Jaipur school girl death:  4ನೇ ತರಗತಿ ವಿದ್ಯಾರ್ಥಿನಿಯೊಬ್ಬಳು  ಶಾಲಾ ಕಟ್ಟಡದಿಂದಲೇ ಕೆಳಗೆ ಹಾರಿ ಸಾವನ್ನಪ್ಪಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಸಾವಿನ ನಂತರ  ಶಾಲಾ ಆಡಳಿತ ಮಂಡಳಿ ಸ್ಥಳದಲ್ಲಿ ರಕ್ತದ ಕಲೆಗಳನ್ನು ಪೊಲೀಸರು ಬರುವ ಮೊದಲೇ ಕ್ಲೀನ್ ಮಾಡಿ ಸಾಕ್ಷಿನಾಶ ಮಾಡಿದ್ದಾರೆ.

ತಾನು ಓದುತ್ತಿದ್ದ ಶಾಲಾ ಕಟ್ಟಡದಿಂದಲೇ ಕೆಳಗೆ ಹಾರಿ ಸಾವಿಗೆ ಶರಣಾದ ಬಾಲಕಿ

ಜೈಪುರ: 4ನೇ ಕ್ಲಾಸ್ ಹುಡುಗಿಯೊಬ್ಬಳು ಕಟ್ಟಡದಿಂದ ಹಾರಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಆತಂಕ ಮೂಡಿಸಿದೆ. ಸ್ನೇಹಿತರ ಜೊತೆ ಆಟ ಆಡ್ಕೊಂದು ತಿಂದ್ಕೊಂಡು ಉಂಡ್ಕೊಂಡು ಖುಷಿ ಖುಷಿಯಾಗಿ ಇರಬೇಕಾದ ಈ ಎಳೆಯ ಪ್ರಾಯದಲ್ಲಿ ಈ ಬಾಲಕಿಗೆ ಸಾಯುವಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದ್ದೇನು ಎಂದು ಜನ ಪ್ರಶ್ನೆ ಮಾಡಿಕೊಳ್ತಿದ್ದಾರೆ.

9 ವರ್ಷದ ಈ ಬಾಲಕಿ 4ನೇ ಕ್ಲಾಸ್‌ನಲ್ಲಿ ಓದುತ್ತಿದ್ದಳು. ತಾನು ಓದುತ್ತಿದ್ದ ಶಾಲಾ ಕಟ್ಟಡದಿಂದಲೇ ಈಕೆ ಕೆಳಗೆ ಹಾರಿ ಈಕೆ ಸಾವಿಗೆ ಶರಣಾಗಿದ್ದು, ಸ್ಥಳೀಯರಲ್ಲಿ ದಿಗ್ಭ್ರಮೆ ಮೂಡಿಸಿದೆ. ಮೃತ ಬಾಲಕಿಯನ್ನು ಅಮೈರಾ ಎಂದು ಗುರುತಿಸಲಾಗಿದೆ. ಕೆಳಗೆ ಬಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಆಕೆ ಬದುಕುಳಿಯಲಿಲ್ಲ.

4ನೇ ಮಹಡಿಯಿಂದ ಹಾರಿದ ಬಾಲಕಿ: ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್‌:

ಘಟನೆ ಶಾಲಾ ಆವರಣದಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಅದರಲ್ಲಿ ಕಾಣುವಂತೆ ಬಾಲಕಿ ಶಾಲೆ ಕಟ್ಟಡದ ಕಾರಿಡಾರ್‌ನ ಬದಿಗಳಿಗೆ ಹಾಕಿದ ಕಬ್ಬಿಣದ ಸರಳುಗಳ ಮೇಲೇರಿ ಬಳಿಕ ಕೆಳಗೆ ಹಾರಿದ್ದಾಳೆ. 47 ಅಡಿ ಎತ್ತರದಿಂದ ಆಕೆ ಕೆಳಗೆ ಬಿದ್ದಿದ್ದರಿಂದ ಗಂಭೀರ ಗಾಯಗೊಂಡ ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಆಕೆ ಆತ್ಮ*ತ್ಯೆ ಮಾಡಿಕೊಂಡಿರುವುದು ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಕಾರಣ ಆಗಿದ್ದೇನು ಎಂಬ ಬಗ್ಗೆ ತಿಳಿದು ಬಂದಿಲ್ಲ ಎಂದು ತನಿಖೆ ಮಾಡಿದ ಪೊಲೀಸರು ಹೇಳಿದ್ದಾರೆ.

