11:44 PM (IST) Mar 18

Karnataka News Live 18 March 2026ಮಂಗಳೂರು - 9 ವರ್ಷದ ಬಾಲಕನಿಗೆ ತಿಂಡಿ ಕೊಟ್ಟು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ 33 ವರ್ಷದ ವ್ಯಕ್ತಿ!

ಮಂಗಳೂರಿನಲ್ಲಿ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಣಾಜೆ ಪೊಲೀಸರು 33 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪಾಕೆಟ್ ಮನಿ ನೆಪದಲ್ಲಿ ಬಾಲಕನನ್ನು ಗೃಹಮಿಂಗ್ ಮಾಡಿ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Read Full Story
11:24 PM (IST) Mar 18

Karnataka News Live 18 March 2026ಮುಂಬೈನಿಂದ ಮಂಗಳೂರು ಕೊಂಕಣ ರೈಲು ಮಾರ್ಗದಲ್ಲಿ ಅಧಿಕಾರಿಗಳ ತಪಾಸಣೆ, ಕಾರಣವೇನು?

ಮುಂಬಯಿಯಿಂದ ಮಂಗಳೂರಿನ ತೋಕೂರುವರೆಗಿನ ಕೊಂಕಣ ರೈಲು ಮಾರ್ಗದಲ್ಲಿ ವಾರ್ಷಿಕ ಮಳೆಗಾಲ ಪೂರ್ವ ತಪಾಸಣೆ ಆರಂಭವಾಗಿದೆ. ರೈಲು ಹಳಿ, ಸುರಂಗ, ಭೂಕುಸಿತ ಸಾಧ್ಯತೆಯಿರುವ ಪ್ರದೇಶಗಳನ್ನು ಪರಿಶೀಲಿಸಿ, ಮಳೆಗಾಲದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನಿರಂತರ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story
10:56 PM (IST) Mar 18

Karnataka News Live 18 March 2026Mangaluru - ಎಂಆರ್‌ಪಿಎಲ್ ಹೊಸ ಮೈಲಿಗಲ್ಲು 1000ನೇ ಪೆಟ್‌ಕೋಕ್ ರೈಲು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ರವಾನೆ

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ತನ್ನ ಎಂಎಂಆರ್‌ಟಿ ರೈಲ್ವೆ ಸೈಡಿಂಗ್‌ನಿಂದ 1,000ನೇ ಪೆಟ್‌ಕೋಕ್ ರೈಲು ರೇಕ್ ಅನ್ನು ಯಶಸ್ವಿಯಾಗಿ ರವಾನಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಐತಿಹಾಸಿಕ ರೇಕ್ ಅನ್ನು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ಕಳುಹಿಸಲಾಗಿದ್ದು, ಈ ಸಾಧನೆಯು ಸಂಸ್ಥೆಯ ಕಾರ್ಯಕ್ಷಮತೆ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
Read Full Story
10:34 PM (IST) Mar 18

Karnataka News Live 18 March 2026Karnataka Rains - ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ - ಹಲವು ಜಿಲ್ಲೆಗಳಲ್ಲಿ ಜನರಿಗೆ ಅಚ್ಚರಿ

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏಕಾಏಕಿ ಸುರಿದ ಆಲಿಕಲ್ಲು ಮಳೆ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಮಧ್ಯಾಹ್ನದಿಂದಲೇ ಆಕಾಶದಲ್ಲಿ ದಟ್ಟ ಮೋಡಗಳು ಕವಿದು ಮಳೆಯ ಸುಳಿವು ನೀಡುತ್ತಿದ್ದವು.

Read Full Story
10:34 PM (IST) Mar 18

Karnataka News Live 18 March 2026ಬೆಚ್ಚಿಬಿದ್ದ ಬೆಂಗಳೂರು - ಅಪ್ಪನನ್ನೇ ಮೂಟೆಯಲ್ಲಿ ಕಟ್ಟಿ ಕೋರಿಯರ್​ ಮಾಡಲು ಬಂದ ಪುತ್ರಿ! ಕಾರಣ ಸರ್ಕಾರವಂತೆ ಕೇಳಿ

ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹಬ್ಬದ ಬಸ್ ದರ ಏರಿಕೆಯನ್ನು ವಿರೋಧಿಸಿ ತನ್ನ ತಂದೆಯನ್ನೇ ಮೂಟೆಯಲ್ಲಿ ಕಟ್ಟಿ ಕೊರಿಯರ್ ಮಾಡಲು ಯತ್ನಿಸಿದ್ದಾಳೆ. ಕೊರಿಯರ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಇದೊಂದು 'ಪ್ರಾಂಕ್' ಎಂದು ಹೇಳಿದ ಕುಟುಂಬಸ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
Read Full Story
10:20 PM (IST) Mar 18

Karnataka News Live 18 March 2026ಮಂಗಳೂರು ಜೈಲಿನಲ್ಲಿ ಕೈದಿಗಳ ದಾಂಧಲೆ - ಜೈಲಾಧಿಕಾರಿ ಮೇಲೆ ಹಲ್ಲೆ, ಬೆಂಕಿ ಹಚ್ಚಿ ದುಸ್ಸಾಹಸ, ಸರ್ಕಾರಿ ಆಸ್ತಿಗೆ ಹಾನಿ!

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಹಿಂಸಾತ್ಮಕ ಕೃತ್ಯ ಎಸಗಿದ್ದಾರೆ. ಜೈಲು ಅಧೀಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿ, ಸರ್ಕಾರಿ ಆಸ್ತಿಗೆ ಹಾನಿ ಮಾಡಿ, ಹಾಸಿಗೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
09:56 PM (IST) Mar 18

Karnataka News Live 18 March 2026Love​ ಹೇಗೆಲ್ಲಾ ಶುರುವಾಗತ್ತೆ ಗೊತ್ತಾ? Bigg Boss ರಕ್ಷಿತಾ ಶೆಟ್ಟಿ ಬಾಯಲ್ಲೇ ಕೇಳಿ ವೆರೈಟಿ ವೆರೈಟಿ ವಿಧಾನ

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಕನಸು ಹಂಚಿಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮೊದಲ ನೋಟದ ಪ್ರೀತಿ ಮತ್ತು ಆಪ್ತ ಸ್ನೇಹಿತನ ಮೇಲಾಗುವ ಪ್ರೀತಿಯ ಬಗ್ಗೆ ಅವರು ಮಾತನಾಡಿದ್ದಾರೆ.
Read Full Story
09:36 PM (IST) Mar 18

Karnataka News Live 18 March 2026ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ

ಕನ್ನಡದ ಪ್ರಖ್ಯಾತ ಚಾನೆಲ್ ಉದಯ ಟಿವಿಯು ಸನ್ ನೆಟ್‌ವರ್ಕ್‌ನಿಂದ ಮರು ಬ್ರ್ಯಾಂಡಿಂಗ್‌ಗೆ ಒಳಗಾಗುತ್ತಿದೆ. ಯುಗಾದಿಯ ವೇಳೆಗೆ 'ಸನ್ ಉದಯ ಟಿವಿ' ಎಂದು ಹೊಸ ಹೆಸರು ಮತ್ತು ಲೋಗೋದೊಂದಿಗೆ ಬದಲಾಗುವ ನಿರೀಕ್ಷೆಯಿದೆ. 

Read Full Story
09:11 PM (IST) Mar 18

Karnataka News Live 18 March 2026Rajamouli - ಈ ಐಡಿಯಾ ನನಗೆ ಯಾಕೆ ಬರಲಿಲ್ಲ? - ಸುಕುಮಾರ್ ಸೀನ್ ನೋಡಿ ರಾಜಮೌಳಿ ಶಾಕ್

ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ 'ವಾರಣಾಸಿ' ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಜಮೌಳಿ ಒಂದು ಸಂದರ್ಶನದಲ್ಲಿ ತಮಗೆ ಇಷ್ಟವಾದ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ.

Read Full Story
09:10 PM (IST) Mar 18

Karnataka News Live 18 March 2026ಯುಗಾದಿ ಸಂಭ್ರಮಕ್ಕೆ ಸರ್ಕಾರಿ ನೌಕರರಿಗೆ ಕಹಿ, ಹಬ್ಬದ ದಿನವೂ ಕೆಲಸಕ್ಕೆ ಬರುವಂತೆ ಸರ್ಕಾರ ಆದೇಶ!

ವಿಧಾನಸಭೆ ಅಧಿವೇಶನದ ಬಾಕಿ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವ ಸಲುವಾಗಿ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯುಗಾದಿ ಹಬ್ಬದ ರಜೆಯನ್ನು ರದ್ದುಗೊಳಿಸಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸರ್ಕಾರ ಆದೇಶಿಸಿದೆ. ಈ ಕ್ರಮವು ಸಿಬ್ಬಂದಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
Read Full Story
08:42 PM (IST) Mar 18

Karnataka News Live 18 March 2026ಇ-ಸ್ವತ್ತು ತಂತ್ರಾಂಶ ದೋಷ ಸತ್ಯ - 15 ದಿನಗಳಲ್ಲಿ ಪರಿಹಾರ - ಸಚಿವ ಪ್ರಿಯಾಂಕ್‌ ಖರ್ಗೆ

ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Read Full Story
08:19 PM (IST) Mar 18

Karnataka News Live 18 March 2026ಮಂಗಳೂರು - ಭೂ ವಿವಾದದ ಸೇಡು, ಅಪ್ಪನಿಗೂ ಶೆಟ್ಟಿಗೂ 2 ಕೋಟಿ ಜಾಗದ ವ್ಯಾಜ್ಯ, ಕಾರು ಹರಿಸಿ ಹತ್ಯೆಗೆ ಯತ್ನಿಸಿದ ಮಗ!

ಮಂಗಳೂರಿನಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವಿವಾದದ ಹಿನ್ನೆಲೆಯಲ್ಲಿ, ಮೊಹಮ್ಮದ್ ಶರೀಫ್ ಎಂಬಾತ ಮೋಹನ್ ದಾಸ್ ಶೆಟ್ಟಿ ಎಂಬುವವರ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಆಘಾತಕಾರಿ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story
07:18 PM (IST) Mar 18

Karnataka News Live 18 March 2026ರಸ್ತೆಯಲ್ಲಿ ಗಲಾಟೆ - ಡ್ರೈವರ್‌ಗೆ ಹೊಡೆಯುವುದನ್ನು ತಡೆಯಲು ಹೋದ ತಾಯಿಯನ್ನೇ ಕೆಳಗೆ ತಳ್ಳಿದ ಮಗ

ಬೆಂಗಳೂರಿನಲ್ಲಿ ಕ್ಯಾಬ್ ಡಿಕ್ಕಿ ಹೊಡೆದಿದ್ದಕ್ಕೆ ಸಿಟ್ಟಿಗೆದ್ದ ಕಾರು ಚಾಲಕ, ಕ್ಯಾಬ್ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ತಡೆಯಲು ಬಂದ ತನ್ನ ತಾಯಿಯನ್ನೇ ದೂರ ತಳ್ಳಿ ಹಲ್ಲೆ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
07:05 PM (IST) Mar 18

Karnataka News Live 18 March 2026ಯುಗಾದಿ ಹೊಸತೊಡಕಿಗೆ ಮಾಂಸ ಪ್ರಿಯರಿಗೆ ಗುಡ್‌ನ್ಯೂಸ್‌, ಮಾಂಸ-ಮೀನು ಬೆಲೆಯಲ್ಲಿ ಭಾರೀ ಇಳಿಕೆ!

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು ಮಾಂಸ ಮತ್ತು ಮೀನು ಖರೀದಿ ಕಡಿಮೆ ಮಾಡಿವೆ. ಇದರಿಂದಾಗಿ ಮಾಂಸದ ಮಾರಾಟದಲ್ಲಿ ಸುಮಾರು 30% ಇಳಿಕೆಯಾಗಿದ್ದು, ಯುಗಾದಿ ಹೊಸತೊಡಕಿಗೆ ಮಾಂಸದ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ.
Read Full Story
07:02 PM (IST) Mar 18

Karnataka News Live 18 March 2026ಯುಗಾದಿ ಹಬ್ಬ ಹಿನ್ನೆಲೆ ಬೆಂಗಳೂರಿಂದ ಊರಿಗೆ - ತುಂಬಿ ತುಳುಕುತ್ತಿರುವ ಮೆಜೆಸ್ಟಿಕ್, ಟಿಕೆಟ್ ಬೆಲೆ ದುಬಾರಿ!

