11:30 PM (IST) Sep 26

Karnataka News Live Updates Sep 26th: ಕನ್ನಡ ಚಿತ್ರರಂಗಕ್ಕೆ ಆಘಾತ - ಸಂಗೀತ ಲೋಕದ ಖ್ಯಾತ 'ಡ್ರಮ್ಮರ್' ದೇವ ಇನ್ನಿಲ್ಲ!

ಕನ್ನಡ ಚಿತ್ರರಂಗ ಹಾಗೂ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ಡ್ರಮ್ಮರ್ ದೇವ ಅವರು 64ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Read Full Story
09:21 PM (IST) Sep 26

Karnataka News Live Updates Sep 26th: ಸ್ಟ್ರೋಕ್, ಹಾರ್ಟ್ ಪ್ರಾಬ್ಲಂ ಬರದಂತೆ ತಡೆಯಲು ಈ 5 ಆಹಾರಗಳನ್ನು ಸೇವಿಸಿ

ನಮ್ಮ ಇಂದಿನ ಕೆಟ್ಟ ಜೀವನಶೈಲಿ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಾರ್ಶ್ವವಾಯು ಅಥವಾ ಸ್ಟ್ರೋಕ್ ಬರದಂತೆ ತಡೆಯಲು ಈ 5 ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

Read Full Story
08:52 PM (IST) Sep 26

Karnataka News Live Updates Sep 26th: ಹಾರ್ಟ್ ಬೀಟ್ ಟ್ರ್ಯಾಕ್ ಮಾಡುವ 5000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್‌ವಾಚ್‌ಗಳು ಇವು!

ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಟೈಮ್ ನೋಡೋಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಹೆಲ್ತ್ ಟ್ರ್ಯಾಕ್ ಮಾಡುವ ಬೆಸ್ಟ್ ಫ್ರೆಂಡ್ಸ್ ಆಗಿವೆ. 5,000 ರೂ. ಬಜೆಟ್‌ನಲ್ಲಿ ಯಾವೆಲ್ಲಾ ಟಾಪ್ 5 ಸ್ಮಾರ್ಟ್‌ವಾಚ್‌ಗಳಿವೆ? ಡೀಟೇಲ್ಸ್ ಇಲ್ಲಿದೆ ನೋಡಿ..

Read Full Story
08:19 PM (IST) Sep 26

Karnataka News Live Updates Sep 26th: ನಟಿ ರುಕ್ಮಿಣಿ ವಸಂತ್ ಫುಲ್ ಬ್ಯುಸಿ - ಕನ್ನಡದ ಬೆಡಗಿಯ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು!

ರುಕ್ಮಿಣಿ ವಸಂತ್ ಸದ್ಯ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಜೂ. ಎನ್‌ಟಿಆರ್, ನಿವಿನ್ ಪೌಲಿ ಸೇರಿದಂತೆ ಹಲವು ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Read Full Story
07:42 PM (IST) Sep 26

Karnataka News Live Updates Sep 26th: ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಅದ್ದೂರಿ ಕಾರ್ಯಕ್ರಮ; ಎಲ್ಲಿ..? ಯಾರೆಲ್ಲಾ ಬರ್ತಿದಾರೆ?

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಿ? ಯಾರೆಲ್ಲಾ ಬರಲಿದ್ದಾರೆ, ಏನೆಲ್ಲಾ ಕಾರ್ಯಕ್ರಮಗಳಿವೆ? ಮುಂದೆ ನೋಡಿ..

