೧೩ ವರ್ಷಗಳ ಹಿಂದೆ ೬.೭ ಕಿ.ಮೀ.ಯಿಂದ ಆರಂಭವಾದ ಬೆಂಗಳೂರು ಮೆಟ್ರೋ ಇದೀಗ ೭೦ ಕಿ.ಮೀ. ದಾಟಿದೆ. ಫೆಬ್ರವರಿಯಲ್ಲಿ ದರ ಏರಿಕೆಯಾದರೂ, ಏಪ್ರಿಲ್ ೧೭ ರಂದು ೯ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ದಾಖಲೆ ನಿರ್ಮಿಸಿದೆ. ದೆಹಲಿಯ ನಂತರ ಭಾರತದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ಮಾರ್ಗ ಇದಾಗಿದೆ. ೬೮ ನಿಲ್ದಾಣಗಳಲ್ಲಿ ೫೯ ಎತ್ತರದಲ್ಲಿದ್ದರೆ ೮ ಭೂಗತದಲ್ಲಿವೆ.
ನಮ್ಮ ಬೆಂಗಳೂರು ಮೆಟ್ರೋ ಸಾರ್ವಜನಿಕರ ಸೇವೆಗೆ ಮುಕ್ತಗೊಂಡು ಇದೀಗ 13 ವರ್ಷಗಳೇ ಕಳೆದಿವೆ. ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ ಕೇವಲ 6.7 ಕಿ.ಮೀ. ನಡುವೆ ಮೆಟ್ರೋ ಸಂಚಾರ ಆರಂಭವಾಗಿ ವಾರ್ಷಿಕ ಸರಾಸರಿ 5 ಕಿ.ಮೀ ಮಾರ್ಗದ ಹೆಚ್ಚಳದಂತೆ ಇದೀಗ 70 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ರೈಲು ಸೇವೆ ನೀಡುತ್ತಿದೆ. ಈವರೆಗೆ ಮೆಟ್ರೋ ಪ್ರಯಾಣ ದವರನ್ನು 3ನೇ ಬಾರಿಗೆ ಹೆಚ್ಚಳ ಮಾಡಲಾಗಿದೆ. 2025ರ ಪೆಬ್ರವರಿ ತಿಂಗಳಲ್ಲಿ ದಾಖಲೆ ಮೊತ್ತದಲ್ಲಿ ಮೆಟ್ರೊ ದರ ಹೆಚ್ಚಳ ಮಾಡಲಾದರೆ. ಆದರೆ, ಶೇ.80ರಷ್ಟು ದರ ಹೆಚ್ಚಳ ಮಾಡಿದರೂ ಲೆಕ್ಕಿಸದೇ ಏ.17ರಂದು ಒಂದೇ ದಿನ ಬರೋಬ್ಬರಿ 9 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಈ ಮೂಲಕ ಈವರೆಗಿನ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡಿದ ದಾಖಲೆಯನ್ನು ಬರೆದಿದ್ದಾರೆ.
ಭಾರತದಲ್ಲಿ ಕಾರ್ಯ ನಿರ್ವಹೊಸುತ್ತಿರುವ ಮೆಟ್ರೋ ಸಾರಿಗೆ ಸೇವೆಯಲ್ಲಿ ದೆಹಲಿ ಬಿಟ್ಟರೆ ಅತಿಹೆಚ್ಚು ಉದ್ದದ ಮೆಟ್ರೋ ಸೇವೆ ಹೊಂದಿದ ನಗರವೆಂಬ ಖ್ಯಾತಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೊಂದಿದೆ. ನಮ್ಮ ಮೆಟ್ರೋ ಮಾರ್ಗದ ಉದ್ದ 2024ರ ಅಂತ್ಯಕ್ಕೆ ಬರೋಬ್ಬರಿ 76.95 ಕಿ.ಮೀ ಆಗಿದೆ. ಇದು ಭಾರತದ 2ನೇ ಅತಿಉದ್ದದ ಮೆಟ್ರೋ ರೈಲು ಸೇವೆ ಹೊಂದಿದ ನಗರವೆಂಬ ಖ್ಯಾತಿ ಪಡೆದಿದೆ. ಇನ್ನು ದಕ್ಷಿಣ ಭಾರತದ ಭೂಗತ ಮತ್ತು ಎತ್ತರದ ಸೇತುವೆ ಮೇಲಿನ ಮೆಟ್ರೋ ಪ್ರಯಾಣ ಎರಡನ್ನೂ ಹೊಂದಿರುವ ನಗರವಾಗಿದೆ. ಬೆಂಗಳುರಿನಲ್ಲಿ ಈವರೆಗೆ 68 ಮೆಟ್ರೋ ನಿಲ್ದಾಣಗಳು ಕಾರ್ಚಾರಣೆ ಆರಂಭಿಸಿದ್ದು, 59 ಎತ್ತರದ ಹಾಗೂ 8 ಭೂಗತ ಮೆಟ್ರೋ ನಿಲ್ದಾಣಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.
