MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗದ ಪ್ರಯಾಣಿಕರ ದಟ್ಟಣೆಗೆ ಕೊನೆಗೂ ಮುಕ್ತಿ ಭಾಗ್ಯ, ಶೀಘ್ರವೇ 3 ಹೊಸ ರೈಲು ಸೇರ್ಪಡೆ

ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗದ ಪ್ರಯಾಣಿಕರ ದಟ್ಟಣೆಗೆ ಕೊನೆಗೂ ಮುಕ್ತಿ ಭಾಗ್ಯ, ಶೀಘ್ರವೇ 3 ಹೊಸ ರೈಲು ಸೇರ್ಪಡೆ

ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು, ಮೇ-ಜೂನ್ ಅಂತ್ಯದೊಳಗೆ ಮೂರು ಹೊಸ ರೈಲುಗಳು ಸೇರ್ಪಡೆಯಾಗಲಿವೆ. ಟಿಟಾಗರ್ ಕಂಪನಿಯಿಂದ ನಿರ್ಮಿತವಾದ ಈ ರೈಲುಗಳು, ಪರೀಕ್ಷಾರ್ಥ ಓಡಾಟದ ನಂತರ ಸೇವೆಗೆ ಲಭ್ಯವಾಗಲಿದೆ.

2 Min read
Author : Gowthami K
Published : Feb 24 2026, 05:33 PM IST
Share this Photo Gallery
  • FB
  • TW
  • Linkdin
  • Whatsapp
16
ನೇರಳೆ ಮತ್ತು ಹಸಿರು ಮಾರ್ಗಗಳಿಗೆ ಶೀಘ್ರದಲ್ಲೇ 3 ಹೊಸ ಮೆಟ್ರೋ ರೈಲು
Image Credit : X

ನೇರಳೆ ಮತ್ತು ಹಸಿರು ಮಾರ್ಗಗಳಿಗೆ ಶೀಘ್ರದಲ್ಲೇ 3 ಹೊಸ ಮೆಟ್ರೋ ರೈಲು

ಬೆಂಗಳೂರು: ಪೀಕ್ ಅವರ್ ವೇಳೆಯಲ್ಲಿ ಪ್ರಯಾಣಿಕರ ದಟ್ಟಣೆಯಿಂದ ದಿನನಿತ್ಯ ಹತಾಶೆ ಅನುಭವಿಸುತ್ತಿರುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ಸ್ವಲ್ಪ ನಿರಾಳತೆ ಸಿಗುವ ನಿರೀಕ್ಷೆಯಿದೆ. ನೇರಳೆ (ಪರ್ಪಲ್) ಮತ್ತು ಹಸಿರು (ಗ್ರೀನ್) ಮಾರ್ಗಗಳಿಗೆ ಶೀಘ್ರದಲ್ಲೇ ಮೂರು ಹೊಸ ಮೆಟ್ರೋ ರೈಲುಗಳು ಸೇರ್ಪಡೆಯಾಗಲಿವೆ. ಮೇ–ಜೂನ್ ಅಂತ್ಯದೊಳಗೆ ಈ ರೈಲುಗಳು ಸೇವೆಗೆ ಸೇರುವ ಸಾಧ್ಯತೆ ಇದೆ.

ಪ್ರಸ್ತುತ ಪೀಕ್ ಸಮಯದಲ್ಲಿ ನೇರಳೆ ಮತ್ತು ಹಸಿರು ಮಾರ್ಗದ ರೈಲುಗಳು ಪ್ರಯಾಣಿರ ಜಂಗುಳಿ ತುಂಬಿರುವುದು ಸಾಮಾನ್ಯವಾಗಿದೆ. ಅನೇಕ ಪ್ರಯಾಣಿಕರು ಹತ್ತಲು ಜಾಗ ಸಿಗದೆ ಒಂದೆರಡು ರೈಲುಗಳನ್ನು ಬಿಟ್ಟು ನಂತರ ಬರುವ ರೈಲುಗಳನ್ನು ಹತ್ತುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮೂರು ಹೊಸ ರೈಲುಗಳು ಸೇರ್ಪಡೆಯಾದರೆ, ಕನಿಷ್ಠ ಮಟ್ಟದಲ್ಲಾದರೂ ಜನದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

