10:49 PM (IST) Mar 25

Karnataka News Live ವಾರದ ಒಳಗೆ ಮಾಲೀಕರಿಗೆ 'ಲ್ಯಾಂಬೋರ್ಗಿನಿ' ವಾಪಸ್ ನೀಡಿ - ಕಾರು ಜಪ್ತಿ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ!

ಸಹಕಾರ ನಗರದಲ್ಲಿ ಜಪ್ತಿ ಮಾಡಲಾಗಿದ್ದ 'ಲ್ಯಾಂಬೋರ್ಗಿನಿ ಹುರಾಕನ್' ಕಾರನ್ನು ಅದರ ಮಾಲೀಕರಿಗೆ ಹಿಂದಿರುಗಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ತೆರಿಗೆ ವಂಚನೆ ಮತ್ತು ನಕಲಿ ದಾಖಲೆ ಆರೋಪದ ಮೇಲೆ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

Read Full Story
09:53 PM (IST) Mar 25

Karnataka News Live IPL 2026 - ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್‌ ಕೊಹ್ಲಿ!

ಐಪಿಎಲ್ 19ನೇ ಸೀಸನ್‌ಗೂ ಮುನ್ನ ನಡೆದ ಆರ್‌ಸಿಬಿ ಆಂತರಿಕ ಅಭ್ಯಾಸ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಅವರು ತಮ್ಮ ಭರ್ಜರಿ ಫಾರ್ಮ್ ಪ್ರದರ್ಶಿಸಿ, ಮುಂಬರುವ ಟೂರ್ನಿಯಲ್ಲಿ ಎದುರಾಳಿ ತಂಡಗಳಿಗೆ ಕಠಿಣ ಸವಾಲು ನೀಡುವ ಮುನ್ಸೂಚನೆ ನೀಡಿದ್ದಾರೆ.
Read Full Story
09:34 PM (IST) Mar 25

Karnataka News Live ಚಿನ್ನ ವ್ಯಾಪಾರಿಗಳ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಬದ್ಧ - ಸಚಿವ ಸತೀಶ್‌ ಜಾರಕಿಹೊಳಿ

ಚಿನ್ನದ ವ್ಯಾಪಾರ ಮಾಡುವವರಿಗೆ ಅನಗತ್ಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಈ ಅಸಂಘಟಿತ ವಲಯ ಬಲಪಡಿಸಲು ಅಗತ್ಯ ಸಹಕಾರ ನೀಡಲಾಗುವುದು.

Read Full Story
09:00 PM (IST) Mar 25

Karnataka News Live ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಎಲ್ಲಾ ರೀತಿಯ ಕ್ರಮ - ಗೃಹ ಸಚಿವ ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವ ಭಾಗದಲ್ಲಿ ಡ್ರಗ್ಸ್‌ ಪತ್ತೆಯಾಗುತ್ತದೆಯೋ ಅಲ್ಲಿನ ಇನ್ಸ್‌ಪೆಕ್ಟರ್‌, ಡಿಸಿಪಿ ಅವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Read Full Story
08:08 PM (IST) Mar 25

Karnataka News Live ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?

ಕಳೆದ ವರ್ಷದ ಕಾಲ್ತುಳಿತದಲ್ಲಿ ಮೃತಪಟ್ಟ 11 ಆರ್‌ಸಿಬಿ ಅಭಿಮಾನಿಗಳಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮಾರಕವನ್ನು ಅನಾವರಣಗೊಳಿಸಲಾಗಿದೆ. ಆದರೆ, ಖಾಸಗಿ ಫ್ರಾಂಚೈಸಿಯ ಅಭಿಮಾನಿಗಳಿಗೆ ಕೆಎಸ್‌ಸಿಎ ಆವರಣದಲ್ಲಿ ಸ್ಮಾರಕ ನಿರ್ಮಿಸಿರುವುದರ ಔಚಿತ್ಯವನ್ನು ಪ್ರಶ್ನಿಸಲಾಗಿದೆ.

