Armed Robbery in Vijayapura: Gunshots Fired at Bhumika Jewellery ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿರುವ ಭೂಮಿಕಾ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ದರೋಡೆಕೋರರು, ಮಾಲೀಕನಿಗೆ ಗನ್ ತೋರಿಸಿ 205 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ದೋಚಿದ್ದಾರೆ.
- Home
- News
- State
- State News Live: ಭೀಮಾತೀರದಲ್ಲಿ ಮತ್ತೆ ಸದ್ದು ಮಾಡಿದ ಬಂದೂಕು, ರಾಜ್ಯದಲ್ಲಿ ಮತ್ತೊಂದು ಭಾರೀ ದರೋಡೆ!
State News Live: ಭೀಮಾತೀರದಲ್ಲಿ ಮತ್ತೆ ಸದ್ದು ಮಾಡಿದ ಬಂದೂಕು, ರಾಜ್ಯದಲ್ಲಿ ಮತ್ತೊಂದು ಭಾರೀ ದರೋಡೆ!

ಬೆಂಗಳೂರು (ಜ.27): ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿ ಭಾಗವಾದ ಚೋರ್ಲಾ ಘಾಟ್ನಲ್ಲಿ ದರೋಡೆಯಾದ 400 ಕೋಟಿ ರೂಪಾಯಿ ಹಣ ಯಾರಿಗೆ ಸೇರಿದ್ದು ಅನ್ನೋ ವಿಚಾರ ರಾಜಕೀಯಕ್ಕೆ ತಿರುಗಿದೆ. ಈ ಹಣ ಕಾಂಗ್ರೆಸ್ನದ್ದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ನೇರ ಆರೋಪ ಮಾಡಿದ್ದರೆ, ಕರ್ನಾಟಕದ ಹಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದು ರಾಜ್ಯ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಆಧಾರ ಇಲ್ಲದೆ ಯಾವುದೇ ಆರೋಪ ಮಾಡಬೇಡಿ ಎಂದಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 27th January: ಭೀಮಾತೀರದಲ್ಲಿ ಮತ್ತೆ ಸದ್ದು ಮಾಡಿದ ಬಂದೂಕು, ರಾಜ್ಯದಲ್ಲಿ ಮತ್ತೊಂದು ಭಾರೀ ದರೋಡೆ!
Karnataka News Live 27th January: ಫುಲ್ ಟೈಮ್ ಉದ್ಯೋಗ ನೀಡುತ್ತಿರುವ ಸೋಷಿಯಲ್ ಮೀಡಿಯಾ
ಸೋಷಿಯಲ್ ಮೀಡಿಯಾಗಳು ಮನರಂಜನೆಯ ಟೈಮ್ ಪಾಸ್ ವೇದಿಕೆಗಳಾಗಿಲ್ಲ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಟ್ವಿಟ್ಟರ್ ಮುಂತಾದವು ಲಕ್ಷ, ಕೋಟಿಗಳ ಆದಾಯ ತಂದುಕೊಂಡುವ ಡಿಜಿಟಲ್ ಆಫೀಸ್ ಆಗಿಬಿಟ್ಟಿದೆ.
Karnataka News Live 27th January: ಜಾಗತಿಕ ಅವ್ಯವಸ್ಥೆ ನಡುವೆ ಭಾರತದ ಬಜೆಟ್ ನಿರೀಕ್ಷೆ-ಹೇಗೆ ನಿಭಾಯಿಸುತ್ತಾರೆ ಹಣಕಾಸು ಸಚಿವೆ
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಇನ್ನೂ ಹೆಚ್ಚಾಗಿದ್ದು, ಹೊಸ ವ್ಯಾಪಾರ ಪೈಪೋಟಿಗಳು ಮತ್ತು ಅಮೆರಿಕದಲ್ಲಿ ಆಕ್ರಮಣಕಾರಿ ಸುಂಕ ರಾಜಕೀಯದ ಮರಳುವಿಕೆಯಿಂದಾಗಿ ಮತ್ತೊಂದು ಸುತ್ತಿನ ವ್ಯಾಪಾರ ಯುದ್ಧಗಳ ಭಯ ಮತ್ತೆ ಹುಟ್ಟಿಕೊಂಡಿದೆ.
Karnataka News Live 27th January: ಪ್ಲಂಬರ್, ಎಲೆಕ್ಟ್ರೀಷಿಯನ್‌ಗೂ ಲಕ್ಷ ರು. ಸಂಬಳ ಕೊಡಿಸುತ್ತೆ ಎಐ ! ಕಾರ್ಮಿಕರಿಗಿನ್ನು ಕೈತುಂಬಾ ಸಂಬಳ!
ಕೃತಕ ಬುದ್ಧಿಮತ್ತೆಗೆ ಜಗತ್ತು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಲವರಿಗೆ ಭವಿಷ್ಯದಲ್ಲಿ ಕೆಲಸ ಕಳೆದುಕೊಳ್ಳುವ ಚಿಂತೆ ಶುರುವಾಗಿದೆ. ಕೋಡಿಂಗ್ ಕಾರ್ಯವನ್ನು ಅದು ಕ್ಷಣಾರ್ಧದಲ್ಲಿ ಮಾಡುವುದನ್ನು ನೋಡಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು ತಲೆ ಮೇಲೆ ಕೈ ಹೊತ್ತಿದ್ದಾರೆ.
