- Home
- Entertainment
- Sandalwood
- ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, ಸ್ಯಾಂಡಲ್‌ವುಡ್ ಸಿನಿಮಾಗೆ ಭರ್ಜರಿ ಎಂಟ್ರಿ
ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, ಸ್ಯಾಂಡಲ್‌ವುಡ್ ಸಿನಿಮಾಗೆ ಭರ್ಜರಿ ಎಂಟ್ರಿ
ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, 12ನೇ ಆವೃತ್ತಿ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗಮನಸೆಳೆದ ಮಲ್ಮಮ್ಮಗೆ ಇದೀಗ ಅವಕಾಶಗಳ ಸುರಿಮಳೆಯಾಗಿದೆ. ಸಿನಿಮಾ, ಸೀರಿಯಲ್ ಆಫರ್ ಬಂದಿದೆ. ಇದೀಗ ಮಲ್ಲಮ್ಮ ಸಿನಿಮಾ ಒಪ್ಪಿಕೊಂಡಿದ್ದು, ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದಾರೆ.

ಬಿಗ್ ಬಾಸ್ ಮಲ್ಲಮ್ಮಗೆ ಸಿನಿಮಾ ಚಾನ್ಸ್
ಬಿಗ್ ಬಾಸ್ 12ನೇ ಆವೃತ್ತಿ ಅತೀ ಜನಪ್ರಿಯ ಆವೃತ್ತಿಯಾಗಿ ಹೊರಹೊಮ್ಮಿದೆ. ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಆಗುವ ಮೂಲಕ ಭಾರಿ ಗಮನಸೆಳೆದಿದ್ದಾರೆ. ಇದೇ ವೇಳೆ 12ನೇ ಆವೃತ್ತಿಯ ಪ್ರತಿ ಸ್ಪರ್ಧಿಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪೈಕಿ ಸ್ಪರ್ಧಿ ಮಲ್ಲಮ್ಮ ಅದೃಷ್ಛ ಖುಲಾಯಿಸಿದೆ. ಸ್ಯಾಂಡಲ್‌ವುಡ್‌ನ ಸಿನಿಮಾದಲ್ಲಿ ಮಲ್ಲಮ್ಮ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ.
ಯಾವ ಸಿನಿಮಾದಲ್ಲಿ ಮಲ್ಲಮ್ಮಗೆ ಚಾನ್ಸ್
ಬಿಗ್ ಬಾಸ್ 12ರ ಸ್ಪರ್ಧಿ ಮಲ್ಲಮ್ಮ ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿರುವ ವಿನಾಶ ಕಾಲೆ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಹೊಸಬರೇ ಇರುವ ಈ ಸಿನಿಮಾದಲ್ಲಿ ಮಲ್ಲಮ್ಮ ಕಾಣಿಸಿಕೊಂಡಿದ್ದಾರೆ. ಹೊಸ ಪ್ರತಿಭಭೆಗಳ ನಡುವೆ ಮಲ್ಲಮ್ಮ ಭಾರಿ ಗಮನಸೆಳೆದಿದ್ದಾರೆ. ಈ ಮೂಲಕ ಮಲ್ಲಮ್ಮ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.
ತಾಯಿ ಪಾತ್ರದಲ್ಲಿ ಮಲ್ಲಮ್ಮ
ವಿನಾಶ ಕಾಲೆ ಸಿನಿಮಾದಲ್ಲಿ ಮಲ್ಲಮ್ಮ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ 12ನೇ ಆವೃತ್ತಿಯಲ್ಲೂ ಮನೆಯಲ್ಲಿ ತಾಯಿಯಂತೆ ಎಲ್ಲಾ ಸ್ಪರ್ಧಿಗಳ ಜೊತೆ ಪ್ರೀತಿ ತೋರಿದ ಮಲ್ಲಮ್ಮ ಇದೀಗ ವಿನಾಶ ಕಾಲೆ ಸಿನಿಮಾದಲ್ಲೂ ತಾಯಿ ಪಾತ್ರ ಮಾಡುತ್ತಿದ್ದಾರೆ. ಈಗಾಲೇ ಸಿನಿಮಾ ಶೂಟಿಂಗ್ ಆರಂಭಗೊಂಡಿದೆ.
ನಟನೆ ಕಲಿಯುತ್ತಿದ್ದೇನೆ ಎಂದ ಮಲ್ಲಮ್ಮ
ಹೊಸ ಸಿನಿಮಾ ಹಾಗೂ ಪಾತ್ರದ ಕುರಿತು ಮಲ್ಲಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಟನೆ ನನಗೆ ಗೊತ್ತಿಲ್ಲ. ಆದರೆ ಅವಕಾಶ ಬಂದಿದೆ. ಹೀಗಾಗಿ ನಟನೆ ಕಲಿಯುತ್ತಿದ್ದೇನೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತೇನೆ ಎಂದು ಮಲ್ಮಮ್ಮ ಹೇಳಿದ್ದಾರೆ. ಅವಕಾಶಗಳು ಬರುತ್ತಿದೆ. ಧಾರವಾಹಿಗಳ ಆಫರ್ ಬಂದಿದೆ. ಆದರೆ ಮೊದಲು ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದು ಮಲ್ಮಮ್ಮ ಹೇಳಿದ್ದಾರೆ.
ಬಿಗ್ ಬಾಸ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಅವಾಕಾಶ
ವಿನಾಶ ಕಾಲೆ ಸಿನಿಮಾವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲ್ಲಮ್ಮ ಮಾತ್ರವಲ್ಲ, ಕರಿಬಸಪ್ಪ, ಡಾಗ್ ಸತೀಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದಾರೆ. ನೈಜ ಕತೆಯನ್ನೇ ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಕಿರುಣ್ ಕುಮಾರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