Read Full Story
07:29 PM (IST) Mar 25

Karnataka News Live ಮೈಚಳಿ ಬಿಟ್ಟು ನೀರಿನಲ್ಲಿ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್‌ ಶಾಸ್ತ್ರಿ ರೊಮಾನ್ಸ್​ - ವಿಡಿಯೋ ವೈರಲ್​

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ, ನದಿ ತೀರದಲ್ಲಿ ರೋಮ್ಯಾಂಟಿಕ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮಿಬ್ಬರ ನಡುವೆ ಏನೂ ಇಲ್ಲ ಎಂದಿದ್ದ ಈ ಜೋಡಿ, ಈಗ ಮದುವೆಯ ಬಗ್ಗೆ ಪರೋಕ್ಷ ಸುಳಿವು ನೀಡಿದೆ.

Read Full Story
06:51 PM (IST) Mar 25

Karnataka News Live Vijay Sangeetha Divorce - ವಿಜಯ್ ಏನೆಲ್ಲಾ ಮಾಡಿದ್ದರು? ಹಳೆ ಇಂಟರ್ವ್ಯೂನಲ್ಲಿ ಲಿಸ್ಟ್ ಕೊಟ್ಟಿದ್ದ ಸಂಗೀತಾ!

ನಟ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನಲಾದ ಈ ಹೊತ್ತಲ್ಲಿ, ಅವರು ಈ ಹಿಂದೆ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದ ಹಳೆಯ ಸಂದರ್ಶನವೊಂದು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

Read Full Story
06:07 PM (IST) Mar 25

Karnataka News Live ವಿಧಾನಸೌಧದಲ್ಲಿ 'ಮನಿ ಬ್ಯಾಗ್' - ಭಾರೀ ಹಣದೊಂದಿಗೆ ಶಕ್ತಿಸೌಧಕ್ಕೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!

ವಿಧಾನಸೌಧಕ್ಕೆ 6 ಲಕ್ಷ ರೂಪಾಯಿ ನಗದು ಸಾಗಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ ಆತ, ಹಣವನ್ನು ತನ್ನ ದೊಡ್ಡಪ್ಪನ ಚಿಕಿತ್ಸೆಗೆಂದು ತಂದಿದ್ದಾಗಿ ಸಮರ್ಥಿಸಿಕೊಂಡಿದ್ದಾನೆ. 

Read Full Story
05:09 PM (IST) Mar 25

Karnataka News Live ಈ ನಟ ಜೊತೆ ಇದ್ರೆ ಸಾಕು, ಸಿನಿಮಾ 1000 ಕೋಟಿ ಕ್ಲಬ್ ಸೇರೋದು ಗ್ಯಾರಂಟಿ - ಯಾರು ಆ ಲಕ್ಕಿ ಚಾರ್ಮ್!

90ರ ದಶಕದ ಸೂಪರ್‌ಸ್ಟಾರ್ ಸಂಜಯ್ ದತ್ ಈಗ 'ಮಹಾಖಳನಾಯಕ'ನಾಗಿ ತೆರೆ ಮೇಲೆ ಮಿಂಚ್ತಿದ್ದಾರೆ. ಇವರು ನಟಿಸಿದ್ರೆ ಸಾಕು, ಸಿನಿಮಾ 1000 ಕೋಟಿ ಬಾಚುತ್ತೆ ಅನ್ನೋ ನಂಬಿಕೆ ನಿರ್ಮಾಪಕರದ್ದು. ಸಂಜು ಬಾಬಾ ಈಗ ಬಾಕ್ಸಾಫೀಸ್‌ನ 'ಲಕ್ಕಿ ಚಾರ್ಮ್' ಆಗಿದ್ದಾರೆ.

Read Full Story
05:07 PM (IST) Mar 25

Karnataka News Live Amruthadhaare ಜೈದೇವ್- ಹಳೆಯ ಮಲ್ಲಿ ರಿಯಲ್​ ಮದ್ವೆಗೆ ರವಿಚಂದ್ರನ್​ ಜೊತೆ ದರ್ಶನ್ ಹಾಜರು?

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೈದೇವ್ ಅಲಿಯಾಸ್ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ, ರಾಣವ್ ಅವರಲ್ಲಿ ನಟ ದರ್ಶನ್ ಅವರನ್ನು ಕಾಣುವ ರಾಧಾ, ತಮ್ಮ ಮದುವೆಗೆ ದರ್ಶನ್ ಬರಬೇಕೆಂದು ಆಶಿಸಿದ್ದಾರೆ.
Read Full Story
04:53 PM (IST) Mar 25

Karnataka News Live 'ಧುರಂಧರ್' ನೋಡಿದೋರಿಗೂ 'ಭೂತ್ ಬಂಗ್ಲಾ' ಇಷ್ಟ ಆಗುತ್ತೆ - ನಟ ಅಕ್ಷಯ್ ಕುಮಾರ್ ಭರವಸೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾ 'ಭೂತ್ ಬಂಗ್ಲಾ' ಬಗ್ಗೆ ಮಾತನಾಡಿದ್ದಾರೆ. 'ಧುರಂಧರ್' ತರಹದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೂ 'ಭೂತ್ ಬಂಗ್ಲಾ' ಸಿನಿಮಾ ಇಷ್ಟವಾಗಲಿದೆ ಎಂದಿದ್ದಾರೆ.

Read Full Story
04:36 PM (IST) Mar 25

Karnataka News Live ಕನ್ನಡ ಕಲಾವಿದರಿಗೆ ಪ್ರಶಸ್ತಿ ಕೊಟ್ಟು ಗೌರವ ಕೊಡದ ಫಿಲ್ಮ್‌ಫೇರ್? ನಟ ಶ್ರೀಮುರಳಿ ಬೇಸರ

ನಟ ನಟಿಯರ ಫೋಟೋಗಳನ್ನು ಫಿಲಂಫೇರ್‌ ಮ್ಯಾಗಜೀನ್‌ನ ಮುಖಪುಟದಲ್ಲಿ ಹಾಕುತ್ತಾರೆ. ಆದರೆ, ಈ ಮುಖಪುಟದಲ್ಲಿ ಕನ್ನಡದವರು ಮಾತ್ರ ಇರಲ್ಲ. ಯಾಕೆ ಈ ನಿರ್ಲಕ್ಷ್ಯ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ.

Read Full Story
04:30 PM (IST) Mar 25

Karnataka News Live ಕರ್ನಾಟಕ ಪೊಲೀಸ್ ನೇರ ನೇಮಕಾತಿ ವಯೋಮಿತಿ ಸಡಿಲಿಸಿ ಮಹಾ ನಿರ್ದೇಶಕ ಡಾ ಸಲೀಂ ಆದೇಶ! ಅಭ್ಯರ್ಥಿಗಳಿಗೆ ಸುವರ್ಣಾವಕಾಶ

ಕರ್ನಾಟಕ ಪೊಲೀಸ್ ಇಲಾಖೆಯು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಘೋಷಿಸಿದೆ. ಈ ಒಂದು ಬಾರಿಯ ವಿಶೇಷ ಕ್ರಮವು 2026ರ ಮಾರ್ಚ್ 24 ರಿಂದ 2027ರ ಡಿಸೆಂಬರ್ 31ರ ವರೆಗಿನ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಕೋವಿಡ್ ಮತ್ತು ಆಡಳಿತಾತ್ಮಕ ವಿಳಂಬದಿಂದ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story
04:21 PM (IST) Mar 25

Karnataka News Live ಧುರಂಧರ್ 3 ಬರೋದಿಲ್ಲ, 8 ಗಂಟೆಯಲ್ಲಿ ನನ್ನ ಕಥೆ ಹೇಳಿ ಮುಗಿಸಿದ್ದೇನೆ - ಆದಿತ್ಯ ಧರ್‌

ನನಗೆ ಹೇಳಬೇಕಿದ್ದ ಕಥೆಯನ್ನು 8 ಗಂಟೆಗಳಲ್ಲಿ ಎರಡು ಭಾಗಗಳಲ್ಲಿ ಹೇಳಿ ಮುಗಿಸಿದ್ದೇನೆ. ಕಥೆಯೇ ಇಲ್ಲದೇ ಸಿನಿಮಾವನ್ನು ಅನವಶ್ಯಕ ಎಳೆದಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡಬಾರದು ಎಂದಿದ್ದಾರೆ ಆದಿತ್ಯ ಧರ್‌.

