11:35 PM (IST) Jul 22

Karnataka News Live 22 July 2026 ಯೆಲ್ಲೋ ಅಲರ್ಟ್, ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಯೆಲ್ಲೋ ಅಲರ್ಟ್ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಜುಲೈ 23 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಈ ಆದೇಶವು ಅಂಗನವಾಡಿಯಿಂದ ಪಿಯುಸಿ ವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಲಿದೆ.

Read Full Story
10:41 PM (IST) Jul 22

Karnataka News Live 22 July 2026 Nepal - ಯು-ಟರ್ನ್ ಹೊಡೆದ ನೇಪಾಳದ ಪ್ರಧಾನಿ ಬಾಲೆನ್ ಶಾ - ಭಾರತಕ್ಕೆ ಬಂತು ಬಿಗ್‌ ಮೆಸೇಜ್‌!

ಕೇವಲ 100 ದಿನಗಳು ಕಳೆಯುವುದರೊಳಗೆ ಕಠ್ಮಂಡುವಿನ ಅರಮನೆಯಲ್ಲಿ ಭಾರಿ ಸಸ್ಪೆನ್ಸ್ ಒಂದಕ್ಕೆ ತೆರೆಬಿದ್ದಿದೆ. ತಾನು ವಿಧಿಸಿಕೊಂಡಿದ್ದ ನಿಯಮವನ್ನು ತಾನೇ ಗಾಳಿಗೆ ತೂರಿ, ಬಾಲೆನ್ ಶಾ ಏಕಾಏಕಿ ದೊಡ್ಡ ಯು-ಟರ್ನ್ ಹೊಡೆದಿದ್ದಾರೆ. ಅದೇನು ಎಂದು ನೋಡೋಣ ಬನ್ನಿ!

Read Full Story
09:51 PM (IST) Jul 22

Karnataka News Live 22 July 2026 Bhatkal - ಆನಂದ ಆಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ Business Day 2026 ಸಂಭ್ರಮ

ಭಟ್ಕಳದ ಆನಂದ ಆಶ್ರಮ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಉದ್ಯಮಶೀಲತೆ ಮತ್ತು ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು 'ಬಿಸಿನೆಸ್ ಡೇ 2026' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Read Full Story
09:18 PM (IST) Jul 22

Karnataka News Live 22 July 2026 Bantwal - ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಶಾಲಾ ಬಸ್‌ ಮೇಲೆ ಉರುಳಿದ ಬೃಹತ್ ಮರ; 6 ವರ್ಷದ ವಿದ್ಯಾರ್ಥಿನಿ ಸಾವು

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ಶಾಲಾ ಬಸ್ಸಿನ ಮೇಲೆ ಉರುಳಿಬಿದ್ದಿದೆ. ಈ ಭೀಕರ ದುರಂತದಲ್ಲಿ 6 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದು, ಹಲವು ಮಕ್ಕಳು ಗಾಯಗೊಂಡಿದ್ದಾರೆ.

Read Full Story
08:19 PM (IST) Jul 22

Karnataka News Live 22 July 2026 NEET ಗೊಂದಲ, ಭೀಕರ ಲಾಠಿಚಾರ್ಜ್; ಕೇಂದ್ರದ ವಿರುದ್ಧ ಪ್ರತಿಪಕ್ಷಗಳಿಂದ 267ರ ಬ್ರಹ್ಮಾಸ್ತ್ರ ಪ್ರಹಾರ!

ಇತ್ತೀಚೆಗೆ ಸಂಸತ್ತಿನಲ್ಲಿ ನೀಟ್ ಅಕ್ರಮ ಮತ್ತು ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ವಿಪಕ್ಷಗಳು 'ನಿಯಮ 267' ಅಡಿ ಚರ್ಚೆಗೆ ಪಟ್ಟುಹಿಡಿದು ಗದ್ದಲ ಸೃಷ್ಟಿಸಿದವು. ಏನಿದು ನಿಯಮ ಎನ್ನುವುದನ್ನು ನೋಡೋಣ ಬನ್ನಿ.