Karnataka News Live 27th January: ಬೆಂಗಳೂರು ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಸೋಮವಾರ ಜಿಟಿಜಿಟಿ ಮಳೆಯಾಗಿದ್ದು, ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಮಂಗಳವಾರವೂ ಕೂಡ ಮಳೆ ಆಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
Karnataka News Live 27th January: ಮದ್ಯದ ನಶೆಯಲ್ಲಿ ಹೊಡೆದಾಟ: ಮರಕ್ಕೆ ಕಾರು ಗುದ್ದಿಸಿ ಸ್ನೇಹಿತನ ಕೊಂದ ಟೆಕ್ಕಿ
ಮದ್ಯದ ಅಮಲಿನಲ್ಲಿ ಸಿಗರೇಟ್ ಲೈಟರ್ ವಿಚಾರಕ್ಕೆ ಉಂಟಾದ ಜಗಳದಿಂದ ಕೋಪಗೊಂಡು ಚಲಿಸುವ ಕಾರಿನಲ್ಲಿ ನೇತಾಡುತ್ತಿದ್ದರೂ ಬಿಡದೆ ಮರಕ್ಕೆ ಗುದ್ದಿಸಿ ಸ್ನೇಹಿತನನ್ನು ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Karnataka News Live 27th January: ಅಪೆಕ್ಸ್ ನಿರ್ದೇಶಕರ ಜತೆ ಸಿಎಂ ಚಾಯ್ ಪೇ ಚರ್ಚಾ ಮಾತುಕತೆ
ಅಪೆಕ್ಸ್ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಾದ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಹಾಗೂ ಪರಿಷತ್ ಸದಸ್ಯ ಎಸ್.ರವಿ ಸೇರಿ ಬ್ಯಾಂಕ್ ನಿರ್ದೇಶಕರೊಂದಿಗೆ ಸೋಮವಾರ ಸಭೆ ನಡೆಸಿದರು.
Karnataka News Live 27th January: ಗೌರ್ನರ್‌ಗೆ ಅಗೌರವ : ಇಂದು ವಿಪಕ್ಷ ಸಮರ - ಕೈ ವಿರುದ್ಧ ಬಿಜೆಪಿ- ಜೆಡಿಎಸ್ ಹೋರಾಟ
ಜಂಟಿ ಅಧಿವೇಶನ ವೇಳೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮಂಗಳವಾರ ವಿಧಾನಸೌಧದ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ.
Karnataka News Live 27th January: ರಾಮ್ ಜಿ ಕಾಯ್ದೆ ರದ್ದತಿಗೆ ಇಂದು ಕೈಪಡೆ ಹೋರಾಟ
ಮನರೇಗಾ ಮರುಜಾರಿಗೆ ಕೇಂದ್ರವನ್ನು ಒತ್ತಾಯಿಸಲು ಜ.27 ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದು, ಬಳಿಕ ‘ಮನರೇಗಾ ಬಚಾವ್ ಸಂಗ್ರಾಮ’ ಹೆಸರಿನಲ್ಲಿ ರಾಜಭವನ ಚಲೋ ಹಮ್ಮಿಕೊಂಡಿದೆ.
Karnataka News Live 27th January: ಕಾಂಗ್ರೆಸ್ ಸರ್ಕಾರದ ಸಾಧನೆಗೆ ರಾಜ್ಯಪಾಲರ ಭಾರೀ ಮೆಚ್ಚುಗೆ!
ರಾಜ್ಯವನ್ನು ನವೋದ್ಯಮಗಳ ರಾಜಧಾನಿಯನ್ನಾಗಿ ರೂಪಿಸಲು ಜಾರಿಗೆ ತಂದಿರುವ ನೀತಿ, ಹಿಂದುಳಿದವರಿಗೆ ಆರ್ಥಿಕ ಚೈತನ್ಯ ನೀಡಲು ರೂಪಿಸಿದ ಯೋಜನೆಗಳು, ಪಂಚ ಗ್ಯಾರಂಟಿಗಳ ಜಾರಿ ಹಾಗೂ ಉತ್ತಮ ಕಾನೂನು ಸುವ್ಯವಸ್ಥೆ ವಿಚಾರವಾಗಿ ರಾಜ್ಯಪಾಲ ಗೆಹಲೋತ್ ಅವರು ರಾಜ್ಯ ಸರ್ಕಾರಕ್ಕೆ ಶಹಬ್ಬಾಸ್‌ಗಿರಿ ನೀಡಿದ್ದಾರೆ.
Karnataka News Live 27th January: ದರೋಡೆಯಾದ ₹400 ಕೋಟಿ ಯಾರಿಗೆ ಸೇರಿದ್ದು..?
ಕರ್ನಾಟಕ, ಮಹಾರಾಷ್ಟ್ರ, ಗೋವಾ ಗಡಿ ಭಾಗವಾದ ಬೆಳಗಾವಿಯ ಚೋರ್ಲಾ ಘಾಟ್ ಬಳಿ ₹400 ಕೋಟಿ ತುಂಬಿದ್ದ ಲಾರಿಗಳ ಹೈಜಾಕ್ ಪ್ರಕರಣ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿದೆ.