11:46 PM (IST) Apr 10

ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಸಮಸ್ಯೆಯಿಲ್ಲ: ಲಕ್ಷ್ಮಣ್ ಸವದಿ

ಶಾಸಕ ಲಕ್ಷ್ಮಣ ಸವದಿ ಅವರಿಂದ ಅಥಣಿ ಮತಕ್ಷೇತ್ರದ ನೀರಾವರಿ ಯೋಜನೆಗೆ ಚಾಲನೆ. ಜನವರಿ ಒಳಗೆ 75 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಗುರಿ. ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರ.

ಪೂರ್ತಿ ಓದಿ
11:25 PM (IST) Apr 10

ಹೆಣ ಸುಡೋದಕ್ಕೂ GST ಹಾಕಿದ ಕೀರ್ತಿ ಮೋದಿಗೆ ಸಲ್ಲಬೇಕು: ಎಂ ಲಕ್ಷ್ಮಣ್

ಕೇಂದ್ರ ಸರ್ಕಾರವು 10 ವರ್ಷದಲ್ಲಿ 143 ವಸ್ತುಗಳ ಬೆಲೆ ಏರಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ. ತೈಲ ಬೆಲೆ ಏರಿಕೆಯಿಂದ ಕೇಂದ್ರದ ಎನ್‌.ಡಿ.ಎ ಸರ್ಕಾರ 11 ವರ್ಷದಲ್ಲಿ 43 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಟೀಕಿಸಿದ್ದಾರೆ.

ಪೂರ್ತಿ ಓದಿ
11:13 PM (IST) Apr 10

ಮೆಟ್ರೋದಲ್ಲಿ ಮದ್ಯ ಸೇವಿಸಿ, ಪೊಲೀಸರ ಅತಿಥಿಯಾದ ಪೋಲಿ!

ಮೆಟ್ರೋದಲ್ಲಿ ಮದ್ಯ ಕುಡಿಯುತ್ತಾ, ಮೊಟ್ಟೆ ತಿಂದು ಗಲಾಟೆ ಮಾಡಿದ ಯುವಕನ ವಿಡಿಯೋ ವೈರಲ್ ಆಗಿದೆ. ಈತನನ್ನು ಪೊಲೀಸರು ಬಂಧಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪೂರ್ತಿ ಓದಿ
11:00 PM (IST) Apr 10

RCBvsDC: ಆರ್‌ಸಿಬಿಗೆ ಸೋಲಿನ ತಾಳಿ ಕಟ್ಟಿದ ಕರಿಮಣಿ ಮಾಲೀಕ ರಾಹುಲ್ಲ!

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತು, ಇದಕ್ಕೆ ಕಾರಣರಾದವರು ಕನ್ನಡಿಗ ಕೆಎಲ್ ರಾಹುಲ್. ರಾಹುಲ್ ಅವರ ಅನುಭವ ಮತ್ತು ಉತ್ತಮ ಆಟದಿಂದ ಡೆಲ್ಲಿ ತಂಡವು ಗೆಲುವು ಸಾಧಿಸಿತು.

ಪೂರ್ತಿ ಓದಿ
10:58 PM (IST) Apr 10

IPL ಬೆಟ್ಟಿಂಗ್ ದಂಧೆ ಭೇದಿಸಿದ ಸಿಸಿಬಿ; ಆರೋಪಿಗಳ ಬಂಧನ!

ಬೆಂಗಳೂರಿನ ಜೀವನಭೀಮಾನಗರದಲ್ಲಿ ಸಿಸಿಬಿ ಪೊಲೀಸರು ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಸಂತೋಷ್, ಯಶ್ ಮತ್ತು ರಾಜೇಶ್ ಎಂಬುವವರನ್ನು ಬಂಧಿಸಿ, 5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಪೂರ್ತಿ ಓದಿ
10:40 PM (IST) Apr 10

Bhagyalakshmi Serial: ತಾಂಡವ್-ಶ್ರೇಷ್ಠ ಬಳಿಕ ಇನ್ನೊಂದು ಮದುವೆ ಆಗೋ ಸೂಚನೆಯಿದು!

ತಾಂಡವ್‌ ಹಾಗೂ ಶ್ರೇಷ್ಠ ಮದುವೆ ಬಳಿಕ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಇನ್ನೊಂದು ಮದುವೆ ಆಗುವ ಥರ ಕಾಣ್ತಿದೆ. 

ಪೂರ್ತಿ ಓದಿ
10:30 PM (IST) Apr 10

ರಾಣಾ ಹಸ್ತಾಂತರ: ಮೋದಿ ಸರ್ಕಾರ ಶ್ಲಾಘಿಸಿದ ಹಿರಿಯ ಕಾಂಗ್ರೆಸ್ ನಾಯಕ!

26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದೆ. ಈ ಯಶಸ್ಸಿಗೆ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಪೂರ್ತಿ ಓದಿ
10:29 PM (IST) Apr 10

IAS ಸಂದರ್ಶನ ಪ್ರಶ್ನೆಗಳು: ಸೀರೆ, ಶರ್ಟ್, ಚಡ್ಡಿಯಲ್ಲಿ ಕಾಮನ್ ಏನು?

IAS ಸಂದರ್ಶನದಲ್ಲಿ ಕೇಳಲಾಗುವ ಟ್ರಿಕ್ಕಿ ಪ್ರಶ್ನೆಗಳು. ಮೆದುಳಿಗೆ ಕೈ ಹಾಕುವ ಪ್ರಶ್ನೋತ್ತರ ಇಲ್ಲಿವೆ ನೋಡಿ. ಈ ಪ್ರಶ್ನೆಗಳು ನಿಮ್ಮ ತಾರ್ಕಿಕ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುತ್ತವೆ.

ಪೂರ್ತಿ ಓದಿ
10:07 PM (IST) Apr 10

ತೆಲಂಗಾಣದ ರಾಮಗುಂಡಕ್ಕೆ ಗಂಡಾಂತರ, ಸನ್ನಿಹಿತ ಭೂಕಂಪ!?

ತೆಲಂಗಾಣದ ರಾಮಗುಂಡಂನಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಎಪಿಕ್ ಮುನ್ಸೂಚನೆ ನೀಡಿದೆ. ಗೋದಾವರಿ ಗಣಿಗಾರಿಕೆ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 5 ತೀವ್ರತೆಯ ಭೂಕಂಪ ಸಂಭವಿಸಬಹುದು. ಮುನ್ನೆಚ್ಚರಿಕೆ ವಹಿಸಲು ಸೂಚನೆ.

ಪೂರ್ತಿ ಓದಿ
10:04 PM (IST) Apr 10

ರಿಷಿಕೇಶದಲ್ಲಿ ವಿದೇಶಿ ಮಹಿಳೆಯರ ಸ್ನಾನದ ವಿಡಿಯೋ ತೆಗೆದ ಯುವಕ!

ಈ ವಿಡಿಯೋಗೆ ಸೋಶಿಯಲ್‌ ಮೀಡಿಯಾದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿದೇಶಿ ಪ್ರವಾಸಿಗರ ಖಾಸಗಿತನಕ್ಕೆ ಧಕ್ಕೆ ತಂದಿರುವ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ.

ಪೂರ್ತಿ ಓದಿ
09:45 PM (IST) Apr 10

Waqf act: ಮಮತಾ ಬ್ಯಾನರ್ಜಿ ಹೇಳಿಕೆಗೆ ಮಿಥುನ್ ಚಕ್ರವರ್ತಿ ತಿರುಗೇಟು!

ಮಿಥುನ್ ಚಕ್ರವರ್ತಿ ಅವರು ಮಮತಾ ಬ್ಯಾನರ್ಜಿ ಅವರು ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕಾಯ್ದೆ ಮುಸ್ಲಿಮರಿಗೆ, ಅದರಲ್ಲೂ ಮುಸ್ಲಿಂ ಮಹಿಳೆಯರಿಗೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ
09:19 PM (IST) Apr 10

RCBvsDC: ಸಾಲ್ಟ್‌ ಅಬ್ಬರಕ್ಕೆ ಹುಳಿ ಹಿಂಡಿದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್ಸ್‌!

ಫಿಲ್ ಸಾಲ್ಟ್ ಅಬ್ಬರದ ಆರಂಭದ ನಂತರ, ಡೆಲ್ಲಿ ಬೌಲರ್‌ಗಳು ಆರ್​ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಟಿಮ್ ಡೇವಿಡ್ ಅವರ ಅಜೇಯ 37 ರನ್​ಗಳ ನೆರವಿನಿಂದ ಆರ್​ಸಿಬಿ ಡೆಲ್ಲಿಗೆ 164 ರನ್​ಗಳ ಗುರಿ ನೀಡಿದೆ.

ಪೂರ್ತಿ ಓದಿ
08:49 PM (IST) Apr 10

ಇಂಡಿಗೋಗೆ ವಿಶ್ವದ ಅತ್ಯಂತ ಮೌಲ್ಯಯುತ ವಿಮಾನಯಾನ ಸಂಸ್ಥೆ ಹೆಗ್ಗಳಿಕೆ!

ಭಾರತದ ಇಂಡಿಗೋ ವಿಮಾನಯಾನ ಸಂಸ್ಥೆ ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿದೆ. ಷೇರುಗಳ ಏರಿಕೆ ಮತ್ತು ಮಾರುಕಟ್ಟೆ ಮೌಲ್ಯದಿಂದ ಈ ಸಾಧನೆ ಮಾಡಿದೆ. 2026 ರ ವೇಳೆಗೆ ವಿಮಾನಗಳ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಪೂರ್ತಿ ಓದಿ
08:47 PM (IST) Apr 10

ಅಂಗವಿಕಲ ಪ್ರೇಮಿಗಾಗಿ ಪತಿಯನ್ನೇ ಮುಗಿಸಿದ ಪತ್ನಿ!

ರಾಜಸ್ಥಾನದ ಶಾಕಿಂಗ್ ಕ್ರೈಮ್ ನ್ಯೂಸ್: ರಾಜಸ್ಥಾನದ ಅಜ್ಮೀರದಲ್ಲಿ ಒಂದು ಶಾಕಿಂಗ್ ಕ್ರೈಮ್ ನಡೆದಿದೆ. ಇಲ್ಲಿ ಹೆಂಡತಿ ಅಂಗವಿಕಲ ಯುವಕನ ಪ್ರೀತಿಯಲ್ಲಿ ಕುರುಡಿಯಾಗಿ ಗಂಡನ ಕೊಲೆ ಮಾಡಿಸಿದ್ದಾಳೆ. ಆಮೇಲೆ ಮಾಡಿದ್ದನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಪೂರ್ತಿ ಓದಿ
08:18 PM (IST) Apr 10

ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ವಿರಾಟ್‌ ಕೊಹ್ಲಿ, ಈ ದಾಖಲೆ ಮಾಡಿದ ಏಕೈಕ ಆಟಗಾರ!

ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 1000 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ.

ಪೂರ್ತಿ ಓದಿ
08:15 PM (IST) Apr 10

Jio IPL ಆಫರ್ ವಿಸ್ತರಣೆ:ಉಚಿತ ಹಾಟ್‌ಸ್ಟಾರ್, ಕ್ರಿಕೆಟ್‌ ಹಬ್ಬ ಮಾಡಿ!

