ಭಾರತದ ಇಂಡಿಗೋ ವಿಮಾನಯಾನ ಸಂಸ್ಥೆ, ಮಾರುಕಟ್ಟೆ ಮೌಲ್ಯದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇದರ ಷೇರುಗಳು ಶೇಕಡಾ 13 ರಷ್ಟು ಏರಿಕೆ ಕಂಡು, ಮಾರುಕಟ್ಟೆ ಮೌಲ್ಯವು 2 ಲಕ್ಷ ಕೋಟಿ ರೂಪಾಯಿ ದಾಟಿದೆ. ಭಾರತೀಯ ಮಾರುಕಟ್ಟೆಯಲ್ಲಿ 62% ಪಾಲನ್ನು ಹೊಂದಿರುವ ಇಂಡಿಗೋ, ಅಂತರರಾಷ್ಟ್ರೀಯ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. 2026ರ ಆರ್ಥಿಕ ವರ್ಷದಲ್ಲಿ 50 ಹೊಸ ವಿಮಾನಗಳನ್ನು ಸೇರಿಸಲು ಯೋಜಿಸಿದೆ.
ಲೋಕದ ಅತ್ಯಂತ ಮೌಲ್ಯಯುತ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಗೆ ಭಾರತದ ಬಜೆಟ್ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಪಾತ್ರವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇಂಡಿಗೋ ಷೇರುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಅಲ್ಪಾವಧಿಯಲ್ಲಿಯೇ ಇಂಡಿಗೋ ವಿಶ್ವದ ಅತ್ಯಂತ ಮೌಲ್ಯಯುತ ವಿಮಾನಯಾನ ಸಂಸ್ಥೆ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 2 ಲಕ್ಷ ಕೋಟಿ ರೂಪಾಯಿ. ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದ ಭಾರತೀಯ ಮಾರುಕಟ್ಟೆ ಕುಸಿತ ಕಂಡರೂ ಇಂಡಿಗೋ ಷೇರುಗಳು ಏರಿಕೆ ಕಂಡಿವೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಇಂಡಿಗೋ ಷೇರುಗಳು ಶೇಕಡಾ 13 ರಷ್ಟು ಲಾಭ ಗಳಿಸಿವೆ.
ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಇಂಡಿಗೋ 62% ಮಾರುಕಟ್ಟೆ ಪಾಲನ್ನು ಹೊಂದಿದೆ. ಕೋವಿಡ್ ನಂತರ ಇಂಡಿಗೋ ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಿತ್ತು. ಕಳೆದ ಆರ್ಥಿಕ ವರ್ಷದಲ್ಲಿಯೂ ಇಂಡಿಗೋ ಸಂಕಷ್ಟಗಳನ್ನು ಮೀರಿ ನಿಂತಿತ್ತು. 2025ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಏರ್‌ಲೈನ್ 987 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ.
ವಿಮಾನದಲ್ಲೇ 89 ವರ್ಷದ ವೃದ್ಧೆ ಸಾವು: ಮುಂಬೈ ವಾರಾಣಾಸಿ ಇಂಡಿಗೋ ಫ್ಲೈಟ್ ತುರ್ತು ಲ್ಯಾಂಡಿಂಗ್
2026 ರ ಆರ್ಥಿಕ ವರ್ಷದಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಇಂಡಿಗೋ ಗುರಿ ಹೊಂದಿದೆ. ಕಂಪನಿಯು 439 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 50 ವಿಮಾನಗಳು ಸೇವೆಯನ್ನು ಸ್ಥಗಿತಗೊಳಿಸಿವೆ. 2026 ರ ಆರ್ಥಿಕ ವರ್ಷದಲ್ಲಿ ಸುಮಾರು 50 ಹೊಸ ವಿಮಾನಗಳನ್ನು ಸೇರಿಸುವ ಸಾಧ್ಯತೆಯಿದೆ. ಮುಂಬರುವ ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆಯ ದೊಡ್ಡ ಪಾಲನ್ನು ವಶಪಡಿಸಿಕೊಳ್ಳಲು ಇಂಡಿಗೋದ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷ ಷೇರುಪೇಟೆಯಲ್ಲಿ ಬಲವಾದ ಏರಿಕೆ ಕಂಡುಬಂದಿದ್ದು, ಇಲ್ಲಿಯವರೆಗೆ ಶೇ. 13 ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅದರ ಮಾರುಕಟ್ಟೆ ಬಂಡವಾಳೀಕರಣ ₹ 2 ಲಕ್ಷ ಕೋಟಿ (ಸುಮಾರು $23.3 ಬಿಲಿಯನ್) ಗಡಿ ದಾಟಿದೆ. ದುರ್ಬಲ ಮಾರುಕಟ್ಟೆ ಪ್ರವೃತ್ತಿಯನ್ನು ಧಿಕ್ಕರಿಸಿ ಇಂಡಿಗೊ ಷೇರುಪೇಟೆ ಬುಧವಾರ ಸುಮಾರು ಶೇ. 1 ರಷ್ಟು ಏರಿಕೆ ಕಂಡಿದೆ.
ಮಧುರೈಯಿಂದ ಬೆಂಗಳೂರು ಮೂಲಕ ವಿಜಯವಾಡಕ್ಕೆ ಇಂಡಿಗೋ ವಿಮಾನ ಸೇವೆ, ಟಿಕೆಟ್ ದರ ಎಷ್ಟು?
ಭಾರತದ ದೇಶೀಯ ವಿಮಾನಯಾನ ವಲಯದಲ್ಲಿ ಇಂಡಿಗೋ ಪ್ರಬಲ ಸ್ಥಾನವನ್ನು ಹೊಂದಿದ್ದು, ಮಾರುಕಟ್ಟೆಯ 60% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ವಿಮಾನಯಾನ ಸಂಸ್ಥೆಯು ತನ್ನ ಅಂತರರಾಷ್ಟ್ರೀಯ ಸೇವೆಯನ್ನು ವಿಸ್ತರಿಸುವತ್ತಲೂ ಹೆಚ್ಚು ಗಮನಹರಿಸುತ್ತಿದೆ. ವರದಿ ಪ್ರಕಾರ ಕಂಪನಿಯು ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಗುರಿಯನ್ನು FY30 ರ ವೇಳೆಗೆ ತನ್ನ ಲಭ್ಯವಿರುವ ಸೀಟ್ ಕಿಲೋಮೀಟರ್‌ಗಳಲ್ಲಿ (ASK) 40% ಅನ್ನು ಹೊಂದುವ ಗುರಿಯನ್ನು ಹಂಚಿಕೊಂಡಿದೆ, ಇದು FY25 ರಲ್ಲಿ ಅಂದಾಜು 28% ರಿಂದ ಹೆಚ್ಚಾಗಿದೆ. ಇಂಡಿಗೋ ತನ್ನ ಅಸ್ತಿತ್ವದಲ್ಲಿರುವ 439 ವಿಮಾನಗಳ ಫ್ಲೀಟ್‌ಗೆ FY26 ರಲ್ಲಿ ಸರಿಸುಮಾರು 50 ಹೊಸ ವಿಮಾನಗಳನ್ನು ಸೇರಿಸಲು ಯೋಚಿಸಿರುವುದು ಹಣಕಾಸು ವರ್ಷದಲ್ಲಿನ ಲಾಭವೇ ಆಗಿದೆ.
ಇಂಡಿಗೋದ ಮಾತೃಸಂಸ್ಥೆಯಾದ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್, ವಿಮಾನ ಪ್ರಯಾಣದ ಬೇಡಿಕೆ ಬಲವಾಗಿದ್ದರೂ ಸಹ, Q3 FY25 ರಲ್ಲಿ ₹ 2,449 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ , ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ₹ 2,998 ಕೋಟಿಗಳಿಂದ ಶೇ 18 ರಷ್ಟು ಕುಸಿತ ಕಂಡಿತ್ತು. ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ 14 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ₹ 19,452 ಕೋಟಿಗೆ ಹೋಲಿಸಿದರೆ ₹ 22,111 ಕೋಟಿಗೆ ಬಂದು ನಿಂತಿದೆ.