Read Full Story
08:16 PM (IST) Jul 22

Karnataka News Live 22 July 2026 'ಸರ್ಕಾರಿ ನ್ಯಾಯಬೆಲೆ ಅಂಗಡಿ'ಯಲ್ಲಿ ರಾಗಿಣಿ.. ಜುಲೈ 31ರಂದು ಇಡೀ ಕರ್ನಾಟಕದಲ್ಲಿ 'ಪಾರ್ವತಿ' ಆಗಮನ!

'ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮೊದಲ ಬಾರಿಗೆ ಅಪ್ಪಟ ಹಳ್ಳಿ ಮಹಿಳೆಯ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಇಡೀ ಸಿನಿಮಾವನ್ನು ಗ್ರಾಮೀಣ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

Read Full Story
07:43 PM (IST) Jul 22

Karnataka News Live 22 July 2026 NMPA Recruitment 2026 - ನವ ಮಂಗಳೂರು ಬಂದರಿನಲ್ಲಿ ಉದ್ಯೋಗ; 2 ಲಕ್ಷದವರೆಗೆ ಸಂಬಳ

ಮಂಗಳೂರು ಪೋರ್ಟ್ ಅಥಾರಿಟಿ (NMPA) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 12 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹತೆ, ವೇತನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

Read Full Story
06:41 PM (IST) Jul 22

Karnataka News Live 22 July 2026 ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ದೇಶದಲ್ಲೇ ನಂ. 1 ರಾಜ್ಯ ಯಾವುದು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ!

ಕೆಲ ದತ್ತಾಂಶದ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಎಲ್‌ಪಿಜಿ ಗ್ರಾಹಕರನ್ನು ಹೊಂದಿರುವ ರಾಜ್ಯ ಯಾವುದು ಗೊತ್ತಾ? ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ನಂತರದ ಸ್ಥಾನಗಳಲ್ಲಿವೆ. 'ಪ್ರಧಾನ ಮಂತ್ರಿ ಉಜ್ವಲ ಯೋಜನೆ'ಯು ಉತ್ತರ ಪ್ರದೇಶದ ಈ ಅಗ್ರಸ್ಥಾನಕ್ಕೆ ಪ್ರಮುಖ ಕಾರಣವಾಗಿದೆ.

Read Full Story
06:38 PM (IST) Jul 22

Karnataka News Live 22 July 2026 ಬೈಯಪ್ಪನಹಳ್ಳಿ ರೋಟರಿ ಮೇಲ್ಸೇತುವೆ ಫ್ಯಾಬ್ರಿಕೇಷನ್ ಯಾರ್ಡ್ ಧ್ವಂಸಗೊಳಿಸಿದ SWR - ಸರ್ಕಾರ-ರೈಲ್ವೆ ನಡುವೆ ಮತ್ತೆ ಜಟಾಪಟಿ!

ಬೆಂಗಳೂರಿನ ಬೈಯಪ್ಪನಹಳ್ಳಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸ್ಥಾಪಿಸಲಾಗಿದ್ದ ಫ್ಯಾಬ್ರಿಕೇಷನ್ ಯಾರ್ಡ್ ಅನ್ನು ನೈಋತ್ಯ ರೈಲ್ವೆ ಇಲಾಖೆ ಧ್ವಂಸಗೊಳಿಸಿದೆ. ಈ ಕ್ರಮದಿಂದಾಗಿ ರಾಜ್ಯ ಸರ್ಕಾರಿ ಸಂಸ್ಥೆ ಬಿ-ಸ್ಮೈಲ್ ಮತ್ತು ರೈಲ್ವೆ ಇಲಾಖೆಯ ನಡುವೆ ಹೊಸ ಸಂಘರ್ಷ ಆರಂಭವಾಗಿದೆ.

