ತುಮಕೂರು-ದಾವಣಗೆರೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಸಿದ್ದಗಂಗಾ, ವಿಶ್ವಮಾನವ ಸೇರಿದಂತೆ ಪ್ರಮುಖ ರೈಲುಗಳ ಮಾರ್ಗ ಬದಲಾವಣೆ ಹಾಗೂ ಭಾಗಶಃ ರದ್ದತಿ ಮಾಡಲಾಗಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸುವಂತೆ ರೈಲ್ವೆ ಇಲಾಖೆ ವಿನಂತಿಸಿದೆ.
ಬೆಂಗಳೂರು: ತುಮಕೂರು-ದಾವಣಗೆರೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ವೇಗ ನೀಡಲಾಗುತ್ತಿದ್ದು, ಇದರ ಭಾಗವಾಗಿ ತೊಳಹುಣಸೆ ಯಾರ್ಡ್‌ನಲ್ಲಿ ಸಂಪರ್ಕ ಜೋಡಣೆ ಕಾಮಗಾರಿಗಳು ಜರುಗುತ್ತಿವೆ. ಈ ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ನೈಋತ್ಯ ರೈಲ್ವೆ ವಲಯವು ಹಲವು ಪ್ರಮುಖ ರೈಲುಗಳ ಸಂಚಾರವನ್ನು ಪೂರ್ಣ ಹಾಗೂ ಭಾಗಶಃ ರದ್ದುಗೊಳಿಸಿದೆ. ಜತೆಗೆ ಕೆಲ ರೈಲುಗಳ ಮಾರ್ಗ ಬದಲಾವಣೆ ಮತ್ತು ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ವಿನಂತಿಸಿದೆ.
ರೈಲು ಸೇವೆಗಳಲ್ಲಿ ಉಂಟಾಗಿರುವ ವ್ಯತ್ಯಯಗಳ ಸಂಪೂರ್ಣ ವಿವರ ಇಲ್ಲಿದೆ:
1 ಪೂರ್ಣ ಪ್ರಮಾಣದಲ್ಲಿ ರದ್ದಾದ ರೈಲುಗಳು
ರೈಲು ಸಂಖ್ಯೆ 16214 (ಎಸ್‌ಎಸ್‌ಎಸ್ ಹುಬ್ಬಳ್ಳಿ - ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್):
ಅಕ್ಟೋಬರ್ 08 ಮತ್ತು ಅಕ್ಟೋಬರ್ 09, 2026 ರಂದು ಈ ರೈಲು ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16213 (ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್):
ಅಕ್ಟೋಬರ್ 09 ಮತ್ತು ಅಕ್ಟೋಬರ್ 10, 2026 ರಂದು (ಒಟ್ಟು 2 ದಿನಗಳು) ಈ ರೈಲಿನ ಸೇವೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
2. ಭಾಗಶಃ ರದ್ದುಗೊಂಡ ಪ್ರಮುಖ ರೈಲು ಸೇವೆಗಳು
ಸಿದ್ದಗಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (Siddaganga Superfast Express)
ಕೆಎಸ್‌ಆರ್ ಬೆಂಗಳೂರು - ಧಾರವಾಡ (ರೈಲು ಸಂಖ್ಯೆ 12725):
ಸೆಪ್ಟೆಂಬರ್ 27 ಹಾಗೂ ಅಕ್ಟೋಬರ್ 01, 02, 03, 06, 07, 08 ಮತ್ತು 09, 2026 (ಒಟ್ಟು ೧೦ ದಿನಗಳು) ರಂದು ಬೆಂಗಳೂರಿನಿಂದ ಹೊರಡುವ ಈ ರೈಲು ಬೀರೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೀರೂರು ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ಧಾರವಾಡ - ಕೆಎಸ್‌ಆರ್ ಬೆಂಗಳೂರು (ರೈಲು ಸಂಖ್ಯೆ 12726):
ಸೆಪ್ಟೆಂಬರ್ 28 ಹಾಗೂ ಅಕ್ಟೋಬರ್ 02, 03, 04, 07, 08, 09 ಮತ್ತು 10, 2026 (ಒಟ್ಟು ೧೦ ದಿನಗಳು) ರಂದು ಹೊರಡಬೇಕಿದ್ದ ಈ ರೈಲು ಧಾರವಾಡದ ಬದಲಿಗೆ ಬೀರೂರು ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ.
ಹುಬ್ಬಳ್ಳಿ - ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್ (Hubballi - Chitradurga Daily Express)
ಎಸ್‌ಎಸ್‌ಎಸ್ ಹುಬ್ಬಳ್ಳಿ - ಚಿತ್ರದುರ್ಗ (ರೈಲು ಸಂಖ್ಯೆ 17347):
ಸೆಪ್ಟೆಂಬರ್ 26, 27 ಹಾಗೂ ಅಕ್ಟೋಬರ್ 01, 05, 06, 11, 12 ಮತ್ತು 13, 2026 ರಂದು ಹೊರಡುವ ರೈಲು ಹರಿಹರ ಮತ್ತು ಚಿತ್ರದುರ್ಗ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಹರಿಹರದಲ್ಲೇ ತನ್ನ ಪಯಣ ಕೊನೆಗೊಳಿಸಲಿದೆ.
ಚಿತ್ರದುರ್ಗ - ಎಸ್‌ಎಸ್‌ಎಸ್ ಹುಬ್ಬಳ್ಳಿ (ರೈಲು ಸಂಖ್ಯೆ 17348):
ಸೆಪ್ಟೆಂಬರ್ 26, 27 ಹಾಗೂ ಅಕ್ಟೋಬರ್ 01, 05, 06, 11, 12 ಮತ್ತು 13, 2026 ರಂದು ಚಿತ್ರದುರ್ಗದ ಬದಲಾಗಿ ಹರಿಹರ ನಿಲ್ದಾಣದಿಂದಲೇ ನಿಗದಿತ ವೇಳಾಪಟ್ಟಿಯಂತೆ ಹುಬ್ಬಳ್ಳಿಗೆ ಹೊರಡಲಿದೆ.
ಮೈಸೂರು - ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (Vishwamanava Express)
ಮೈಸೂರು - ಬೆಳಗಾವಿ (ರೈಲು ಸಂಖ್ಯೆ 20676):
ಸೆಪ್ಟೆಂಬರ್ 26, 27 ಹಾಗೂ ಅಕ್ಟೋಬರ್ 01, 05, 06, 11, 12 ಮತ್ತು 13, 2026 ರಂದು ಮೈಸೂರಿನಿಂದ ಹೊರಡುವ ರೈಲು ಬೀರೂರು ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೀರೂರಿನಲ್ಲೇ ನಿಲ್ಲಲಿದೆ.
ಬೆಳಗಾವಿ - ಮೈಸೂರು (ರೈಲು ಸಂಖ್ಯೆ 20675):
ಸೆಪ್ಟೆಂಬರ್ 26, 27, 28 ಹಾಗೂ ಅಕ್ಟೋಬರ್ 02, 05, 06, 11, 12 ಮತ್ತು 13, 2026 ರಂದು ಬೆಳಗಾವಿಯ ಬದಲಾಗಿ ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯಕ್ಕೆ ಮೈಸೂರಿಗೆ ಹೊರಡಲಿದೆ.


