- Home
- Entertainment
- TV Talk
- Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು? ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್
Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು? ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್
ಬಿಗ್‌ಬಾಸ್ ಸೀಸನ್ 12ರ ಬಳಿಕವೂ ಗಿಲ್ಲಿ ನಟನ ಹವಾ ಮುಂದುವರೆದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ, ಬಟ್ಟೆಗಾಗಿ ಖರ್ಚು ಮಾಡಿರುವ ಲೆಕ್ಕಾಚಾರವನ್ನು ಗಿಲ್ಲಿ ನಟ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದು ಕೇಳಿ ಫ್ಯಾನ್ಸ್ ಶಾಕ್!

ನಿಂತಿಲ್ಲ ಗಿಲ್ಲಿ ಹವಾ
ಬಿಗ್‌ಬಾಸ್ ಸೀಸನ್ 12 (Bigg Boss Season 12) ಮುಗಿದು ಕೆಲವು ದಿನಗಳು ಕಳೆದರೂ ಗಿಲ್ಲಿ ನಟನ ಮೇಲಿನ ಕ್ರೇಜ್ ಹೆಚ್ಚುತ್ತಲೇ ಇದೆ. ಗಿಲ್ಲಿ ನಟ ಅವರಿಗೆ ಸಕತ್ ಡಿಮಾಂಡ್ ಇದ್ದು, ಇವರ ಹವಾ ಸೋಷಿಯಲ್ ಮೀಡಿಯಾದಲ್ಲಿಯೂ ಹೆಚ್ಚುತ್ತಿದೆ.
ಲಕ್ಷಾಂತರ ರೂ. ಖರ್ಚು
ಸಾಮಾನ್ಯವಾಗಿ ಬಿಗ್ಬಾಸ್ಗೆ ಕರೆ ಬಂದರೆ, ಇದಾಗಲೇ ಬಹುತೇಕ ಎಲ್ಲಾ ಸ್ಪರ್ಧಿಗಳು ಹೇಳಿರುವಂತೆ ಕನಿಷ್ಠ ಏನಿಲ್ಲವೆಂದರೂ 2-3 ಲಕ್ಷ ಬರೀ ಬಟ್ಟೆಗೇ ಖರ್ಚು ಮಾಡಿದ್ದಾರೆ. ಇನ್ನು ಮೇಕಪ್ ಸಾಮಗ್ರಿ ಅದೂ ಇದೂ ಎಂದೆಲ್ಲಾ ಮತ್ತೊಂದಿಷ್ಟು ಲಕ್ಷ ಖರ್ಚು ಮಾಡಿರುವುದು ಇದೆ.
ಎಷ್ಟು ಖರ್ಚು ಮಾಡಿದ್ರು ಗಿಲ್ಲಿ?
ಇದೀಗ ಗಿಲ್ಲಿ ನಟ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ಬಿಗ್‌ಬಾಸ್ ಮನೆಗೆ ಹೋಗುವಾಗ ಅವರು ಎಷ್ಟು ಖರ್ಚು ಮಾಡಿದ್ದರು, ಎಷ್ಟು ಬೆಲೆ ಬಾಳುವ ಡ್ರೆಸ್ ತೆಗೆದುಕೊಂಡು ಹೋಗಿದ್ದರು ಎನ್ನುವುದು. ಅವರ ಮಾತನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಮಾಡಿದ್ದು ಇಷ್ಟೇ ಖರ್ಚು
ಇದಕ್ಕೆ ಕಾರಣ, ಗಿಲ್ಲಿ ನಟ ಹೇಳಿದ್ದು, ನಾನು ಬಟ್ಟೆಗೆ ಅಬ್ಬಬ್ಬಾ ಎಂದರೆ 5 ರಿಂದ 10 ಸಾವಿರ ಖರ್ಚು ಮಾಡಿದ್ದೇನೆ. ನನ್ನ ಎಲ್ಲಾ ಖರ್ಚು ಸೇರಿ ಆಗಿದ್ದು ಇಷ್ಟೇ. ಬಿಗ್ಬಾಸ್ಗೆ ಹೋಗುವಾಗ ಮನೆಯಲ್ಲಿ ಒಂದು ವಾಷಿಂಗ್ ಮಷಿನ್ ಕೊಡಿಸಿ ಹೋಗಿದ್ದೆ. ಅದನ್ನು ಬಿಟ್ಟರೆ ಬಿಗ್ಬಾಸ್ಗೆ ಹೋಗುವಾಗ ಆದ ಸಂಪೂರ್ಣ ಖರ್ಚು ಇಷ್ಟೇ ಎಂದಿದ್ದಾರೆ.
ಬಟ್ಟೆ ನೋಡಿ ಶಾಕ್
ವಾರಾಂತ್ಯದಲ್ಲಿ ನನಗೆ ಸ್ನೇಹಿತರೊಬ್ಬರು ಬಟ್ಟೆ ತಂದುಕೊಡುತ್ತಿದ್ದರು. ಇದನ್ನು ನೋಡಿ ನನಗೆ ಶಾಕ್ ಆಗಿ ಹೋಗಿತ್ತು. ದುಬಾರಿ ಬಟ್ಟೆ ತಂದುಕೊಟ್ಟರೆ, ಹೊರಗಡೆ ಬಂದು ಆ ಹಣವನ್ನು ತೀರಿಸೋದು ಹೇಗೆ, ಸಿಕ್ಕಾಪಟ್ಟೆ ಸಾಲ ಮಾಡಿಬಿಟ್ಟರೆ ನನ್ನ ಕಥೆ ಏನು ಎಂದೆಲ್ಲಾ ಎನ್ನಿಸುತ್ತಿತ್ತು ಎಂದು ಗಿಲ್ಲಿ ನಟ ಹೇಳಿದ್ದಾರೆ.
ಎಲ್ಲವೂ ಠುಸ್
ಈ ಮೂಲಕ ಆಡಂಬರ, ಶ್ರೀಮಂತಿಕೆ, ತೋರಿಕೆ, ಬೆಲೆ ಬಾಳುವ ಬಟ್ಟೆ ಬರೆಗಳು, ಕೆಜಿಗಟ್ಟಲೆ ಮೇಕಪ್ಗಳು, ಅರೆಬರೆ ಡ್ರೆಸ್ ಯಾವುದಕ್ಕೂ ಅರ್ಹತೆಯ ಮುಂದೆ ಬೆಲೆ ಇಲ್ಲ. ಇವೆಲ್ಲವೂ ಅರ್ಹತೆಗೆ ತಲೆಬಾಗಲೇ ಬೇಕು ಎನ್ನೋದನ್ನು ಗಿಲ್ಲಿ ತೋರಿಸಿಕೊಟ್ಟಿದ್ದಾರೆ. ಅದೇ ರೀತಿ ರಕ್ಷಿತಾ ಶೆಟ್ಟಿ ಕೂಡ ಹೆಚ್ಚು ಆಡಂಬರವಿಲ್ಲದೇ ಮೊದಲ ರನ್ನರ್ ಅಪ್ ಆಗಿ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

