MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್‌ ಕೊಹ್ಲಿ!

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್‌ ಕೊಹ್ಲಿ!

ಐಪಿಎಲ್ 19ನೇ ಸೀಸನ್‌ಗೂ ಮುನ್ನ ನಡೆದ ಆರ್‌ಸಿಬಿ ಆಂತರಿಕ ಅಭ್ಯಾಸ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಅವರು ತಮ್ಮ ಭರ್ಜರಿ ಫಾರ್ಮ್ ಪ್ರದರ್ಶಿಸಿ, ಮುಂಬರುವ ಟೂರ್ನಿಯಲ್ಲಿ ಎದುರಾಳಿ ತಂಡಗಳಿಗೆ ಕಠಿಣ ಸವಾಲು ನೀಡುವ ಮುನ್ಸೂಚನೆ ನೀಡಿದ್ದಾರೆ.

1 Min read
Author : Santosh Naik
Published : Mar 25 2026, 09:53 PM IST
Share this Photo Gallery
  • FB
  • TW
  • Linkdin
  • Whatsapp
18
ಅಬ್ಬರಿಸಿದ ವಿರಾಟ್‌ ಕೊಹ್ಲಿ
Image Credit : RCB

ಅಬ್ಬರಿಸಿದ ವಿರಾಟ್‌ ಕೊಹ್ಲಿ

ಐಪಿಎಲ್‌ನ 19ನೇ ಸೀಸನ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಭೀಕರ ಫಾರ್ಮ್ ಪ್ರದರ್ಶಿಸುವ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

28
ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಫೈರ್
Image Credit : RCB

ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಫೈರ್

ಐಪಿಎಲ್ 19ನೇ ಸೀಸನ್ ಆರಂಭಕ್ಕೂ ಮುನ್ನ ನಡೆದ ಆರ್‌ಸಿಬಿ ತಂಡದ ಆಂತರಿಕ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ತಮ್ಮದೇ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸುವ ಮೂಲಕ ಮುಂಬರುವ ಸರಣಿಯ 'ಟ್ರೈಲರ್' ತೋರಿಸಿದ್ದಾರೆ.

Related Articles

Related image1
ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?
Related image2
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?
38
ಬಿರುಗಾಳಿಯ ವೇಗದ ಬ್ಯಾಟಿಂಗ್
Image Credit : RCB

ಬಿರುಗಾಳಿಯ ವೇಗದ ಬ್ಯಾಟಿಂಗ್

ಈ ಪಂದ್ಯದಲ್ಲಿ ಕೊಹ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿದ್ದಾರೆ. ಈ ವೇಳೆ ಅವರ ಸ್ಟ್ರೈಕ್ ರೇಟ್ 200ಕ್ಕಿಂತ ಹೆಚ್ಚಿತ್ತು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮೂಲಕ ತಾವು ಪೂರ್ಣ ಸಜ್ಜಾಗಿರುವುದನ್ನು ಸಾಬೀತುಪಡಿಸಿದ್ದಾರೆ.

48
ಆರ್‌ಸಿಬಿ ಮೇಲಿದೆ ಜವಾಬ್ದಾರಿ
Image Credit : RCB

ಆರ್‌ಸಿಬಿ ಮೇಲಿದೆ ಜವಾಬ್ದಾರಿ

ಆರ್‌ಸಿಬಿ ತಂಡ ಈ ಬಾರಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ತಂಡದ ಮೇಲಿದೆ. ಈ ಬಾರಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿರುವುದು ವಿಶೇಷ.

58
ಕೊಹ್ಲಿ-ಫಿಲಿಪ್ ಸಾಲ್ಟ್ ಓಪನಿಂಗ್
Image Credit : RCB

ಕೊಹ್ಲಿ-ಫಿಲಿಪ್ ಸಾಲ್ಟ್ ಓಪನಿಂಗ್

ಈ ಬಾರಿಯೂ ವಿರಾಟ್ ಕೊಹ್ಲಿ ಅವರು ಫಿಲಿಪ್ ಸಾಲ್ಟ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಮೂರು ಸೀಸನ್‌ಗಳಿಂದ ಕೊಹ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಪ್ರತಿ ಬಾರಿಯೂ 600ಕ್ಕಿಂತ ಹೆಚ್ಚು ರನ್ ಗಳಿಸುತ್ತಾ ಬಂದಿದ್ದಾರೆ.

68
ದಾಖಲೆಗಳ ಸರದಾರ
Image Credit : RCB

ದಾಖಲೆಗಳ ಸರದಾರ

ಕಳೆದ 18ನೇ ಸೀಸನ್‌ನಲ್ಲಿ ಕೊಹ್ಲಿ ಬರೊಬ್ಬರಿ 8 ಅರ್ಧಶತಕಗಳನ್ನು ಸಿಡಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 268 ಪಂದ್ಯಗಳನ್ನಾಡಿರುವ ಅವರು 39.54ರ ಸರಾಸರಿಯಲ್ಲಿ ಒಟ್ಟು 8,661 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

78
ನಾಯಕರ ಫೋಟೋಶೂಟ್
Image Credit : RCB

ನಾಯಕರ ಫೋಟೋಶೂಟ್

ಮಾರ್ಚ್ 28ರಿಂದ ಟೂರ್ನಿ ಆರಂಭವಾಗಲಿದ್ದು, ಮಾರ್ಚ್ 25ರಂದು ಎಲ್ಲಾ 10 ತಂಡಗಳ ನಾಯಕರು ಒಟ್ಟುಗೂಡಿ ಅಧಿಕೃತ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದಾರೆ. ಐಪಿಎಲ್ ಜ್ವರ ಈಗ ದೇಶಾದ್ಯಂತ ಮನೆಮಾಡಿದೆ.

88
ಮೊದಲ ಪಂದ್ಯದ ವಿವರ
Image Credit : RCB

ಮೊದಲ ಪಂದ್ಯದ ವಿವರ

ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ರಾತ್ರಿ 7 ಗಂಟೆಗೆ ಟಾಸ್ ನಡೆಯಲಿದ್ದು, 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವಿರಾಟ್ ಕೊಹ್ಲಿ
ಆರ್‌ಸಿಬಿ
ಬೆಂಗಳೂರು
ಕ್ರಿಕೆಟ್
ಕ್ರೀಡೆಗಳು
ಐಪಿಎಲ್
Latest Videos
Recommended Stories
Recommended image1
ಐಪಿಎಲ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ: ಪಂದ್ಯದ ದಿನ ಮುಂಜಾನೆ 2 ಗಂಟೆಯವರೆಗೆ ರೈಲು ಸಂಚಾರ
Recommended image2
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?
Recommended image3
ಶೇನ್ ವಾರ್ನ್ ಗೂಗ್ಲಿ, ರಾಜಸ್ಥಾನ ರಾಯಲ್ಸ್ ಮಾರಾಟದಿಂದ ಕುಟುಂಬಕ್ಕೆ 450 ಕೋಟಿ ರೂ ಜಾಕ್‌ಪಾಟ್
Related Stories
Recommended image1
ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?
Recommended image2
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved