- Home
- Entertainment
- Sandalwood
- ಭವ್ಯಾ ಗೌಡ-ಚೇತನ್ ಗೌಡ ಫೋಟೋಶೂಟ್ ಭಾರೀ ವೈರಲ್.. 'ಮೋಸದ ಮೇಲೆ ಮೋಸ' ಎಂದಿದ್ದ ರೈತ ಈಗ ನಾಯಕ!
ಭವ್ಯಾ ಗೌಡ-ಚೇತನ್ ಗೌಡ ಫೋಟೋಶೂಟ್ ಭಾರೀ ವೈರಲ್.. 'ಮೋಸದ ಮೇಲೆ ಮೋಸ' ಎಂದಿದ್ದ ರೈತ ಈಗ ನಾಯಕ!
ಯುವ ರೈತ ಚೇತನ್ ಗೌಡ ಅವರು ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ದೇವಿ ಚಿತ್ರದಲ್ಲಿ ಭವ್ಯಾ ಗೌಡ ಅವರು ನಾಯಕ ಚೇತನ್ ಗೌಡ ಅವರಿಗೆ ನಾಯಕಿ ಆಗಿದ್ದಾರೆ. ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕನ್ನಡದಲ್ಲಿ ಹೊಸಹೊಸ ಸಿನಿಮಾಗಳು ತೆರೆಗೆ ಬರುತ್ತಿದ್ದು ಸಿನಿಪ್ರೇಕ್ಷಕರಲ್ಲಿ ಕುತೂಹಲದ ಜೊತೆಗೆ ಪುಳಕವನ್ನೂ ಅಂಟುಮಾಡುತ್ತಿವೆ. ಅವುಗಳಲ್ಲಿ ಒಂದು ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯಾ ಗೌಡ ಹಾಗೂ ಯುವ ರೈತ ಚೇತನ್ ಗೌಡ ಫೋಟೋ ಶೂಟ್!
ಹೌದು, ಕರ್ಣ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ 'ದೇವಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ಮಂಡ್ಯದ ಯುವ ರೈತ ಚೇತನ್ ಗೌಡ ನಾಯಕರಾಗಿ ಪಾದಾರ್ಪಣೆ ಮಾಡುತ್ತಿದ್ದು, ಬಣ್ಣದ ಲೋಕ ಪ್ರವೇಶಿಸಲು ಅವರು ಪಟ್ಟ ಶ್ರಮ ಮತ್ತು ಅನುಭವಿಸಿದ ಮೋಸಗಳ ಬಗ್ಗೆ ಈ ಸ್ಟೋರಿಯಲ್ಲಿ ಬೆಳಕು ಚೆಲ್ಲಲಾಗಿದೆ.
ಸ್ಯಾಂಡಲ್‌ವುಡ್‌ಗೆ ಭವ್ಯಾ ಗೌಡ
ಕರ್ಣ ಸೀರಿಯಲ್ (Karna Serial) ನಿಧಿಯಾಗಿ ಎಲ್ಲರ ಮೆಚ್ಚುಗೆ ಗಳಿಸ್ತಿರೋ ಬಿಗ್ಬಾಸ್ಬೆಡಗಿ ಭವ್ಯಾ ಗೌಡ ಈಗಾಗಲೇ 'ಫ್ಲವರ್ ಬಿಜಿನೆಸ್'ಶುರು ಮಾಡಿದ್ದು ಗೊತ್ತೇ ಇದೆ. ಜೊತೆಗೆ, ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಭವಿಷ್ಯ ರೂಪಿಸಿಕೊಳ್ಳಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಭವ್ಯಾ ಗೌಡ ಅವರು 'ದೇವಿ' ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ. ಯುವ ರೈತ ಚೇತನ್ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ದೇವಿ ಚಿತ್ರದಲ್ಲಿ ಭವ್ಯಾ ಗೌಡ ಅವರು ನಾಯಕ ಚೇತನ್ ಗೌಡ ಅವರಿಗೆ ನಾಯಕಿ ಆಗಿದ್ದಾರೆ. ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಯಾರು ಈ ಚೇತನ್ ಗೌಡ?
