11:57 PM (IST) Apr 19

ಖುಷ್ಬೂ 20 ಕೆಜಿ ತೂಕ ಇಳಿಕೆ ರಹಸ್ಯ; ಇಂಜೆಕ್ಷನ್ ತಗೊಂಡ್ರಾ 54ರ ನಟಿ!

ನಟಿ ಖುಷ್ಬು ಸುಂದರ್ 20 ಕೆಜಿ ತೂಕ ಇಳಿಸಿಕೊಂಡಿದ್ದು, ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿವೆ. ಆದರೆ, ತೂಕ ಇಳಿಕೆಗೆ ಇಂಜೆಕ್ಷನ್ ತಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪೂರ್ತಿ ಓದಿ
11:49 PM (IST) Apr 19

ಮುಂಬೈನಲ್ಲಿ ಪಾಲಿಕೆಯಿಂದ 90 ವರ್ಷದಷ್ಟು ಹಳೆಯ ದೇಗುಲ ಧ್ವಂಸ: ಬೀದಿಗಿಳಿದ ಜೈನ ಸಮುದಾಯ

ಮುಂಬೈನಲ್ಲಿ 90 ವರ್ಷಕ್ಕೂ ಹಳೆಯ ಜೈನ ದೇಗುಲವೊಂದನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕೆಡವಿ ಹಾಕಿದ್ದು, ಇದನ್ನು ಖಂಡಿಸಿ ಸಾವಿರಾರು ಜೈನ ಸಮುದಾಯದ ಜನ ರಸ್ತೆಗಿಳಿದು ಶಾಂತಿಯುತ ಪ್ರತಿಭಟನೆ ನಡೆಸಿದರು

ಪೂರ್ತಿ ಓದಿ
11:39 PM (IST) Apr 19

ಮಲ್ಲಿಕಾರ್ಜುನ ಖರ್ಗೆಯವರೇ ರಾಜ್ಯ ಸರ್ಕಾರ ಬೀಳಿಸ್ತಾರೆ: ಶ್ರೀರಾಮುಲು ಬಾಂಬ್‌

ರಾಜ್ಯದಲ್ಲಿನ ವಿಫಲ ಸರ್ಕಾರ ಇನ್ನು ಬಹಳ ದಿನ ಇರಲ್ಲ. ನಾನು ಸಿಎಂ ಆಗಬೇಕು.. ನಾನು ಸಿಎಂ ಆಗಿ ಇರಬೇಕು ಅಂತ ಡಿಕೆಶಿ, ಸಿದ್ರಾಮಯ್ಯ ನಡುವೆ ಕಿತ್ತಾಟ ನಡೆದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. 

ಪೂರ್ತಿ ಓದಿ
11:30 PM (IST) Apr 19

ಕೇರಳದಲ್ಲಿ 45 ಸಿನಿಮಾ ಟೀಸರ್ ಬಿಡುಗಡೆ; ಉಪೇಂದ್ರ, ಶಿವಣ್ಣ ಹಾವಳಿ!

45 ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಲಯಾಳಂನ ಯುವ ನಟ ಆಂಟನಿ ವರ್ಗೀಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ಯಾನ್ ಇಂಡಿಯಾ ಸಿನಿಮಾ 

ಪೂರ್ತಿ ಓದಿ
10:33 PM (IST) Apr 19

ರಾಜ್ಯದಲ್ಲಿ 958 ನಕಲಿ ವೈದ್ಯರು ಪತ್ತೆ; ಕೋಲಾರ, ತುಮಕೂರಲ್ಲಿ ಹಾವಳಿ!

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ 958 ನಕಲಿ ವೈದ್ಯರನ್ನು ಪತ್ತೆಹಚ್ಚಿದೆ. ಬೀದರ್, ಕೋಲಾರ, ಮತ್ತು ತುಮಕೂರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಹೈಡೋಸ್ ಔಷಧಿಗಳನ್ನು ನೀಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಪೂರ್ತಿ ಓದಿ
09:53 PM (IST) Apr 19

ಜಗತ್ತಿನ ಅತ್ಯಂತ ತೆಳ್ಳಗಿನ ಗಗನಚುಂಬಿ ಕಟ್ಟಡ: ಮತ್ತೊಂದು ಅದ್ಭುತಕ್ಕೆ ಸಾಕ್ಷಿಯಾಗಲಿದೆ ದುಬೈ

ದುಬೈನಲ್ಲಿ 13,000 ಅಡಿ ಎತ್ತರದ 73 ಮಹಡಿಗಳ ವಿಶ್ವದ ಅತ್ಯಂತ ತೆಳ್ಳಗಿನ ಗಗನಚುಂಬಿ ಕಟ್ಟಡ ನಿರ್ಮಾಣವಾಗುತ್ತಿದೆ. 

