ಆ ಜನರ ಆರೋಗ್ಯ ಹದಗೆಟ್ಟರೆ ಅಥವಾ ಗರ್ಭಿಣಿ ಮಹಿಳೆಯರನ್ನು ತುರ್ತು ಆಸ್ಪತ್ರೆಗೆ ರವಾನಿಸಬೇಕಾದರೆ ಡೋಲಿ ಕಟ್ಟಿಕೊಂಡು ಕಾಡಿನ ರಸ್ತೆಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ನಡೆದೆ ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇತ್ತು.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಏ.19): ಆ ಜನರ ಆರೋಗ್ಯ ಹದಗೆಟ್ಟರೆ ಅಥವಾ ಗರ್ಭಿಣಿ ಮಹಿಳೆಯರನ್ನು ತುರ್ತು ಆಸ್ಪತ್ರೆಗೆ ರವಾನಿಸಬೇಕಾದರೆ ಡೋಲಿ ಕಟ್ಟಿಕೊಂಡು ಕಾಡಿನ ರಸ್ತೆಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ನಡೆದೆ ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇತ್ತು. ಈ ಹಾಡಿ ಜನರ ಡೋಲಿ ವ್ಯವಸ್ಥೆ ಬಗ್ಗೆ ಸಾಕಷ್ಟು ಬಾರಿ ನಿಮ್ಮ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ರೆಸ್ಪಾನ್ಸ್ ಮಾಡಿದ್ದು,ಹಾಡಿ ಜನರಿಗಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸಿದೆ. ಅಲ್ಲದೇ ಸ್ಥಳೀಯರು ಏಷಿಯಾನೆಟ್ ಸುವರ್ಣ ನ್ಯೂಸ್ ಥ್ಯಾಂಕ್ಸ್ ಹೇಳಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಾದ ಇಂಡಿಗನತ್ತ, ಪಡಿಸಲನತ್ತ, ಮೆಂದಾರೆ, ತೇಕಣೆ ಸೇರಿದಂತೆ 18 ಗ್ರಾಮಗಳ ಜನರು ಕಾಡೊಳಗೆ ವಾಸ ಮಾಡ್ತಿದ್ದಾರೆ. ಈ ಎಲ್ಲಾ ಗ್ರಾಮಸ್ಥರು ಕೂಡ ಒಂದು ವೇಳೆ ಅನಾರೋಗ್ಯಕ್ಕೆ ತುತ್ತಾದರೆ, ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಬೇಕಾದರೆ ಅಂಬ್ಯುಲೆನ್ಸ್ ಸೇವೆ ಇರಲಿಲ್ಲ. ಇವರು ಅನಾರೋಗ್ಯ ಉಂಟಾದರೆ ಡೋಲಿ ಕಟ್ಟಿಕೊಂಡು ಹತ್ತಾರು ಕಿಮೀ ನಡೆದೆ ಸಾಗುವ ಪರಿಸ್ಥಿತಿ ಇತ್ತು. ಇನ್ನೂ ರಾತ್ರಿ ವೇಳೆಯೂ ಕೂಡ ಡೋಲಿ ಕಟ್ಟಿಕೊಂಡು ನಡೆದು ಕಾಡು ಪ್ರಾಣಿಗಳ ದಾಳಿಯ ಭಯದ ನಡುವೆ ಆಸ್ಪತ್ರೆಗೆ ಸಾಗಿಸಿದ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.
ಪ್ರತಿಬಾರಿಯೂ ಕೂಡ ನಿಮ್ಮ ಏಷಿಯಾನೆಟ್ ಸುವರ್ಣ ನ್ಯೂಸ್ ಈ ಜನರ ಪರಿಸ್ಥಿತಿ, ಸಮಸ್ಯೆಗಳ ಬಗ್ಗೆ ನಿರಂತರವಾಗಿ ಬೆಳಕು ಚೆಲ್ಲಿತ್ತು. ಜನರ ಸಮಸ್ಯೆಯನ್ನು ಅರಿತ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಇದೀಗಾ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಿದೆ. ಅದಕ್ಕಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇನ್ನೂ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸುಮಾರು 18 ಲಕ್ಷ ರೂಪಾಯಿಯ ಅಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದು ಕಲ್ಲು ಮುಳ್ಳು ಬೆಟ್ಟ ಗುಡ್ಡದ ಹಾದಿಯಲ್ಲಿ ಸಾಗುವ ಸಾಮರ್ಥ್ಯ ಒಳಗೊಂಡಿದೆ.
ಜಾತಿ ಗಣತಿ ವರದಿ ಜಾರಿ ಮಾಡಿದಲ್ಲಿ ಹೋರಾಟ ಅನಿವಾರ್ಯ: ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ
ಪೋರ್ ವ್ಹೀಲ್ ಡ್ರೈವಿಂಗ್ ಅಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದೀಗಾ ಅಂಬ್ಯುಲೆನ್ಸ್ ಅನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲದೇ ಆ ಅಂಬ್ಯುಲೆನ್ಸ್ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಾಧಿಕಾರವೇ ವಹಿಸಿಕೊಂಡಿದೆ. ಅಲ್ಲದೇ ಕಾಡಂಚಿನ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಒಟ್ನಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್ ಸವಿಸ್ತಾರ ವರದಿಗೆ ಸ್ಪಂದಿಸಿದ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಅಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇನ್ನೊಂದೆಡೆ ಅಂಬ್ಯುಲೆನ್ಸ್ ಸಿಕ್ಕಿದ ಸಂತಸದಲ್ಲಿ ಮಲೆ ಮಹದೇಶ್ವರ ಬೆಟ್ಟದ ಸ್ಥಳೀಯರು ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಸಲ್ಯೂಟ್ ಹೊಡೆದಿದ್ದಾರೆ.
