ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಮೇ 14, 2025 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಹಾಲಿ ಸಿಜೆಐ ಖನ್ನಾ ಅವರ ನಿವೃತ್ತಿಯ ನಂತರ.
ಪೂರ್ತಿ ಓದಿKarnataka News Live: ನ್ಯಾ. ಗವಾಯಿ ಭಾರತದ ಮುಂದಿನ ಸಿಜೆಐ

ರಾಜ್ಯ ಸರ್ಕಾರ ತನ್ನ ಆಡಳಿತ ವಿಭಾಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ಪ್ರಮುಖವಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನು ಸರ್ಕಾರ ವರ್ಗಾವಣೆ ಗೊಳಿಸಿದೆ. ನಗರಾಭಿವೃದ್ಧಿ ಇಲಾಖೆಯ ಹಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಗೊಳಿಸಲಾಗಿದೆ. ಇತ್ತ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ನ್ಯಾ. ಗವಾಯಿ ಭಾರತದ ಮುಂದಿನ ಸಿಜೆಐ
ಐಪಿಎಲ್ 2025ರ ವಿರಾಟ್ ಕೊಹ್ಲಿಯ ಟಾಪ್ 3 ಅಗ್ರೆಸಿವ್ ವಿಡಿಯೋ ವೈರಲ್!
ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಧೋರಣೆ ಸುದ್ದಿ ಮಾಡಿದೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಅವರ ಆಕ್ರಮಣಕಾರಿ ಪ್ರತಿಕ್ರಿಯೆಗಳು ವೈರಲ್ ಆಗಿವೆ.
ಪೂರ್ತಿ ಓದಿಜಮೀರ್, ಖಾದರ್ ಜೊತೆ ಪೆಹಲ್ಗಾಮ್‌ಗೆ ಹೋಗಿ ಮೇ ಸಿದ್ದರಾಮಯ್ಯ ಹೂಂ ಅಂದಿದ್ರೆ 10 ಗುಂಡು ಹೊಡಿತಿದ್ರು; ಮುತಾಲಿಕ್
ಪ್ರಮೋದ್ ಮುತಾಲಿಕ್ ಅವರು ಸಿದ್ದರಾಮಯ್ಯ, ಭಯೋತ್ಪಾದನೆ ಮತ್ತು ಹಿಂದೂಗಳ ಸ್ಥಿತಿಗತಿಗಳ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ, ಭಯೋತ್ಪಾದನೆಗೆ ಧರ್ಮ, ದೇಶ ಇಲ್ಲ ಎನ್ನುವ ರಾಜಕಾರಣಿಗಳನ್ನು ಟೀಕಿಸಿದ್ದಾರೆ.
ಪೂರ್ತಿ ಓದಿಅಮೆರಿಕದಲ್ಲಿ ಹೆಂಡತಿ, ಮಗನಿಗೆ ಗುಂಡಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಟೆಕ್ ಕಂಪನಿ ಸಿಇಒ!
ಮೈಸೂರು ಮೂಲದ ಉದ್ಯಮಿ ಹರ್ಷವರ್ಧನ್, ಅಮೆರಿಕದಲ್ಲಿ ಪತ್ನಿ ಮತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ವರ್ಷದ ಕಿರಿಯ ಮಗ ಬದುಕುಳಿದಿದ್ದಾನೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ.
ಪೂರ್ತಿ ಓದಿಪಾಕಿಸ್ತಾನ್ ಜಿಂದಾಬಾದ್ ಎಂದವನ್ನು ಗುಂಪು ಹತ್ಯೆ ಮಾಡಲಾಗಿದೆ: ಡಾ.ಜಿ ಪರಮೇಶ್ವರ್
ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಗುಂಪೊಂದು ಹತ್ಯೆಗೈದಿದೆ. ಈ ಘಟನೆ ಏಪ್ರಿಲ್ 27 ರಂದು ಕುಡುಪು ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಹಲವಾರು ಶಂಕಿತರನ್ನು ಬಂಧಿಸಲಾಗಿದೆ.