ಪೂರ್ತಿ ಓದಿ
09:44 PM (IST) Apr 19

5 ವರ್ಷಗಳಲ್ಲಿ 58 ಲಕ್ಷ ಕೋಟಿ ಬಂಡವಾಳ ಹೂಡಿಕೆ: ಸಂಸದ ಗೋವಿಂದ ಕಾರಜೋಳ

ದೇಶದ ರೇಲ್ವೆ ಇಲಾಖೆಯ ಮೂಲಭೂತ ಸೌಕರ್ಯ, ಉದ್ಯೋಗ, ಹೊಸ ಮಾರ್ಗಗಳ ಉನ್ನತೀಕರಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ 58 ಲಕ್ಷ ಕೋಟಿ ರು. ಬಂಡವಾಳ ಹೂಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗಳನ್ನು ಅನುಮೋದಿಸಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. 

ಪೂರ್ತಿ ಓದಿ
09:38 PM (IST) Apr 19

ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ 15 ರಿಂದ 20 ಕೋಟಿ ಜನಸಂಖ್ಯೆ ಬರುತ್ತೆ, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ, ಕೆಲವರು ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮೀಕ್ಷೆ ವಿರೋಧಿಗಳಿಗೆ ಟಾಂಗ್ ನೀಡಿದರು. 

ಪೂರ್ತಿ ಓದಿ
09:01 PM (IST) Apr 19

ಜನಿವಾರ ಚೆಕ್ ಮಾಡಿದ ಹೋಮ್‌ಗಾರ್ಡ್ ಸಸ್ಪೆಂಡ್; ಆದೇಶ ಕೊಟ್ಟವರು ಸೇಫ್!

ಶಿವಮೊಗ್ಗದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಜನಿವಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ನಡೆಸಿದ ನಂತರ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಪೂರ್ತಿ ಓದಿ
07:55 PM (IST) Apr 19

ಬಯಲುಸೀಮೆ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ದ: ಸಚಿವ ಬೋಸರಾಜು

ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರ ನೀರಿನ ಬವಣೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಏತ್ತಿನಹೊಳೆ, ಕೆ.ಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಯಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಬೋಸರಾಜು ತಿಳಿಸಿದರು.

ಪೂರ್ತಿ ಓದಿ
07:48 PM (IST) Apr 19

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ!

ಆ ಜನರ ಆರೋಗ್ಯ ಹದಗೆಟ್ಟರೆ ಅಥವಾ ಗರ್ಭಿಣಿ ಮಹಿಳೆಯರನ್ನು ತುರ್ತು ಆಸ್ಪತ್ರೆಗೆ ರವಾನಿಸಬೇಕಾದರೆ ಡೋಲಿ ಕಟ್ಟಿಕೊಂಡು ಕಾಡಿನ ರಸ್ತೆಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ನಡೆದೆ ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇತ್ತು. 

ಪೂರ್ತಿ ಓದಿ
07:27 PM (IST) Apr 19

ಹತ್ತು ದಿನಗಳಲ್ಲಿ ಐದು ಜಾನುವಾರುಗಳ ಕೊಂದ ಹುಲಿ: ಅರಣ್ಯ ಇಲಾಖೆ ಕಾರ್ಯಾಚರಣೆ

ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದ್ದು, ಹಲವು ದಿನಗಳಿಂದ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. 

ಪೂರ್ತಿ ಓದಿ
07:12 PM (IST) Apr 19

ಬಾಲ್ಕನಿಯಲ್ಲಿ ಬಟ್ಟೆ ಒಣಗಿಸೋ ಭಾರತೀಯರಿಗೆ ಶಾಕ್ ನೀಡಿದ ಅಬುಧಾಬಿ

ಬಾಲ್ಕನಿಯಲ್ಲಿ ಇನ್ನು ಮುಂದೆ ಕಸಗಳನ್ನು ರಾಶಿ ಹಾಕುವುದು ಅಥವಾ ಬಟ್ಟೆಗಳನ್ನು ನೇತು ಹಾಕಲು ಜಾಗ ಮಾಡಿಕೊಂಡರೆ ಅಂತಹ ಜನರಿಗೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ.

ಪೂರ್ತಿ ಓದಿ
07:03 PM (IST) Apr 19

SSLC ಪಾಸಾದ್ರೆ ನನ್ ಹುಡುಗಿ ಲವ್ ಮಾಡ್ತಾಳೆ; ₹500 ತಗೊಂಡು ಚಾ ಕುಡಿರಿ, ನನ್ನ ಪಾಸ್ ಮಾಡ್ರಿ!

SSLC ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು 500 ರೂ. ಲಂಚ ನೀಡಿ ಪ್ರೀತಿಸುವ ಹುಡುಗಿ ಮನವೊಲಿಸಲು ಮನವಿ ಮಾಡಿದ್ದಾನೆ. ಈ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಎಲ್ಲರನ್ನೂ ದಂಗಾಗಿಸಿದೆ.

ಪೂರ್ತಿ ಓದಿ
06:17 PM (IST) Apr 19

ರೈಲು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡೋ ಮುನ್ನ IRCTC ಸ್ಪಷ್ಟನೆ ನೋಡಿ!