Read Full Story
06:55 PM (IST) Sep 26

Karnataka News Live Updates Sep 26th: Bigg Boss - ಈ ವಾರ ದೊಡ್ಮನೆಗೆ 5 ಜನ 'ವೈಲ್ಡ್‌ ಕಾರ್ಡ್‌' ಎಂಟ್ರಿ ಕೊಡಲಿದ್ದಾರಾ? ಯಾರೆಲ್ಲಾ ಹೋಗೋ ಚಾನ್ಸ್..?!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ವೈಲ್ಡ್ ಕಾರ್ಡ್ ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿ ಒಂಬತ್ತನೇ ವಾರದಲ್ಲಿ ಹೊರಬಂದಿದ್ದ ನಟರೂ ಇವರಲ್ಲೊಬ್ಬರು. ಯಾರೆಲ್ಲಾ? ನೋಡಿ..

Read Full Story
06:50 PM (IST) Sep 26

Karnataka News Live Updates Sep 26th: Shivarajkumar - ಆ ಸಿನಿಮಾ ನೋಡಿ ಒಂದು ತಾಸು ನಿದ್ದೆಯೇ ಬರಲಿಲ್ಲ - ತಂದೆ-ತಾಯಿ ಎಲ್ಲಾ ಜ್ಞಾಪಕಕ್ಕೆ ಬಂದ್ರು!

‘ವಿಶ್ವನಾಥ್ & ಸನ್ಸ್’ ಸಿನಿಮಾ ನೋಡಿ ಒಂದು ಗಂಟೆ ನಿದ್ದೆ ಬರಲಿಲ್ಲ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಸೂರ್ಯ ನಟನೆಯ ಈ ಸಿನಿಮಾ ತಮ್ಮ ತಂದೆ-ತಾಯಿ ಹಾಗೂ ಕುಟುಂಬವನ್ನು ನೆನಪಿಸಿತು ಎಂದು ಶಿವಣ್ಣ ಭಾವುಕರಾಗಿ ಮಾತನಾಡಿದ್ದಾರೆ.

Read Full Story
06:42 PM (IST) Sep 26

Karnataka News Live Updates Sep 26th: Cricket - ಭಾರತ-ವೆಸ್ಟ್ ಇಂಡೀಸ್ ಒಡಿಐ ಸರಣಿಗೂ ಮುನ್ನ ಆಘಾತ - ನಾಯಕ ಶುಭಮನ್ ಗಿಲ್ ಗಾಯದ ಬಗ್ಗೆ ಬಿಸಿಸಿಐ ಸ್ಪಷ್ಟನೆ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೂ ಮುನ್ನ ಅಭ್ಯಾಸದ ವೇಳೆ ನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದರು. ಇದರಿಂದ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂಬ ಎಲ್ಲೆಡೆ ಹರಡಿದೆ. ಬಿಸಿಸಿಐ ಸ್ಪಷ್ಟನೆ ಏನು? ಇಲ್ಲಿದೆ ಸಂಪೂರ್ಣ ವಿವರ.

Read Full Story
06:26 PM (IST) Sep 26

Karnataka News Live Updates Sep 26th: OTTಯಲ್ಲಿ ನಡುಕ ಹುಟ್ಟಿಸುವ ಹಾರರ್ ಥ್ರಿಲ್ಲರ್ - ಮದುವೆಯಾದ ಪ್ರತಿಯೊಬ್ಬ ಸೊಸೆಗೂ ಅದೇ ಗತಿಯಂತೆ!

OTTಯಲ್ಲಿ ಹಾರರ್, ಮಿಸ್ಟರಿ ಹಾಗೂ ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ ‘ಅಯ್ಯನ ಮನೆ’ ಕುತೂಹಲ ಮೂಡಿಸುವ ಕನ್ನಡ ವೆಬ್‌ಸಿರೀಸ್ ಆಗಿದೆ. ಮದುವೆಯಾಗಿ ಹಳೆಯ ‘ಅಯ್ಯನ ಮನೆ’ಗೆ ಬರುವ ಪ್ರತಿಯೊಬ್ಬ ಸೊಸೆಗೂ ಅನಿರೀಕ್ಷಿತ ದುರಂತ ಎದುರಾಗುತ್ತದೆ.