ಭವ್ಯಾ ಗೌಡ (Bhavya Gowda) ಅವರ ಪರಿಚಯ ಹಲವರಿಗೆ ಇದೆ. ಆದರೆ ಇದೀಗ ಚೇತನ್ಗೌಡ ಯಾರು ಎನ್ನುವ ಕುತೂಹಲ ಸಿನಿ ಪ್ರಿಯರನ್ನು ಕೆರಳಿಸುತ್ತಿದೆ. ಅಷ್ಟಕ್ಕೂ ಚೇತನ್ ಗೌಡ ಅವರು ಮಂಡ್ಯದ ರೈತ. 70 ಹಸು, 20 ಕರು, ಎಮ್ಮೆ, 15 ನಾಯಿ ಸೇರಿದಂತೆ ಟ್ರ್ಯಾಕ್ಟರ್, ಜೆಸಿಬಿ, ಟಿಪ್ಪರ್ ಎಲ್ಲಾ ಗಾಡಿಗಳನ್ನು ಇಟ್ಟುಕೊಂಡು ವ್ಯವಸಾಯ ಮಾಡ್ತಿರೋ ಚೇತನ್ಗೌಡ ಅವರು ಇದೀಗ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
'ಸಿನಿಮಾ ಜರ್ನಿ' ಬಗ್ಗೆ ಚೇತನ್ ಗೌಡ ಹೇಳಿದ್ದೇನು?
ದೇವಿ ಸಿನಿಮಾದ ಲಾಂಚ್ ವೇಳೆ ತಮ್ಮ ಬಗ್ಗೆ ಕೆಲವೊಂದು ಸಂಗತಿಗಳನ್ನು ಹೇಳಿಕೊಂಡಿದ್ದಾರೆ ಚೇತನ್ ಗೌಡ. ರೈತನೊಬ್ಬ ಸಿನಿಮಾಕ್ಕೆ ಎಂಟ್ರಿ ಕೊಡಬೇಕಾದಾಗತ ಪಟ್ಟ ಶ್ರಮಗಳ ಬಗ್ಗೆ, ಹಲವು ನಿರ್ದೇಶಕರಿಂದ ತಮಗೆ ಆಗಿರುವ ಮೋಸ, ಅನ್ಯಾಯ ಕುರಿತಾದ ನೋವನ್ನೂ ಇದೇ ವೇಳೆ ಹೇಳಿಕೊಂಡಿದ್ದಾರೆ.
ಮಂಡ್ಯದ ಗಂಡು
ಮಂಡ್ಯದ ಚೇತನ್ಅವರು, 17 ವರ್ಷದ ಹಿಂದೆ ಬಣ್ಣದ ಲೋಕದ ಕನಸನ್ನು ಹೊತ್ತು ಬೆಂಗಳೂರಿಗೆ ಬಂದವರು. 'ನನಗೆ ಚಿಕ್ಕಂದಿನಿಂದಲೂ ಹೀರೋ ಆಗಬೇಕು ಅಂತ ಆಸೆ ಇತ್ತು. ಆದರೆ ಇದನ್ನು ನಂಬಿ ತುಂಬಾ ಹಣ ಕಳೆದುಕೊಂಡೆ. ತುಂಬಾ ಮಂದಿ ಮೋಸ ಮಾಡಿದ್ರು. ದೇವಿ ಸಿನಿಮಾಕ್ಕೆ ಕಥೆ ಬರೆದು ಇಟ್ಟುಕೊಂಡ್ರೂ ನನ್ನಿಂದ ಹಣ ಪಡೆದು ಎಲ್ಲಾ ಮೋಸ ಮಾಡಿಬಿಟ್ಟರು. ನಾವು ರೈತರು, ರೈತರಾಗಿಯೇ ಉಳಿದುಕೊಳ್ಳೋಣ ಅಂತ ಊರಿಗೆ ಹೊರಟಿದ್ದೆ' ಎಂದು ಭಾವುಕರಾಗಿ ಮಾತನ್ನಾಡಿದ್ದಾರೆ ಚೇತನ್.
