ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಮೊಟ್ಟೆ ತಿಂದು ಪಾನೀಯ ಸೇವಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಮೆಟ್ರೋ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತಾನು ಕುಡಿದಿದ್ದು ತಂಪು ಪಾನೀಯವೆಂದು ಆತ ಹೇಳಿದ್ದಾನೆ. ಸಾರ್ವಜನಿಕ ವಲಯದಲ್ಲಿ ಈತನ ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮೆಟ್ರೋ ರೈಲ್ವೆ ನಿಗಮವು ಪ್ರಕರಣ ದಾಖಲಿಸಿದೆ.
ಮೆಟ್ರೋದಲ್ಲಿ ತಿಂಡಿ ತಿನ್ನುವುದು, ಪಾನೀಯ ಸೇವನೆಯನ್ನೇ ನಿಷೇಧಿಸಲಾಗಿದೆ. ಅಂಥದ್ದರಲ್ಲಿ ಇಲ್ಲೊಬ್ಬ ಯುವತ ಮದ್ಯ ಸೇವನೆ ಮಾಡುವ ಗ್ಲಾಸ್‌ನಲ್ಲಿ ಎಣ್ಣೆ ಸೇವನೆ ಮಾಡುತ್ತಾ, ಮೊಟ್ಟೆ ತಿನ್ನುತ್ತಾ ಎಂಜಾಯ್ ಮಾಡಿದ್ದಾನೆ. ಇದನ್ನು ನೋಡಿ ಮೆಟ್ರೋ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಮುಂದೆ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ.
ಈ ಘಟನೆ ನಡೆದಿರುವುದು ದೆಹಲಿ ಮೆಟ್ರೋದಲ್ಲಿ. ದೆಹಲಿ ಮೆಟ್ರೋ ಕೋಚ್‌ನಲ್ಲಿ ಕುಡಿದು ಗಲಾಟೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೆಟ್ರೋ ಕೋಚ್‌ನಲ್ಲಿ ಕುಳಿತುಕೊಂಡು ಮೊಟ್ಟೆ ತಿಂದು ಮದ್ಯ ಕುಡಿಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣ ದೆಹಲಿ ಪೊಲೀಸರು ಕೇಸ್ ಹಾಕಿದ್ದಾರೆ. ಈತನ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಈ ರೀತಿ ಮಾಡುವವರನ್ನು ಸಮಾಜಘಾತುಕ ಶಕ್ತಿಗಳು ಎಂದು ಪರಿಗಣಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ ಯಮುನಾ ಬ್ಯಾಂಕ್ ಮೆಟ್ರೋ ಡಿಪೋದಲ್ಲಿ ಕೆಲ ಪ್ರಯಾಣಿಕರು ಈತನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ದೆಹಲಿ ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಆತನನ್ನು ಬುರಾರಿಯಲ್ಲಿ ಹುಡುಕಿ ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಆತ ತಾನೇ ವಿಡಿಯೋದಲ್ಲಿ ಇರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ತಾನು ಕುಡಿದಿದ್ದು ಮದ್ಯ ಅಲ್ಲ, ಆಪ್ ಫಿಜ್ ಎಂಬ ತಂಪು ಪಾನೀಯ ಎಂದು ಹೇಳಿದ್ದಾನೆ.
ಇದನ್ನೂ ಓದಿ: ರಿಷಿಕೇಶದಲ್ಲಿ ವಿದೇಶಿ ಮಹಿಳೆಯರ ಸ್ನಾನದ ವಿಡಿಯೋ ತೆಗೆದ ಯುವಕ!
ಆದರೆ, ಈತನ ಕೆಲಸ ಮೆಟ್ರೋ ರೂಲ್ಸ್ ಬ್ರೇಕ್ ಮಾಡಿದ ಕಾರಣ, ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (ಡಿಎಂಆರ್‌ಸಿ) ಸೆಕ್ಷನ್ 59 ಅಡಿಯಲ್ಲಿ ಕೇಸ್ ದಾಖಲಿಸಿದೆ. ವಿಡಿಯೋದಲ್ಲಿ ಆತ ಮೊದಲು ತನ್ನ ಬ್ಯಾಗಿನಿಂದ ಬೇಯಿಸಿದ ಮೊಟ್ಟೆಯನ್ನು ತೆಗೆದು ಮೆಟ್ರೋ ಕೋಚ್‌ನ ಕೈಪಿಡಿಗೆ ಹೊಡೆದು ಸಿಪ್ಪೆ ತೆಗೆದು ತಿನ್ನುತ್ತಾನೆ. ನಂತರ ಮದ್ಯ ತೆಗೆದು ಕುಡಿಯುತ್ತಾನೆ. ಆತನ ಕೆಲಸವನ್ನು ನೋಡಿ ಸಹ ಪ್ರಯಾಣಿಕರು ಮುಖ ಕಿವುಚಿಕೊಳ್ಳುತ್ತಾರೆ. ಡಿಎಂಆರ್‌ಸಿ ಆತನಿಗೆ ಲೈಫ್ ಲಾಂಗ್ ಬ್ಯಾನ್ ಹಾಕಬೇಕು ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಮೆಟ್ರೋದಲ್ಲಿ ಸಂಚಾರ ಮಾಡುವಾಗ ಯಾವುದೇ ತಿಂಡಿ ತಿನ್ನುವಂತಿಲ್ಲ, ಪಾನೀಯ ಸೇವನೆ ಮಾಡುವಂತಿಲ್ಲ. ಮಹಿಳೆಯರಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ ಸೀಟು ಬಿಟ್ಟುಕೊಡದೇ ಕೂರುವಂತಿಲ್ಲ. ಜೋರಾದ ಧ್ವನಿಯಲ್ಲಿ ಫೋನಿನಲ್ಲಿ ಮಾತನಾಡುವಂತಿಲ್ಲ. ಫೋನಿನಲ್ಲಿ ಲೌಡ್ ಸ್ಪೀಕರ್ ಹಾಕಿ ಹಾಡು ಕೇಳುವಂತಿಲ್ಲ. ಈ ಎಲ್ಲ ನಿಯಮಗಳಿದ್ದರೂ, ಈ ನಿಯಮಗಳನ್ನು ಮೀರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮೆಟ್ರೋ ಸಿಬ್ಬಂದಿ ದಂಡ ವಸೂಲಿ ಮಾಡುತ್ತಾರೆ. ಕಳೆದ ವರ್ಷ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ 27 ಸಾವಿರ ಜನರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಆದರೆ, ನಮ್ಮ ಮೆಟ್ರೋದಿಂದ ಈವರೆಗೆ ದಂಡ ವಿಧಿಸಿರಲಿಲ್ಲ. ಮುಂದಿನ ವರ್ಷದಿಂದ ದಂಡ ವಿಧಿಸಿವುದಾಗಿ ಆದೇಶವನ್ನೂ ಹೊರಡಿಸಿದೆ.
ಇದನ್ನೂ ಓದಿ: ಭೋಜ್‌ಪುರಿ ಡ್ಯಾನ್ಸ್ ನೋಡೋಕೆ ಜನ ಮುಗಿಬೀಳೋದೇಕೆ? ಈ ವಿಡಿಯೋ ನೋಡಿ
