ಸ್ಮಾರ್ಟ್ ಟಿವಿಗಳಲ್ಲಿನ ವಾಯ್ಸ್ ಅಸಿಸ್ಟೆಂಟ್ ಬಳಕೆಗೆ ಸುಲಭವಾದರೂ, ಅದರ ಮೈಕ್ರೋಫೋನ್ ನಿಮ್ಮ ಗೌಪ್ಯತೆಗೆ ಅಪಾಯವನ್ನುಂಟುಮಾಡಬಹುದು. ನಿಮ್ಮ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಸರ್ವರ್‌ಗಳಿಗೆ ಕಳುಹಿಸುವ ಸಾಧ್ಯತೆ ಇರುವುದರಿಂದ, ಅಗತ್ಯವಿಲ್ಲದಿದ್ದಾಗ ಮೈಕ್ ಆಫ್ ಮಾಡುವುದು ಉತ್ತಮ.

ವಾಯ್ಸ್ ಅಸಿಸ್ಟೆಂಟ್ ಸಹಾಯದಿಂದ, ನೀವು ನಿಮ್ಮ ಟಿವಿಯಲ್ಲಿ ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್ ನಂತಹ ಅಪ್ಲಿಕೇಶನ್‌ಗಳನ್ನು ಚಲಾಯಿಸಬಹುದು. ಹಲವು ಕೆಲಸಗಳನ್ನು ರಿವೋಟ್ ಇಲ್ಲದೇ ಮಾಡಬಹುದಾಗಿದೆ. ಇದಕ್ಕೆ ವಾಯ್ಸ್ ಕಮಾಂಡ್‌ಗಳು ತುಂಬಾ ಅನುಕೂಲಕರವಾಗರುತ್ತದೆ.

ಸ್ಮಾರ್ಟ್ ಟಿವಿ ಮೈಕ್: ನಿಮ್ಮ ಮಾತು ಕದಿಯುವ ಕಳ್ಳ?

ಸ್ಮಾರ್ಟ್ ಟಿವಿಗಳು ನಾವು ಟಿವಿ ನೋಡುವ ವಿಧಾನವನ್ನು ಸಂಪೂರ್ಣವಾಗಿ ಬದಲಿಸಿದೆ ಎಂದರೆ ತಪ್ಪಾಗುವುದಿಲ್ಲ. ಈಗ ಟಿವಿಯಲ್ಲಿ ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್ ನಂತಹ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಬಹುದು. ಅದರಲ್ಲೂ ವಾಯ್ಸ್ ಅಸಿಸ್ಟೆಂಟ್ ಸಹಾಯದಿಂದ ಹಲವು ಕೆಲಸಗಳನ್ನು ರಿಮೋಟ್ ಇಲ್ಲದೇ ಮಾಡಬಹುದು.

ಹೆಸರನ್ನು ಟೈಮ್ ಮಾಡುವ ಬದಲು, ಸಿನಿಮಾ ಹೆಸರು ಹೇಳಿದರೆ ಸರ್ಚ್ ಸುಲಭವಾಗುತ್ತದೆ. ಯಾವುದೇ ಅಪ್ಲಿಕೇಶನ್ ಹುಡುಕುವುದು ಸೇರಿದಂತೆ, ಅಗತ್ಯ ಆಜ್ಞೆಗಳನ್ನು ನೀಡಲು ವಾಯ್ಸ್ ಅಸಿಸ್ಟೆಂಟ್ಸ್ ಅನುಕೂಲಕರವಾಗಿರುತ್ತದೆ. ಆದರೆ ಈ ಸ್ಮಾಟ್ ಟಿವಿ ಮೈಕ್ ನಿಮ್ಮ ಗೌಪತ್ಯೆಗೆ ಬಹುದೊಡ್ಡ ಬೆದರಿಕೆ ಉಂಟು ಮಾಡಬಹುದು. ಆದರೆ ಇದನ್ನೇ ಹೇಗೆ ತಪ್ಪಿಸಬೇಕು ಎಂದು ಎಲ್ಲರೂ ತಿಳಿದುಕೊಳ್ಳಲೇಬೇಕಿದೆ.

ಸ್ಮಾರ್ಟ್ ಟಿವಿಯ ಮೈಕ್ರೋಫೋನ್ ಹಿನ್ನೆಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ವಾಯ್ಸ್ ಅಸಿಸ್ಟೆಂಟ್‌ ಕಾರ್ಯನಿರ್ವಹಿಸಬಹುದು. ಸ್ಮಾರ್ಟ್ ಟಿವಿ ಪ್ರತಿಯೊಂದು ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಪದವನ್ನು ಗುರುತಿಸಲು ಮೈಕ್ರೊಫೋನ್ ಅನ್ನು ಸಕ್ರಿಯಗೊಳಿಸುತ್ತದೆ. ಧ್ವನಿಯ ಆಜ್ಞೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಕ್ರಿಯೆಗೊಳಿಸಲು ಆಡಿಯೋ ಡೇಟಾವನ್ನು ಕಂಪನಿ ಅಥವಾ ಮೂರನೇ ವ್ಯಕ್ತಿಯ ಸರ್ವರ್‌ಗಳಿಗೆ ಕಳುಹಿಸಬಹುದು. ಆದ್ದರಿಂದ ನಿಮಗೆ ಧ್ವನಿ ಸಹಾಯಕ ಅಗತ್ಯವಿಲ್ಲದಿದ್ದಾಗ ಮೈಕ್ರೋಫೋನ್‌ ಅನ್ನು ಆಫ್ ಮಾಡುವುದು ನಿಮ್ಮ ಗುಟ್ಟು ರಟ್ಟಾಗದಂತೆ ತಡೆಯಲು ಇರುವ ಪ್ರಮುಖ ಆಯ್ಕೆಯಾಗಿದೆ.