ಈ ಬಾಲಕಿ ನೀರ್ಜಾ ಮೋದಿ ಶಾಲೆಯಲ್ಲಿ ಓದುತ್ತಿದ್ದಳು. ಅದೇ ಶಾಲೆಯ ಕಟ್ಟಡದ 4ನೇ ಮಹಡಿಯಿಂದ ಆಕೆ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ ಎಂದು ಮಾನಸಸರೋವರ ಠಾಣೆ ಪೊಲೀಸ್ ಅಧಿಕಾರಿ ಲಖನ್ ಖಟಾನಾ ಹೇಳಿದ್ದಾರೆ. ಆದರೆ ಪೊಲೀಸರು ಘಟನಾ ಸ್ಥಳ ತಲುಪಿದಾಗ ಆಕೆ ಬಿದ್ದ ಸ್ಥಳವನ್ನು ಆಗಲೇ ಸ್ವಚ್ಛಗೊಳಿಸಲಾಗಿತ್ತು. ಅಲ್ಲಿ ಯಾವುದೇ ರಕ್ತದ ಗುರುತು ಇರಲಿಲ್ಲ ಎಂದು ತಿಳಿದು ಬಂದಿದೆ.

ಎಫ್‌ಐಆರ್ ದಾಖಲಿಸಿದ ಪೋಷಕರು

ಹೀಗಾಗಿ ಬಾಲಕಿಯ ಪೋಷಕರು ಈಗ ಶಾಲೆಯ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಸಾವು ಸಂಭವಿಸಿದೆ ಇದರಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಶಾಲಾ ಆವರಣದೊಳಗೆ ಇಂತಹ ಘಟನೆ ಹೇಗೆ ಸಂಭವಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಘಟನೆಯ ಬಗ್ಗೆ ನೀರ್ಜಾ ಶಾಲಾ ಆಡಳಿತ ಮಂಡಳಿ ಮೌನ ವಹಿಸಿದೆ. ಶಾಲಾ ಆಡಳಿತ ಮಂಡಳಿ ಸರಿಯಾಗಿ ಸಂವಹನ ನಡೆಸಿಲ್ಲ ಅಥವಾ ಪ್ರಾಂಶುಪಾಲರ ಸಂಪರ್ಕ ಸಂಖ್ಯೆಯನ್ನು ಹಂಚಿಕೊಳ್ಳಲು ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಶಿಕ್ಷಣ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪ್ರಾಂಶುಪಾಲರಾದ ಇಂದು ದಾವೆ ಅವರ ಪ್ರತಿನಿಧಿ ನಮ್ಮ ಕರೆಗೆ ಉತ್ತರಿಸಲಿಲ್ಲ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ರಾಮ್ ನಿವಾಸ್ ಶರ್ಮಾ ಹೇಳಿದ್ದಾರೆ.

ಈಕೆ ಪೋಷಕರ ಏಕೈಕ ಪುತ್ರಿ

ಮೃತ ಅಮೈರಾ ಪೋಷಕರಿಗೆ ಏಕೈಕ ಪುತ್ರಿಯಾಗಿದ್ದಳು. ಆಕೆಯ ತಾಯಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ ತಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮಾನಸಸರೋವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎಸ್‌ಎಫ್‌ಎಸ್ ಪ್ರದೇಶದಲ್ಲಿ ಈ ಕುಟುಂಬ ವಾಸ ಮಾಡ್ತಿತ್ತು. ಘಟನೆ ನಡೆದು ಸುಮಾರು ಆರು ಗಂಟೆಗಳ ನಂತರ, ಮರಣೋತ್ತರ ಪರೀಕ್ಷೆಯ ಔಪಚಾರಿಕತೆಗಳು ಪೂರ್ಣಗೊಂಡ ನಂತರ ಪೋಷಕರು ಈ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆಯ ನಂತರ ಅಮರಿಯಾ ಸಾವಿನ ಹಿಂದಿನ ನಿಖರವಾದ ಕಾರಣ ಹೊರಬರಲಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.

Scroll to load tweet…

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

ಇದನ್ನೂ ಓದಿ: ಪತಿಯ ಕೆಲಸ ಗಿಟ್ಟಿಸಿ ಆತನ ಕುಟುಂಬ ನಿರ್ಲಕ್ಷಿಸಿದ ಸೊಸೆ: ಮಾವನಿಗೆ ವೇತನದಲ್ಲಿ 20000 ನೀಡಲು ಹೈಕೋರ್ಟ್‌ ಸೂಚನೆ

ಇದನ್ನೂ ಓದಿ: ಡಾಂಕಿ ರೂಟ್‌ಲ್ಲಿ ಅಮೆರಿಕಾಗೆ ಹೋಗಲು 25 ಲಕ್ಷ ವೆಚ್ಚ ಮಾಡಿದ ಪೋಷಕರು ಏಕೈಕ ಪುತ್ರನ ಕಳೆದುಕೊಂಡರು!