ಬೆಂಗಳೂರಿನಲ್ಲಿ 1.4 ಕೋಟಿಗೂ ಅಧಿಕ ಜನಸಂಖ್ಯೆಯಿದ್ದು, ಇದರಲ್ಲಿ ಬಿಎಂಟಿಸಿ ಬಸ್ ಪ್ರಯಾಣ ಬಿಟ್ಟರೆ ಬಹುತೇಕರು ಮೆಟ್ರೋ ಪ್ರಯಾಣವನ್ನು ಬಳಸುತ್ತಾರೆ. ಇನ್ನು ನಮ್ಮ ಮೆಟ್ರೋ ರೈಲುಗಳ ಸೇವೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11.30ರವರೆಗೆ ಸೇವೆ ಸಿಗಲಿದೆ. ಜನದಟ್ಟಣೆಗೆ ಅನುಗುಣವಾಗಿ ಪ್ರತಿ 3 ರಿಂದ 15 ನಿಮಿಷಗಳ ನಡುವೆ ಒಂದು ಮೆಟ್ರೋ ರೈಲು ಸಂಚಾರ ಮಾಡಲಿವೆ. ಆರಂಭದಲ್ಲಿ 2011ರ ವೇಳೆ ಎಂ.ಜಿ. ರಸ್ತೆ ಹಾಗೂ ಬೈಯಪ್ಪನಹಳ್ಳಿ ನಡುವೆ ಕೇವಲ 3 ಬೋಗಿಗಳ ಸೇವೆ ಆರಂಭಿಸಿದ ಮೆಟ್ರೋ ರೈಲು ಇದೀಗ 6 ಬೋಗಿಗಳ ಮೂಲಕ ಸೇವೆ ನೀಡುತ್ತಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಮಿತಿ ಮೀರಿದ ಪ್ರಯಾಣಿಕರು; 4 ರೈಲು ಹೆಚ್ಚಳ
2024ರ ವೇಳೆಗೆ ಮೆಟ್ರೋ ರೈಲಿನ ಸರಾಸರಿ ಪ್ರಯಾಣಿಕರ ಸಂಖ್ಯೆ 7,62,000 ಆಗಿತ್ತು. ಇನ್ನು 2024ರ ಡಿಸೆಂಬರ್ 6ರಂದು ಒಂದೇ ದಿನ 9.02 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿದ್ದು, ಬೆಂಗಳೂರು ಮೆಟ್ರೋ ಇತಿಹಾಸದಲ್ಲಿ ಇದುವರೆಗೆ ದಾಖಲಾದ ಅತ್ಯಧಿಕ ಪ್ರಯಾಣಿಕರ ಸಂಖ್ಯೆಯಾಗಿದೆ. ಆದರೆ, ಫೆಬ್ರವರಿ ತಿಂಗಳಲ್ಲಿ ದರ ಹೆಚ್ಚಳದ ನಂತರ ಕುಸಿತವಾಗಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇದೀಗ 2025ರ ಏಪ್ರಿಲ್ 17ರಂದು 9.08 ಲಕ್ಷಕ್ಕೆ ತಲುಪಿದೆ. ಇದು ನಮ್ಮ ಮೆಟ್ರೋ ಇತಿಹಾಸದಲ್ಲಿ 3ನೇ ಅತ್ಯಧಿಕ ಪ್ರಯಾಣಿಕರು ಸಂಚರಿಸಿದ ದಾಖಲೆಯಾಗಿದೆ.
