ಗೊಂಡಾ–ಗೋರಖ್ಪುರ ವಿಭಾಗದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕಾಮಗಾರಿಯಿಂದಾಗಿ, ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (12592) ರೈಲಿನ ಮಾರ್ಗವನ್ನು ಮಾರ್ಚ್ 2 ಮತ್ತು 9 ರಂದು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. 

ಬೆಂಗಳೂರು: ಗೊಂಡಾ–ಗೋರಖ್ಪುರ ವಿಭಾಗದಲ್ಲಿ ನಡೆಯುತ್ತಿರುವ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆ, ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12592) ನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.

Add Asianetnews Kannada as a Preferred SourcegooglePreferred

ರೈಲ್ವೆ ಪ್ರಕಟಣೆಯ ಪ್ರಕಾರ, ಮಾರ್ಚ್ 2 ಹಾಗೂ ಮಾರ್ಚ್ 9ರಂದು ಯಶವಂತಪುರದಿಂದ ಹೊರಡುವ ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು, ತನ್ನ ನಿಯಮಿತ ಮಾರ್ಗ ಬದಲಾಗಿ ಗೊಂಡಾ ಜಂಕ್ಷನ್, ಬರ್ಹ್ನಿ ಮತ್ತು ಗೋರಖ್ಪುರ ಜಂಕ್ಷನ್ ಮಾರ್ಗವಾಗಿ ಸಂಚರಿಸಲಿವೆ. 

ಈ ನಿಲ್ದಾಣದಲ್ಲಿ ರೈಲು ನಿಲುಗಡೆ ಇಲ್ಲ

ಈ ಮಾರ್ಗ ಬದಲಾವಣೆಯ ಪರಿಣಾಮವಾಗಿ, ಸಾಮಾನ್ಯವಾಗಿ ನಿಗದಿತ ನಿಲ್ದಾಣಗಳಾಗಿರುವ ಮಂಕಾಪುರ ಜಂಕ್ಷನ್ ಹಾಗೂ ಓರ್ವಾರಾ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಂಜಿನಿಯರಿಂಗ್ ಕಾಮಗಾರಿಗಳು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ರೈಲ್ವೆಯ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದ್ದು, ಮಾರ್ಗ ಬದಲಾವಣೆಯಿಂದ ಉಂಟಾಗುವ ಅಸೌಕರ್ಯಕ್ಕೆ ರೈಲ್ವೆ ಇಲಾಖೆಯು ವಿಷಾದ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ, ರೈಲು ತನ್ನ ಮೂಲ ಮಾರ್ಗದಲ್ಲಿ ಸಂಚರಿಸಲಿದೆ.

ಯಾವೆಲ್ಲ ಊರು ಹಾದು ಹೋಗುತ್ತದೆ?

ಈ ರೈಲು ವಾರಕ್ಕೆ ಒಮ್ಮೆ ಸೇವೆ ಒದಗಿಸುತ್ತಿದ್ದು, ಯಶವಂತಪುರ, ಹಿಂದೂಪುರ, ಧರ್ಮಾವರಂ, ಗುಂತಕಲ್, ಮಂತ್ರಾಲಯಂ ರಸ್ತೆ, ರಾಯಚೂರು, ಸಿಕಂದರಾಬಾದ್, ಕಾಜಿಪೇಟ್, ಸಿರ್ಪುರ್ ಕಾಗಜ್‌ನಗರ, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಭೋಪಾಲ್, ಝಾನ್ಸಿ, ಗೋಖ್‌ಪುರ ಸೆಂಟ್ರಲ್‌ನಲ್ಲಿ ಹಾದು ಹೋಗುತ್ತದೆ. ಒಟ್ಟು 3 ದಿನಗಳ ಕಾಲ ಸಂಚರಿಸಿ ಗೋರಖ್ಪುರ ತಲುಪುತ್ತದೆ. ಸುಮಾರು 2,535 ಕಿ.ಮೀ ದೂರ ಸಂಚಾರ ಇದ್ದು, ಸುಮಾರು 46 ಗಂಟೆಗಳ ಪ್ರಯಾಣ ಇರಲಿದೆ.