Min read

ಚಾಣಕ್ಯನೀತಿ: ತಾಯಿ ಗರ್ಭದಿಂದ ಮಹಿಳೆ ಪಡೆಯುವ 5 ಕೆಟ್ಟ ಹವ್ಯಾಸಗಳು

Chanakya Niti 5 Inborn Bad Habits in Women by birth sat

Synopsis

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರ ಸ್ವಭಾವದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಮಹಿಳೆಯರಲ್ಲಿ ಹುಟ್ಟಿನಿಂದಲೇ ಇರುವ 5 ಕೆಟ್ಟ ಹವ್ಯಾಸಗಳ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಅವರು ಬರೆದದ್ದನ್ನು ಎಲ್ಲರೂ ಸತ್ಯ ಎಂದು ಒಪ್ಪುತ್ತಾರೆ.

ಚಾಣಕ್ಯ ನೀತಿ: ಮಹಿಳೆಯರ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಈ ಮಾತು ಬಹುಮಟ್ಟಿಗೆ ನಿಜವೆನಿಸುತ್ತದೆ. ಭಾರತದ ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯರು ಕೂಡ ತಮ್ಮ ನೀತಿಗಳಲ್ಲಿ ಮಹಿಳೆಯರ ಸ್ವಭಾವದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಅವರ ಪ್ರಕಾರ, ಮಹಿಳೆಯರಲ್ಲಿ ಕೆಲವು ಕೆಟ್ಟ ಹವ್ಯಾಸಗಳು ಹುಟ್ಟಿನಿಂದಲೇ ಇರುತ್ತವೆ. ಕಾಲಕ್ರಮೇಣ ಈ ಕೆಟ್ಟ ಹವ್ಯಾಸಗಳು ಹೆಚ್ಚಾಗುತ್ತವೆ. ಯಾವುವು ಈ ಕೆಟ್ಟ ಹವ್ಯಾಸಗಳು ಎಂದು ತಿಳಿಯಿರಿ…

ಚಾಣಕ್ಯ ನೀತಿಯ ಪ್ರಕಾರ-
ಅನೃತಂ ಸಾಹಸಂ ಮಾಯಾ ಮೂರ್ಖತ್ವಮತಿಲೋಭಿತಾ।
ಅಶೌಚತ್ವಂ ನಿರ್ದಯತ್ವಂ ಸ್ತ್ರೀಣಾಂ ದೋಷಾಃ ಸ್ವಭಾವಜಾಃ।।

ಈ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು ಮಹಿಳೆಯರ 5 ಕೆಡುಕುಗಳ ಬಗ್ಗೆ ಹೇಳಿದ್ದಾರೆ, ಅವು ಈ ರೀತಿ ಇವೆ –

1. ಯೋಚಿಸದೆ ಕೆಲಸ ಮಾಡುವುದು: 
ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಪ್ರತಿಯೊಂದು ಕೆಲಸವನ್ನು ಮಾಡುವಾಗ ತುಂಬಾ ಆತುರಪಡುತ್ತಾರೆ. ಅವರು ಮುಂದೆ-ಹಿಂದೆ ಮತ್ತು ಒಳ್ಳೆಯದು-ಕೆಟ್ಟದ್ದನ್ನು ಯೋಚಿಸುವುದಿಲ್ಲ ಮತ್ತು ಯಾವುದೇ ದೊಡ್ಡ ಹೆಜ್ಜೆಯನ್ನಿಡುತ್ತಾರೆ. ಮಹಿಳೆಯರ ಈ ಹವ್ಯಾಸ ಒಳ್ಳೆಯದಲ್ಲ ಏಕೆಂದರೆ ಯೋಚಿಸದೆ ಮಾಡಿದ ಕೆಲಸಕ್ಕೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಇದನ್ನೂ ಓದಿ: ಈ 4 ರಾಶಿಯವರು ಪ್ರೀತಿಯಲ್ಲಿ ಸೂಪರ್ ಅದೃಷ್ಟವಂತರು, ಹೃದಯ ಕದಿಯುವಲ್ಲಿ ನಿಪುಣರು

2. ಸಣ್ಣ-ಪುಟ್ಟ ವಿಷಯಗಳಿಗೆ ಆಸೆ ಪಡುವುದು:
ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಹುಟ್ಟಿನಿಂದಲೇ ಲೋಭಿ (ಆಸೆಬುರುಕ) ಸ್ವಭಾವದವರು. ಅವರಿಗೆ ತಮ್ಮದಕ್ಕಿಂತ ಹೆಚ್ಚಾಗಿ ಇತರರ ಹಣದ ಮೇಲೆ ಆಸಕ್ತಿ ಇರುತ್ತದೆ. ತಮ್ಮ ಲೋಭಿ ಸ್ವಭಾವದಿಂದಾಗಿ ಮಹಿಳೆಯರು ಕೆಲವೊಮ್ಮೆ ತಮ್ಮ ಮಟ್ಟಕ್ಕಿಂತ ಕೆಳಗಿಳಿದು ಸಮಾಜದಲ್ಲಿ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಾರೆ.