ಮೋಸಗಳ ಸರಣಿಯಲ್ಲಿ ಸಿಕ್ಕಿಬಿದ್ದಿದ್ದೆ!
'ಒಂದೂವರೆ ವರ್ಷದ ಹಿಂದೆ ಒಬ್ಬ ನಿರ್ದೇಶಕ ಬಂದು, ಸ್ಟೋರಿ ಚೆನ್ನಾಗಿದೆ. ದುಡ್ಡು ಹಾಕಲು ಹೇಳಿದ್ರು. ನಾವು ಹಳ್ಳಿ ಜನ ಮುಗ್ದರು, ಸರಿ ಆಯ್ತು ಅಂತ ದುಡ್ಡು ಹಾಕಿದೆ. ಆದರೆ ಅವರು ನಾಪತ್ತೆಯಾದರು. ಡೈರೆಕ್ಟರ್ ಎಲ್ಲಿ ಅಂತ ಕೇಳಿದ್ರೆ ಡೈರೆಕ್ಟರ್ ಎಲ್ಲಿಯೂ ಕಾಣಿಸಲಿಲ್ಲ. ಕೊನೆಗೆ ಸಿನಿಮಾ ಮಾಡೋಕಾಗಲ್ಲ ಅಂದ್ರು. ತುಂಬಾ ನೋವಾಯ್ತು. ಆ ಸಮಯದಲ್ಲಿಯೇ ಒಬ್ಬರ ಮೇಲೊಬ್ಬರು ಬಂದು ಮೋಸ ಮಾಡುತ್ತಲೇ ಹೋದರು' ಎಂದಿದ್ದಾರೆ ರೈತ ನಾಯಕ ಚೇತನ್.
'ದೇವಿ' ಸಿನಿಮಾ ಮೂಲಕ ಬಂದ ಚೇತನ್ ಗೌಡ
'ಹತ್ತು ಜನ ಡೈರೆಕ್ಟರ್ ಮೋಸ ಮಾಡಿದ ಮೇಲೆ, ಹನ್ನೊಂದನೇ ಸಿನಿಮಾ ನಾನೇ ಬರೆಯಬೇಕು ಅಂತ, ಮಂತ್ರಾಲಯ ರಾಘವೇಂದ್ರ ದೇವಸ್ಥಾನದಲ್ಲಿ ಸ್ವಾಮಿಗೆ ಕೈ ಮುಗಿದು ಆಚೆ ಬಂದೆ. ಇಪ್ಪತ್ತು ನಿಮಿಷದಲ್ಲಿ ಕಥೆ ಬರೆದೆ. ಆ ಇಪ್ಪತ್ತು ನಿಮಿಷ ಜರ್ನಿಯಲ್ಲಿ ಒಂದು ದೇವಸ್ಥಾನ ಸಿಗುತ್ತೆ. ಅದೇ ದೇವಿ ಅನ್ನೋ ಒಂದು ಹೆಣ್ಣು ದೇವರು. ಅದೇ ಟೈಟಲ್ ತಗೊಂಡೆ. ಅದನ್ನೇ ಈಗ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ ಚೇತನ್ಗೌಡ.
ಇದೀಗ 'ದೇವಿ' ಚಿತ್ರಕ್ಕಾಗಿ ಚೇತನ್ ಗೌಡ ಹಾಗೂ ಭವ್ಯಾ ಗೌಡ ಜೋಡಿಯ ಫೋಟೋ ಶೂಟ್ ನಡೆದಿದ್ದು, ಅದೀಗ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

