MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮೈಚಳಿ ಬಿಟ್ಟು ನೀರಿನಲ್ಲಿ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್‌ ಶಾಸ್ತ್ರಿ ರೊಮಾನ್ಸ್​: ವಿಡಿಯೋ ವೈರಲ್​

ಮೈಚಳಿ ಬಿಟ್ಟು ನೀರಿನಲ್ಲಿ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್‌ ಶಾಸ್ತ್ರಿ ರೊಮಾನ್ಸ್​: ವಿಡಿಯೋ ವೈರಲ್​

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ, ನದಿ ತೀರದಲ್ಲಿ ರೋಮ್ಯಾಂಟಿಕ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮಿಬ್ಬರ ನಡುವೆ ಏನೂ ಇಲ್ಲ ಎಂದಿದ್ದ ಈ ಜೋಡಿ, ಈಗ ಮದುವೆಯ ಬಗ್ಗೆ ಪರೋಕ್ಷ ಸುಳಿವು ನೀಡಿದೆ.

2 Min read
Author : Suchethana D
Published : Mar 25 2026, 07:30 PM IST
Share this Photo Gallery
  • FB
  • TW
  • Linkdin
  • Whatsapp
16
ಐಶ್ವರ್ಯ ಸಿಂಧೋಗಿ ಶಿಶಿರ್‌ ಶಾಸ್ತ್ರಿ
Image Credit : Instagram

ಐಶ್ವರ್ಯ ಸಿಂಧೋಗಿ- ಶಿಶಿರ್‌ ಶಾಸ್ತ್ರಿ

ಬಿಗ್‌ಬಾಸ್‌ ಮನೆಯಲ್ಲಿ ಲವ್‌, ರೊಮಾನ್ಸ್‌ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್‌ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್‌ ಶಾಸ್ತ್ರಿ (Shishir Shastry)

26
ಸಾಕಷ್ಟು ಬಾರಿ ಜೊತೆ
Image Credit : Instagram

ಸಾಕಷ್ಟು ಬಾರಿ ಜೊತೆ

ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್‌ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್‌ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ.

Related Articles

Related image1
Amruthadhaare ಜೈದೇವ್- ಹಳೆಯ ಮಲ್ಲಿ ರಿಯಲ್​ ಮದ್ವೆಗೆ ರವಿಚಂದ್ರನ್​ ಜೊತೆ ದರ್ಶನ್ ಹಾಜರು?
Related image2
Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​
36
ಮೈಚಳಿ ಬಿಟ್ಟು ರೊಮಾನ್ಸ್​
Image Credit : Instagram

ಮೈಚಳಿ ಬಿಟ್ಟು ರೊಮಾನ್ಸ್​

ಇದೀಗ ಇವರಿಬ್ಬರೂ ನದಿ ತೀರದಲ್ಲಿ ಮೈಚಳಿ ಬಿಟ್ಟು ಭರ್ಜರಿ ರೊಮಾನ್ಸ್​ ಮಾಡಿದ್ದಾರೆ. ಸಾಗರಿಯೇ, ಸಾಗರಿಯೇ ಹಾಡಿಗೆ ಇಬ್ಬರೂ ಸಕತ್​ ಸ್ಟೆಪ್​ ಹಾಕಿದ್ದು, ಅದನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದು, ಬೇಗ ಗುಡ್​ನ್ಯೂಸ್​ ಕೊಡಿ ಅಂತಿದ್ದಾರೆ.

46
ಮದುವೆಯ ಬಗ್ಗೆ ಮಾತನಾಡದ ಜೋಡಿ
Image Credit : Instagram

ಮದುವೆಯ ಬಗ್ಗೆ ಮಾತನಾಡದ ಜೋಡಿ

ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್‌ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್‌ ಪಾರ್ಟನರ್‌ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.

56
ಏನಿಲ್ಲ ಏನಿಲ್ಲ ಎನ್ನುತ್ತಿದ್ದಾರೆ
Image Credit : Instagram

ಏನಿಲ್ಲ ಏನಿಲ್ಲ ಎನ್ನುತ್ತಿದ್ದಾರೆ

ಕೆಲವು ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಈ ಜೋಡಿ ಸ್ವಲ್ಪ ಭಿನ್ನ ಪ್ರತಿಕ್ರಿಯೆ ಕೊಟ್ಟಿತ್ತು. ನಮ್ಮ ಅಭಿಮಾನಿಗಳು ಸದಾ ಮದುವೆಯ ಬಗ್ಗೆ ಕೇಳುತ್ತಿರುತ್ತಾರೆ. ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಯಾವಾಗ ಗುಡ್‌ನ್ಯೂಸ್‌ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿರುತ್ತಾರೆ, ಆದರೆ ಸದ್ಯ ಏನಿಲ್ಲಾ ಎಂದಿದ್ದರು.

66
ಬೇಗ ಅನ್ನಿಸತ್ತೆ
Image Credit : Instagram

ಬೇಗ ಅನ್ನಿಸತ್ತೆ

ಇದಕ್ಕೆ ಉತ್ತರ ಕೊಡುವುದು ತುಂಬಾ ಬೇಗ ಆಯ್ತು ಅನಿಸತ್ತೆ ಎನ್ನುವ ಮೂಲಕ ಮದುವೆ ಆಗುವ ಛಾನ್ಸ್‌ ಇರುವ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ. ಶಿಶಿರ್‌ ಹೇಳಿದ್ದು ಏನೆಂದರೆ, ಕಾಲಾವೇ ಇದಕ್ಕೆ ಉತ್ತರಿಸುತ್ತದೆ. ಯಾವಾಗ ಏನು ಆಗಬೇಕು ಅದು ಖಂಡಿತ ಆಗುತ್ತದೆ. ಈಗಲೇ ಏನೂ ಆ ಬಗ್ಗೆ ನಾವು ಯೋಚನೆ ಮಾಡಲಿಲ್ಲ. ಹೇಳಿಕೊಳ್ಳುವಂಥ ಕ್ಲಾರಿಟಿಗೆ ನಾವೂ ಬಂದಿಲ್ಲ ಎನ್ನುತ್ತಲೇ ಇದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ಪ್ರೀತಿ
ಟಿವಿ ಶೋ
Latest Videos
Recommended Stories
Recommended image1
Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​
Recommended image2
Amruthadhaare ಜೈದೇವ್- ಹಳೆಯ ಮಲ್ಲಿ ರಿಯಲ್​ ಮದ್ವೆಗೆ ರವಿಚಂದ್ರನ್​ ಜೊತೆ ದರ್ಶನ್ ಹಾಜರು?
Recommended image3
ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?
Related Stories
Recommended image1
Amruthadhaare ಜೈದೇವ್- ಹಳೆಯ ಮಲ್ಲಿ ರಿಯಲ್​ ಮದ್ವೆಗೆ ರವಿಚಂದ್ರನ್​ ಜೊತೆ ದರ್ಶನ್ ಹಾಜರು?
Recommended image2
Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved