರು ವಿಮಾನದೊಳಗೆ ಕುಳಿತಿರುವಾಗ ಬೋರ್ಡಿಂಗ್ ಪಾಸ್ ಹಿಡಿದಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. 'ನಾನು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಮತ್ತು ನನಗೆ 27 ವರ್ಷ. ನನ್ನ ಜೀವನ (Life)ದಲ್ಲಿ ಇದು ತುಂಬಾ ಸಂತೋಷದ ಭಾವನೆ' ಎಂದು ಹೇಳಿಕೊಂಡಿದ್ದಾರೆ. 

ಅಯ್ಯೋ ಶಿವನೇ..! ದುಬೈನಿಂದ ಟೇಕಾಫ್‌ ಆದ ವಿಮಾನ 13 ಗಂಟೆ ಹಾರಾಡಿ ಮತ್ತೆ ಅಲ್ಲೇ ಲ್ಯಾಂಡ್‌ ಆಯ್ತು..!

ಯುವಕನ ಖುಷಿಯನ್ನು ಹೆಚ್ಚಿಸಿದ ನೆಟ್ಟಿಗರ ಕಾಮೆಂಟ್‌
ಮೂರು ದಿನಗಳ ಹಿಂದೆ ಟ್ವೀಟ್ ಶೇರ್ ಮಾಡಲಾಗಿದೆ. ಪೋಸ್ಟ್ ಇಲ್ಲಿಯವರೆಗೆ 1.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. 46,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 2,000 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಾರ್ಟ್ ಎಮೋಜಿ ಹಾಕಿ ಸಂತಸ (Happiness) ವ್ಯಕ್ತಪಡಿಸಿದ್ದಾರೆ.  

'ಯಾವಾಗಲೂ ಮೊದಲನೆಯ ಪ್ರಯಾಣ ಹೆಚ್ಚು ಖುಷಿಯನ್ನುಂಟು ಮಾಡುತ್ತದೆ. ಈ ಪ್ರಯಾಣವು (Travel) ನಿಮಗೆ ಯಶಸ್ಸು ಮತ್ತು ಸಂತೋಷವನ್ನು ತರಲಿ. ಶುಭವಾಗಲಿ' ಎಂದು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. 'ನನಗೆ ನಿಮ್ಮ ಪರಿಚಯವಿಲ್ಲ, ಆದರೆ ನಿಮ್ಮ ಖುಷಿಯನ್ನು ನೋಡಲು ಚೆನ್ನಾಗಿದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ನಿಮ್ಮ ಕ್ಷಣಗಳನ್ನು ಆನಂದಿಸಿ ಬ್ರದರ್‌' ಎಂದು ಮೂರನೆಯವರು ಸಂತಸ ವ್ಯಕ್ತಪಡಿಸಿದರು.

ಈ ನಗರದಲ್ಲಿ ಬಸ್ಸೇ ಇಲ್ಲ..ಜನರು ಕಾಲೇಜು, ಕಚೇರಿಗೆ ಹೋಗೋದು ವಿಮಾನದಲ್ಲೇ !

'ನಾನು 25 ವರ್ಷ ವಯಸ್ಸಿನವನಾಗಿದ್ದೆ ಮತ್ತು ನನ್ನ ಕುಟುಂಬದಲ್ಲಿ ವಿಮಾನದಲ್ಲಿ ಹಾರಿದ ಮೊದಲ ವ್ಯಕ್ತಿ ಎಂದು ಅನಿಸಿಕೊಂಡೆ. ನನ್ನ ಇಡೀ ಕುಟುಂಬ ಆ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದು ನೆನಪಿದೆ. ದೊಡ್ಡ ಯಶಸ್ಸಿನತ್ತ ಸಣ್ಣ ಹೆಜ್ಜೆಗಳು' ಎಂದು ಇನ್ನೊಬ್ಬರು ಕಾಮೆಂಟಿಸಿದ್ದಾರೆ. ಮತ್ತೊಬ್ಬರು 'ನಿಮಗೆ ಬೇಕಾದುದನ್ನು ನೀವು ಪಡೆದಾಗ, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅದು ಅದ್ಭುತವಾದ ಭಾವನೆ ಮತ್ತು ನಿಮ್ಮ ಜೀವನದುದ್ದಕ್ಕೂ ಪಾಲಿಸಬೇಕಾದ ಕ್ಷಣವಾಗಿದೆ, ಮತ್ತು ನೀವು ಅದರ ಕಡೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಅದು ಹೆಚ್ಚಾಗುತ್ತದೆ' ಎಂದಿದ್ದಾರೆ.

Follow Us:
Download App:
  • android
  • ios