Read Full Story
04:07 PM (IST) Mar 25

Karnataka News Live ಜಮೀರ್ ಅಲ್ಲ, ಆ ಪರಮಾತ್ಮನೇ ಬಂದ್ರೂ ನಾಮಪತ್ರ ವಾಪಸ್ ಪಡೆಯೊಲ್ಲ - ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಸವಾಲ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ತಾವು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮನವೊಲಿಸಲು ಬರುವ ಸಚಿವ ಜಮೀರ್ ಅಹ್ಮದ್‌ಗೆ 'ಗೋ ಬ್ಯಾಕ್' ಎನ್ನುವುದಾಗಿ ಸವಾಲು ಹಾಕಿದ್ದಾರೆ.

Read Full Story
04:04 PM (IST) Mar 25

Karnataka News Live ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆಗೆ ಒಪ್ಪಿಗೆ, ಸಂಸದ ಸಂತಸ

ಬೆಂಗಳೂರು-ಮೈಸೂರು ಮಾರ್ಗದ ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಇನ್ನು ಮುಂದೆ ರಾಮನಗರ ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಲಾಗಿದೆ. ಜನಪ್ರತಿನಿಧಿಗಳ ನಿರಂತರ ಪ್ರಯತ್ನದ ಫಲವಾಗಿ ಈ ಬಹುದಿನಗಳ ಬೇಡಿಕೆ ಈಡೇರಿದ್ದು, ಇದು ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ.
Read Full Story
03:42 PM (IST) Mar 25

Karnataka News Live ಬೆಂಗಳೂರು - ರೈಲ್ವೆ ಹಳಿಗಳ ಬಳಿಯ ಮನೆಗಳ್ಳನಿಂದ ಅರ್ಧ ಕೆಜಿ ಚಿನ್ನ ಜಪ್ತಿ! ಖತರ್ನಾಕ್ ಕಳ್ಳನ ಕರಾಮತ್ತು ಕೇಳಿ!

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು, ರೈಲು ಹಳಿಗಳನ್ನೇ ಬಳಸಿ ಸಿಸಿಟಿವಿ ಕಣ್ತಪ್ಪಿಸಿ ಸರಣಿ ಮನೆಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹79 ಲಕ್ಷ ಮೌಲ್ಯದ 527 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಈ ಹಿಂದೆಯೂ ಇದೇ ಮಾದರಿಯ ಕೃತ್ಯಕ್ಕಾಗಿ ಬಂಧಿತನಾಗಿದ್ದನು.
Read Full Story
03:22 PM (IST) Mar 25

Karnataka News Live ಶಾಸಕರಾಯ್ತು, ಸ್ಪೀಕರ್ ಖಾದರ್ ಜೊತೆಗೆ ಈಗ ಸಿಬ್ಬಂದಿಗಳ ಫೋಟೋಶೂಟ್, ಬದಲಾವಣೆಯ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ!

ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ಫೋಟೋ ಶೂಟ್ ರಾಜಕೀಯ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಯಿತು. ಪರಿಷತ್ತಿನ ಸದಸ್ಯರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಈ ಫೋಟೋ ಸೆಷನ್ ನಡೆದಿದೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರೂ, ರಾಜಕೀಯ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.
Read Full Story
03:00 PM (IST) Mar 25

Karnataka News Live ಪ್ರದೀಪ್ ಈಶ್ವರ್‌ನ ನಿಮ್ಹಾನ್ಸ್ ಗೆ ಸೇರಿಸಿ - ಡಿಸಿ ಮೂಲಕ ಚುನಾವಣಾ ಆಯೋಗಕ್ಕೆ ಮಂಡ್ಯ ಬಿಜೆಪಿ ಮನವಿ

ದಾವಣಗೆರೆಯಲ್ಲಿ ಬಿಜೆಪಿ ವಿರುದ್ಧ ಲಘು ಹೇಳಿಕೆ ನೀಡಿದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರದೀಪ್ ಈಶ್ವರ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿ, ಶಾಸಕ ಸ್ಥಾನದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು.

Read Full Story
02:05 PM (IST) Mar 25

Karnataka News Live ಸರ್ಕಾರದ ಅವಧಿ ಮುಗಿಯೋ ಮುನ್ನವೇ ವಿಧಾನಸೌಧದಲ್ಲಿ ಫೋಟೋ ಶೂಟ್! ಸಿಎಂ ಬದಲಾವಣೆ? ಸ್ಪೀಕರ್ ಬದಲಾವಣೆ? ಸಂಪುಟ ಪುನರಚನೆ?

ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ.
Read Full Story