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿ ಉಂಟಾಗಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ವಿಪರೀತವಾಗಿ ಏರಿಸಿದ್ದು, ಇದಕ್ಕೆ ಪ್ರತಿಯಾಗಿ ಸಾರಿಗೆ ಇಲಾಖೆ ದಾಳಿ ನಡೆಸಿ ದಂಡ ವಿಧಿಸುತ್ತಿದೆ.
Read Full Story
06:47 PM (IST) Mar 18

Karnataka News Live 18 March 2026Rishab Shetty - ತೆಲುಗಿನ ಇಬ್ಬರು ಸ್ಟಾರ್ ಹೀರೋಗಳ ಜೊತೆ ರಿಷಬ್ ಶೆಟ್ಟಿ ಸಿನಿಮಾ? ಯಾರವರು ಗೊತ್ತಾ?

'ಕಾಂತಾರ'ದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ, ನಟನಿಗಿಂತ ನಿರ್ದೇಶಕನಾಗಿ ಹೆಚ್ಚು ಬೇಡಿಕೆ ಗಳಿಸಿದ್ದಾರೆ. ಹಲವು ಸ್ಟಾರ್ ನಟರು ರಿಷಬ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಆ ಇಬ್ಬರು ಟಾಲಿವುಡ್ ಸ್ಟಾರ್‌ಗಳು ಯಾರು ಗೊತ್ತಾ?

Read Full Story
06:31 PM (IST) Mar 18

Karnataka News Live 18 March 2026ರಾಜ್ಯದಲ್ಲಿ ಔಷಧಿಗಳ ಖರೀದಿಗೆ 868 ಕೋಟಿ ಟೆಂಡರ್‌ - ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. 868 ಕೋಟಿ ರು. ಮೌಲ್ಯದ ಔಷಧಿ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Read Full Story
06:10 PM (IST) Mar 18

Karnataka News Live 18 March 2026ಮಗನಿಗೆ ಮದ್ವೆ ಮಾಡಿದ್ರೆ ನೀವು ಫಿನಿಶ್‌ ಅಂತಾ ತಾಯಿಗೆ ಹೇಳಿದ ಆರ್ಯವರ್ಧನ್‌ ಗುರೂಜಿ, 'This is business' ಎಂದ ನೆಟ್ಟಿಗರು!

ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಆರ್ಯವರ್ಧನ್‌ ಗುರೂಜಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಯುವಕನೊಬ್ಬನಿಗೆ ಎರಡು ಮದುವೆ ಹಾಗೂ ಸೊಸೆಯಿಂದ ತಾಯಿಗೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ.

Read Full Story
05:57 PM (IST) Mar 18

Karnataka News Live 18 March 2026ಮದುವೆಯಾಗಿ 10 ವರ್ಷ; ಇನ್ನೇನು ಡಿವೋರ್ಸ್‌ ಘೋಷಣೆ ಮಾಡ್ತಾರೆ ಎನ್ನುವಾಗಲೇ ಅಚ್ಚರಿ ಸುದ್ದಿ ಕೊಟ್ಟ ನಟಿ!

Actress Divyanka Tripathi: ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಸೀಮಂತ ಕಾರ್ಯಕ್ರಮ ನಡೆಯಲಿದೆ ಎಂದೂ ವರದಿಗಳು ಹೇಳುತ್ತಿವೆ. ಆದರೆ, ಈ ಜೋಡಿ ಈ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನೂ ಖಚಿತಪಡಿಸಿಲ್ಲ.

Read Full Story
05:42 PM (IST) Mar 18

Karnataka News Live 18 March 2026ವಿಜಯನಗರ ಜಿಲ್ಲೆಯ ರೌಡಿ ಶೀಟರ್‌ಗಳ ಬೆವರಿಳಿಸಿದ ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ !

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರು, 220 ರೌಡಿಶೀಟರ್‌ಗಳಿಗೆ ಪರೇಡ್ ನಡೆಸಿ, ಅಪರಾಧ ಚಟುವಟಿಕೆಗಳನ್ನು ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುಧಾರಣೆಗೆ ಅವಕಾಶವಿದ್ದು, ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತೆ ಸಲಹೆ ನೀಡಿದ ಅವರು, ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Read Full Story