ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ, ಕಾಫಿ ತೋಟದಲ್ಲಿ ಕಾಣಿಸಿಕೊಂಡ ದೊಡ್ಡ ಗಾತ್ರದ ನಾಗರ ಹಾವನ್ನು ಯಶಸ್ವಿಯಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
Karnataka News Live: ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಐಎಸಿಸಿ ಅಧ್ಯಕ್ಷರ ಸಮಕ್ಷಮದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸಹೋದರರ ಇಬ್ಬರ ತಲೆ ಮೇಲೆ ಸಿದ್ದರಾಮಯ್ಯ ಕೈ ಇಟ್ಟು ಎರಡೂವರೆ ವರ್ಷಗಳು ತುಂಬಿದ ಮೇಲೆ ಸಿಎಂ ಸ್ಥಾನ ಬಿಟ್ಟು ಕೊಡುವೆನೆಂದು ವಚನ ಕೊಟ್ಟಿದ್ದು, ಆ ಸಂದರ್ಭದಲ್ಲಿ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಆದರೆ, ಈ ಬಗ್ಗೆ ಯಾರೊಬ್ಬರೂ ಈಗ ಬಾಯಿ ಬಿಡುತ್ತಿಲ್ಲ. ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರು
Karnataka News Live 23 November 2025ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ
Karnataka News Live 23 November 2025ನಾಯಕತ್ವ ಬದಲಾವಣೆ ಕ್ಲಾರಿಟಿ ಬಯಸಿದ ಡಿಕೆಶಿ, ಜಾರ್ಜ್‌ಗೆ ಟಾಸ್ಕ್ ನೀಡಿ ತೆರೆ ಹಿಂದೆ ಸರಿಯಿತಾ ಹೈಕಮಾಂಡ್?
ನಾಯಕತ್ವ ಬದಲಾವಣೆ ಸ್ಪಷ್ಟತೆ ಬಯಸಿದ ಡಿಕೆಶಿ, ಜಾರ್ಜ್‌ಗೆ ಟಾಸ್ಕ್ ನೀಡಿ ತೆರೆ ಹಿಂದೆ ಸರಿಯಿತಾ ಹೈಕಮಾಂಡ್?, ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ರಣತಂತ್ರ ಬದಲಾಗಿದೆ. ಆದರೆ ಡಿಕೆಶಿ ಪಟ್ಟು ಬಿಗಿ ಗೊಳಿಸಿದ್ದಾರೆ.
Karnataka News Live 23 November 2025ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧ - ಸಿಎಂ ಸಿದ್ದರಾಮಯ್ಯ
ಮೀನುಗಾರರ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯ ಮೇಳ’ ಉದ್ಘಾಟಿಸಿ ಸಿದ್ದರಾಮಯ್ಯ ಹೇಳಿದರು.
Karnataka News Live 23 November 2025ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣ, ಪೊಲೀಸ್ ಪೇದೆ ಅಣ್ಣಪ್ಪ ನಾಯಕ್ ಅಮಾನತು
ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣ, ಪೊಲೀಸ್ ಪೇದೆ ಅಣ್ಣಪ್ಪ ನಾಯಕ್ ಅಮಾನತು, ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಆರೋಪಿ ಅಣ್ಣಪ್ಪ ಇದೀಗ ಪೊಲೀಸ್ ಕಸ್ಚಡಿಯಲ್ಲಿದ್ದಾನೆ. ಇತ್ತ ಈತನ ಕೆಲಸವೂ ಹೋಗಿದೆ.
Karnataka News Live 23 November 2025ಕೋರ್ಟ್‌ಗಳಲ್ಲಿ 61000 ನೀರಾವರಿ ಕೇಸ್, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತನಿಖೆ - ಡಿಕೆಶಿ ಹೇಳಿದ್ದೇನು?
ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬ ಮಾಡಿ, ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಕುರಿತಂತೆ ತನಿಖೆ ನಡೆಸಲು ನಿರ್ಧರಿಸಲಾಗಿದೆ.
Karnataka News Live 23 November 2025ಡಿಸೆಂಬರ್ 5ರಿಂದ ಲಾಕ್‌ಡೌನ್ ಕನ್ಫರ್ಮ್.. ಆದ್ರೆ ಅದಕ್ಕೂ ಮುನ್ನ ಕಾದಿದೆ ಒಂದು ಸಖತ್ ಸರ್ಪ್ರೈಸ್!
ಡಿಸೆಂಬರ್ 5 ರಿಂದ ಲಾಕ್‌ಡೌನ್ ಎಂಬ ಘೋಷಣೆ ಇತ್ತೀಚೆಗೆ ಹೊರಬಿದ್ದಿದ್ದು, ಇದೀಗ ಅದರ ಬಗ್ಗೆ ಮತ್ತೊಂದು ಸಖತ್ ಅಪ್‌ಡೇಟ್ ವೈರಲ್ ಆಗಿದೆ. ಲಾಕ್‌ಡೌನ್ ಚಿತ್ರಕ್ಕೆ ಸಿಕ್ಕಿರುವ ಅಂತರರಾಷ್ಟ್ರೀಯ ಮನ್ನಣೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.
Karnataka News Live 23 November 2025ಇಟಲಿಯಲ್ಲಿ ಆ ಪ್ರಶಸ್ತಿ ಗೆದ್ದ ನಟ ಅಜಿತ್ ಕುಮಾರ್.. ಸಿನಿಮಾದಾಚೆಗೂ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಸ್ಟಾರ್!
ತಮಿಳು ಚಿತ್ರರಂಗದಲ್ಲಿ ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು ನಟ ಅಜಿತ್ ಕುಮಾರ್. ಇಟಲಿಯ ವೆನಿಸ್ ನಗರದಲ್ಲಿ 'ಜೆಂಟಲ್‌ಮನ್ ಡ್ರೈವರ್' ಪ್ರಶಸ್ತಿ ಪಡೆದ ಅಜಿತ್ ಕುಮಾರ್‌ಗೆ ಅಭಿಮಾನಿಗಳು ಅಭಿನಂದನೆಗಳ ಮಳೆ ಸುರಿಸುತ್ತಿದ್ದಾರೆ.
Karnataka News Live 23 November 2025ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಸಾವು
ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಸಾವು , ಹಳಿ ದಾಟುವ ಪ್ರಯತ್ನದಲ್ಲಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ. ಸ್ಥಳದಲ್ಲೆ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
Karnataka News Live 23 November 2025ನಮ್ಮೆಲ್ಲರ ಒಳ್ಳೆಯ ಕೆಲಸಗಳಲ್ಲಿ ಸತ್ಯ ಸಾಯಿ ಬಾಬಾ ಇದ್ದಾರೆ - ಸದ್ಗುರು ಶ್ರೀ ಮಧುಸೂದನ ಸಾಯಿ
ಸತ್ಯ ಸಾಯಿ ಗ್ರಾಮದಲ್ಲಿ ನಡೆದ ನೂರು ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ವು 400 ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಸಂಪನ್ನವಾಯಿತು.
Karnataka News Live 23 November 2025ರಾಜ್ಯ ಸರ್ಕಾರ ಹಿಂದುಳಿದ ವರ್ಗ, ರೈತ ವಿರೋಧಿ - ಸಂಸದ ಬಸವರಾಜ ಬೊಮ್ಮಾಯಿ ಕಿಡಿ
ರೈತರ ಬೀಜ, ಗೊಬ್ಬರಕ್ಕಾಗಿ ₹10 ಸಾವಿರ ಹಣ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಗೂ ರೈತ ವಿರೋಧಿ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
Karnataka News Live 23 November 202555 ಸಾವಿರ ಕೋಟಿ ಪಂಚ ಗ್ಯಾರಂಟಿ ಯೋಜನೆಗೆ ಬಳಕೆ - ಸಚಿವ ಎನ್.ಎಸ್.ಬೋಸರಾಜು
ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ‘ಪಂಚ ಗ್ಯಾರಂಟಿ’ ಅನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.
Karnataka News Live 23 November 2025ಹುಟ್ಟುಹಬ್ಬ ಸಂಭ್ರಮದಲ್ಲಿ Bigg Boss ಅಶ್ವಿನಿ ಗೌಡ - ವಯಸ್ಸೆಷ್ಟು? ನಟಿಯ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ
Karnataka News Live 23 November 2025ಒಟ್ಟಿಗೆ ಕಾಣಿಸಿಕೊಂಡ ಭಾಯ್‌ಜಾನ್-ಕಿಂಗ್‌ಖಾನ್ - ಸಲ್ಮಾನ್-ಶಾರುಖ್ ವೈರಲ್ ಫೋಟೋಗೆ ಕಾಮೆಂಟ್‌ಗಳ ಸುರಿಮಳೆ
ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಅಬುಧಾಬಿಯ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದೀಗ ಇಬ್ಬರು ಸ್ಟಾರ್‌ಗಳ ಸ್ನೇಹ ಮತ್ತು ಅವರ ಮುಂಬರುವ 'ಕಿಂಗ್' ಮತ್ತು 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರಗಳು ಅಭಿಮಾನಿಗಳಿಗೆ ವಿಶೇಷವಾಗಿವೆ.
Karnataka News Live 23 November 2025ಕೊನೆಗೂ ರಿವೀಲ್ ಆಯ್ತು ಅಲ್ಲು ಅರ್ಜುನ್ 800 ಕೋಟಿಯ AA22xA06 ಚಿತ್ರದ ಫೈನಲ್ ಕಾಸ್ಟ್ - ಯಾರ್ಯಾರಿದ್ದಾರೆ?
ಪುಷ್ಪ 2 ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅವರ ಪುಷ್ಪ 3 ಚಿತ್ರವನ್ನೂ ಘೋಷಿಸಲಾಗಿದೆ. ಈ ನಡುವೆ, ಅವರ ಬಹುನಿರೀಕ್ಷಿತ ಚಿತ್ರ AA22xA06 ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.
Karnataka News Live 23 November 2025ಪುಟ್ಟಕ್ಕನ ಮಕ್ಕಳು- Bigg Boss ಮಂಜು ಭಾಷಿಣಿ ಕೊನೆಯ ದಿನದ ಶೂಟಿಂಗ್ - ಉಮಾಶ್ರೀ ಕಣ್ಣೀರು- ವಿಡಿಯೋ ವೈರಲ್
Karnataka News Live 23 November 2025ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ ಬಂಡೀಪುರ - ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಕಾರಣ?
ಕಾಡಂಚಿನ ಗ್ರಾಮದಲ್ಲಿ ಹುಲಿ ದಾಳಿಗೆ ರೈತರ ಬಲಿ ಹಿನ್ನಲೆ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ನಿಷೇಧಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ. 15 ದಿನಗಳಿಂದ ಸಫಾರಿ ಕೇಂದ್ರ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.
Karnataka News Live 23 November 2025ಹಿಸಾರ್ ಕೋಟೆಯ ಇತಿಹಾಸ.. ಹರಿಯಾಣದಲ್ಲಿರುವ ಫಿರೋಜ್ ಷಾ ಅರಮನೆ ಬಗ್ಗೆ ನಿಮಗೆ ಗೊತ್ತೇ?
ಫಿರೋಜ್ ಷಾ ಅರಮನೆ ಸಂಕೀರ್ಣ ಭಾರತದ ಹರಿಯಾಣ ರಾಜ್ಯದ ಆಧುನಿಕ ಹಿಸಾರ್‌ನಲ್ಲಿರುವ ಒಂದು ಪುರಾತತ್ವ ಸಂಕೀರ್ಣವಾಗಿದ್ದು, ಇದನ್ನು ಕ್ರಿ.ಶ. 1354ರಲ್ಲಿ ದೆಹಲಿ ಸುಲ್ತಾನರ ಫಿರೋಜ್ ಷಾ ತುಘಲಕ್ ನಿರ್ಮಿಸಿದನು.
Karnataka News Live 23 November 2025ಕಾಂಗ್ರೆಸ್‌ನಲ್ಲಿ ಯಾವ ಬಣಗಳೂ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ - ಸಚಿವ ಸಂತೋಷ್ ಲಾಡ್
ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣಗಳೂ ಇಲ್ಲ. ಕಾಂಗ್ರೆಸ್ ಪಕ್ಷ ಒಂದೇ ಬಣ, ಆ ಬಣ, ಈ ಬಣ ಎಂಬುವುದು ಇಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾರೆಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದರು.
Karnataka News Live 23 November 2025ಇದು ಲೇಟೆಸ್ಟ್ ಫ್ಯಾಷನ್ ಕಣ್ರೀ - ಜೀವಂತ ಇಲಿ- ಕೋಳಿಮರಿಗಳೇ ಇವರ ಡ್ರೆಸ್; ವಿಡಿಯೋ ನೋಡಿದ್ರೆ ಸುಸ್ತಾಗ್ತೀರಾ!
Karnataka News Live 23 November 2025ಕರ್ನಾಟಕ ಕೇರಳ ಗಡಿ ಬಂದ್‌ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್, ಕನ್ನಡಿಗರ ಪರ ಹೋರಾಟ
ಕರ್ನಾಟಕ ಕೇರಳ ಗಡಿ ಬಂದ್‌ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್, ಕನ್ನಡಿಗರ ಪರ ಹೋರಾಟ, ಕರ್ನಾಟಕ ಗಡಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ಮಲೆಯಾಳಿ ಮಾಡಲಾಗುತ್ತಿದೆ ಎಂದು ವಾಟಾಳ್ ಹೇಳಿದ್ದಾರೆ. ಬಂದ್ ದಿನಾಂಕ ಘೋಷಿಸಿದ್ದಾರೆ.