Read Full Story
05:59 PM (IST) Jul 22

Karnataka News Live 22 July 2026 ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣ ಮತ್ತಷ್ಟು ದುಬಾರಿ - ಮೂರೇ ತಿಂಗಳಲ್ಲಿ ಎರಡನೇ ಬಾರಿ ಟೋಲ್ ದರ ಏರಿಕೆ!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕೇವಲ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಟೋಲ್ ದರವನ್ನು ಹೆಚ್ಚಿಸಿದೆ. ಕನಿಮಿನಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ಬಂದಿರುವ ಈ ಹೊಸ ದರ ಏರಿಕೆಯು ಕಾರುಗಳಿಂದ ಹಿಡಿದು ಭಾರಿ ವಾಹನಗಳವರೆಗೆ ಎಲ್ಲ ಸವಾರರ ಮೇಲೆ ಪರಿಣಾಮ ಬೀರಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story
05:42 PM (IST) Jul 22

Karnataka News Live 22 July 2026 ನಮ್ಮ ಮೆಟ್ರೋ ಪ್ರಯಾಣಿಕರ ಸುಲಿಗೆಗೆ BMRCL ಹೊಸ ಮಾರ್ಗ, ಬೆಂಗಳೂರು ಮೆಟ್ರೋ ದರ ಏರಿಕೆಗೆ ಪ್ರಸ್ತಾವನೆ!

ಬೆಂಗಳೂರಿನ 'ನಮ್ಮ ಮೆಟ್ರೋ' ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎರಡು ಭಿನ್ನ ಪ್ರಸ್ತಾವನೆಗಳು ಚರ್ಚೆಗೆ ಗ್ರಾಸವಾಗಿವೆ. ವಾರ್ಷಿಕ 5% ಹೆಚ್ಚಳದ ಹಳೆಯ ನಿಯಮ ಮತ್ತು ಪ್ರತಿ ಮೂರು ವರ್ಷಕ್ಕೊಮ್ಮೆ 12% ಹೆಚ್ಚಳದ ಹೊಸ ಡಿಪಿಆರ್ ಪ್ರಸ್ತಾವನೆಯ ನಡುವೆ ಗೊಂದಲ ಸೃಷ್ಟಿಯಾಗಿದೆ. ಆದರೆ, ಅಂತಿಮ ನಿರ್ಧಾರವು ದರ ನಿರ್ಧಾರ ಸಮಿತಿಯ ಶಿಫಾರಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
Read Full Story
05:32 PM (IST) Jul 22

Karnataka News Live 22 July 2026 'CID ವರದಿ ಟ್ರಾನ್ಸ್‌ಲೇಟ್‌ ಮಾಡಿದ್ದನ್ನ ಬಿಟ್ಟು ಮತ್ತೇನು ಮಾಡಿದ್ದೀರಿ..' ಧರ್ಮಸ್ಥಳ Soujanya Case ವಿಚಾರದಲ್ಲಿ ಸಿಬಿಐಗೆ ಸುಪ್ರೀಂ ಚಾಟಿ

ಧರ್ಮಸ್ಥಳದ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ. ಸಿಬಿಐ ತನಿಖೆಯ ವೈಫಲ್ಯವನ್ನು ತೀವ್ರವಾಗಿ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

Read Full Story
05:04 PM (IST) Jul 22

Karnataka News Live 22 July 2026 ಬೆಂಗಳೂರು ಬೀದಿಲಿ ಕಿತ್ತಾಡಿಕೊಂಡ ಬಿಜೆಪಿ-ಕಾಂಗ್ರೆಸ್, ಬಿಪಿ ಹರೀಶ್‌ಗೆ ಮೊಟ್ಟೆ ಎಸೆದ ಕಾರ್ಯಕರ್ತ! ಆರ್.ಅಶೋಕ್ ಬಂಧನ

ದೆಹಲಿಯ ನೀಟ್ ಪರೀಕ್ಷೆ ಅಕ್ರಮದ ಕಿಡಿ ಬೆಂಗಳೂರಿಗೂ ವ್ಯಾಪಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡೂ ಪಕ್ಷಗಳ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
Read Full Story
03:48 PM (IST) Jul 22

