- Home
- News
- State
- Karnataka News Live: 'ನಮ್ಮ ಹನುಮ ಕನ್ನಡಿಗ' - ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!
Karnataka News Live: 'ನಮ್ಮ ಹನುಮ ಕನ್ನಡಿಗ' - ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!

ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಬೈಲೂರಿನಲ್ಲಿ ಹಿಂದೂಗಳ ಐದಾರು ಮನೆಗಳ ಮೇಲೆ ಅಪ್ರಾಪ್ತ ಅನ್ಯಧರ್ಮೀಯ ಯುವಕರು ಸೋಮವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದ ಆ ಪ್ರದೇಶದಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಸೋಮವಾರ ರಾತ್ರಿ 10 ಗಂಟೆ ನಂತರ 3 ಬೈಕ್ನಲ್ಲಿ ಬಂದ 6 ಜನ ಅನ್ಯ ಧರ್ಮೀಯ ಅಪ್ರಾಪ್ತರು ಬೈಲೂರಿನ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಬೈಲೂರಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು ಸ್ಥಳೀಯರು ಇಬ್ಬರು ಅಪ್ರಾಪ್ತರನ್ನು ಹಿಡಿದು ಮುರ್ಡೇಶ್ವರ ಪೊಲೀಸರಿಗೆ ಒಪ್ಪಿಸಿದರು.
ಉಳಿದ ನಾಲ್ವರು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಉಳಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಸಹ ಸ್ಥಳಕ್ಕೆ ತೆರಳಿದ್ದಾರೆ. ಸದ್ಯ ಮರುಡೇಶ್ವರ, ಬೈಲೂರು ತೆಂಗಾರು ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Karnataka News Live 24 February 2026'ನಮ್ಮ ಹನುಮ ಕನ್ನಡಿಗ' - ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!
Karnataka News Live 24 February 2026Bengaluru Crime - ಕೈಮುಗಿದ್ರೂ ಬಿಡಲಿಲ್ಲ.. ತಲೆಗೆ ಹೊಡೆದು ಮದ್ಯ ಸುರಿದು ವಿಕೃತಿ! ಏನಾಗ್ತಿದೆ ರಾಜ್ಯದಲ್ಲಿ?
Karnataka News Live 24 February 2026ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ
Karnataka News Live 24 February 2026ರಾಯರ ಸನ್ನಿಧಿಯಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ - ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ!
ಮಂತ್ರಾಲಯದ ಗುರು ವೈಭವೋತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ರಾಯರ ದರ್ಶನ ಪಡೆದರು. ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಭ್ರಷ್ಟ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
Karnataka News Live 24 February 2026ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಭ್ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Rishab Shetty Visits Mantralayam ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಗುರು ವೈಭವೋತ್ಸವದ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ರಿಷಭ್ ಶೆಟ್ಟಿ ಭೇಟಿ ನೀಡಿದ್ದು, ಈ ಸುಂದರ ಕ್ಷಣಗಳ ಫೋಟೋ ಗ್ಯಾಲರಿ ಮತ್ತು ವರದಿ ಇಲ್ಲಿದೆ ನೋಡಿ!
Karnataka News Live 24 February 2026ಬೆಂಗಳೂರಲ್ಲಿ ಅಮೆಜಾನ್ ಬೆನ್ನಲ್ಲೇ, ಆಪಲ್ ಕಚೇರಿ ವಿಸ್ತರಣೆ - ವಾರ್ಷಿಕ ₹108 Cr ಬಾಡಿಗೆ, ದಶಕಕ್ಕೆ 1,333 ಕೋಟಿ ಡೀಲ್!
ಟೆಕ್ ದೈತ್ಯ ಆಪಲ್ ಸಂಸ್ಥೆಯು ಬೆಂಗಳೂರಿನ 'ಎಂಬಸಿ ಜೆನಿತ್' ಕಚೇರಿ ಸಂಕೀರ್ಣದಲ್ಲಿ ಹೆಚ್ಚುವರಿಯಾಗಿ 1.21 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದೆ. ಈ 10 ವರ್ಷಗಳ ಬೃಹತ್ ಒಪ್ಪಂದದ ಅಡಿಯಲ್ಲಿ ಆಪಲ್ ಒಟ್ಟು 1,333 ಕೋಟಿ ರೂಪಾಯಿ ಬಾಡಿಗೆ ಪಾವತಿಸಲಿದೆ.
