ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳ ಸೆಲ್ಫಿ, ರೀಲ್ಸ್ ಸೇರಿದಂತೆ ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದೆ. ಶೈಕ್ಷಣಿಕ ಪ್ರವಾಸದ ವೇಳೆಯಲ್ಲಿ ಯಾವುದೇ ರೀತಿ ಸೆಲ್ಫಿ ವಿಡಿಯೋ, ಫೋಟೋ, ರೀಲ್ಸ್, ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಏನಿದು ಆದೇಶ?
ಬೆಂಗಳೂರು (ಸೆ.19) ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳು ರಾಜಾರೋಷವಾಗಿ ಸೆಲ್ಫಿ ವಿಡಿಯೋ, ರೀಲ್ಸ್ ಮಾಡುವಂತಿಲ್ಲ. ಹೌದು, ಶೈಕ್ಷಕಣಿಕ ಪ್ರವಾಸದ ವೇಳೆ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಕಾಲೇಜುಗಳು ಕೈಗೊಳ್ಳುವ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸೆಲ್ಫಿ ವಿಡಿಯೋ, ರೀಲ್ಸ್ ಸೇರಿದಂತೆ ಮೊಬೈಲ್ ಚಿತ್ರೀಕರಣದಿಂದ ಅವಘಡಗಳು ಹೆಚ್ಚಾಗುತ್ತಿದೆ. ಹೀಗಾಗಿ ಪ್ರವಾಸದ ವೇಳೆ ಕಾಲೇಜು ವಿದ್ಯಾರ್ಥಿಗಳು ರೀಲ್ಸ್ ಸೇರಿದಂತೆ ಚಿತ್ರೀಕರಣ ಮಾಡುವುದು ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ಆದೇಶದಲ್ಲಿ ಏನಿದೆ?
ಕಾಲೇಜು ಆಯೋಜಿಸುವ ಶೈಕ್ಷಣಿಕ ಪ್ರವಾಸದ ವೇಳೆ ಪಾಲಿಸಬೇಕಾದ ನಿಯಮಗಳ ಕುರಿತು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶೈಕ್ಷಣಿಕ ಪ್ರವಾಸಗಳಿಗೆ ಇಲಾಖೆಯಿಂದ ಅನುಮತಿ ಕಡ್ಡಯವಾಗಿದೆ. ಯಾವ ಪ್ರದೇಶಕ್ಕೆ, ಯಾವ ತಾಣಕ್ಕೆ ಪ್ರವಾಸ ಅನ್ನೋ ಕುರಿತು ವಿವರಣೆ ನೀಡಬೇಕು. ಇನ್ನು ವಿದ್ಯಾರ್ಥಿಗಳು, ಸಿಬ್ಬಂದಿಗಳು, ವಾಹನ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೀಡಬೇಕು. ಪ್ರಮುಖವಾಗಿ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಗಳ ಸೆಲ್ಫಿ ವಿಡಿಯೋ, ರೀಲ್ಸ್ ವಿಡಿಯೋಗಳನ್ನು, ಸೇರಿದಂತೆ ಚೀತ್ರೀಕರಣ ಮಾಡುವುದು ನಿಷೇಧಿಸಲಾಗಿದೆ.
ಪ್ರವಾಸದ ವೇಳೆ ಸೆಲ್ಫಿ, ವಿಡಿಯೋ, ರೀಲ್ಸ್‌ನಲ್ಲಿ ಮುಳುಗಿರುವುದು ಅಧ್ಯಯನ ಭಾಗವಲ್ಲ. ಇನ್ನು ಇದರಿಂದ ಅವಘಡಗಳೇ ಹೆಚ್ಚಾಗಿದೆ. ಜೊತೆಗೆ ಶಾಲಾ ಪ್ರವಾಸದ ವೇಳೆ ಘಟಿಸಿರುವ ಹಲವು ಘಟನೆಗಳಲ್ಲಿ ನಿರ್ಲಕ್ಷ್ಯಗಳೇ ಎದ್ದು ಕಾಣುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಾಲೇಜು ಶಿಕ್ಷಣ ಇಲಾಖೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಅಧ್ಯಾಪಕರು ನಿಘಾವಹಿಸಬೇಕು
ಯಾವುದೇ ವಿದ್ಯಾರ್ಥಿಗಳು ನಿಯಮ ಉಲ್ಲೇಂಘಿಸಿದಂತೆ ಜೊತೆಯಲ್ಲಿರುವ ಅಧ್ಯಾಪಕರು ನಿಘಾವಹಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ. ಇದೇ ವೇಳೆ ಕಾಲೇಜು ಶಿಕ್ಷಣ ಇಲಾಖೆ ನೀಡಿರುವ ಆದೇಶದ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಸುರಕ್ಷತೆ, ಶಿಸ್ತು ಅತೀ ಮುಖ್ಯ. ಈ ನಿಟ್ಟಿನಲ್ಲಿ ಆದೇಶ ಪಾಲನೆ ಅತ್ಯಗತ್ಯ ಎಂದು ಸುತ್ತೋಲೆಯಲ್ಲಿ ಹೇಳಿದೆ.


