ಮಂಗಳೂರು ಪೋರ್ಟ್ ಅಥಾರಿಟಿ (NMPA) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 12 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹತೆ, ವೇತನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ಮಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಇದೀಗ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 12 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ ಬಂದರು ನಗರದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ.

ಪ್ರಮುಖ ಮಾಹಿತಿ

ವಿವರಗಳುಮಾಹಿತಿ
ನೇಮಕಾತಿ ಸಂಸ್ಥೆನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA)
ಹುದ್ದೆಗಳ ಹೆಸರುಹುದ್ದೆಗಳ ಹೆಸರು
ಒಟ್ಟು ಹುದ್ದೆಗಳು12
ಕೆಲಸದ ಸ್ಥಳಮಂಗಳೂರು (ಕರ್ನಾಟಕ)
ಅರ್ಜಿ ಸಲ್ಲಿಕೆ ವಿಧಾನಆನ್‌ಲೈನ್ (Online)
ಅಧಿಕೃತ ವೆಬ್‌ಸೈಟ್www.newmangaloreport.gov.in

ಹುದ್ದೆಗಳ ವಿವರ ಮತ್ತು ವಿವಿಧ ವಿಭಾಗಗಳು

  • ಮಾಹಿತಿ ತಂತ್ರಜ್ಞಾನ (ICT) ವಿಭಾಗ: 4 ಹುದ್ದೆಗಳು
  • ಕಾರ್ಪೊರೇಟ್ ಲೀಗಲ್ ವಿಭಾಗ: 3 ಹುದ್ದೆಗಳು 
  • ಪರಿಸರ ಮತ್ತು ಸುರಕ್ಷತೆ ವಿಭಾಗ: 2 ಹುದ್ದೆಗಳು 
  • ಬಿಸಿನೆಸ್ ಡೆವಲಪ್‌ಮೆಂಟ್ ಮತ್ತು ಟ್ರೇಡ್ ಪ್ರೊಮೋಷನ್ ವಿಭಾಗ: 3 ಹುದ್ದೆಗಳು

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

  • ICT ವಿಭಾಗ: ಬಿ.ಇ/ಬಿ.ಟೆಕ್ ಪದವಿ ಹೊಂದಿರಬೇಕು
  • ಲೀಗಲ್ ವಿಭಾಗ: ಕಾನೂನು ಪದವಿ (LLB) ಹೊಂದಿರಬೇಕು
  •  ಪರಿಸರ ವಿಭಾಗ: ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ (Post Graduation) ಹೊಂದಿರಬೇಕು
  •  ಬಿಸಿನೆಸ್ ಡೆವಲಪ್‌ಮೆಂಟ್ ವಿಭಾಗ: ಎಂಬಿಎ (MBA) ಪದವಿ ಕಡ್ಡಾಯವಾಗಿದೆ.

ವಯೋಮಿತಿ

  • ಚೀಫ್ ಮ್ಯಾನೇಜರ್: ಗರಿಷ್ಠ 55 ವರ್ಷಗಳು
  •  ಸೀನಿಯರ್ ಮ್ಯಾನೇಜರ್: ಗರಿಷ್ಠ 45 ವರ್ಷಗಳು 
  • ಮ್ಯಾನೇಜರ್ ಹುದ್ದೆ: ಗರಿಷ್ಠ 40 ವರ್ಷಗಳು (ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋ ಸಡಿಲಿಕೆ ಇರುತ್ತದೆ)

ವೇತನ ಶ್ರೇಣಿ ಮತ್ತು ಆಯ್ಕೆ ವಿಧಾನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಮಾನದಂಡದಂತೆ ಅತ್ಯಂತ ಆಕರ್ಷಕ ಮಾಸಿಕ ನಿಶ್ಚಿತ ವೇತನ ಸಿಗಲಿದೆ 

  • ಚೀಫ್ ಮ್ಯಾನೇಜರ್: ಸುಮಾರು ₹2,00,000/- 
  • ಸೀನಿಯರ್ ಮ್ಯಾನೇಜರ್: ₹1,60,000/- ಮ್ಯಾನೇಜರ್ ಹುದ್ದೆ: ₹1,20,000/-

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲು ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ (Personal Interview) ಆಹ್ವಾನಿಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಅಭ್ಯರ್ಥಿಗಳು ಮೊದಲು NMPA ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  •  ಹೋಮ್ ಪೇಜ್‌ನಲ್ಲಿರುವ ನೇಮಕಾತಿ (Careers/Recruitment) ಲಿಂಕ್ ಕ್ಲಿಕ್ ಮಾಡಿ 
  • ಸಂಬಂಧಿತ ಮ್ಯಾನೇಜರ್ ಹುದ್ದೆಯ ಅಧಿಸೂಚನೆಯನ್ನು ಓದಿಕೊಂಡು, ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ
  •  ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.