ಹಾರ್ಟ್ ಬೀಟ್ ಟ್ರ್ಯಾಕ್ ಮಾಡುವ 5000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್‌ವಾಚ್‌ಗಳು ಇವು!
ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಟೈಮ್ ನೋಡೋಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಹೆಲ್ತ್ ಟ್ರ್ಯಾಕ್ ಮಾಡುವ ಬೆಸ್ಟ್ ಫ್ರೆಂಡ್ಸ್ ಆಗಿವೆ. 5,000 ರೂ. ಬಜೆಟ್‌ನಲ್ಲಿ ಯಾವೆಲ್ಲಾ ಟಾಪ್ 5 ಸ್ಮಾರ್ಟ್‌ವಾಚ್‌ಗಳಿವೆ? ಡೀಟೇಲ್ಸ್ ಇಲ್ಲಿದೆ ನೋಡಿ..

ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಟೈಮ್ ತೋರಿಸುವ ಡಿವೈಸ್ ಅಲ್ಲ!
ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಟೈಮ್ ನೋಡೋಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಹೆಲ್ತ್ ಟ್ರ್ಯಾಕ್ ಮಾಡುವ ಬೆಸ್ಟ್ ಫ್ರೆಂಡ್ಸ್ ಆಗಿವೆ. 5,000 ರೂ. ಬಜೆಟ್‌ನಲ್ಲಿ ಯಾವೆಲ್ಲಾ ಟಾಪ್ 5 ಸ್ಮಾರ್ಟ್‌ವಾಚ್‌ಗಳಿವೆ? ಡೀಟೇಲ್ಸ್ ಇಲ್ಲಿದೆ ನೋಡಿ..
ಸ್ಮಾರ್ಟ್‌ವಾಚ್ ಖರೀದಿಸುವ ಮುನ್ನ ನೆನಪಿರಲಿ
ಈ ಸ್ಮಾರ್ಟ್‌ವಾಚ್‌ಗಳು ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರೂ, ಇವುಗಳನ್ನು ಮೆಡಿಕಲ್ ಚೆಕಪ್‌ಗಳಿಗೆ ಪರ್ಯಾಯವಾಗಿ ಬಳಸಬಾರದು. ಹಾರ್ಟ್ ರೇಟ್ ಅಥವಾ ಆಕ್ಸಿಜನ್ ಲೆವೆಲ್‌ನಲ್ಲಿ ಪದೇ ಪದೇ ಏರುಪೇರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಬೆಸ್ಟ್ ಡಿಸ್‌ಪ್ಲೇ, ಬ್ಯಾಟರಿ ಲೈಫ್, ಬ್ಲೂಟೂತ್ ಕಾಲಿಂಗ್ ಹಾಗೂ ಫಿಟ್‌ನೆಸ್ ಟ್ರ್ಯಾಕಿಂಗ್ ಬೇಕು ಎನ್ನುವವರಿಗೆ 5,000 ರೂ. ಒಳಗಿನ ಈ ಮಾಡೆಲ್‌ಗಳು ಬೆಸ್ಟ್ ಚಾಯ್ಸ್.
ನಾಯ್ಸ್ ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್: ಹೆಲ್ತ್ ಜೊತೆಗೆ ಸ್ಮಾರ್ಟ್ ಫೀಚರ್ಸ್
ನಾಯ್ಸ್ ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್ ಬೆಲೆ 4,999 ರೂ. ಗಳಿಂದ ಶುರುವಾಗುತ್ತದೆ. 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ, ಹಾರ್ಟ್ ರೇಟ್, SpO2, ನಿದ್ರೆ ಹಾಗೂ ಒತ್ತಡ ಟ್ರ್ಯಾಕಿಂಗ್ ಜೊತೆಗೆ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳಿವೆ. 150ಕ್ಕೂ ಹೆಚ್ಚು ವಾಚ್ ಫೇಸ್, SOS ಫೀಚರ್ ಹಾಗೂ ಬ್ಲೂಟೂತ್ 5.3 ಕನೆಕ್ಟಿವಿಟಿ ಇದರಲ್ಲಿದೆ. ಒಮ್ಮೆ ಚಾರ್ಜ್ ಮಾಡಿದರೆ 7 ದಿನಗಳವರೆಗೆ ಬ್ಯಾಟರಿ ಲೈಫ್ ಸಿಗುತ್ತದೆ.