3. ಮೂರ್ಖರೂ ಆಗಿರುತ್ತಾರೆ ಮಹಿಳೆಯರು:
ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರಲ್ಲಿ ಪುರುಷರಿಗಿಂದ ಸ್ವಲ್ಪ ಹೆಚ್ಚಾಗಿಯೇ ಮೂರ್ಖತನ ತುಂಬಿರುತ್ತದೆ. ಮೂರ್ಖರು ಏಕೆಂದರೆ ಯಾರಾದರೂ ಅವರನ್ನು ಸುಲಭವಾಗಿ ಮೋಸಗೊಳಿಸಬಹುದು. ಮಹಿಳೆಯರು ಸುಲಭವಾಗಿ ಯಾರೇ ಬಣ್ಣ ಬಣ್ಣದ ಮಾತನಾಡಿದರೂ ಅವರ ಮಾತಿಗೆ ಬಹುಬೇಗನೆ ಮರಳಾಗಿಬಿಡುತ್ತಾರೆ. ಸರಿ ಮತ್ತು ತಪ್ಪಿನ ಬಗ್ಗೆ ಯೋಚಿಸದೆ ಮೂರ್ಖತನದಿಂದ ಕೆಲಸ ಮಾಡುವುದು ಮಹಿಳೆಯರ ಹವ್ಯಾಸ. ಈಗಲೂ ಇದಕ್ಕೆ ಗ್ರಾಮೀಣ ಭಾಗದಲ್ಲಿ ಮಹಿಳೆಯನ್ನೇ ಅತಿಹೆಚ್ಚಾಗಿ ಮೋಸಗೊಳಿಸುತ್ತಾರೆ.

4. ಕೊಳಕಿನಲ್ಲಿ ವಾಸಿಸುವುದು: 
ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ಸೋಮಾರಿತನದಿಂದ ಮನೆಯನ್ನು ಸ್ವಚ್ಛವಾಗಿಡುವುದಿಲ್ಲ ಮತ್ತು ತಮ್ಮ ದೇಹವನ್ನು ಸ್ವಚ್ಛವಾಗಿಡುವುದಿಲ್ಲ. ಈ ನ್ಯೂನತೆಯೂ ಮಹಿಳೆಯರಲ್ಲಿ ಹುಟ್ಟಿನಿಂದಲೇ ಇರುತ್ತದೆ. ಮಹಿಳೆಯರ ಈ ನ್ಯೂನತೆ ಅವರ ಅಪಖ್ಯಾತಿಗೆ ಕಾರಣವಾಗುತ್ತದೆ. ಮನೆಯಲ್ಲಿ ಗಂಡಸು ಮನೆಯನ್ನು ಎಷ್ಟ್ಏ ಸ್ವಚ್ಛವಾಗಿಡುವಂತೆ ಸೂಚಿಸಿದರೂ ಅದನ್ನು ಆಲಸ್ಯ ಮಾಡುವುದು ಅವರ ಜನ್ಮಜಾತವಾಗಿ ರೂಢಿಸಿಕೊಂಡು ಬಂದಿರುತ್ತಾರೆ. ಕೆಲವರು ಗಂಡ ಬರುವ ವೇಳೆಗೆ ಮಾತ್ರ ಮನೆ ಸ್ವಚ್ಛ ಮಾಡುತ್ತಾರೆ. ಇನ್ನು ಕೆಲವರು ಇದಕ್ಕೆ ಅಪವಾದ ಎಂಬಂತೆ ಯಾವಾಗಲೂ ಮನೆ ಸ್ವಚ್ಛತೆಯಿಂದ ಇಟ್ಟುಕೊಳ್ಳುತ್ತಾರೆ.

ಇದನ್ನೂ ಓದಿ: ಚಾಣಕ್ಯನ ಪ್ರಕಾರ ಗಂಡನ ಜೀವನ ನರಕ ಮಾಡುವ ಹೆಂಡತಿ ಇವಳು

5. ಮಹಿಳೆಯರು ನಿರ್ದಯಿಗಳು: 
ಆಚಾರ್ಯ ಚಾಣಕ್ಯರ ಅಭಿಪ್ರಾಯದಲ್ಲಿ, ಮಹಿಳೆಯರು ಪುರುಷರಿಗಿಂತ ಹೆಚ್ಚು ನಿರ್ದಯಿಗಳು. ತಮ್ಮ ಸ್ವಾರ್ಥಕ್ಕಾಗಿ ಅವರು ಯಾರಿಗಾದರೂ ಹಾನಿ ಮಾಡಲು ಹಿಂಜರಿಯುವುದಿಲ್ಲ. ಮಹಿಳೆಯರು ತಮ್ಮ ಸ್ವಾರ್ಥಕ್ಕಾಗಿ ಕುಟುಂಬ, ಪತಿ ಮತ್ತು ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಇದಕ್ಕೆ ಎಲ್ಲ ಕಾಲದಲ್ಲಿಯೂ ನೂರಾರು ಉದಾಹರಣೆಗಳು ಸಿಗುತ್ತವೆ. ಇದು ಪ್ರಾಣಿ ಜಾತಿಗಳಲ್ಲಿಯೂ ಕೂಡ ಕಂಡುಬರುತ್ತದೆ.

ಹಕ್ಕು ನಿರಾಕರಣೆ: ಈ ಲೇಖನದಲ್ಲಿರುವ ಮಾಹಿತಿಯನ್ನು ಜ್ಯೋತಿಷಿಗಳು ಒದಗಿಸಿದ್ದಾರೆ. ನಾವು ಈ ಮಾಹಿತಿಯನ್ನು ನಿಮಗೆ ತಲುಪಿಸುವ ಮಾಧ್ಯಮ ಮಾತ್ರ. ಬಳಕೆದಾರರು ಈ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕು.

Latest Videos