ತತ್ಕಾಲ್ ಟಿಕೆಟ್ ಬುಕಿಂಗ್: ಪ್ರಯಾಣದ ದಿನಾಂಕದ ಒಂದು ದಿನ ಮೊದಲು, ಆರಂಭಿಕ ನಿಲ್ದಾಣದಿಂದ ಪ್ರಯಾಣದ ದಿನವನ್ನು ಹೊರತುಪಡಿಸಿ, ಆಯ್ದ ರೈಲುಗಳಿಗೆ ತತ್ಕಾಲ್ ಇ-ಟಿಕೆಟ್‌ಗಳನ್ನು ಪ್ರಯಾಣಿಕರು ಕಾಯ್ದಿರಿಸಬಹುದು.

ಪೂರ್ತಿ ಓದಿ
06:03 PM (IST) Apr 19

ವರದಕ್ಷಿಣೆ ತರಲಿಲ್ಲ ಅಂತ ಮಹಿಳೆಯ ತಲೆಕೂದಲು ಕತ್ತರಿಸಿದ ಗಂಡ

ಉತ್ತರ ಪ್ರದೇಶದಲ್ಲಿ ವರದಕ್ಷಿಣೆಗಾಗಿ ಪತಿಯೊಬ್ಬ ಪತ್ನಿಯ ಕೂದಲನ್ನು ಕತ್ತರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೂರ್ತಿ ಓದಿ
05:35 PM (IST) Apr 19

ಬೆಂಗಳೂರು ಮೆಟ್ರೋ 13 ವರ್ಷ ಸೇವೆಯಲ್ಲಿ 3ನೇ ಅತ್ಯಧಿಕ ಪ್ರಯಾಣಿಕ ಸಂಚಾರ ದಾಖಲೆ!

ದರ ಏರಿಕೆಯ ನಂತರವೂ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಏಪ್ರಿಲ್ 17 ರಂದು 9.08 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ, ಇದು ಹೊಸ ದಾಖಲೆಯಾಗಿದೆ. ಇದು ಬೆಂಗಳೂರು ಮೆಟ್ರೋ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆಯಾಗಿದೆ.

ಪೂರ್ತಿ ಓದಿ
05:01 PM (IST) Apr 19

ತರಗೆಲೆಯಂತೆ ಕುಸಿದ 4 ಅಂತಸ್ತಿನ ಕಟ್ಟಡ: 8 ಜನ ಸಾವು

ಈಶಾನ್ಯ ದೆಹಲಿಯ ಮುಸ್ತಫಾಬಾದ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 8 ಜನ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ದೆಹಲಿ ಸಿಎಂ ತನಿಖೆಗೆ ಆದೇಶಿಸಿದ್ದಾರೆ.

ಪೂರ್ತಿ ಓದಿ
04:42 PM (IST) Apr 19

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಅಡಿ ಪುರಾತನ ದೇವಾಲಯ: ಪಿಚ್ ಅಗೆಯಲು ನೆಟ್ಟಿಗರ ಆಗ್ರಹ!

ಐಪಿಎಲ್ 2025ರಲ್ಲಿ ಆರ್‌ಸಿಬಿ ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಇದರಿಂದಾಗಿ ನೆಟ್ಟಿಗರು ಚಿನ್ನಸ್ವಾಮಿ ಸ್ಟೇಡಿಯಂ ಅಗೆಯಲು ಆಗ್ರಹಿಸಿದ್ದಾರೆ. ಆರ್‌ಸಿಬಿ ತವರಿನಾಚೆ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ತವರಿನಲ್ಲೇ ಸೋಲುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
04:36 PM (IST) Apr 19

ವೀರ ಚಂದ್ರಹಾಸ: ಯಕ್ಷಗಾನ ಪ್ರೀತಿಯಿಂದ ಹುಟ್ಟಿದ ವಿಶಿಷ್ಟ ಪ್ರಯೋಗ

ರಂಗಸ್ಥಳದಲ್ಲಿ ಭಾಗವತರ ಹಾಡುಗಾರಿಕೆ ಮತ್ತು ಅರ್ಥಧಾರಿಗಳ ಮಾತುಕತೆ ಮೂಲಕವೇ ಕತೆ ಮತ್ತು ಪರಿಸರ ಅನಾವರಣಗೊಂಡರೆ ಈ ಸಿನಿಮಾದಲ್ಲಿ ವಾಸ್ತವ ಪರಿಸರದಲ್ಲಿ ಕತೆ ನಡೆಯುತ್ತದೆ. ತಂತ್ರಜ್ಞಾನ ಬಳಸಿಕೊಂಡು ಅರಮನೆ, ಕಾಡು, ದೇಗುಲ ಇತ್ಯಾದಿ ಸೃಷ್ಟಿಸಿದ್ದಾರೆ. 

ಪೂರ್ತಿ ಓದಿ