ಬೋಟ್ ವಾಲರ್ ವಾಚ್ 1R: ಫಿಟ್‌ನೆಸ್ ಪ್ರಿಯರಿಗೆ ಹೇಳಿಮಾಡಿಸಿದ್ದು
ಬೋಟ್ ವಾಲರ್ ವಾಚ್ 1R ಬೆಲೆ 4,499 ರೂ. ಇದ್ದು, 700ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡುತ್ತದೆ. ಹಾರ್ಟ್ ರೇಟ್, SpO2, ಹಾರ್ಟ್ ರೇಟ್ ವೇರಿಯಬಿಲಿಟಿ, VO2 ಮ್ಯಾಕ್ಸ್, ನಿದ್ರೆ ಹಾಗೂ ಒತ್ತಡವನ್ನು ಇದು ಟ್ರ್ಯಾಕ್ ಮಾಡುತ್ತದೆ. 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ, 7 ರಿಂದ 10 ದಿನಗಳ ಬ್ಯಾಟರಿ ಬ್ಯಾಕಪ್ ಹಾಗೂ 3 ATM ವಾಟರ್ ರೆಸಿಸ್ಟೆನ್ಸ್ ಇದರ ಸ್ಪೆಷಾಲಿಟಿ.
CMF ವಾಚ್ ಪ್ರೊ 2: ಸ್ಟೈಲಿಶ್ ಡಿಸೈನ್, ಬೆಸ್ಟ್ ಬ್ಯಾಟರಿ
ನಥಿಂಗ್ ಕಂಪನಿಯ ಸಬ್-ಬ್ರ್ಯಾಂಡ್ CMF ಬಿಡುಗಡೆ ಮಾಡಿರುವ ವಾಚ್ ಪ್ರೊ 2 ಬೆಲೆ 4,999 ರೂ. ಇದೆ. 1.32 ಇಂಚಿನ ಅಮೋಲೆಡ್ ಡಿಸ್‌ಪ್ಲೇ, ಹಾರ್ಟ್ ರೇಟ್, SpO2 ಮಾನಿಟರಿಂಗ್, 120ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಹಾಗೂ ಬ್ಲೂಟೂತ್ ಕಾಲಿಂಗ್ ಫೀಚರ್ ಇದರಲ್ಲಿದೆ. IP68 ಪ್ರೊಟೆಕ್ಷನ್ ಜೊತೆಗೆ ಒಮ್ಮೆ ಚಾರ್ಜ್ ಮಾಡಿದರೆ 11 ದಿನಗಳವರೆಗೆ ಬ್ಯಾಟರಿ ಲೈಫ್ ಕೊಡುತ್ತದೆ.
ಬೋಟ್ ಕ್ರೋಮ್ ಐರಿಸ್: ಕಡಿಮೆ ಬೆಲೆಗೆ ಬೆಸ್ಟ್ ಫೀಚರ್ಸ್
ಬೋಟ್ ಕ್ರೋಮ್ ಐರಿಸ್ ಸ್ಮಾರ್ಟ್‌ವಾಚ್ ಬೆಲೆ 3,499 ರೂ. ಇದೆ. 1.32 ಇಂಚಿನ ಅಮೋಲೆಡ್ ಆಲ್ವೇಸ್-ಆನ್ ಡಿಸ್‌ಪ್ಲೇ, ಹಾರ್ಟ್ ರೇಟ್, SpO2 ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್, ಬ್ರೀತಿಂಗ್ ಟ್ರೈನಿಂಗ್ ಹಾಗೂ ಬ್ಲೂಟೂತ್ ಕಾಲಿಂಗ್ ಫೀಚರ್‌ಗಳನ್ನು ಇದು ಹೊಂದಿದೆ. IP68 ವಾಟರ್ ರೆಸಿಸ್ಟೆನ್ಸ್ ಕೂಡ ಇದೆ. ಪವರ್ ಸೇವಿಂಗ್ ಮೋಡ್‌ನಲ್ಲಿ 5 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಸಿಗುತ್ತದೆ.
