ಸ್ಮಾರ್ಟ್‌ಫೋನ್‌ನ ಸೈಡ್ ಬಟನ್ ಅನ್ನು ಪದೇ ಪದೇ ಒತ್ತುವುದರಿಂದ ಅದು ಹಾಳಾಗುವ ಸಾಧ್ಯತೆ ಹೆಚ್ಚು. ಈ ಸಮಸ್ಯೆಯನ್ನು ತಪ್ಪಿಸಲು, ನಿಮ್ಮ ಮೊಬೈಲ್ ಸೆಟ್ಟಿಂಗ್ಸ್‌ನಲ್ಲಿ 'ಡಬಲ್ ಟ್ಯಾಪ್ ಟು ವೇಕ್' ಆಯ್ಕೆಯನ್ನು ಸಕ್ರಿಯಗೊಳಿಸಬಹುದು. ಈ ಮೂಲಕ ಬಟನ್ ಬಳಸದೆಯೇ ಡಬಲ್ ಟ್ಯಾಪ್ ಮಾಡಿ ಸುಲಭವಾಗಿ ಸ್ಕ್ರೀನ್ ಆನ್ ಅಥವಾ ಆಫ್ ಮಾಡಬಹುದು.

ಈಗ ಸ್ಮಾರ್ಟ್​ಫೋನ್​ ಇಲ್ಲದ ಮನೆಗಳೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಫೋನ್​ ಎಲ್ಲರನ್ನೂ ಆವರಿಸಿಕೊಂಡು ಬಿಟ್ಟಿದೆ. ಅರೆಕ್ಷಣವೂ ಫೋನ್​ ಬಿಟ್ಟಿರಲಾಗದ ಸ್ಥಿತಿ ಬಹುತೇಕರದ್ದು. ಊಟ ಬಿಟ್ಟು ಉಪವಾಸ ಬೇಕಾದ್ರೂ ಇರ್ತಾರೆ, ಪ್ರಾಣ ಬೇಕಾದ್ರೂ ಕೊಡ್ತಾರೇನೋ, ಆದ್ರೆ ಮೊಬೈಲ್​ ಬಿಟ್ಟು ಇರಲ್ಲ ಎನ್ನುವವರೇ ಹಲವರು. ಇನ್ನು ಮೊಬೈಲ್​ನಲ್ಲಿ ಸೌಂಡ್​ ಬರದಿದ್ದರೂ, ಯಾರಾದರೂ ಮೆಸೇಜ್​ ಮಾಡಿದ್ರಾ, ಕಾಲ್​ ಬಂದಿತ್ತಾ ಎಂದು ನೋಡುವ ಗೀಳು ಹಲವರದ್ದು. ಇನ್ನು ರೀಲ್ಸ್​ ದಾಸರಾದವರ ವಿಷ್ಯವಂತೂ ಕೇಳಲೇಬೇಡಿ. ಸೆಕೆಂಡ್​ ಸೆಕೆಂಡ್​ಗೂ ಮೊಬೈಲ್​ ಬೇಕು.

ಇದೇ ಕಾರಣಕ್ಕೆ, ಇಂದು ಮೊಬೈಲ್​ ಆನ್​-ಆಫ್​ ಮಾಡಲು ಪದೇ ಪದೇ ಸೈಡ್​ ಬಟನ್​ ಪ್ರೆಸ್​ ಮಾಡೇ ಮಾಡುತ್ತೇವೆ. ಇದರಿಂದ ಮೊಬೈಲ್​ ರಿಪೇರಿ ಅಂಗಡಿಯವರಿಗೆ ಭರ್ಜರಿ ಡಿಮಾಂಡ್​ ಇದೆ. ಏಕೆಂದರೆ, ಬಹುತೇಕ ಎಲ್ಲರ ಮೊಬೈಲ್​ನಲ್ಲಿಯೂ ಈ ಬಟನ್​ ಸಮಸ್ಯೆ ಬಂದೇ ಬರುತ್ತದೆ. ದಿನಕ್ಕೆ ಏನಿಲ್ಲ ಎಂದ್ರೂ ಕನಿಷ್ಠ 100-500 ಬಾರಿಯಾದರೂ ಮೊಬೈಲ್​ ಆನ್​-ಆಫ್​ ಮಾಡುವುದು ಇದ್ದೇ ಇರುತ್ತದೆ.