Karnataka News Live 22 July 2026 ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪಾ ಅಂತ ಕೇಳ್ತಿದ್ರು ತಾಯಿ, ಪರೋಕ್ಷವಾಗಿ ಪ್ರಜ್ವಲ್ ಪ್ರಕರಣ ಪ್ರಸ್ತಾಪಿಸಿದ HDK

ತಮ್ಮ ತಾಯಿ ಚೆನ್ನಮ್ಮ ಅವರ ಹಾಲು-ತುಪ್ಪ ಕಾರ್ಯದಲ್ಲಿ ಭಾವುಕರಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕುಟುಂಬದಲ್ಲಿ ನಡೆದ ಆಘಾತಕಾರಿ ಘಟನೆಗಳಿಂದಲೇ ಅವರು ತೀವ್ರ ಮಾನಸಿಕ ಯಾತನೆ ಅನುಭವಿಸಿ ನಿಧನರಾದರು ಎಂದು ಪರೋಕ್ಷವಾಗಿ ಉಲ್ಲೇಖಿಸಿದರು. ತಾಯಿಯ ಕೊನೆಯ ದಿನಗಳ ನೋವನ್ನು ಮತ್ತು ಅವರ ತಾಯ್ತನದ ಗುಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
Read Full Story
02:48 PM (IST) Jul 22

Karnataka News Live 22 July 2026 ಬೈಯಪ್ಪನಹಳ್ಳಿ ಮೇಲ್ಸೇತುವೆ - ಸರ್ಕಾರ-ರೈಲ್ವೆ ಸಂಘರ್ಷ, ಬಿ-ಸ್ಟೈಲ್ ತಾತ್ಕಾಲಿಕ ಶೆಡ್ ನೆಲಸಮ ಮಾಡಿದ ನೈಋತ್ಯ ರೈಲ್ವೆ!

ಬೆಂಗಳೂರಿನ ಬೈಯಪ್ಪನಹಳ್ಳಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಯೋಜನೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳನ್ನು ನೈಋತ್ಯ ರೈಲ್ವೆ ಇಲಾಖೆ ದಿಢೀರ್ ತೆರವುಗೊಳಿಸಿದ್ದು, ಇದು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವೆ ಹೊಸ ವಿವಾದಕ್ಕೆ ಕಾರಣವಾಗಿದೆ.
Read Full Story
02:44 PM (IST) Jul 22

Karnataka News Live 22 July 2026 ವಿದ್ಯಾರ್ಥಿಗಳ ಪ್ರತಿಭಟನೆ; ಸುಮ್ಮನೇ ನೋಡುತ್ತಾ ಕೂತವರಿಗೆ ಯುವ ರಾಜ್‌ಕುಮಾರ್ ಪ್ರಶ್ನೆ

ನೀಟ್ ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸಿ, ಸತ್ಯಾಂಶಗಳನ್ನು ತಿಳಿದು, ಹೊಣೆಗಾರಿಕೆಯನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದ್ದಾರೆ.

Read Full Story
01:36 PM (IST) Jul 22

Karnataka News Live 22 July 2026 Viral News - ಭವ್ಯಾ ಗೌಡ-ಚೇತನ್ ಗೌಡ ಫೋಟೋಶೂಟ್ ಭಾರೀ ವೈರಲ್.. 'ಮೋಸದ ಮೇಲೆ ಮೋಸ' ಎಂದಿದ್ದ ರೈತ ಈಗ ನಾಯಕ!