Karnataka News Live 24 February 2026Karnataka Rains - ಬಂಗಾಳಕೊಲ್ಲಿ ವಾಯುಭಾರ ಕುಸಿತ; ಉತ್ತರಕನ್ನಡದಲ್ಲಿ ಗುಡುಗು ಸಹಿತ ಮಳೆ, ಕಾಫಿನಾಡಲ್ಲೂ ವರ್ಷಧಾರೆ!
Karnataka News Live 24 February 2026ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ - ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಗದಗಿನ 7 ವರ್ಷದ ಪ್ರೀತಮ್, ಕವಿರತ್ನ ಕಾಳಿದಾಸನ ಪಾತ್ರದಲ್ಲಿ ಮಿಂಚಿದ್ದಾನೆ. ಡಾ.ರಾಜ್‌ಕುಮಾರ್ ಅವರ ಪಡಿಯಚ್ಚಿನಂತಿದ್ದ ಈ ಬಾಲಕನ ಅಭಿನಯಕ್ಕೆ ನಟ ಶಿವರಾಜ್‌ಕುಮಾರ್ ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Karnataka News Live 24 February 2026ರೈಲ್ವೆ ರಕ್ಷಣೆ ತರಬೇತಿ ಕಲಿಯಲು ಬೆಂಗಳೂರಿನ ಭಾರತೀಯ ರೈಲ್ವೆ ವಿಭಾಗಕ್ಕೆ ಬಂದ ತಾಂಜೇನಿಯಾ ಸಿಬ್ಬಂದಿಗಳು
ಬೆಂಗಳೂರಿನಲ್ಲಿರುವ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯು, ತಾಂಜೇನಿಯಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ರೈಲ್ವೆ ಅಪಘಾತದ ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಎರಡು ವಾರಗಳ ತರಬೇತಿ ನೀಡುತ್ತಿದೆ. ಈ ಶಿಬಿರದಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ.
Karnataka News Live 24 February 2026ಗುಲ್ಬರ್ಗ ವಿವಿ ಘಟಿಕೋತ್ಸವ - ರೈತನ ಮಗಳು ಚೆನ್ನಮ್ಮಗೆ 11, ಕೂಲಿಕಾರನ ಮಗ ರಾಹುಲ್‌ಗೆ 9 ಗೋಲ್ಡ್ ಮೆಡಲ್!
ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ, ರೈತನ ಮಗಳು ಚೆನ್ನಮ್ಮ ಕನ್ನಡದಲ್ಲಿ 11 ಚಿನ್ನದ ಪದಕಗಳನ್ನು ಮತ್ತು ಕೂಲಿಕಾರನ ಮಗ ರಾಹುಲ್ ಪ್ರಾಣಿಶಾಸ್ತ್ರದಲ್ಲಿ 9 ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮೆರೆದಿದ್ದಾರೆ. ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
Karnataka News Live 24 February 2026ಪರಿಹಾರ ಪಾವತಿಸದ ನೈಋತ್ಯ ರೈಲ್ವೆ ಕಚೇರಿ ಪೀಠೋಪಕರಣ ಹೊತ್ತೊಯ್ದ ಹುಬ್ಬಳ್ಳಿ ರೈತರು!
ರೈತರಿಗೆ ಭೂಸ್ವಾಧೀನ ಪರಿಹಾರ ನೀಡದ ಕಾರಣ, ನ್ಯಾಯಾಲಯದ ಆದೇಶದ ಮೇರೆಗೆ ರೈತರು ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ಕನಸ್ಟ್ರಕ್ಷನ್ ವಿಭಾಗದ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. 2017ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ಕೋರ್ಟ್ ಆದೇಶಿಸಿದ್ದರೂ ರೈಲ್ವೆ ಇಲಾಖೆ ಪಾಲಿಸಿರಲಿಲ್ಲ.
Karnataka News Live 24 February 2026ಪ್ರಯಾಣಿಕರ ಗಮನಕ್ಕೆ - ಯಶವಂತಪುರ-ಗೋರಖ್ಪುರ ರೈಲು ಸಂಚಾರದಲ್ಲಿ ಈ ಎರಡು ದಿನ ಅನಿರೀಕ್ಷಿತ ಮಾರ್ಗ ಬದಲಾವಣೆ!