ಪೂರ್ತಿ ಓದಿಓಲಾ, ಉಬರ್, ರ‍್ಯಾಪಿಡೊಗೆ ಮತ್ತೆ ಜೀವ: ಹೈಕೋರ್ಟ್ನಿಂದ ಬಂದ ಹೊಸ ಆದೇಶವೇನು?
ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉಬರ್, ಓಲಾ ಮತ್ತು ರ‍್ಯಾಪಿಡೋ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಜೂನ್ 15 ರವರೆಗೆ ಸೇವೆಗಳನ್ನು ಮುಂದುವರಿಸಲು ನ್ಯಾಯಾಲಯ ಅವಕಾಶ ನೀಡಿದೆ.
ಪೂರ್ತಿ ಓದಿಕರ್ನಾಟಕ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮೌಸೀನ್ ಅರೆಸ್ಟ್; 6 ವರ್ಷ ತಲೆಮರೆಸಿಕೊಂಡು 5 ಮಕ್ಕಳ ಅಪ್ಪನಾದ!
ಬೆಂಗಳೂರಿನ ಕೆಜಿ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣದ A-16 ಆರೋಪಿ ಹಾಗೂ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಉತ್ತರಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಜತೆ ಆತ್ಮೀಯನಾಗಿದ್ದ ಈತ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಪೂರ್ತಿ ಓದಿಪ್ಲೀಸ್ ನಂಬಿ... ಪಾಕ್ಗೆ ಸಹಾಯ ಮಾಡಲ್ಲ ಎಂದ ಟರ್ಕಿ! ಭಾರತ ಕೊಟ್ಟ ಶಾಕ್ಗೆ ಮುಸ್ಲಿಂ ದೇಶ ಶೇಕ್...
ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಿದ ಟರ್ಕಿ ವಿರುದ್ಧ ಭಾರತೀಯರು ಆಕ್ರೋಶ ವ್ಯಕ್ತಪಡಿಸಿ ಬೈಕಾಟ್ ಅಭಿಯಾನ ಆರಂಭಿಸಿದ್ದಾರೆ. ಇದರಿಂದಾಗಿ ಟರ್ಕಿ ಪಾಕ್ಗೆ ನೆರವು ನೀಡಿಲ್ಲ ಎಂದು ಸಮಜಾಯಿಷಿ ನೀಡಿದೆ. ಭಾರತದಿಂದ ನೆರವು ಪಡೆದಿದ್ದ ಟರ್ಕಿ ಈಗ ಪಾಕ್ ಪರ ನಿಂತಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಪೂರ್ತಿ ಓದಿಮೇ.29ಕ್ಕೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ
ಅವರು ಎಎಕ್ಸ್-4 ಕಾರ್ಯಾಚರಣೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಲಿದ್ದು, ನಾಸಾದ ಅನುಭವಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವದ ಅಂತರರಾಷ್ಟ್ರೀಯ ತಂಡವನ್ನು ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ.
ಈ 6 ನಕ್ಷತ್ರಗಳ ಯುವತಿಯರ ಮದ್ವೆಯಾದ್ರೆ ಯಶಸ್ಸು, ಸಂಪತ್ತು ವೃದ್ಧಿ ಕಟ್ಟಿಟ್ಟದ್ದೇ!
ಆರು ನಕ್ಷತ್ರಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಅವರನ್ನು ಮದುವೆಯಾಗುವ ಪುರುಷರಿಗೆ ಸಮೃದ್ಧಿ, ಐಶ್ವರ್ಯ ಕಟ್ಟಿಟ್ಟದ್ದೇ. ಯಾವುದೀ ನಕ್ಷತ್ರಗಳು?