ಯುವ ರೈತ ಚೇತನ್‌ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ದೇವಿ ಚಿತ್ರದಲ್ಲಿ ಭವ್ಯಾ ಗೌಡ ಅವರು ನಾಯಕ ಚೇತನ್‌ ಗೌಡ ಅವರಿಗೆ ನಾಯಕಿ ಆಗಿದ್ದಾರೆ. ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Read Full Story
01:28 PM (IST) Jul 22

Karnataka News Live 22 July 2026 ಆರ್ಟ್ ಆಫ್ ಲಿವಿಂಗ್ ವಿರುದ್ಧ ಭೂ ಒತ್ತುವರಿ ಆರೋಪ, ರಾಜ್ಯ ಸರ್ಕಾರದಿಂದ ತನಿಖೆಗೆ SIT ರಚನೆ, ಸ್ವಾಗತಿಸಿದ ಸಂಸ್ಥೆ

ಬೆಂಗಳೂರಿನ ಕಗ್ಗಲಿಪುರ ಬಳಿ 'ದಿ ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದೆ ಎಂಬ ಗಂಭೀರ ಆರೋಪದ ಮೇಲೆ ರಾಜ್ಯ ಸರ್ಕಾರ 11 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಗುತ್ತಿಗೆ ನಿಯಮ ಉಲ್ಲಂಘನೆ, ದಲಿತರ ಭೂಮಿ ಒತ್ತುವರಿ ಮತ್ತು ಸಾರ್ವಜನಿಕ ಆಸ್ತಿ ದುರ್ಬಳಕೆ ಸೇರಿದಂತೆ ಹಲವು ಆರೋಪಗಳ ಕುರಿತು ಈ ತಂಡವು ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ.
Read Full Story
12:03 PM (IST) Jul 22

Karnataka News Live 22 July 2026 Ra Ra RX - ಬೈಕ್‌ ಬೆನ್ನುಬಿದ್ದ ಯತಿರಾಜ್.. ಮದ್ದೂರಿನಲ್ಲಿ "ರಾ ರಾ ಆರೆಕ್ಸ್‌‌' ಜರ್ನಿ ಶುರು!

ಆರೆಕ್ಸ್‌ ಬೈಕಿನ ಸುತ್ತ ನಡೆಯುವ ಕಥೆಯ ಜೊತೆಗೆ ಹಾರರ್‌ ಕಥಾಹಂದರ ಕೂಡಾ ಇದರೊಟ್ಟಿಗೆ ಬೆಸೆದುಕೊಂಡಿದೆ. ಹಾಗಂತ ಬೆನ್ನುಬೀಳುವ ದೆವ್ವ, ಪ್ರೇತಕಾಟ, ರೆಗ್ಯುಲರ್‌ ಎನ್ನಿಸುವ ಭಯಾನಕ ದೃಶ್ಯಗಳು ಯಾವುವೂ ಇಲ್ಲಿರೋದಿಲ್ಲ. ಬದಲಿಗೆ, ಬದುಕಿನ ತಳಮಳಗಳು, ಹೆತ್ತವಳ ಸಂಕಟ, ಪ್ರೀತಿಯ ಉತ್ಕಟತೆಗಳೆಲ್ಲಾ ಇಲ್ಲಿ ಪಾತ್ರಗಳಾಗಿ ಹೊರಹೊಮ್ಮಲಿವೆ.

Read Full Story
11:02 AM (IST) Jul 22

Karnataka News Live 22 July 2026 ಇತಿಹಾಸ ಪುಟಗಳಲ್ಲಿ ಹೊಸ ದಾಖಲೆ - ಮಂಡ್ಯದಲ್ಲಿ ಪತ್ತೆಯಾಯ್ತು ಹೊಯ್ಸಳರ ಕಾಲದ ದೇಶದ ಮೊದಲ '3D' ವೀರಗಲ್ಲು!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯು ಅಪರೂಪದ 3ಡಿ ಸ್ವರೂಪದ ವೀರಗಲ್ಲನ್ನು ಪತ್ತೆಹಚ್ಚಿದೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ, ಹೊಯ್ಸಳರ ಕಾಲದ್ದೆಂದು ಅಂದಾಜಿಸಲಾದ ಈ ಶಿಲ್ಪವು, ವಿಭಿನ್ನ ಕೋನಗಳಿಂದ ನೋಡಿದಾಗ ಬೇರೆ ಬೇರೆ ದೃಶ್ಯಗಳನ್ನು ಪ್ರದರ್ಶಿಸುವ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿದೆ.
Read Full Story