ಗೊಂಡಾ–ಗೋರಖ್ಪುರ ವಿಭಾಗದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕಾಮಗಾರಿಯಿಂದಾಗಿ, ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (12592) ರೈಲಿನ ಮಾರ್ಗವನ್ನು ಮಾರ್ಚ್ 2 ಮತ್ತು 9 ರಂದು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
Karnataka News Live 24 February 2026Bagalkote Dalit Social Boycott Row - ತಮದಡ್ಡಿ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ವಿವಾದ ಸುಖಾಂತ್ಯ
ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ದಲಿತರ ಮೇಲೆ ಹೇರಲಾಗಿದ್ದ ಸಾಮಾಜಿಕ ಬಹಿಷ್ಕಾರದ ಆರೋಪವು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಮತ್ತು ಪೊಲೀಸರ ಸಮ್ಮುಖದಲ್ಲಿ ನಡೆದ ಸಭೆಯ ನಂತರ, ದಲಿತರಿಗೆ ಊರಿನಲ್ಲೇ ಕ್ಷೌರ ಮಾಡುವ ಮೂಲಕ ವಿವಾದ ಬಗೆಹರಿಸಲಾಯಿತು.
Karnataka News Live 24 February 2026ಶಾಲಾ ಮಕ್ಕಳಿಗೆ ಫ್ರೀ ನೋಟ್‌ಬುಕ್ ಪ್ರಸ್ತಾವ ಜೀವಂತ, 50 ಲಕ್ಷ ಮಕ್ಕಳಿಗೆ ನೋಟ್‌ಬುಕ್ ನೀಡಲು ಬೇಕು 75 ಕೋಟಿ ರು.
ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ನೀಡುವ ಯೋಜನೆಗೆ ಹಣಕಾಸು ಇಲಾಖೆ ಇನ್ನೂ ಸಮ್ಮತಿಸಿಲ್ಲ. ಆದರೂ, ಶಿಕ್ಷಣ ಇಲಾಖೆಯು ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಗಾಗಿ CM ಮನವೊಲಿಸಲು ಪ್ರಯತ್ನಿಸುತ್ತಿದ್ದು, ಇಲಾಖೆಯಲ್ಲಿನ ಹಣ ಸೋರಿಕೆ ತಡೆದು ಅನುದಾನ ಒದಗಿಸುವ ಪ್ರಸ್ತಾವನೆ ಇಟ್ಟಿದೆ.
Karnataka News Live 24 February 2026Bangalore - ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆ, ಸ್ಕೂಟರ್ ಪಲ್ಟಿ, ಜಸ್ಟ್ ಮಿಸ್ ಆದ ಶಾಲಾ ಮಕ್ಕಳು! ಇದೇನಾ ಬ್ರ್ಯಾಂಡ್ ಬೆಂಗಳೂರು?
Bangalore pothole accident ಆನೇಕಲ್‌ನ ಚಂದಾಪುರದಲ್ಲಿ, ತಂದೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ಸ್ಕೂಟರ್ ಸಮೇತ ಬಿದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿಂಬದಿಯ ವಾಹನ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.
Karnataka News Live 24 February 2026ಸಚಿನ್ ತೆಂಡೂಲ್ಕರ್‌ಗೆ ಮಾಡಿದ್ದ ಅನ್ಯಾಯ ಒಪ್ಪಿಕೊಂಡ ಅಂಪೈರ್ ಸ್ಟೀವ್ ಬಕ್ನರ್; 22 ವರ್ಷಗಳ ಬಳಿಕ ರಹಸ್ಯ ಬಹಿರಂಗ!
ಮಾಜಿ ಅಂಪೈರ್ ಸ್ಟೀವ್ ಬಕ್ನರ್, 2003-04ರ ಗಬ್ಬಾ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗೆ ತಾವು ನೀಡಿದ್ದ LBW ತೀರ್ಪು ತಪ್ಪಾಗಿತ್ತು ಎಂದು ಎರಡು ದಶಕಗಳ ನಂತರ ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನೀಡಿದ ಆ ತೀರ್ಪಿನ ಬಗ್ಗೆ ತಮಗೆ ಈಗಲೂ ಪಶ್ಚಾತ್ತಾಪವಿದೆ ಎಂದರು.
Karnataka News Live 24 February 2026ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗದ ಪ್ರಯಾಣಿಕರ ದಟ್ಟಣೆಗೆ ಕೊನೆಗೂ ಮುಕ್ತಿ ಭಾಗ್ಯ, ಶೀಘ್ರವೇ 3 ಹೊಸ ರೈಲು ಸೇರ್ಪಡೆ
ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು, ಮೇ-ಜೂನ್ ಅಂತ್ಯದೊಳಗೆ ಮೂರು ಹೊಸ ರೈಲುಗಳು ಸೇರ್ಪಡೆಯಾಗಲಿವೆ. ಟಿಟಾಗರ್ ಕಂಪನಿಯಿಂದ ನಿರ್ಮಿತವಾದ ಈ ರೈಲುಗಳು, ಪರೀಕ್ಷಾರ್ಥ ಓಡಾಟದ ನಂತರ ಸೇವೆಗೆ ಲಭ್ಯವಾಗಲಿದೆ.
Karnataka News Live 24 February 2026ಹೆಣ್ಣು ಮಾಯೆ ಹುಷಾರು - ಗರ್ಲ್‌ಫ್ರೆಂಡ್ ನೀಡಿದ ಸುಳಿವಿನಿಂದಲೇ ಮೆಕ್ಸಿಕೋದ ಡ್ರಗ್ ಲಾರ್ಡ್ ಹತ್ಯೆ
ಮೆಕ್ಸಿಕೋದ ಕುಖ್ಯಾತ ಡ್ರಗ್ ಲಾರ್ಡ್ ಎಲ್ ಮೆಂಚೋನನ್ನು ಸಶಸ್ತ್ರ ಪಡೆಗಳು ಹತ್ಯೆ ಮಾಡಿವೆ. ಆತನ ಗೆಳತಿಯೊಬ್ಬಳು ನೀಡಿದ ಸುಳಿವಿನ ಆಧಾರದ ಮೇಲೆ ಯುಎಸ್ ಮತ್ತು ಮೆಕ್ಸಿಕನ್ ಗುಪ್ತಚರ ಇಲಾಖೆಗಳು ಆತನನ್ನು ಪತ್ತೆಹಚ್ಚಿ, ವಿಶೇಷ ಕಾರ್ಯಾಚರಣೆಯ ಮೂಲಕ ಅಂತ್ಯಗೊಳಿಸಿದವು ಎಂದು ತಿಳಿದು ಬಂದಿದೆ.
Karnataka News Live 24 February 2026Karna Serial ನಟ ಕಿರಣ್ ರಾಜ್ ಬಂಪರ್ ಆಫರ್ - ಸುಲಭದ ರೆಸಿಪಿ ಹೇಳಿ ಸರ್‌ಪ್ರೈಸ್ ಪಡೆಯಿರಿ- ಡಿಟೇಲ್ಸ್ ಇಲ್ಲಿದೆ
ಕರ್ಣ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'Passport and Pan with Kiran Raj' ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳಿಂದ ಸುಲಭವಾದ ಅಡುಗೆ ರೆಸಿಪಿಗಳನ್ನು ಕೇಳಿದ್ದು, ಅತಿ ಹೆಚ್ಚು ಲೈಕ್ಸ್ ಪಡೆದ ರೆಸಿಪಿಗೆ ಸರ್‌ಪ್ರೈಸ್ ನೀಡಲಿದ್ದಾರೆ.
Karnataka News Live 24 February 2026ಹಿಗ್ಗಿದ ಧಾರವಾಡ ಉದ್ಯೋಗಾಂಕ್ಷಿಗಳ ಹೋರಾಟ, ಬಗ್ಗಿದ ಸಿದ್ದರಾಮಯ್ಯ; ನೇಮಕಾತಿ ವಯೋಮಿತಿ 5 ವರ್ಷ ಸಡಿಲಿಕೆ ಮಾಡಿ ಘೋಷಣೆ!
ಧಾರವಾಡದಲ್ಲಿ ಪ್ರತಿಭಟಿಸುತ್ತಿರುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗಾಗಿ, ಮುಂಬರುವ ನೇಮಕಾತಿಗಳಲ್ಲಿ ಗರಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸುವುದಾಗಿ ಘೋಷಿಸಿದ್ದಾರೆ.