ಬೆಂಗಳೂರಿನಲ್ಲಿ 22 ವರ್ಷದ ಯುವತಿ ಜೊಮ್ಯಾಟೊದಲ್ಲಿ ಆಹಾರ ಆರ್ಡರ್ ಮಾಡಿದ್ದರು. ಡೆಲಿವರಿ ತಡವಾದ್ದರಿಂದ ವಿಚಾರಿಸಿದಾಗ, ಡೆಲಿವರಿ ಬಾಯ್ ಆಕ್ರೋಶ ವ್ಯಕ್ತಪಡಿಸಿ ಬೆದರಿಕೆ ಹಾಕಿದ್ದಾನೆ. ಆಹಾರವನ್ನು ನೆಲದ ಮೇಲೆ ಎಸೆದು, ಲಿಫ್ಟ್ ಬಾಗಿಲಿಗೆ ಹಾನಿ ಮಾಡಿದ್ದಾನೆ. ಯುವತಿ ಜೊಮ್ಯಾಟೊಗೆ ದೂರು ನೀಡಿದ್ದು, ಭದ್ರತಾ ಭೀತಿ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಯುವತಿ ಜೊಮೆಟೋ ಆ್ಯಪ್ ಮೂಲಕ ಫುಡ್ ಆರ್ಡರ್ ಮಾಡಿದರೆ, ಆಹಾರವನ್ನು ಡೆಲಿವರಿ ಕೊಡುವುದನ್ನು ಬಿಟ್ಟು, ಈ ಜೊಮೆಟೋ ಡೆಲಿವರಿ ಬಾಯ್ ಜೀವ ಬೆದರಿಕೆ ಹಾಕಿ ಬಂದಿದ್ದಾನೆ. ಇದರಿಂದ 22 ವರ್ಷದ ಯುವತಿ ಆತಂಕಗೊಂಡಿದ್ದು, ನನಗೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡದ್ದಾರೆ.

ನಾನು 220 ವರ್ಷದ ಯುವತಿ. ನಾನು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, ಇಂದು ಮುಂಜಾನೆ ಜೊಮಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದೆ. ಆದರೆ ಊಟ ಬರುವುದು ಇನ್ನೂ 1 ಗಂಟೆ ತಡವಾಗುತ್ತದೆ ಎಂದು ತೋರಿಸಿದ್ದರಿಂದ ನಾನು ದಿನನಿತ್ಯದ ಕೆಲಸಗಳಲ್ಲಿ ಸಾಮಾನ್ಯವಾಗಿ ತೊಡಗಿಕೊಂಡೆನು. ಸಮಯ ಬೇಜಾನ್ ಇದ್ದುದರಿಂದ ಡೆಲಿವರಿ ಅಪ್‌ಡೇಟ್ ಅನ್ನು ಪರಿಶೀಲಿಸಲು ತಲೆಕೆಡಿಸಿಕೊಳ್ಳಲಿಲ್ಲ. ಸುಮಾರು ಒಂದು ಗಂಟೆಯ ನಂತರ, ನನ್ನ ಡೆಲಿವರಿ ವ್ಯಕ್ತಿ ಎಲ್ಲಿದ್ದಾನೆ ಎಂದು ನೋಡಲು ನಾನು ಜೊಮಾಟೋ ಅಪ್ಲಿಕೇಶನ್ ಅನ್ನು ಪರಿಶೀಲಿಸಿದೆ. ಆಗ 10 ನಿಮಿಷಗಳ ಹಿಂದೆ ನಾನು ಮಾಡಿದ ಊಟದ ಆರ್ಡರ್ ಅನ್ನು ಡೆಲಿವರಿ ಮಾಡಲಾಗಿದೆ ಎಂದು ಅಲ್ಲಿ ತೋರಿಸಲಾಗಿತ್ತು. ಇದನ್ನು ನೋಡಿದ ನಾನು ಆರಂಭದಲ್ಲಿ ದಿಗ್ಭ್ರಮೆಗೊಂಡೆ. ನಾನು ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರೂ ಎಂದಿಗೂ ನನಗೆ ಈ ತರಹದ ಘಟನೆ ಸಂಭವಿಸಿಲ್ಲ.

ಊಟ ಡೆಲಿವರಿ ಆಗಿದೆ ಎಂದು ತೋರಿಸಿದ್ದರಿಂದ ನಾನು ಡೆಲಿವರಿ ಬಾಯ್‌ಗೆ ಕರೆ ಮಾಡಲು ನಿರ್ಧರಿಸಿದೆ. ಅವರೊಂದಿಗೆ ಕರೆ ಮಾಡಿ ಮಾತನಾಡಿದಾಗ, ಅವರು ಕಿರಿಕಿರಿಗೊಂಡಂತೆ ತೋರಿದರು ಮತ್ತು ಆರಂಭದಲ್ಲಿ ನಾನು ವಂಚನೆ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂಬಂತೆ ನನ್ನ ಮೇಲೆಯೇ ಕೂಗಾಡಿದರು. ಜೊತೆಗೆ, ನಾನು ಅವನ ಮೇಲೆ ಆಪಾದನೆ ಮಾಡುತ್ತಿದ್ದೇನೆ ಎಂದರಿತು, ನನ್ನ ಮೇಲೆಯೇ ವಾಪಸ್ ಹಲವು ಆಪಾದನೆಯನ್ನು ಹಾಕಲು ಪ್ರಯತ್ನಿಸಿದರು. ಇದರಿಂದ ನಾನು ಇನ್ನೂ ಹೆಚ್ಚು ಗೊಂದಲಕ್ಕೊಳಗಾದೆ.

ಇದನ್ನೂ ಓದಿ: ಕಾಸರಗೋಡು: ಮಹಿಳೆ ಮೇಲೆ ಥಿನ್ನರ್‌ ಎರಚಿ ಬೆಂಕಿ ಹಚ್ಚಿದ ಕುಡುಕ

ನಾನು ಕರೆ ಮಾಡಿದಾಗ ಫುಡ್ ಡೆಲಿವರಿ ಕೊಡುವ ವ್ಯಕ್ತಿ ವಾಹನದಲ್ಲಿ ಬರುತ್ತಿರುವಂತೆ ಗಾಳಿಯ ಶಬಗದ ಜೋರಾಗಿ ಕೇಳಿಸುತ್ತಿತ್ತು. ಆತ ಬೈಕ್ ಓಡಿಸುತ್ತಿದ್ದಂತೆ ಭಾಸವಾಯಿತು. ಹೀಗೆ ಮಾತನಾಡುತ್ತಿದ್ದಾಗ ಸ್ವಲ್ಪ ಸಮಾಧಾನಗೊಂಡು ಅವನು 2 ನಿಮಿಷಗಳಲ್ಲಿ ನಿಮ್ಮ ಸ್ಥಳದಲ್ಲಿರುತ್ತೇನೆ ಎಂದು ಹೇಳಿ ಕರೆಯನ್ನು ಕಡಿತಗೊಳಿಸಿದನು. ನಾನು ಸುಮಾರು 10 ನಿಮಿಷಗಳ ಕಾಲ ಮನೆಯ ಬಾಗಿಲಿನಲ್ಲಿಯೇ ಕಾಯುತ್ತಿದ್ದೆನು. 10 ನಿಮಿಷವಾದರೂ ಬಾರದ ಕಾರಣ ನಾನು ಅವನಿಗೆ ಮತ್ತೆ ಕರೆ ಮಾಡಿದೆ. ಈ ಬಾರಿ, ಅವನು ನನ್ನನ್ನು ತುಂಬಾ ನಿಂದಿಸಿದನು. ನಾನು ಅವನಿಗೆ ಕರೆ ಮಾಡಿದರೆ ವಾಪಸ್ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದನು.

ಇದಾದ ಕೆಲವು ನಿಮಿಷಗಳ ನಂತರ, ಅವನು ಬಾಗಿಲಿನ ಬಳಿ ಬಂದು ಆಹಾರ ಪೊಟ್ಟಣವನ್ನು ಮನೆ ಮುಂದಿನ ನೆಲದ ಮೇಲೆ ಎಸೆದು ಕಿರುಚುತ್ತಲೇ ಇದ್ದನು. ನಾನು ಮಾಡಿದ ಒಂದು ತಪ್ಪು ಎಂದರೆ, ಅವನೊಂದಿಗೆ ಕರೆ ಮಾಡಿ ಮಾತನಾಡಿದ್ದು. ಜೊತೆಗೆ, ಫುಡ್ ಡೆಲಿವರಿ ಆಗಿದೆ ಎಂಬುದನ್ನು ನೋಡಿ ಸುಮ್ಮನಿದ್ದು ಮೇಲಿನವರಿಗೆ ಕಂಪ್ಲೇಂಟ್ ಮಾಡದಿರುವುದು. ಇನ್ನು ಅವನು ಹೋಗುವಾಗ, ಅವನು ಲಿಫ್ಟ್ ಬಾಗಿಲುಗಳನ್ನು ತುಂಬಾ ಬಲವಾಗಿ ಹೊಡೆದನು. ಅದು ಈಗ ಇಡೀ ಕಟ್ಟಡಕ್ಕೆ ಅನ್ವಯಿಸುತ್ತದೆ. ಒಂದು ವೇಳೆ ಹಾನಿಯಾಗಿದ್ದರೆ ನಾನು ದಂಡ ಕಟ್ಟಬೇಕಾಗಿತ್ತು.

ಇದನ್ನೂ ಓದಿ: ವಿಶ್ವದ ಟಾಪ್-100 ವಿಮಾನ ನಿಲ್ದಾಣಗಳು:ಬೆಂಗಳೂರಿಗೆ ಬೆಸ್ಟ್ ರ‍್ಯಾಂಕ್

ಈ ಘಟನೆ ನಡೆದ ನಂತರ ನಾನು ತಕ್ಷಣ ಜೊಮಾಟೊದ ಬೆಂಬಲ ತಂಡವನ್ನು ಸಂಪರ್ಕಿಸಿದೆ. ಜೊಮಾಟೋ ಸಿಬ್ಬಂದಿ ನಾವು ಅವನಿಗೆ ಮೌಖಿಕ ಎಚ್ಚರಿಕೆ ನೀಡಿದ್ದೇವೆ ಎಂದು, ನಂತರ ದಿನಗಳಲ್ಲಿ ಅಂತಹ ಸಮಸ್ಯೆಗಳು ಪುನಃ ಸಂಭವಿಸದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದರು. ಆದರೆ, ಕೆಲಸದಲ್ಲಿ ಅವನಿಗೆ ಸಮಸ್ಯೆ ಆದಲ್ಲಿ ಅವನು ಮುಂದೆ ನನಗೆ ಮಾಡುವ ಹಾನಿ ಅಥವಾ ಬೆದರಿಕೆಗಳ ಬಗ್ಗೆ ನನಗೆ ಇನ್ನೂ ಚಿಂತೆಯಾಗಿದೆ. ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂಬುದರ ವಿಳಾದ ಅವನಿಗೆ ತಿಳಿದಿದೆ. ನಾನು ಜೊಮಾಟೊ ಮೇಲಿನ ಸಿಬ್ಬಂದಿಗೆ ದೂರು ನೀಡಿರುವುದರಿಂದ ನನಗೆ ಭಯವಾಗಿದೆ. ನಾನು ಇದರ ಬಗ್ಗೆ ಹೇಗೆ ಹೊರಗೆ ಬರುವುದು? ಎಂದು ರೆಡ್ಡಿಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.