ಆದರೆ, ಈಗ ಸೈಡ್​ ಬಟನ್​ ಬಿಟ್ಟುಬಿಡಿ. ಡಬಲ್​ ಟ್ಯಾಪ್​ ಮಾಡುವ ಮೂಲಕ ಮೊಬೈಲ್​ ಆನ್​-ಆಫ್​ ಮಾಡಬಹುದಾಗಿದೆ. ಇದರಿಂದ ನಿಮ್ಮ ಸೈಡ್​ ಬಟನ್​ ಸೇಫ್​ ಆಗಿ ಇರಲಿದೆ. ಹಾಗಿದ್ದರೆ ಹಾಗೆ ಮಾಡಲು ಏನು ಮಾಡಬೇಕು ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.

ನೀವೇನು ಮಾಡಬೇಕು?

ಇದಕ್ಕಾಗಿ ಮೊದಲಿಗೆ ನೀವು ನಿಮ್ಮ ಮೊಬೈಲ್​ ಸೆಟ್ಟಿಂಗ್​ಗೆ ಹೋಗಿ

- ಅಲ್ಲಿ ನೀವು Raise to wake ಎಂದು ಸರ್ಚ್​​ ಆಪ್ಷನ್​ ಇದ್ದಲ್ಲಿ ಟೈಪ್​ ಮಾಡಿ ಸ್ವಲ್ಪ ಹೊತ್ತು ಇದ್ದರೆ ಆ ಆಪ್ಷನ್​ ಕಾಣಿಸುತ್ತದೆ.

- ಬಳಿಕ ಅದರ ಮೇಲೆ ಕ್ಲಿಕ್​ ಮಾಡಿದರೆ ಮೊದಲಿಗೆ Raise to wake ಕಾಣಿಸುತ್ತದೆ. ಅದನ್ನು ಆನ್​ ಮಾಡಿ

- ಅದರ ಕೆಳಗೆ Double tap to wake or turn off screen wen device is locked ಎಂದೂ ಅದರ ಕೆಳಗೆ Wake Lock screen for notification ಎಂದೂ ಇರುತ್ತದೆ. ಆ ಮೂರು ಆಪ್ಷನ್​ಗಳನ್ನು ಆನ್​ ಮಾಡಿ.

- ಕೆಲವು ಫೋನ್​ಗಳಲ್ಲಿ ಎರಡನೆಯ ಆಪ್ಷನ್​ ಕೇವಲ Double tap to wake ಎಂದೂ, ಮೂರನೆಯದ್ದು Keep screen on while viewing ಎಂದೂ ಇರುತ್ತದೆ. ಒಟ್ಟಿನಲ್ಲಿ ಏನೇ ಇದ್ದರೂ ಮೊದಲ ಮೂರು ಆಪ್ಷನ್​ ಆನ್​ ಮಾಡಿ.

ಈಗ ನೋಡಿ ಮ್ಯಾಜಿಕ್​

- ಈಗ ಬ್ಯಾಕ್​ ಹೋಗಿ ಮ್ಯಾಜಿಕ್​ ನೋಡಿ, ಡಬಲ್​ ಟ್ಯಾಪ್​ ಮಾಡಿದ ತಕ್ಷಣ ನಿಮ್ಮ ಫೋನ್​ ಆನ್​-ಆಫ್​ ಆಗುತ್ತದೆ. ಇದರಿಂದ ಸೈಡ್​ ಬಟನ್​ ಬಚಾವಾಗುತ್ತದೆ.