26
ಟಿಟಾಗರ್ ನಿರ್ಮಿತ ಹೊಸ ರೈಲುಗಳು
Image Credit : Asianet News

ಟಿಟಾಗರ್ ನಿರ್ಮಿತ ಹೊಸ ರೈಲುಗಳು

ಈ ಹೊಸ ಮೆಟ್ರೋ ರೈಲುಗಳನ್ನು Titagarh Rail Systems Limited (TRSL) ನಿರ್ಮಿಸಿದೆ. ತಿಂಗಳುಗಳ ವಿಳಂಬದ ಬಳಿಕ, ಫೆಬ್ರವರಿ 18ರಂದು ಕಂಪನಿಯು ತನ್ನ ಮೊದಲ ಡಿಟಿಜಿ (DTG) ರೈಲನ್ನು ರವಾನಿಸಿದೆ. ಈ ರೈಲು ಫೆಬ್ರವರಿ ಅಂತ್ಯದ ವೇಳೆಗೆ ಪೀಣ್ಯ ಡಿಪೋಗೆ ತಲುಪುವ ಸಾಧ್ಯತೆ ಇದೆ.

ಪೀಣ್ಯ ಡಿಪೋಗೆ ಬಂದ ನಂತರ, ಆರು ಬೋಗಿಗಳನ್ನು ಜೋಡಿಸಿ ಸಂಪೂರ್ಣ ರೈಲಾಗಿ ರೂಪಿಸಲಾಗುತ್ತದೆ. ಬಳಿಕ ಸ್ಥಿರ ಪರೀಕ್ಷೆಗಳು, ವಿದ್ಯುತ್ ಸರ್ಕ್ಯೂಟ್ ಪರೀಕ್ಷೆಗಳು ಹಾಗೂ ರಾತ್ರಿ ವೇಳೆಯಲ್ಲಿ ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್ ಪ್ರಯೋಗಾತ್ಮಕ ಓಟಗಳನ್ನು ನಡೆಸಲಾಗುತ್ತದೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕವೇ ವಾಣಿಜ್ಯ ಸೇವೆಗೆ ಅನುಮತಿ ದೊರೆಯಲಿದೆ.

Related Articles

Related image1
ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?
Related image2
ಬೆಂಗಳೂರಲ್ಲೂ ಹಳಿ ತಪ್ಪಿದ ನಮ್ಮ ಮೆಟ್ರೋ 'ಡ್ರೈವರ್‌ಲೆಸ್' ರೈಲು; ಘಟನೆಯ ತನಿಖೆಗೆ ಸಮಿತಿ ರಚಿಸಿದ ಬಿಎಂಆರ್‌ಸಿಎಲ್!
36
ಒಪ್ಪಂದ ಮತ್ತು ಹಿನ್ನೆಲೆ
Image Credit : Wikipedia

ಒಪ್ಪಂದ ಮತ್ತು ಹಿನ್ನೆಲೆ

2019ರಲ್ಲಿ, ಚೀನಾದ ಸರ್ಕಾರಿ ಸ್ವಾಮ್ಯದ CRRC Nanjing Puzhen ಸಂಸ್ಥೆ 36 ಮೆಟ್ರೋ ರೈಲುಗಳನ್ನು ಪೂರೈಸಲು ₹1,578 ಕೋಟಿ ಮೌಲ್ಯದ ಒಪ್ಪಂದವನ್ನು ಪಡೆದಿತ್ತು. ಈ ಪೈಕಿ, ಹಳದಿ ಮಾರ್ಗಕ್ಕೆ 15 ಹಾಗೂ ನೇರಳೆ ಮತ್ತು ಹಸಿರು ಮಾರ್ಗಗಳಿಗೆ 21 ರೈಲುಗಳನ್ನು ಒದಗಿಸುವ ಹೊಣೆಗಾರಿಕೆ ಇತ್ತು. ಆರಂಭದಲ್ಲಿ ಚೀನಾದಲ್ಲಿ ತಯಾರಾದ ಎರಡು ಮೂಲಮಾದರಿ ರೈಲುಗಳನ್ನು ಮಾತ್ರ ಪೂರೈಸಲಾಗಿತ್ತು.

ಉಳಿದ 34 ರೈಲುಗಳ ತಯಾರಿಕೆಯನ್ನು ಸಂಸ್ಥೆಯ ಭಾರತೀಯ ಪಾಲುದಾರ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಕೈಗೆತ್ತಿಕೊಂಡಿತು. ಇದುವರೆಗೆ ಹಳದಿ ಮಾರ್ಗಕ್ಕೆ ಸಂಬಂಧಿಸಿದಂತೆ 8 ರೈಲುಗಳನ್ನು ಮಾತ್ರ ಪೂರೈಸಲಾಗಿದೆ. ಫೆಬ್ರವರಿ 18ರಂದು ರವಾನಿಸಿದ ರೈಲು, ನೇರಳೆ ಮತ್ತು ಹಸಿರು ಮಾರ್ಗಗಳಿಗೆ ಬರುವ 20 ರೈಲುಗಳಲ್ಲಿ ಮೊದಲನೆಯದಾಗಿದೆ.

46
ಸಿಗ್ನಲಿಂಗ್ ಮತ್ತು ಸುರಕ್ಷತಾ ಪರೀಕ್ಷೆಗಳು
Image Credit : our own

ಸಿಗ್ನಲಿಂಗ್ ಮತ್ತು ಸುರಕ್ಷತಾ ಪರೀಕ್ಷೆಗಳು

ಹಳದಿ ಮಾರ್ಗದ ರೈಲುಗಳು ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (CBTC) ಮೇಲೆ ಕಾರ್ಯನಿರ್ವಹಿಸಲಿದ್ದು, ಚಾಲಕರಹಿತ ಸಂಚಾರಕ್ಕೆ ಅವಕಾಶ ನೀಡುತ್ತವೆ. ಆದರೆ ನೇರಳೆ ಮತ್ತು ಹಸಿರು ಮಾರ್ಗದ ರೈಲುಗಳು ಡಿಟಿಜಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಂಚರಿಸಲಿದ್ದು, ಇದಕ್ಕೆ ಲೋಕೋಪೈಲಟ್‌ಗಳ ಅಗತ್ಯವಿರುತ್ತದೆ.

ಜನವರಿ 2025ರಲ್ಲೇ ಪರ್ಪಲ್ ಲೈನ್ ಮೂಲಮಾದರಿ ರೈಲು ದೊರೆತಿದ್ದರೂ, ವಾಣಿಜ್ಯ ಸೇವೆಗೆ ಅಗತ್ಯವಿರುವ ಎಲ್ಲಾ 37 ಶಾಸನಬದ್ಧ ಅನುಮತಿಗಳು ಇನ್ನೂ ದೊರಕಿಲ್ಲ. ಪ್ರಸ್ತುತ ಸಿಗ್ನಲಿಂಗ್ ಸಾಫ್ಟ್‌ವೇರ್ ಪರೀಕ್ಷೆ ನಡೆಯುತ್ತಿದ್ದು, ಹೊಸ ಆವೃತ್ತಿಯನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಹು ರೈಲು (ಡಿಕ್ಕಿ ವಿರೋಧಿ) ಪರೀಕ್ಷೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಸುರಕ್ಷತಾ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

56
ಮೇ ಜೂನ್ ವೇಳೆಗೆ ಪರಿಹಾರ?
Image Credit : our own

ಮೇ ಜೂನ್ ವೇಳೆಗೆ ಪರಿಹಾರ?

