Karnataka News Live: Secret Tips - ನೀರಿಗೆ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದ ರಹಸ್ಯ!
ಸಾರಾಂಶ
ನವದೆಹಲಿ: ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರನ್ನಾಗಿ ನೇಮಕ ಮಾಡಿ ಪಕ್ಷವು ಮಂಗಳವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಈವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸಿಡಬ್ಲ್ಯುಸಿಯ ಪದನಿಮಿತ್ತ ಸದಸ್ಯರಾಗಿದ್ದರು. ಈಗ ಸಿಎಂ ಸ್ಥಾನದಿಂದ ನಿರ್ಗಮನದ ಕಾರಣ ಕಾಯಂ ಸದಸ್ಯರೆಂದು ನೇಮಿಸಲಾಗಿದೆ.
Karnataka News Live 3 June 2026 Secret Tips - ನೀರಿಗೆ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದ ರಹಸ್ಯ!
ಕರ್ಪೂರ ಸ್ನಾನವು ಆರೋಗ್ಯಕರವಾಗಿದ್ದರೂ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ನಾನದ ನೀರಿಗೆ ಅತಿಯಾದ ಕರ್ಪೂರ ಹಾಕಬೇಡಿ; ಒಂದು ಚಿಟಿಕೆ ಪುಡಿ ಸಾಕು. ಈ ನೀರು ನೇರವಾಗಿ ಕಣ್ಣುಗಳಿಗೆ ಬೀಳದಂತೆ ಜಾಗ್ರತೆ ವಹಿಸಿ.
Karnataka News Live 3 June 2026 ₹422 ಕೋಟಿ ವೆಚ್ಚದಲ್ಲಿ ಜಿಲ್ಲೆಯ ರೈಲ್ವೆ ಅಭಿವೃದ್ಧಿ - ಚೆನ್ನೈ ಬುಲೆಟ್ ಟ್ರೈನ್ ಮೈಸೂರಿಗೆ ವಿಸ್ತರಿಸಲು ಸಂಸದರ ಮನವಿ
ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆಗೇರಿಕೆ, ತೃತೀಯ ಪ್ರವೇಶ ದ್ವಾರ ನಿರ್ಮಾಣ ಹಾಗೂ ಚೆನ್ನೈ-ಮೈಸೂರು ಬುಲೆಟ್ ಟ್ರೈನ್ ಸಂಪರ್ಕ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೊಡಗಿನಲ್ಲಿ ಯಾವುದೇ ಹೊಸ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಇಲ್ಲವೆಂದು ಸಚಿವರು ಸ್ಪಷ್ಟಪಡಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
Karnataka News Live 3 June 2026 ಮನೆ ನಿರ್ಮಾಣ,ಸಂಘಕ್ಕೆ 10 ಲಕ್ಷ ರೂ ಸೇರಿ ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ
ಮನೆ ನಿರ್ಮಾಣಕ್ಕೆ ಒಸಿ ಸಿಸಿ ತಲೆನೋವಿಲ್ಲ, ನಿರುದ್ಯೋಗಿಗಳಿಗೆ ತರಬೇತಿ ಹಾಗೂ ಉದ್ಯೋಗ ಅವಕಾಶ, ಉಚಿತ ಬಸ್ ಬಾಸ್ ಸೇರಿ 6 ಮಹತ್ವದ ಘೋಷಣೆ ಹೊರಬಿದ್ದಿದೆ. ಸಿಎಂ ಡಿಕೆ ಶಿವಕುಮಾರ್ ಮಾಡಿದ 6 ಘೋಷಣೆ ವಿವರ ಇಲ್ಲಿದೆ.
Karnataka News Live 3 June 2026 ಡಿಕೆಶಿ ಮುಖ್ಯಮಂತ್ರಿ ಆಗುತ್ತಲೇ ನಟಿ ರಮ್ಯಾ ರಾಜಕೀಯಕ್ಕೆ ರೀ-ಎಂಟ್ರಿ? ಮೋಹಕತಾರೆ ಹೇಳಿದ್ದೇನು
ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ನಟಿ ರಮ್ಯಾ ಭಾಗವಹಿಸಿದ್ದರು. ಡಿಕೆಶಿ ಅವರ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ತಮ್ಮ ರಾಜಕೀಯ ಮರುಪ್ರವೇಶದ ಕುರಿತ ಪ್ರಶ್ನೆಗೆ 'ಕಾಲ ಕೂಡಿ ಬರಬೇಕು' ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Karnataka News Live 3 June 2026 ಕೆಪಿಸಿಸಿಗೆ ಹೊಸ ಸಾರಥಿ - ಬಿ.ಕೆ. ಹರಿಪ್ರಸಾದ್ ನೂತನ ರಾಜ್ಯಾಧ್ಯಕ್ಷ; ಅಧಿಕೃತ ಆದೇಶ ಹೊರಡಿಸಿದ ಎಐಸಿಸಿ!
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ, 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ನೀತಿಯಂತೆ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಎಐಸಿಸಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಈ ಸ್ಥಾನಕ್ಕೆ ನೇಮಿಸಿ ಅಧಿಕೃತ ಆದೇಶ ಹೊರಡಿಸಿದೆ.
Karnataka News Live 3 June 2026 ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿವಕುಮಾರ್ ಘೋಷಣೆ
ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ಸಭೆ ನಡೆಸಿದ ಡಿಕೆ ಶಿವಕುಮಾರ್ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಮೊದಲ ಸುದ್ದಿಗೋಷ್ಠಿಯಲ್ಲಿ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ್ದಾರೆ.
Karnataka News Live 3 June 2026 ಕಾಣಿಯೂರು-ಸುಳ್ಯ-ಕೊಡಗು ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆ ಇಲ್ಲ! ಯಾಕಿಷ್ಟು ಗೊಂದಲವಾಯ್ತು?
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ಮೂಲಕ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಸದ್ಯಕ್ಕೆ ರೈಲ್ವೆ ಸಚಿವಾಲಯದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರೊಂದಿಗಿನ ಭೇಟಿಯ ನಂತರ, ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Karnataka News Live 3 June 2026 DK Shivakumar - ಇಂದು-ನಿನ್ನೆಯದಲ್ಲ ಈ ಹೋರಾಟ, 8 ವರ್ಷಗಳ ಯಜ್ಞ; ಪಕ್ಕಾ ಪ್ಲಾನ್, ಪಕ್ಕಾ ಆಪರೇಷನ್!
ಡಿ.ಕೆ.ಶಿವಕುಮಾರ್.. ರಾಜಕೀಯದಲ್ಲಿ ಪಕ್ಕಾ ಚದುರಂಗದಾಟಗಾರ.. ಯಾವ ಸಮಯದಲ್ಲಿ ಯಾವ ಕಾಯಿನ್ ಮೂವ್ ಮಾಡಿದ್ರೆ ಏನಾಗುತ್ತೆ ಅನ್ನೋದರ ಕ್ಲಾರಿಟಿ ಅವರಿಗಿದೆ. ಅದೇ ಕ್ಲಾರಿಟಿಯನ್ನ ಇಡ್ಕೊಂಡು, ಪ್ಲಾನ್ ಮಾಡಿ ಸಿಎಂ ಸಿಂಹಾಸನವನ್ನ ತಮ್ಮದಾಗಿಕೊಂಡಿದ್ದಾರೆ ಕನಕಾಧಿಪತಿ.
Karnataka News Live 3 June 2026 ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಬಿ.ಕೆ. ಹರಿಪ್ರಸಾದ್ ಸೇರಿ ನಾಲ್ವರಿಗೆ ಹೈಕಮಾಂಡ್ ಮಣೆ!
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅನುಮೋದಿಸಿದ ಈ ಪಟ್ಟಿಯಲ್ಲಿ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ. ಮೋಹನ್, ಮತ್ತು ಶಿವಣ್ಣ ಮಳವಳ್ಳಿ ಸ್ಥಾನ ಪಡೆದಿದ್ದಾರೆ.
Karnataka News Live 3 June 2026 ಕೊಡಗಿನ ಮೂಲಕ ರೈಲು ಮಾರ್ಗಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ - ಸಂಸದ ಯದುವೀರ್ ಒಡೆಯರ್ ಸ್ಪಷ್ಟನೆ
ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
Karnataka News Live 3 June 2026 ಅರಣ್ಯ ಇಲಾಖೆ ಜೀಪನ್ನೇ ಕದ್ದ ಖದೀಮ - ಆದರೆ ಮಾಡಿದ ಒಂದು ತಪ್ಪಿನಿಂದ ಸಿಕ್ಕಿಬಿದ್ದ!
ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಜೀಪನ್ನೇ ಎಗರಿಸಿದ ಖದೀಮನನ್ನು ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪಡೀಲ್ ಅರಣ್ಯ ಇಲಾಖೆಯ ವಸತಿಗೃಹ..
Karnataka News Live 3 June 2026 ಕಾರು, ಭದ್ರತೆ ಇಲ್ಲದೇ ರಾಜಭವನದಿಂದ ವಿಧಾನಸೌಧಕ್ಕೆ ನಡೆದಕೊಂಡು ಬಂದ ಸಿಂಪಲ್ ಸಚಿವ ಕೃಷ್ಣಬೈರೇಗೌಡ!
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೃಷ್ಣಬೈರೇಗೌಡರು, ಟ್ರಾಫಿಕ್ ಜಾಮ್‌ನಿಂದಾಗಿ ಮೊದಲ ಸಂಪುಟ ಸಭೆಗೆ ತಡವಾಗಬಾರದೆಂದು ರಾಜಭವನದಿಂದ ವಿಧಾನಸೌಧಕ್ಕೆ ನಡೆದುಕೊಂಡೇ ಬಂದರು. ಅವರ ಈ ಸರಳ ಮತ್ತು ಸಮಯಪ್ರಜ್ಞೆಯ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
Karnataka News Live 3 June 2026 ವಿಧಾನಸೌಧದ ಮೆಟ್ಟಿಲುಗಳಿಗೆ ಅಕ್ಷತೆ ಪ್ರೋಕ್ಷಣೆ ಮಾಡಿ ಒಳಹೊಕ್ಕ ನೊಣವಿನಕೆರೆ ಅಜ್ಜಯ್ಯ
ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ಮುನ್ನ, ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನವರು ವಿಧಾನಸೌಧಕ್ಕೆ ಆಗಮಿಸಿದರು. ಅವರು ಸಿಎಂ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶುದ್ಧೀಕರಣ ಮಾಡಿ, ಡಿಕೆಶಿ ಅವರ ಆಡಳಿತ ಸುಗಮವಾಗಿರಲೆಂದು ಪ್ರಾರ್ಥಿಸಿದರು.
Karnataka News Live 3 June 2026 ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆ ಟ್ರಾಫಿಕ್‌ನಲ್ಲಿ ಪರದಾಟ - ಬೆಂಗಳೂರಿನ ವಿರುದ್ಧ ನೆಟ್ಟಿಗರ ಆಕ್ರೋಶ
ಬೆಂಗಳೂರಿನ ಟ್ರಾಫಿಕ್ ಮತ್ತು ಮೂಲಸೌಕರ್ಯ ಸಮಸ್ಯೆಗಳು ಹೊಸತೇನಲ್ಲ. ಆದರೆ, ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಯೊಬ್ಬರಿದ್ದ ಆಂಬುಲೆನ್ಸ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಘಟನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ..
Karnataka News Live 3 June 2026 ವಿಧಾನಸೌಧ ಪ್ರವೇಶಕ್ಕೂ ವಾಸ್ತು; ಉತ್ತರ ಬಾಗಿಲಿನಿಂದ ಹೊಸ ಸಿಎಂ ಡಿ.ಕೆ. ಶಿವಕುಮಾರ್ ಪ್ರವೇಶ!
ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, ಜ್ಯೋತಿಷಿಗಳ ಸಲಹೆಯಂತೆ ವಾಸ್ತು ಪ್ರಕಾರ ವಿಧಾನಸೌಧದ ಸಾಂಪ್ರದಾಯಿಕ ಪಶ್ಚಿಮ ದ್ವಾರದ ಬದಲು 'ಉತ್ತರ ದ್ವಾರ'ದ ಮೂಲಕ ಪ್ರವೇಶಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.
Karnataka News Live 3 June 2026 ವಿಧಾನಸೌಧದಲ್ಲಿ ಕಳಚಿದ 'ಮುಖ್ಯಮಂತ್ರಿ ಸಿದ್ದರಾಮಯ್ಯ' ಬೋರ್ಡ್, ಬಿತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾಮಫಲಕ
ಡಿಕೆ ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಸಿದ್ದರಾಮಯ್ಯ ಅವರ ನಾಮಫಲಕವನ್ನು ತೆಗೆದು ಡಿಕೆ ಶಿವಕುಮಾರ್ ಅವರ ಹೊಸ ನಾಮಫಲಕವನ್ನು ಅಳವಡಿಸಲಾಯಿತು.
Karnataka News Live 3 June 2026 ಕೊಡಗು ಜೈಲಿನಲ್ಲಿ ಇರಿತಕ್ಕೊಳಗಾದ ಖೈದಿ ಮೈಸೂರು ಆಸ್ಪತ್ರೆಯಲ್ಲಿ ಸಾವು - ಕುಟುಂಬದ ಗಂಭೀರ ಆರೋಪವೇನು?
ಮೂರು ದಿನದ ಹಿಂದೆ ಕೊಡಗಿನ ಜೈಲಿನಲ್ಲಿ ಇರಿತಕ್ಕೆ ಒಳಗಾಗಿದ್ದ ವಿಚಾರಣಾಧೀನ ಖೈದಿ ಇಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖೈದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು..
Karnataka News Live 3 June 2026 ಆರ್‌ವಿ ರೋಡ್-ಜಯನಗರ ಸ್ಟೇಷನ್ ನಡುವೆ ಮೆಟ್ರೋ ರೈಲು ನಿಧಾನವಾಗಿ ಚಲಿಸೋದೇಕೆ? ಇಲ್ಲಿದೆ ಅಸಲಿ ರೀಸನ್
ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದ ಆರ್‌ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ 'ಹನಿಕಾಂಬ್' ಎಂಬ ಗಂಭೀರ ರಚನಾತ್ಮಕ ದೋಷ ಪತ್ತೆಯಾಗಿದೆ. ಈ ಕಾರಣದಿಂದ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ.
Karnataka News Live 3 June 2026 ಸಂವಿಧಾನ ಹಿಡಿದು 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಡಿ.ಕೆ. ಶಿವಕುಮಾರ್!
ಡಿ.ಕೆ. ಶಿವಕುಮಾರ್ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಹಾಗೂ 12 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ವಿದ್ಯಾರ್ಥಿ ನಾಯಕತ್ವದಿಂದ ಮುಖ್ಯಮಂತ್ರಿ ಹುದ್ದೆಯವರೆಗಿನ ಅವರ ರಾಜಕೀಯ ಪ್ರಯಾಣದ ಸಂಪೂರ್ಣ ಚಿತ್ರಣ ಇಲ್ಲಿದೆ.