Karnataka Rains: ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ: ಹಲವು ಜಿಲ್ಲೆಗಳಲ್ಲಿ ಜನರಿಗೆ ಅಚ್ಚರಿ
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏಕಾಏಕಿ ಸುರಿದ ಆಲಿಕಲ್ಲು ಮಳೆ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಮಧ್ಯಾಹ್ನದಿಂದಲೇ ಆಕಾಶದಲ್ಲಿ ದಟ್ಟ ಮೋಡಗಳು ಕವಿದು ಮಳೆಯ ಸುಳಿವು ನೀಡುತ್ತಿದ್ದವು.

ಮೋಡಗಳು ಕವಿದು ಮಳೆಯ ಸುಳಿವು
ಬೆಂಗಳೂರು (ಮಾ.18): ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏಕಾಏಕಿ ಸುರಿದ ಆಲಿಕಲ್ಲು ಮಳೆ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಮಧ್ಯಾಹ್ನದಿಂದಲೇ ಆಕಾಶದಲ್ಲಿ ದಟ್ಟ ಮೋಡಗಳು ಕವಿದು ಮಳೆಯ ಸುಳಿವು ನೀಡುತ್ತಿದ್ದವು. ಸಂಜೆ ವೇಳೆಗೆ ಆಲಿಕಲ್ಲುಗಳೊಂದಿಗೆ ಸುರಿದ ಮಳೆ ಜನರಿಗೆ ಅಚ್ಚರಿವುಂಟು ಮಾಡಿತು.
ಬೃಹತ್ ಗಾತ್ರದ ಆಲಿಕಲ್ಲು
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಜೋರಾಗಿಯೇ ಸುರಿಯಿತು. ಕೆಲಕಾಲ ರಸ್ತೆಗಳಲ್ಲಿ ಆಲಿಕಲ್ಲುಗಳು ರಾಶಿಯಾಗಿ ಬಿದ್ದ ದೃಶ್ಯ ಕಂಡುಬಂತು. ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಬೃಹತ್ ಗಾತ್ರದ ಆಲಿಕಲ್ಲು ಬಿದ್ದಿದ್ದು, ಸ್ಥಳೀಯರು ಅದನ್ನು ನೋಡಿ ಸಂತಸಪಟ್ಟರು. ಹಾಗೂ ಆಲಿಕಲ್ಲು ಮಳೆಗೆ ಮಕ್ಕಳು ಖುಷಿಪಟ್ಟರು.
ಆಲಿಕಲ್ಲು ಮಳೆಗೆ ಸಂಭ್ರಮಿಸುತ್ತಿರುವ ಮಕ್ಕಳು
ವಿವಿಧ ರಸ್ತೆಗಲ್ಲಿ ಏಕಾಏಕಿ ಸುರಿದ ಮಳೆಯಿಂದ ಜನರು ತಕ್ಷಣ ಆಶ್ರಯಕ್ಕಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಮಳೆಯಿಂದಾಗಿ ಪರದಾಡಬೇಕಾಯಿತು. ಕೆಲವೆಡೆ ಸಂಚಾರಕ್ಕೂ ತಾತ್ಕಾಲಿಕ ಅಡಚಣೆ ಉಂಟಾಯಿತು.
ಖರೀದಿ ಮತ್ತು ಮಾರಾಟಕ್ಕೆ ತೊಂದರೆ
ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾದ ಕಾರಣ ತಗ್ಗು ಪ್ರದೇಶಗಳು ಜಲಾವೃತವಾಗಿ ಜನರು ತೊಂದರೆ ಅನುಭವಿಸಬೇಕಾಯಿತು. ಆಲಿಕಲ್ಲು ಮಳೆಯ ಪರಿಣಾಮವಾಗಿ ಭಾರೀ ಜೋರಾಗಿ ನಡೆಯುತ್ತಿದ್ದ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬದ ಖರೀದಿ ಮತ್ತು ಮಾರಾಟಕ್ಕೆ ತೊಂದರೆಯುಂಟಾಯಿತು. ಮಳೆಯಿಂದ ವಹಿವಾಟು ಕೆಲಕಾಲ ವ್ಯತ್ಯಯಗೊಂಡವು.
ರಾಜ್ಯದ 4 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ
ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣದೇವ ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ. ಹಾಸನ, ರಾಯಚೂರು, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ಸುಡುವ ಬಿಸಿಲಿಗೆ ಬೆಂದಿದ್ದ ಜನರಿಗೆ ಸಮಾಧಾನ ತಂದಿದೆ. ಆದರೆ, ಕೆಲವು ಕಡೆ ಆಲಿಕಲ್ಲು ಮಳೆಯಿಂದಾಗಿ ರೈತರಿಗೆ ಸಂಕಷ್ಟವೂ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