ಟಿಟಾಗರ್ ಸಂಸ್ಥೆ ಮಾರ್ಚ್ ಅಂತ್ಯದೊಳಗೆ ಮೂರನೇ ಡಿಟಿಜಿ ರೈಲನ್ನು ಪೂರೈಸುವ ನಿರೀಕ್ಷೆಯಿದೆ. ಬಳಿಕ ಉಳಿದ ಸಿಬಿಟಿಸಿ ರೈಲುಗಳನ್ನು ಹಳದಿ ಮಾರ್ಗಕ್ಕೆ ಮತ್ತು ಅಂತಿಮವಾಗಿ ಇನ್ನೂ 18 ರೈಲುಗಳನ್ನು ನೇರಳೆ ಹಾಗೂ ಹಸಿರು ಮಾರ್ಗಗಳಿಗೆ ಕಳುಹಿಸುವ ಯೋಜನೆ ಇದೆ.

ಕಾರ್ಯಾಚರಣಾ ಅಗತ್ಯತೆಗಳನ್ನು ಅವಲಂಬಿಸಿ, ಮೇ–ಜೂನ್ ವೇಳೆಗೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕನಿಷ್ಠ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ಸ್ವಲ್ಪ ಮಟ್ಟಿಗೆ ಇಳಿಯಲಿದೆ ಎಂದು ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

66
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಒಟ್ಟು 57 ರೈಲುಗಳು
Image Credit : our own

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಒಟ್ಟು 57 ರೈಲುಗಳು

ಪ್ರಸ್ತುತ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಒಟ್ಟು 57 ರೈಲುಗಳು ಕಾರ್ಯನಿರ್ವಹಿಸುತ್ತಿದ್ದರೂ, ವಾರದ ದಿನಗಳಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ ಈಗಾಗಲೇ 10 ಲಕ್ಷದ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ, ಹೊಸ ರೈಲುಗಳ ಸೇರ್ಪಡೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಹುಕಾಲದ ನಿರೀಕ್ಷಿತ ನೆಮ್ಮದಿಯನ್ನು ನೀಡಲಿದೆ ಎಂಬ ಆಶಾಭಾವನೆ ಮೂಡಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಿಎಂಆರ್‌ಸಿಎಲ್
ನಮ್ಮ ಮೆಟ್ರೋ
ಬೆಂಗಳೂರು
ಮೆಟ್ರೊ ರೈಲು

Latest Videos
Recommended Stories
Recommended image1
ತುಮಕೂರು: ನವದಂಪತಿ ದೇವಾಲಯ ಪ್ರವೇಶಿಸಿದ್ದಕ್ಕೆ ಮೈ ಮೇಲೆ ದೇವರು ಬಂದಂತೆ ನಟಿಸಿ ಜಾತಿ ನಿಂದನೆ, ನ್ಯಾಯಕೊಡಿಸಿದ ತಹಶೀಲ್ದಾರ್ ಅಹಮದ್
Recommended image2
ಕಟ್ಟೆ ನಾಗನ ಕಾಮಪುರಾಣ, ಹೆಂಡತಿ ಸೌಮ್ಯಾಳ ಮುಂದೆ ಅನಾವರಣ; ಸೆಲ್ಫಿ ವಿಡಿಯೋ ಮಾಡಿಟ್ಟು ಪ್ರಾಣಬಿಟ್ಟ ಚೇತನ!
Recommended image3
ಪ್ರತ್ಯೇಕ ಪ್ರಕರಣ: ಕೆರೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಶವ ಪತ್ತೆ; ಅಪಘಾತದಲ್ಲಿ ಬೈಕ್ ಸವಾರ ಸಾವು
Related Stories
Recommended image1
ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?
Recommended image2
ಬೆಂಗಳೂರಲ್ಲೂ ಹಳಿ ತಪ್ಪಿದ ನಮ್ಮ ಮೆಟ್ರೋ 'ಡ್ರೈವರ್‌ಲೆಸ್' ರೈಲು; ಘಟನೆಯ ತನಿಖೆಗೆ ಸಮಿತಿ ರಚಿಸಿದ ಬಿಎಂಆರ್‌ಸಿಎಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved