09:02 AM (IST) Sep 23

Karnataka News Live ಮಂಗಳೂರಿಗೆ ಬಂದ ತಿರುಪತಿ ತಿಮ್ಮಪ್ಪ; ಸರ್ಕಾರ ಕೊಟ್ಟ 10 ಎಕರೆ ಜಾಗದಲ್ಲಿ ಬೃಹತ್ ದೇಗುಲ ನಿರ್ಮಾಣ!

ಬೆಂಗಳೂರಿನ ನಂತರ ಇದೇ ಮೊದಲ ಬಾರಿಗೆ ಮಂಗಳೂರಿನ ಹೊರವಲಯದಲ್ಲಿ ಟಿಟಿಡಿ ವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣವಾಗಲಿದೆ. ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ 10 ಎಕರೆ ಜಾಗವನ್ನು ಮಂಜೂರು ಮಾಡಿದ್ದು, ಡಿಸೆಂಬರ್‌ನಲ್ಲಿ ಶಿಲಾನ್ಯಾಸ ನೆರವೇರುವ ಸಾಧ್ಯತೆಯಿದೆ.

Read Full Story
08:57 AM (IST) Sep 23

Karnataka News Live ಹೇಮಾವತಿ ನಾಲೆ ಕಾಮಗಾರಿ ವೇಳೆ ಪುರಾತನ ವಿಗ್ರಹಗಳು ಪತ್ತೆ; ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ನಾಪತ್ತೆ!

ಹಾಸನ ಜಿಲ್ಲೆಯ ನವಿಲೆ-ಆದಿಹಳ್ಳಿ ಬಳಿ ಹೇಮಾವತಿ ನಾಲೆ ಕಾಮಗಾರಿ ವೇಳೆ ಪುರಾತನ ಲಕ್ಷ್ಮೀನಾರಾಯಣ ಮತ್ತು ಉಮಾಮಹೇಶ್ವರಿ ವಿಗ್ರಹಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯ ಖಂಡಿಸಿರುವ ಗ್ರಾಮಸ್ಥರು, ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

Read Full Story
08:42 AM (IST) Sep 23

Karnataka News Live ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ - ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯಾಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದ ಶಾಸಕ ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಾಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಾಲಯದ ಸೂಚನೆಯಂತೆ ಐಶ್ವರ್ಯಾ ಅವರು ಪಿಎಸ್‌ಐ ಬಳಿ ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

Read Full Story
08:32 AM (IST) Sep 23

Karnataka News Live Upper bhadra project - 26 ವರ್ಷಗಳ ಬಳಿಕ ಮಧ್ಯ ಕರ್ನಾಟಕಕ್ಕೆ ಹರಿಯಲಿದೆ ತುಂಗಾ ನೀರು! ಈ ನಾಲ್ಕು ಜಿಲ್ಲೆಗಳಿಗೆ ನೀರೋ ನೀರ!

26 ವರ್ಷಗಳಿಂದ ಕೇವಲ ಕಾಗದದ ಮೇಲಿದ್ದ ಭದ್ರಾ ಮೇಲ್ದಂಡೆ ಯೋಜನೆ ಈಗ ಅಂತಿಮ ಹಂತ ತಲುಪಿದ್ದು, ಈ ವರ್ಷಾಂತ್ಯಕ್ಕೆ ಮಧ್ಯ ಕರ್ನಾಟಕಕ್ಕೆ ತುಂಗಾ ನೀರು. ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರವೇ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಲಿದೆ, ಕೃಷಿ ಸಚಿವ ಹೇಳಿದ್ದೇನು?.

Read Full Story
07:59 AM (IST) Sep 23

Karnataka News Live ರೇಣುಕಾಸ್ವಾಮಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ - ಪವಿತ್ರಾಗೌಡಗೆ ಬೇಲ್‌ ಸಿಗುತ್ತಾ?, ಸೆ.26ಕ್ಕೆ ಸಿವಿಲ್‌ ಕೋರ್ಟ್ ತೀರ್ಪು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 26ರಂದು ನ್ಯಾಯಾಲಯ ಪ್ರಕಟಿಸಲಿದೆ. ಜೈಲಿನಲ್ಲಿ ಸೆಲೆಬ್ರಿಟಿ ಸ್ಟೇಟಸ್‌ನಿಂದ ತೊಂದರೆಯಾಗುತ್ತಿದ್ದು, ಅವರಿಗೆ ಪ್ರತ್ಯೇಕ ಸೆಲ್ ಮತ್ತು ಮೂಲಸೌಕರ್ಯ ಒದಗಿಸುವಂತೆ ಕೋರ್ಟ್ ಸೂಚಿಸಿದೆ.

Read Full Story
07:35 AM (IST) Sep 23

Karnataka News Live ಸರ್ಕಾರದ ಖಜಾನೆ ಖಾಲಿ, ಹೊಸ ಸಾಲಕ್ಕೂ ಅರ್ಹತೆಯಿಲ್ಲ - ವಿತ್ತ ಇಲಾಖೆ ಪತ್ರ ತೋರಿಸಿದ ಆರ್.ಅಶೋಕ್

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದ ಬಳಿ ಹೊಸ ಯೋಜನೆಗಳಿಗೆ ಹಣವಿಲ್ಲ ಮತ್ತು ಸಾಲ ಪಡೆಯಲು ಅರ್ಹತೆಯಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಆದರೆ, ಜನರ ಹಿತದೃಷ್ಟಿಯಿಂದ 5 ಗ್ಯಾರಂಟಿಗಳನ್ನು ನೀಡಲಾಗಿದ್ದು, ಯಾವ ಯೋಜನೆ ಸೇರಿಸಬೇಕು ಎಂಬುದು ತಮಗೆ ತಿಳಿದಿದೆ ಎಂದು ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

Read Full Story