Read Full Story
06:22 PM (IST) Sep 26

Karnataka News Live Updates Sep 26th: ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್

ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮಂದೂಡುವಂತೆ ಸಲ್ಲಿಸಿದ್ದ ದರ್ಶನ್ ಅರ್ಜಿ ವಜಾಗೊಂಡಿದೆ. ಇದರೊಂದಿಗೆ ದರ್ಶನ್ ನಡೆಸಿದ ಎಲ್ಲಾ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಇತ್ತ ಸೋಮವಾರವೇ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ದಿನಾಂಕ ಫಿಕ್ಸ್ ಆಗಿದೆ.

Read Full Story
06:15 PM (IST) Sep 26

Karnataka News Live Updates Sep 26th: Lingayat Trust Controversy - ಪಂಚಮಸಾಲಿ ಪೀಠಕ್ಕೆ ಸಂಬಂಧಿಸಿದ 10 ಕೋಟಿ ಸರ್ಕಾರದ ಅನುದಾನ ದುರ್ಬಳಕೆ ಆರೋಪ; ತನಿಖೆಗೆ ರಾಜ್ಯಪಾಲರ ಕಚೇರಿ ಆದೇಶ!

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್‌ಗೆ ಸರ್ಕಾರ ನೀಡಿದ್ದ 10 ಕೋಟಿ ರೂ. ಅನುದಾನ ದುರ್ಬಳಕೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಹಣ ಗುಳುಂ ಮಾಡಿರುವ ಬಗ್ಗೆ ರಾಜ್ಯಪಾಲರ ಕಚೇರಿಯು ತನಿಖೆಗೆ ಆದೇಶಿಸಿದೆ. ಈ ಕುರಿತು ಸಮಗ್ರ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.
Read Full Story
06:13 PM (IST) Sep 26

Karnataka News Live Updates Sep 26th: ವಿಜಯನಗರ ರಾಜಮನೆತನದ 100 ವರ್ಷ ಹಳೆಯ ಚಿನ್ನದ ಸೀರೆ ಖರೀದಿಸುವ ಭಾಗ್ಯ? ಏನಿದರ ವಿಶೇಷತೆ

ವಿಜಯನಗರ ರಾಜಮನೆತನದ ಶ್ರೀಮತಿ ರತ್ನಶ್ರೀ ಅವರು 100 ವರ್ಷಕ್ಕೂ ಹಳೆಯದಾದ ಮಹಾರಾಣಿ ಲಾಲ್ ಕುಮಾರಿ ಬಾಯಿ ಅವರ ಬಂಗಾರದ ಸೀರೆಯ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಚಿನ್ನದ ಎಳೆಗಳಿಂದ 'ಸದಾ ಸೌಭಾಗ್ಯವತಿ ರಹೋ' ಎಂದು ಬರೆಯಲಾಗಿರುವ ಈ ಸೀರೆಯು ಐತಿಹಾಸಿಕ ವಿನ್ಯಾಸವನ್ನು ಹೊಂದಿದೆ.

Read Full Story
05:47 PM (IST) Sep 26

Karnataka News Live Updates Sep 26th: ಹಾಸನಾಂಬ ದೇವಿ ಜಾತ್ರಾ ಪೋಸ್ಟರ್ ಬಿಡುಗಡೆ, 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ 14 ದಿನಗಳ ಕಾಲ ಜಾತ್ರೆ ನಡೆಯಲಿದೆ. ಈ ಪೈಕಿ 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಯಾವಾಗ ಜಾತ್ರೆ ಆರಂಭ? ಇಲ್ಲಿದೆ ಡಿಟೇಲ್ಸ್

