ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ರಾಜಸ್ಥಾನದಲ್ಲಿ ನಡೆಯಲಿದೆ. ಈ ಅದ್ಧೂರಿ ಸಮಾರಂಭದ ಅಲಂಕಾರಕ್ಕಾಗಿ ಬೆಂಗಳೂರಿನಿಂದ ವಿಶೇಷ ಹೂವುಗಳು ರವಾನೆಯಾಗಲಿದ್ದು, ಬೆಂಗಳೂರಿನಲ್ಲಿ ಬೆಳೆದ ರಶ್ಮಿಕಾ ಮದುವೆಗೆ ಬೆಂಗಳೂರಿನ ಪುಷ್ಪಗಳು ಮೆರುಗು ನೀಡಲಿವೆ.
ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮದುವೆಗೆ ಇನ್ನೊಂದೇ ತಿಂಗಳು ಬಾಕಿ ಇದೆ. ಸೋ ಶ್ರೀವಲ್ಲಿ ಕಲ್ಯಾಣಕ್ಕೆ ಭರ್ಜರಿ ತಯಾರಿ ನಡೀತಾ ಇದೆ. ರಾಜಸ್ಥಾನ ಅರಮನೆಯಲ್ಲಿ ಮದುವೆ ನಡೆಯಲಿದ್ದು, ಬೆಂಗಳೂರಿನ 'ಪುಷ್ಪ' ಶ್ರೀವಲ್ಲಿ ಕಲ್ಯಾಣಕ್ಕೆ ಹೋಗಲಿದೆ. ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡ ಹಾಗೂ ಕರ್ನಾಟಕದಿಂದ ಒಂದು ಹೆಜ್ಜೆ ಹೊರಗಿಟ್ಟಾಗಿದೆ. ಹೀಗಿದ್ದೂ ರಶ್ಮಿಕಾ ಮದುವೆಗೆ ಬೆಂಗಳೂರಿನ ಹೂ ಬೇಕಂತೆ.
ವಿಜಯ್ ದೇವರಕೊಂಡ ಆಂಧ್ರಪ್ರದೇಶ ಮೂಲದವರು, ಕಿರಿಕ್ ಬ್ಯೂಟಿ ರಶ್ಮಿಕಾ ಕೊಡಗು ಮೂಲದವರು. ಆದ್ರೆ ಮದುವೆ ಆಗ್ತಾ ಇರೋದು ಮಾತ್ರ ರಾಜಸ್ಥಾನದಲ್ಲಿ. ಕನ್ನಡವೆಂದರೆ ಮೂಗು ಮುರಿಯುವ ಶ್ರೀವಲ್ಲಿ ಮದುವೆಗೆ ಬೆಂಗಳೂರಿನ ಪುಷ್ಪವೇ ಬೇಕಾ? ಈಗಲಾದರೂ ಬೆಂಗಳೂರು ನೆನಪಾಯಿತಾ ಎಂದು ನೆಟ್ಟಿಗರು ರಶ್ಮಿಕಾ ಕಾಲೆಳೆಯುತ್ತಿದ್ದಾರೆ.
ಶ್ರೀವಲ್ಲಿ ಕಲ್ಯಾಣಕ್ಕೆ ಬೆಂಗಳೂರು ‘ಪುಷ್ಪ’!
ಯೆಸ್ ನ್ಯಾಷನಲ್ ಕ್ರಶ್ ರಶ್ಮಿಕಾ, ಮುಂದಿನ ತಿಂಗಳು ಹಸೆಮಣೆ ಏರ್ತಾ ಇರೋ ವಿಷ್ಯ ಗೊತ್ತೇ ಇದೆ. ಫೆಬ್ರುವರಿ 16ನೇ ತಾರೀಖು ರಶ್ಮಿಕಾ ಗೆಳೆಯ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಕಿರಿಕ್ ಬ್ಯೂಟಿ ಕಲ್ಯಾಣಕ್ಕೆ ಬೆಂಗಳೂರಿನಿಂದ ಯಾರೆಲ್ಲಾ ಹೋಗ್ತಾರೆ ಗೊತ್ತಿಲ್ಲ. ಆದ್ರೆ ಬೆಂಗಳೂರಿನಿಂದ ಪುಷ್ಪ ರಶ್ಮಿಕಾ ಮದುವೆಗೆ ಹೋಗೋದು ಫಿಕ್ಸ್. ಅಂದ್ರೆ ಬೆಂಗಳೂರಿನಿಂದ ರಶ್ಮಿಕಾ ಮದುವೆಗೆ ಹೂವು ಸಪ್ಲೈ ಆಗಲಿದೆ.
ರಾಜಸ್ತಾನದಲ್ಲಿ ಮದುವೆ, ಬೆಂಗಳೂರು ಹೂ!
ಹೌದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ ನಡೆಯೋದು ರಾಜಸ್ತಾನ ಪ್ಯಾಲೇಸ್ನಲ್ಲಿ. ಮದುವೆಯ ಅಲಂಕಾರಕ್ಕೆ ಬೆಂಗಳೂರಿನಿಂದ ಹೂಗಳು ಹೋಗಲಿವೆ. ಬೆಂಗಳೂರಿನ ಹೂವುಗಳು ವಿಶ್ವದಾದ್ಯಂತ ನಡೆಯುವ ಅದ್ಧೂರಿ ಕಾರ್ಯಕ್ರಮಗಳಿಗೆ ತಲುಪುತ್ವೆ. ಅದರಲ್ಲೂ ಫೆಬ್ರವರಿಯಲ್ಲಿ ಹೂಗಳಿಗೆ ಬಹಳ ಬೇಡಿಕೆಯಿರುತ್ತೆ. ಫೆಬ್ರುವರಿ ಕೊನೆಯ ವಾರವೇ ತಾರಾ ಜೋಡಿಯ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಮದುವೆ ಮನೆಯಲ್ಲಿ ಬೆಂಗಳೂರಿನ ಹೂಗಳು ನಳನಳಿಸಲಿದೆ.
ರಶ್ಮಿಕಾ ಬೆಂಗಳೂರಿನಲ್ಲಿ ಬೆಳೆದ ಕೊಡಗಿನ ಹುಡುಗಿ. ಬೆಂಗಳೂರಿನಲ್ಲಿ ಡಿಗ್ರಿ ಓದೋವಾಗಲೇ ಬಣ್ಣ ಹಚ್ಚಿ ಸಿನಿದುನಿಯಾಗೆ ಬಂದಾಕೆ. ಸದ್ಯ ಇಡೀ ದೇಶದಲ್ಲಿ ನಂ.1 ನಟಿಮಣಿಯಾಗಿ ಮೆರೀತಾ ಇದ್ದಾರೆ ರಶ್ಮಿಕಾ, ಇಂಥಾ ಬೆಂಗಳೂರು ಬೆಡಗಿ ಮದುಮಗಳಾಗಿ ಹೊಸಬದುಕಿಗೆ ಕಾಲಿಡ್ತಾ ಇರೋವಾಗ ಬೆಂಗಳೂರಿನಿಂದಲೇ ಪುಷ್ಪಗಳು ಹೋಗ್ತಾ ಇರೋದು ವಿಶೇಷ. ಅತ್ತ ಬೆಂಗಳೂರು ಬ್ಯೂಟಿ ಮದುಮಗಳಾಗಿ ಮಿಂಚ್ತಾ ಇದ್ರೆ, ಇತ್ತ ಬೆಂಗಳೂರ ಪುಷ್ಪಗಳು ಮದುವೆ ರಂಗು ಹೆಚ್ಚಿಸಲಿವೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.