ನಮ್ಮ ಮೆಟ್ರೋದಲ್ಲಿ ಅತಿಹೆಚ್ಚು ಪ್ರಯಾಣಿಕರು ಸಂಚರಿಸಿದ 3 ದಾಖಲೆಗಳು:
2024 ಡಿಸೆಂಬರ್ 06 = 9,20,562
2024 ಆಗಸ್ಟ್ 24 = 9,17,365
2025 ಏಪ್ರಿಲ್ 17 = 9,08,153
ದರ ಏರಿಕೆ ನಂತರವೂ ಮೆಟ್ರೋ ನೆಚ್ಚಿಕೊಂಡ ಬೆಂಗಳೂರು ಜನತೆ:
ಬೆಂಗಳೂರಿನ ಜನತೆಯ ಯಾವುದೇ ಸಲಹೆಯನ್ನೂ ಪಡೆಯದೇ ಬಿಎಂಆರ್‌ಸಿಎಲ್ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಪ್ರಯಾಣ ದರವನ್ನು ಶೇ.46 ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಕುಸಿತವಾಗಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸಹಜ ಸ್ಥಿತಿಗೆ ಬಂದಿದ್ದು, ಬೆಂಗಳೂರು ಜನರು ಮತ್ತೆ ಮೆಟ್ರೋ ರೈಲನ್ನೇ ನೆಚ್ಚಿಕೊಂಡಿದ್ದಾರೆ. ಇದೀಗ ಏ.17ರಂದು ಒಂದೇ ದಿನ ನಮ್ಮ ಮೆಟ್ರೋದಲ್ಲಿ 9.08 ಲಕ್ಷಕ್ಕೂ ಹೆಚ್ಚು ಜನ ಸಂಚಾರ ಮಾಡಿದ್ದಾರೆ. ಈ ಹಿಂದೆ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಚಿತ್ರೀಕೃತವಾಗಿರುವ ಕನ್ನಡ ಸಿನಿಮಾಗಳ ಝಲಕ್!
ಕಳೆದ ಫೆ.9 ರಂದು ಬಿಎಂಆರ್‌ಸಿಎಲ್ ಮೆಟ್ರೋ ದರ ಏರಿಕೆ ಮಾಡಿತ್ತು. ಮೆಟ್ರೋ ದರ ಏರಿಕೆ ಬೆನ್ನಲ್ಲೇ ಜನಾಕ್ರೋಶ ಹೆಚ್ಚಾಗಿದೆ. ಮೆಟ್ರೋ ಪ್ರಯಾಣ ದರ ಪರಿಣಾಮದಿಂದ 1.50 ಸಾವಿರ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿತ್ತು. ಒಂದೂವರೆ ತಿಂಗಳ ಬಳಿಕ ಸಹಜಸ್ಥಿತಿಯತ್ತ ಬಂದಿದೆ. ಮೆಟ್ರೋ ಪ್ರಯಾಣ ದರ ಏರಿಕೆಗೂ ಮುನ್ನ ಪ್ರತಿದಿನದ ಸರಾಸರಿ ಪ್ರಯಾಣಿಕರ ಸಂಖ್ಯೆ 8 ರಿಂದ 8.5 ಲಕ್ಷದಷ್ಟಿತ್ತು. ದರ ಹೆಚ್ಚಳದ ನಂತರ ಸರಾಸರಿ ಪ್ರಯಾಣಿಕರ ಸಂಖ್ಯೆ 7 ಲಕ್ಷಕ್ಕೆ ಇಳಿಕೆಯಾಗಿತ್ತು. ಇದೀಗ ಏಪ್ರಿಲ್ 17ರ ಒಂದೇ ದಿನ 9.08 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಲೈನ್ 1ರಲ್ಲಿ 4,35,516 ಮತ್ತು ಲೈನ್- 2ರಲ್ಲಿ 2,85240 ಹಾಗೂ ಇಂಟರ್ ಚೇಂಜ್ ರೈಲುಗಳಲ್ಲಿ 1,87,397 ಪ್ರಯಾಣಿಕರು ಸೇರಿ ಒಟ್ಟು ಬೋರ್ಡಿಂಗ್ ಪ್ರಯಾಣಿಕರ ಸಂಖ್ಯೆ 9,08,153 ತಲುಪಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