ರಿಯಲ್‌ಮಿ ವಾಚ್ 5: ದೊಡ್ಡ ಡಿಸ್‌ಪ್ಲೇ, ಸೂಪರ್ ಬ್ಯಾಟರಿ
ರಿಯಲ್‌ಮಿ ವಾಚ್ 5 ಬೆಲೆ 4,299 ರೂ. ಇದೆ. ಈ ವಾಚ್ 1.97 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಹಾರ್ಟ್ ರೇಟ್, SpO2, ನಿದ್ರೆ, ಒತ್ತಡ ಹಾಗೂ ಮಹಿಳೆಯರ ಋತುಚಕ್ರವನ್ನು ಇದು ಟ್ರ್ಯಾಕ್ ಮಾಡುತ್ತದೆ. 108 ಸ್ಪೋರ್ಟ್ಸ್ ಮೋಡ್, 300ಕ್ಕೂ ಹೆಚ್ಚು ವಾಚ್ ಫೇಸ್, ಬ್ಲೂಟೂತ್ ಕಾಲಿಂಗ್ ಹಾಗೂ IP68 ವಾಟರ್ ರೆಸಿಸ್ಟೆನ್ಸ್ ಇದರಲ್ಲಿದೆ. ಒಮ್ಮೆ ಚಾರ್ಜ್ ಮಾಡಿದರೆ 16 ದಿನಗಳವರೆಗೆ ಬ್ಯಾಟರಿ ಬರುತ್ತೆ ಎಂದು ಕಂಪನಿ ಹೇಳಿದೆ.
ಆರೋಗ್ಯದ ಏರುಪೇರುಗಳನ್ನು ಮೊದಲೇ ತಿಳಿಯಿರಿ
ಮೆಡಿಕಲ್ ಡಿವೈಸ್‌ಗಳಿಗೆ ಇವು ಪರ್ಯಾಯವಲ್ಲ. ಆದರೆ, ನಮ್ಮ ಆರೋಗ್ಯದಲ್ಲಿ ಆಗುವ ಅಸಾಧಾರಣ ಬದಲಾವಣೆಗಳನ್ನು ಮೊದಲೇ ಗುರುತಿಸಲು ಈ ವಾಚ್‌ಗಳು ತುಂಬಾನೇ ಹೆಲ್ಪ್ ಮಾಡುತ್ತವೆ. 5,000 ರೂ. ಒಳಗಿನ ಬೆಲೆಯಲ್ಲಿ ಸಿಗುವ ಟಾಪ್ 5 ಸ್ಮಾರ್ಟ್‌ವಾಚ್‌ಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.
ಸ್ಮಾರ್ಟ್‌ವಾಚ್ ಕೇವಲ ವಾಚ್ ಅಲ್ಲ
ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಟೈಮ್ ತೋರಿಸುವ ಡಿವೈಸ್ ಆಗುಳಿದಿಲ್ಲ, ನಮ್ಮ ಆರೋಗ್ಯ ಕಾಪಾಡುವ ಪರ್ಸನಲ್ ಅಸಿಸ್ಟೆಂಟ್ ಆಗಿ ಬದಲಾಗಿವೆ. ಹಾರ್ಟ್ ರೇಟ್ ಮಾನಿಟರಿಂಗ್, ರಕ್ತದಲ್ಲಿನ ಆಕ್ಸಿಜನ್ ಲೆವೆಲ್ ಚೆಕ್ ಮಾಡುವ SpO2, ಸ್ಲೀಪ್ ಟ್ರ್ಯಾಕಿಂಗ್‌ನಂತಹ ಹಲವು ಫೀಚರ್‌ಗಳು ಈಗ ಬಜೆಟ್ ಬೆಲೆಯ ಸ್ಮಾರ್ಟ್‌ವಾಚ್‌ಗಳಲ್ಲೂ ಸಿಗುತ್ತಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

