ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 1000 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ.

ಬೆಂಗಳೂರು (ಏ.10): ಕಳೆದ 18 ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿರುವ ವಿರಾಟ್‌ ಕೊಹ್ಲಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈವರೆಗೆ ಯಾರೊಬ್ಬರೂ ಮಾಡದ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಅವರಿಂದ ಈ ಅಪರೂಪದ ದಾಖಲೆ ನಿರ್ಮಾಣವಾಗಿದೆ.

ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಐಪಿಎಲ್‌ ಇತಿಹಾಸದಲ್ಲಿಯೇ 1 ಸಾವಿರ ಬೌಂಡರಿಗಳನ್ನು (ಫೋರ್ಸ್‌ + ಸಿಕ್ಸ್‌ ಸೇರಿಸಿ) ಬಾರಿಸಿದ ಮೊದಲ ಆಟಗಾರ ಎನಿಸಿದ್ದಾರೆ. ಈ ದಾಖಲೆ ಮಾಡಲು ವಿರಾಟ್‌ ಕೊಹ್ಲಿಗೆ ಕೇವಲ 2 ಬೌಂಡರಿಗಳ ಅಗತ್ಯವಿತ್ತು. ಬ್ಯಾಟಿಂಗ್‌ ವೇಳೆ ನಾಲ್ಕು ಓವರ್‌ಗಳ ಒಳಗಿಯೇ 36 ವರ್ಷದ ವಿರಾಟ್‌ ಕೊಹ್ಲಿ ಈ ದಾಖಲೆ ನಿರ್ಮಿಸಿದರು.

ಕೊಹ್ಲಿ ನಂತರದ ಸ್ಥಾನದಲ್ಲಿರುವ ಆಟಗಾರರು ಶಿಖರ್‌ ಧವನ್‌ ಹಾಗೂ ಡೇವಿಡ್‌ ವಾರ್ನರ್‌. ಶಿಖರ್‌ ಧವನ್‌ ಐಪಿಎಲ್‌ನಲ್ಲಿ 920 ಬೌಂಡರಿಗಳನ್ನು ಸಿಡಿಸಿ 2ನೇ ಸ್ಥಾನದಲ್ಲಿದ್ದರೆ, ಡೇವಿಡ್‌ ವಾರ್ನರ್‌ 899 ಬೌಂಡರಿ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಗರಿಷ್ಠ ರನ್‌ ಸ್ಕೋರರ್‌ ಕೂಡ ಎನಿಸಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ವಿರಾಟ್‌ ಕೊಹ್ಲಿ 8 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ ಎಲ್ಲಾ 18 ಆವೃತ್ತಿಗಳಲ್ಲೂ ಆಡಿದ ನಾಲ್ಕೇ ಪ್ಲಯರ್‌ಗಳಲ್ಲಿ ಒಬ್ಬರಾಗಿರುವ ವಿರಾಟ್‌ ಕೊಹ್ಲಿ 721 ಪೋರ್ಸ್ ಹಾಗೂ 279 ಸಿಕ್ಸರ್‌ ಸಿಡಿಸಿದ್ದಾರೆ.ಇದಕ್ಕಾಗಿ ಅವರು 257 ಐಪಿಎಲ್‌ ಪಂದ್ಯ ಆಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಸರ್‌ ಪಟೇಲ್‌ ಎಸೆದ ಪಂದ್ಯದ ನಾಲ್ಕನೇ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ಕೊಹ್ಲಿ ಈ ದಾಖಲೆ ಮಾಡಿರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಫೋರ್ಸ್‌ಗಳನ್ನು ಬಾರಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ ಮತ್ತು ಅತಿ ಹೆಚ್ಚು ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಕ್ರಿಸ್ ಗೇಲ್ (357) ಮತ್ತು ರೋಹಿತ್ ಶರ್ಮಾ (282) ನಂತರದ ಸ್ಥಾನದಲ್ಲಿದ್ದಾರೆ.

ಡೆಲ್ಲಿ ವಿರುದ್ಧ ಅವರೇನಾದರೂ ಐದು ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಗರಿಷ್ಠ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್‌ ಶರ್ಮರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರುತ್ತಿದ್ದರು. ಅದಲ್ಲದೆ, ಟಿ20ಯಲ್ಲಿ 100 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಳ್ಳುವ ಅವಕಾಶವೂ ವಿರಾಟ್‌ಕೊಹ್ಲಿಗಿತ್ತು. ಪ್ರಸ್ತುತ ಕೊಹ್ಲಿ 99 ಅರ್ಧಶತಕ ಬಾರಿಸಿದ್ದಾರೆ.

128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಕಮ್‌ಬ್ಯಾಕ್; 6 ಬಲಿಷ್ಠ ತಂಡಗಳು ಭಾಗಿ!

ಆದರೆ, ಉತ್ತಮ ಲಯದಲ್ಲಿದ್ದ ವಿರಾಟ್‌ ಕೊಹ್ಲಿ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 22 ರನ್‌ ಬಾರಿಸಿದ್ದ ವೇಳೆ ವಿಪ್ರಜ್‌ ನಿಗಮ್‌ ಬೌಲಿಂಗ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ಗೆ ಕ್ಯಾಚ್‌ ನೀಡಿ ಔಟಾದರು

ವಿರಾಟ್ ಕೊಹ್ಲಿಯ Instagram ಟೆಕ್ನಿಕ್: 10 ಬ್ರ್ಯಾಂಡಿಂಗ್ ಸೀಕ್ರೆಟ್ ಬಹಿರಂಗ