ಪೂರ್ತಿ ಓದಿಬಿಬಿಎಂಪಿ ಆಸ್ತಿ ತೆರಿಗೆ ಶೇ.5 ರಿಯಾಯಿತಿ ಅವಧಿ ಮೇ 31ರವರೆಗೆ ವಿಸ್ತರಣೆ
2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಲು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ತೆರಿಗೆದಾರರು ಈ ಅವಕಾಶವನ್ನು ಬಳಸಿಕೊಂಡು ಶೇ.5ರಷ್ಟು ರಿಯಾಯಿತಿ ಪಡೆಯಬಹುದು.
ಪೂರ್ತಿ ಓದಿಶೌರ್ಯ ಚಕ್ರ ಪುರಸ್ಕೃತ ಹುತಾತ್ಮ ಮುದಾಸಿರ್ ತಾಯಿಯೂ ಪಾಕಿಸ್ತಾನಕ್ಕೆ ಗಡೀಪಾರು!
ಕಾಶ್ಮೀರದಲ್ಲಿ ವಾಸಿಸುತ್ತಿರುವ 60 ಪಾಕಿಸ್ತಾನಿ ನಾಗರಿಕರನ್ನು ಗಡೀಪಾರು ಮಾಡಲಾಗುತ್ತಿದೆ. ಇವರಲ್ಲಿ ಶೌರ್ಯ ಚಕ್ರ ವಿಜೇತ ಹುತಾತ್ಮ ಯೋಧನ ತಾಯಿ ಮತ್ತು ಸಿಆರ್‌ಪಿಎಫ್ ಜವಾನನ ಪತ್ನಿ ಸೇರಿದ್ದಾರೆ.
ಪೂರ್ತಿ ಓದಿವಿಜಯಪುರದಲ್ಲಿ ಶೀಘ್ರವೇ ಸಚಿವ ಸಂಪುಟ ಸಭೆ: ಎಂ.ಬಿ. ಪಾಟೀಲ್
ಮುಂದಿನ ದಿನಗಳಲ್ಲಿ ವಿಜಯಪುರ ನಗರದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅವಳಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಲಾಗುವುದು.
ಪೂರ್ತಿ ಓದಿಕರ್ನಾಟಕದಲ್ಲಿ ಹುಲಿ ಉಗುರು ಕೇಸ್ ತಣ್ಣಗಾಯ್ತು, ಕೇರಳದಲ್ಲಿ ಹುಲಿ ಹಲ್ಲು ಲಾಕೆಟ್ ಕೇಸ್ ಸದ್ದು ಜೋರಾಯ್ತು!
ರ‍್ಯಾಪರ್ ವೇಡನ್ ಬಳಸುತ್ತಿದ್ದ ಹುಲಿ ಹಲ್ಲು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ಮಾಲೀಕರು ಹಾಗೂ ವೇಡನ್ ಹೇಳಿಕೆ ನೀಡಿದ್ದಾರೆ. ವೇಡನ್‌ಗೆ ವಿದೇಶಿ ಪ್ರಜೆಯೊಬ್ಬ ಉಡುಗೊರೆಯಾಗಿ ಹುಲಿ ಹಲ್ಲು ನೀಡಿದ್ದಾಗಿ ಹೇಳಿದ್ದಾರೆ.
ಪೂರ್ತಿ ಓದಿಬೆಳಗ್ಗೆ 6 ಗಂಟೆಗೆ ಯುದ್ದ ಸ್ಟಾರ್ಟ್ ಮಾಡಿ ಸಂಜೆ 6 ಗಂಟೆಗೆ ಮುಗಿಸಲಿ: ಸಚಿವ ಸತೀಶ್ ಜಾರಕಿಹೊಳಿ
ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡುತ್ತಾ, ಸಚಿವ ಸತೀಶ್ ಜಾರಕಿಹೊಳಿ ಸೇನೆಯನ್ನು ಲೇವಡಿ ಮಾಡುವ ಹೇಳಿಕೆ ನೀಡಿದ್ದಾರೆ. ಯುದ್ಧವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಸಬಹುದು ಎಂದು ಹೇಳಿದ್ದಾರೆ.
ಪೂರ್ತಿ ಓದಿಲೇಡಿ ಪಿಎಸ್ಐ ಕಿರುಕುಳ: ಯುವಕನ ಆತ್ಮ*ಹತ್ಯೆ ಯತ್ನ!
ಚಾಮರಾಜನಗರದಲ್ಲಿ ಲೇಡಿ ಪಿಎಸ್ಐ ವರ್ಷಾ ಅವರ ಕಿರುಕುಳದಿಂದಾಗಿ ಯುವಕ ದುಷ್ಯಂತ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದುಷ್ಯಂತ್ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವರ್ಷಾ ಪದೇ ಪದೇ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ದುಷ್ಯಂತ್ ಪೋಷಕರು ಆರೋಪಿಸಿದ್ದಾರೆ. ದುಷ್ಯಂತ್ ಈಗ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೂರ್ತಿ ಓದಿಕೊಡಗು ಪೊಲೀಸ್ ಶ್ವಾನ ಪೃಥ್ವಿ ಇನ್ನಿಲ್ಲ, ಕರ್ತವ್ಯ ಮುಗಿಸಿದ ಶಿಸ್ತಿನ ಸಿಪಾಯಿ
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 9 ವರ್ಷದ ಲ್ಯಾಬ್ರಡಾಲ್ ರಿಟ್ರಿವರ್ ತಳಿಯ ಶ್ವಾನ ಪೃಥ್ವಿ ಹೃದಯಾಘಾತದಿಂದ ಮೃತಪಟ್ಟಿದೆ. ಹಲವಾರು ವಿಐಪಿಗಳ ಭದ್ರತಾ ಕೆಲಸ ನಿರ್ವಹಿಸಿದ್ದ ಪೃಥ್ವಿಗೆ ಪೊಲೀಸ್ ಇಲಾಖೆ ಅಂತಿಮ ನಮನ ಸಲ್ಲಿಸಿದೆ.
ಪೂರ್ತಿ ಓದಿಪಹಲ್ಗಾಮ್ ಉಗ್ರರ ದಾಳಿಯಿಂದ ಜೀವ ಉಳಿಸಿದ ದೇವರಿಲ್ಲದ ದೇವಸ್ಥಾನ!
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕಾಫಿನಾಡ ಕುಟುಂಬವೊಂದು ಪವಾಡ ಸದೃಶ ಪಾರಾಗಿದೆ. ದೇವರಿಲ್ಲದ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಉಗ್ರರ ದಾಳಿಯಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.
ಪೂರ್ತಿ ಓದಿಪಹಲ್ಗಾಮ್ ದಾಳಿ: ಭಯೋತ್ಪಾದನೆಗೆ ಪ್ರತ್ಯುತ್ತರ ನೀಡಲು ಸೇನೆಗೆ ಮುಕ್ತ ಅವಕಾಶ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಪೂರ್ತಿ ಓದಿನಮ್ಮ ಮೆಟ್ರೋ ಸೌಂದರ್ಯ ಗಬ್ಬೆಬ್ಬಿಸಲು ಬಿಎಂಆರ್‌ಸಿಎಲ್ ಜಾಹೀರಾತು ಒಪ್ಪಂದ
ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳು, ಆವರಣಗಳು ಮತ್ತು ರೈಲುಗಳ ಒಳಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಆರ್‌ಸಿಎಲ್ ಎರಡು ಸಂಸ್ಥೆಗಳೊಂದಿಗೆ ವಾರ್ಷಿಕ 3.5 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುಂದರ ಮತ್ತು ಸ್ವಚ್ಛವಾಗಿರುವ ನಮ್ಮ ಮೆಟ್ರೋವನ್ನು ಗಬ್ಬೆಬ್ಬಿಸಲು ಮುಂದಾಗಿದೆ.
ಪೂರ್ತಿ ಓದಿ