ರಿಲಯನ್ಸ್ ಜಿಯೋ ತನ್ನ ಉಚಿತ ಹಾಟ್‌ಸ್ಟಾರ್ ಯೋಜನೆಯನ್ನು ಏಪ್ರಿಲ್ 15, 2025 ರವರೆಗೆ ವಿಸ್ತರಿಸಿದೆ. ಹೊಸ ಸಿಮ್ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಪೂರ್ತಿ ಓದಿ
08:04 PM (IST) Apr 10

RBI ರೇಪೋ ರೇಟ್‌ ಇಳಿಸಿದ ಬೆನ್ನಲ್ಲೇ, ಫಿಕ್ಸ್ಡ್‌ ಡೆಪಾಸಿಟ್‌ ಮೇಲಿನ ಬಡ್ಡಿದರ ಕಡಿಮೆ ಮಾಡಿದ ಬ್ಯಾಂಕ್‌!

ರಿಸರ್ವ್ ಬ್ಯಾಂಕ್ ಬಡ್ಡಿ ಕಡಿತದ ನಂತರ, ಕೆನರಾ ಬ್ಯಾಂಕ್ ಸ್ಥಿರ ಠೇವಣಿಗಳ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿಮೆ ಮಾಡಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಪೂರ್ತಿ ಓದಿ
07:42 PM (IST) Apr 10

ಕಾಂಗ್ರೆಸ್ ಸರ್ಕಾರ ತೊಲಗಿದರೆ ಸಾಕು ಎನ್ನೋದು ಜನರ ಭಾವನೆ: ಬೊಮ್ಮಾಯಿ

ಕಾಂಗ್ರೆಸ್ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಸಿದೆ. ಇದೀಗ ಜನರು ಬೆಲೆ ಏರಿಕೆ ಮತ್ತು ಜನ ವಿರೋಧಿ ನೀತಿಗಳ ಬಗ್ಗೆ ಬೇಸತ್ತಿದ್ದು, ಯಾವಾಗ ಕಾಂಗ್ರೆಸ್ ಅಧಿಕಾರದಿಂದ ತೊಲಗುತ್ತೋ ಎಂದು ಕಾಯುತ್ತಿದ್ದಾರೆ ಎಂದು ಸಂಸದ ಬೊಮ್ಮಾಯಿ ಹೇಳಿದರು.

ಪೂರ್ತಿ ಓದಿ
07:40 PM (IST) Apr 10

ತಹವ್ವುರ್ ರಾಣಾ ವಿಚಾರಣೆಯಿಂದ ಪಾಕ್‌ಗೆ ಏಕೆ ಈ ಪರಿ ಭಯ?

26/11ರ ದಾಳಿಯ ಆರೋಪಿ ತಹವ್ವುರ್ ರಾಣಾನ ಭಾರತಕ್ಕೆ ಕರ್ಕೊಂಡು ಬಂದಿದಾರೆ. ಎನ್ಐಎ ವಿಚಾರಣೆಯಿಂದ ಪಾಕಿಸ್ತಾನಕ್ಕೆ ಭಯ ಶುರುವಾಗಿದೆ. ರಾಣಾ ಏನ್ ರಹಸ್ಯ ಹೇಳ್ತಾನೋ ಏನೋ!

ಪೂರ್ತಿ ಓದಿ
07:30 PM (IST) Apr 10

ಜನಪ್ರಿಯ TISS ಪ್ರವೇಶಕ್ಕೆ ಸಂದರ್ಶನ ರದ್ದು, ವಿದ್ಯಾರ್ಥಿಗಳ ಆಕ್ರೋಶ!

ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) 2025-26 ಶೈಕ್ಷಣಿಕ ವರ್ಷದಿಂದ ಪ್ರವೇಶಕ್ಕೆ ಸಂದರ್ಶನ ರದ್ದು ಮಾಡಿದೆ. ಕೇವಲ CUET ಅಂಕಗಳ ಆಧಾರದ ಮೇಲೆ ಪ್ರವೇಶ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ, ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪೂರ್ತಿ ಓದಿ