ಮೇ.1 ರಿಂದ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ, ಪ್ರತಿ ದಿನ 20 ಕಿ.ಮಿ ಉಚಿತ

Synopsis
ಭಾರತದಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಇದೀಗ ಮೇ. 1 ರಿಂದ ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಂಗ್ರಹ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ.
ನವದೆಹಲಿ(ಏ.15) ಭಾರತದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವಾಗ ಟೋಲ್ ಪಾವತಿ ಮಾಡಬೇಕು. ಹಿಂದೆ ಇದ್ದ ನಗದು ವ್ಯವಹಾರಕ್ಕೆ ಅಂತ್ಯ ಹಾಡಿ ಫಾಸ್ಟ್ಯಾಗ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಸ್ಟಮ್ ಮೂಲಕ ಇದೀಗ ಟೋಲ್ ಸಂಗ್ರಹ ವಾಹುತ್ತಿದೆ. ಇದೀಗ ಈ ವ್ಯವಸ್ಥೆಗಿಂತ ಅತ್ಯಾಧುನಿಕ ಹಾಗೂ ಹೆಚ್ಚು ಕಾರ್ಯಕ್ಷಮತೆಯ ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಿಸ್ಟಮ್ ಮೇ 1 ರಿಂದ ಆರಂಭಗೊಳ್ಳುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
20 ಕಿಲೋಮೀಟರ್ ಉಚಿತ ಪ್ರಯಾಣ
ಹೊಸ ಟೋಲ್ ವ್ಯವಸ್ಥೆ ಅಂದರೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್(GNSS ) ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಈ ವ್ಯವಸ್ಥೆಯಲ್ಲಿ ವಾಹನ ಟೋಲ್ ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಆಧರಿಸಿ ಟೋಲ್ ಶುಲ್ಕ ವಿಧಿಸಲಿದೆ. GNSS ಟೋಲ್ ವ್ಯವಸ್ಥೆ ಅಡಿಯಲ್ಲಿ ಪ್ರತಿ ದಿನ ಟೋಲ್ ರಸ್ತೆಯಲ್ಲಿ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ. ಅಂದರೆ 20 ಕಿಲೋಮೀಟರ್ ಬಳಿಕ ಶುಲ್ಕ ಅನ್ವಯವಾಗುತ್ತದೆ. ಆರಂಭಿಕ 20 ಕಿಲೋಮೀಟರ್ ಉಚಿತವಾಗರಲಿದೆ ಎಂದು ಗಡ್ಕರಿ ಹೇಳಿದ್ದಾರೆ.ಇದು ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.
2 ಪ್ರಮುಖ ಟೋಲ್ ವಿನಾಯಿತಿ ಬಗ್ಗೆ ಸಾರಿಗೆ ಇಲಾಖೆ ಪ್ರಸ್ತಾವಣೆ ಪರಿಗಣಿಸಿದ ನಿರ್ಮಲಾ ಸೀತಾರಾಮನ್!
ಏನಿದು GNSS ಟೋಲ್ ಸಿಸ್ಟಮ್?
ಸ್ಯಾಟಲೈಟ್ ಆಧಾರಿತ ನ್ಯಾವಿಗೇಶನ್ ಹಾಗೂ ಟೋಲ್ ಸಿಸ್ಟಮ್ ಇದಾಗಿದೆ. ಉಪಗ್ರಹ ಮೂಲಕ ವಾಹನ ಟ್ರಾಕ್ ಮಾಡಿ ಶುಲ್ಕ ವಿಧಿಸಲಾಗುತ್ತದೆ. ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್ ವೇಗೆ ವಾಹನ ಎಂಟ್ರಿಕೊಟ್ಟ ಬೆನ್ನಲ್ಲೇ GNSS ಟ್ರಾಕ್ ಮಾಡಲಿದೆ. ಬಳಿಕ ವಾಹನ ಹೆದ್ದಾರಿಯಿಂದ ಅಂದರೆ ಟೋಲ್ ರಸ್ತೆಯಿಂದ ಎಕ್ಸಿಟ್ ಆಗುವ ವರೆಗಿನ ಕಿಲೋಮಟರ್ ಹಾಗೂ ಹೆದ್ದಾರಿಗೆ ಅನುಗುಣವಾಗಿ ಟೋಲ್ ಶುಲ್ಕ ವಿಧಿಸಲಿದೆ. ಈ ಶುಲ್ಕ ವಾಹನದ ರಿಜಿಸ್ಟ್ರೇಶನ್ ನಂಬರ್ ಲಿಂಕ್ ಆಗಿರು ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳಲಿದೆ. ಅಂದರೆ ಇದೀಗ ಫಾಸ್ಟ್ಯಾಗ್‌ನ್ನು ಹೇಗೆ ಬ್ಯಾಂಕ್ ಖಾತೆ ಜೊತೆ ಲಿಂಕ್ ಮಾಡಲಾಗುತ್ತದೋ ಹಾಗೆ ಇಲ್ಲೂ ಕೂಡ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತಗೊಳ್ಳಲಿದೆ. ಇದಕ್ಕಾಗಿ ವಾಹನಗಳಲ್ಲಿ ಆನ್ ಬೋರ್ಡ್ ಯುನಿಟ್(OBU) ಅಳವಡಿಸಲಾಗುತ್ತದೆ. ಇದರಿಂದ ಹೆದ್ದಾರಿ ಅಥವಾ ಟೋಲ್ ರಸ್ತೆಯಲ್ಲಿ ವಾಹನ ಎಷ್ಟು ದೂರ ಸಾಗಿದೆ ಅದರ ಮೇಲೆ ನಿಖರವಾಗಿ ಟೋಲ್ ಸಂಗ್ರಹ ಮಾಡಲಾಗುತ್ತದೆ.
ಯಾರೂ ಕೂಡ ಸರದಿ ಸಾಲಿನಲ್ಲಿ ಟೋಲ್ ಬೂತ್‌ನಲ್ಲಿ ಸಾಗಬೇಕಿಲ್ಲ. ಎಲ್ಲೂ ನಿಲ್ಲಬೇಕಿಲ್ಲ. ತಮ್ಮಿಷ್ಟದಂತೆ ಸಾಗುತ್ತಲೇ ಇರಬಹುದು. ಇತತ್ತ ಜಿಎನ್ಎಸ್ಎಸ್ ಅಟೋಮ್ಯಾಟಿಕ್ ಆಗಿ ಶುಲ್ಕ ಕಡಿತಗೊಳಿಸಲಿದೆ. ಸದ್ಯ ಟೋಲ್ ಬೂತ್ ಬರುವಾಗ ಸರ್ವೀಸ್ ರಸ್ತೆಗೆ ಇಳಿದು, ಬಳಿಕ ಹೆದ್ದಾರಿ ಪ್ರವೇಶಿಸುವರೂ ಟೋಲ್ ಪಾವತಿಸಬೇಕು. ಹೆದ್ದಾರಿಗೆ ಎಂಟ್ರಿಕೊಟ್ಟಲ್ಲಿಂದ ಟೋಲ್ ಶುಲ್ಕ ಆರಂಭಗೊಳ್ಳುತ್ತದೆ. ಆದರೆ OBU ಫಿಕ್ಸಿಂಗ್ ಕೆಲ ದಿನಗಳು ತೆಗೆದುಕೊಳ್ಳಲಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈಗಾಗಲೇ ಕೆಲ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಈ GNSS ಟೋಲ್ ಸಿಸ್ಟಮ್ ಜಾರಿ ಮಾಡಲಾಗಿದೆ. ಇದೀಗ ಮೇ.1 ರಿಂದ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮೇ.1 ರಿಂದ ಹಂತ ಹಂತವಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಈ GNSS ಟೋಲ್ ಸಿಸ್ಟಮ್ ಅನ್ವಯವಾಗಲಿದೆ.