ಅಭಿಮಾನಿಗಳಿಗೆ ವಿಡಿಯೋ ಮೂಲಕ ಮಹತ್ವದ ಮೆಸೇಜ್ ಕೊಟ್ಟ ರಶ್ಮಿಕಾ ಮಂದಣ್ಣ

Synopsis
ಸಿಕಂದರ್ ಬಳಿಕ ಸಣ್ಣ ಬ್ರೇಕ್ ಪಡೆದ ರಶ್ಮಿಕಾ ಮಂದಣ್ಣ ಇದೀಗ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ರಾತ್ರಿಯಿಡಿ ಶೂಟಿಂಗ್ ಮಾಡಿ ಬೆಳಗ್ಗೆ ನಿದ್ದೆ ಗಣ್ಣಿನಲ್ಲೇ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಿಗೆ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಮುಂಬೈ(ಏ.15) ಸತತ ಸೂಪರ್ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಮ ಅಭಿನಯದ ಸಿಕಂದರ್ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಸಿಕಂದರ್ ಸಿನಿಮಾ ಬಳಿಕ ಹುಟ್ಟುಹಬ್ಬ ಆಚರಿಸಲು ಒಮನ್ ದೇಶಕ್ಕೆ ತೆರಳಿದ್ದ ರಶ್ಮಿಕಾ ಮಂದಣ್ಣ ಇದೀಗ ಮತ್ತೆ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಸಣ್ಣ ಬ್ರೇಕ್ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ರಾತ್ರಿಯಿಡಿ ಸಿನಿಮಾ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ ವಿಶ್ರಾಂತ ಪಡೆಯದೇ ಅಭಿಮಾನಿಗಳಿಗಾಗಿ ವಿಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಬಳಿಕ ಮಹತ್ವದ ಮೆಸೇಜ್ ನೀಡಿದ್ದಾರೆ.
ರಾತ್ರಿಯಿಡಿ ಶೂಟಿಂಗ್
ಎಪ್ರಿಲ್ 5 ರಂದು 29ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ ಸಣ್ಣ ಬ್ರೇಕ್ ಪಡೆದುಕೊಂಡಿದ್ದರು. ಆದರೆ ಎಪ್ರಿಲ್ 9 ರಂದು ರಶ್ಮಿಕಾ ಮಂದಣ್ಣ ತಾವು ಸಿನಿಮಾ ಶೂಟಿಂಗ್‌ಗೆ ಮರಳಿರುವುದಾಗಿ ಹೇಳಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಸತತವಾಗಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ. ಇದರ ನಡುವೆ ಕಳೆದ ಸಂಪೂರ್ಣ ರಾತ್ರಿ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಬಳಿಕ ನಿದ್ದೆಗಣ್ಣಿನಲ್ಲಿ ಅಚಾನಕ್ಕಾಗಿ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಪ್ರತ್ಯಕ್ಷರಾಗಿದ್ದಾರೆ.
ಆಪ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಬಿಗ್ ಶಾಕ್
ರಶ್ಮಿಕಾ ಮಂದಣ್ಣ ಮೆಸೇಜ್
ಹಾಯ್ ಗಯ್ಸ್ , ಗುಡ್ ಮಾರ್ನಿಂಗ್ ಎಂದು ವಿಡಿಯೋ ಆರಂಭಿಸಿದ ರಶ್ಮಿಕಾ ಮಂದಣ್ಣ, ಅಚಾನಕ್ಕಾಗಿ ಮಾಡಿದ ವಿಡಿಯೋ. ಕಳದ ಸಂಪೂರ್ಣ ರಾತ್ರಿ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದೆ. ನಿದ್ದೆ ಆಗಿಲ್ಲ, ವಿಶ್ರಾಂತಿ ಮಾಡಿಲ್ಲ. ಹೀಗಾಗಿ ಕಣ್ಣುಗಳು ಕೆಂಪಾಗಿದೆ, ಸುಸ್ತಾಗಿದೆ. ಯಾದೃಚ್ಛಿಕವಾಗಿ ಸಂದೇಶ ನೀಡುತ್ತಿದ್ದೇನೆ. ಎಲ್ಲಿರಗೂ ಶುಭೋದ. ಎಲ್ಲರ ಈ ದಿನ ಉತ್ತಮವಾಗಿರಲಿ. ಇದರ ಜೊತೆಗೆ ನಾನು ಕೆಲ ಪಾಸಿಟಿವಿಟಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಹಲವರಿಗೆ ಈ ಪಾಸಿಟಿವಿಟಿ ಅಗತ್ಯವಾಗಿದೆ. ಯಾರಿಗೆಲ್ಲೂ ಬೇಡ ಎಂದರೂ ಈಗಾಗಲೇ ಸಂದೇಶ ಕಳುಹಿಸಿದ್ದೇನೆ. ತುಂಬಾ ಪ್ರೀತಿ, ಅಷ್ಟೇ ಪ್ರೀತಿಯ ಆಲಿಂಗನ ಹಾಗೂ ಎಲ್ಲರಿಗೂ ಸಿಹಿ ಮುತ್ತು ಎಂದು ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಪಾಸಿಟಿವಿಟಿ ಸಂದೇಶ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಹಲವರು ದಿನದ ಆರಂಭದಲ್ಲಿ ಈ ಪಾಸಿಟಿವಿಟಿ ಎಲ್ಲರಿಗೂ ಬೇಕಿದೆ, ಧನ್ಯವಾದಗಳು ಎಂದಿದ್ದಾರೆ.
ರಶ್ಮಿಕಾ ಮಂದಣ್ಮ ಇದೀಗ ಬಾಲಿವುಡ್ ಸೇರಿದಂತೆ ಇತರ ಕೆಲ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಸತತ ಸೂಪರ್ ಹಿಟ್ ಸಿನಿಮಾ ನೀಡಿದ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈಗಾಗಲೇ ಹಲವು ಸಿನಿಮಾಗಳಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಓಮನ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟ ಹಬ್ಬ ಆಚರಣೆ ಕುತೂಹಲಕ್ಕೆ ಕಾರಣವಾಗಿತ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ಹುಟ್ಟು ಹಬ್ಬ ಆಚರಿಸಿದ್ದಾರೆ ಎಂದು ಅಭಿಮಾನಿಗಳು ಖಚಿತಪಡಿಸಿದ್ದರು.
ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ ಹುಟ್ಟು ಹಬ್ಬ ಆಚರಣೆ ಫೋಟೋ ಹಾಗೂ ವಿಜಯ್ ದೇವರಕೊಂಡ ಪ್ರವಾಸ ಫೋಟೋಗಳಲ್ಲಿ ಸಾಮ್ಯತೆ ಇತ್ತು. ಇಬ್ಬರು ಬೀಚ್ ಫೋಟೋಗಳನ್ನು ಹಂಚಿಕೊಂಡಿದ್ದರು. ಇಬ್ಬರ ಫೋಟೋಗಳಲ್ಲಿ ಹಲವು ಸಾಮ್ಯತೆ ಇದ್ದ ಕಾರಣ ಅಭಿಮಾನಿಗಳು ಇವರಿಬ್ಬರು ಜೊತೆಗಿದ್ದಾರೆ ಎಂದು ಖಚಿತಪಡಿಸಿದ್ದರು.
ದೇವರಕೊಂಡ ಜೊತೆ ಬರ್ತ್‌ಡೇ ಆಚರಿಸಿದ್ರಾ ರಶ್ಮಿಕಾ ಮಂದಣ್ಣ? ಇಬ್ಬರ ಬೀಚ್ ಫೋಟೋ ವೈರಲ್