Read Full Story
05:18 PM (IST) Sep 26

Karnataka News Live Updates Sep 26th: ಮಿಡ್ ನೈಟ್ ಹೊರಬಿದ್ದಿರುವ ತಾಂಡವ್ ಮತ್ತೆ ಬಿಗ್‌ ಬಾಸ್‌ ಮನೆಯೊಳಕ್ಕೆ ಬರ್ತಾರಾ? ಈ ಸುಳಿವು ಕೊಟ್ಟಿದ್ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಿಂದ ಸ್ಪರ್ಧಿ ತಾಂಡವ್ ರಾಮ್ ನಿರ್ಗಮನದ ವಿಚಾರವೇ ಬಿಗ್ ಬಾಸ್ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಮಾಚಾರಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ತಾಂಡವ್ ಮತ್ತೆ ಮನೆಗೆ ಹಿಂತಿರುಗುತ್ತಾರೆ ಎನ್ನಲಾಗುತ್ತಿದೆ? ಆ ಸುಳಿವು ನೀಡಿದ್ದು ಯಾರು ಗೊತ್ತಾ?

Read Full Story
04:37 PM (IST) Sep 26

Karnataka News Live Updates Sep 26th: 64ರಲ್ಲೂ ಅದೇ ಎನರ್ಜಿ - 'ಆ್ಯಕ್ಷನ್ ಕಿಂಗ್' ಅರ್ಜುನ್ ಸರ್ಜಾ ಫಿಟ್‌ನೆಸ್‌ ಸೀಕ್ರೆಟ್‌ ಹಿಂದೆ ಇದೆ ಈ ಶಿಸ್ತು!

64ರ ವಯಸ್ಸಿನಲ್ಲೂ ಅರ್ಜುನ್ ಸರ್ಜಾ ತಮ್ಮ ಫಿಟ್‌ನೆಸ್‌ನಿಂದ ಗಮನ ಸೆಳೆಯುತ್ತಿದ್ದಾರೆ. ನಿಯಮಿತ ವ್ಯಾಯಾಮ, ಮಾರ್ಷಲ್ ಆರ್ಟ್ಸ್, ಯೋಗ, ಸ್ಟ್ರೆಚಿಂಗ್, ಶಿಸ್ತುಬದ್ಧ ಆಹಾರ ಮತ್ತು ನಿರಂತರ ಅಭ್ಯಾಸ ಅವರ ಫಿಟ್‌ನೆಸ್‌ ಜೀವನದ ಪ್ರಮುಖ ಭಾಗಗಳಾಗಿವೆ.

Read Full Story
04:10 PM (IST) Sep 26

Karnataka News Live Updates Sep 26th: 'ರುದ್ರಾಭಿಷೇಕಂ' ಸಿನಿಮಾ ವಿಮರ್ಶೆ - ವೀರಗಾಸೆಯ ಸೊಗಡು, ಗ್ರಾಮೀಣ ಪರಿಸರದ ಹೋರಾಟದ ಕಥನ

ಹಳ್ಳಿ ಮಣ್ಣಿನ ವಾಸನೆ, ಧಾರ್ಮಿಕ ನಂಬಿಕೆ, ವೀರಗಾಸೆ ಮತ್ತು ಸಾಮಾಜಿಕ ಹೋರಾಟದ ಅಂಶಗಳನ್ನು ಒಳಗೊಂಡ ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ ರಾಘವೇಂದ್ರ ಗಮನ ಸೆಳೆಯುತ್ತಾರೆ. ಗೌಡನ ದರ್ಪದ ವಿರುದ್ಧ ಯುವಕನ ಬಂಡಾಯ..

Read Full Story
03:58 PM (IST) Sep 26

Karnataka News Live Updates Sep 26th: ಬಾಗಲಕೋಟೆ - ಅಪಘಾತದಲ್ಲಿ ನೆಚ್ಚಿನ ಶಿಕ್ಷಕ ಸಾವು; ಪಾರ್ಥಿವ ಶರೀರಕ್ಕೆ ಪುಷ್ಪ ವೃಷ್ಠಿ, ಮಕ್ಕಳಿಂದ ಕಣ್ಣೀರಿನ ವಿದಾಯ!

ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ತಮ್ಮ ನೆಚ್ಚಿನ ಶಿಕ್ಷಕರಾಗಿದ್ದ ಬಸವರಾಜ್ ರಾಮಪ್ಪ ಶೆಟ್ಟಿ ಅಂತಿಮಯಾತ್ರೆ ವೇಳೆ ಶಾಲಾ ಮಕ್ಕಳು ಭಾವುಕವಾಗಿ ಪುಷ್ಪವೃಷ್ಟಿ ಮೂಲಕ ಕಣ್ಣೀರ ವಿದಾಯ ಹೇಳಿದರು.

Read Full Story
03:55 PM (IST) Sep 26

Karnataka News Live Updates Sep 26th: 'ಪ್ರೇಮದ ಊರಲಿ' ಸಿನಿಮಾ ವಿಮರ್ಶೆ - ಸರಳ ಕಥೆ, ಜೀವಂತಿಕೆಯಿಂದ ಕೂಡಿರುವ ಸಂಗೀತಮಯ ಚಿತ್ರ

ಸಂಬಂಧಗಳ ಸಂಕೀರ್ಣತೆಯನ್ನು ಸರಳವಾಗಿ ಕಟ್ಟಿಕೊಡುವ ‘ಪ್ರೇಮದ ಊರಲಿ’ ಚಿತ್ರದಲ್ಲಿ ಶ್ರೀರಾಮ್‌, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅವರ ಅಭಿನಯ ಗಮನ ಸೆಳೆಯುತ್ತದೆ. ಜೀವಂತ ಪಾತ್ರಗಳು, ಸಹಜ ನಿರೂಪಣೆ.

Read Full Story
03:42 PM (IST) Sep 26

Karnataka News Live Updates Sep 26th: ಜ್ಯೋತಿಷಿಯ ಮಾತಿಗೆ ಬೆದರಿದ ಮುಖ್ಯಮಂತ್ರಿಯ ಮಧ್ಯದ ಹೋರಾಟ - ಹೇಗಿದೆ 'ಕಾಮನ್ ಮ್ಯಾನ್' ಸಿನಿಮಾ?

ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ ಏನಾಗುತ್ತದೆ ಎಂಬ ಕಲ್ಪನೆಯ ‘ಕಾಮನ್ ಮ್ಯಾನ್’ ರಾಜಕೀಯ ವಿಡಂಬನೆಯ ಸಿನಿಮಾ. ಗೌರಿಶಂಕರ್ ಅವರ ಅಭಿನಯ ಗಮನ ಸೆಳೆಯುತ್ತದೆ.

Read Full Story
03:27 PM (IST) Sep 26

Karnataka News Live Updates Sep 26th: ವಿರಸಗಳ ನಡುವೆ 'ಹೆಗ್ಗಣ ಮುದ್ದು' ಸಂಸಾರ ಕೊನೆಗೆ ತಲುಪೋದು ಎಲ್ಲಿಗೆ? ಇಲ್ಲಿದೆ ಸಂಪೂರ್ಣ ವಿಮರ್ಶೆ

ಪ್ರೀತಿ, ಅನುಮಾನ ಮತ್ತು ದಾಂಪತ್ಯದೊಳಗಿನ ಹಳೆಯ ಪ್ರೇಮದ ಗುಟ್ಟಿನ ಸುತ್ತ ಸಾಗುವ ಕನ್ನಡ ಸಿನಿಮಾ ‘ಹೆಗ್ಗಣ ಮುದ್ದು’. ಪೂರ್ಣಚಂದ್ರ ಮೈಸೂರು ಮತ್ತು ಅದಿತಿ ಸಾಗರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅವಿನಾಶ್‌ ಬಲೆಕ್ಕಳ ನಿರ್ದೇಶನ ಮಾಡಿದ್ದಾರೆ.

Read Full Story