ರಿಲಯನ್ಸ್ ಜಿಯೋ, ಡಿಸ್ನಿ+ ಹಾಟ್‌ಸ್ಟಾರ್ ಸಹಭಾಗಿತ್ವದಲ್ಲಿ 90 ದಿನಗಳ ಉಚಿತ ಕ್ರಿಕೆಟ್ ಸ್ಟ್ರೀಮಿಂಗ್ ಆಫರ್ ವಿಸ್ತರಿಸಿದೆ. ಹೊಸ ಸಿಮ್ ಬಳಕೆದಾರರು ₹299 ಮೇಲ್ಪಟ್ಟ ರೀಚಾರ್ಜ್‌ನೊಂದಿಗೆ ಏಪ್ರಿಲ್ 15, 2025ರವರೆಗೆ ಉಚಿತ ಹಾಟ್‌ಸ್ಟಾರ್ ಪಡೆಯಬಹುದು. ಅಸ್ತಿತ್ವದಲ್ಲಿರುವ ಗ್ರಾಹಕರು ಆಡ್-ಆನ್ ಪ್ಯಾಕ್ ಬಳಸಿ ಪಡೆಯಬಹುದು. ₹195ಕ್ಕೆ 15GB ಡೇಟಾ ಹಾಗೂ ಹಾಟ್‌ಸ್ಟಾರ್ ಲಭ್ಯವಿದೆ. ಜಿಯೋ ಫೈಬರ್ ಬಳಕೆದಾರರಿಗೂ ಆಫರ್ ಅನ್ವಯಿಸುತ್ತದೆ.

ಐಪಿಎಲ್ 2025 ಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಜೊತೆಗಿನ ಪಾಲುದಾರಿಕೆಯಲ್ಲಿ ಇತ್ತೀಚೆಗೆ 90 ದಿನಗಳ ಉಚಿತ ಕ್ರಿಕೆಟ್ ಸ್ಟ್ರೀಮಿಂಗ್ ಯೋಜನೆಯನ್ನು ಬಿಡುಗಡೆ ಮಾಡಿದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ, ಅಗಾಧ ಕ್ರಿಕೆಟ್‌ ಪ್ರೇಮಿಗಳ ಉತ್ತಮ ಪ್ರತಿಕ್ರಿಯೆ ಹಿನ್ನೆಲೆ ಈಗ ತನ್ನ ಆಫರ್ ಅನ್ನು ವಿಸ್ತರಿಸಿದೆ. ಆರಂಭದಲ್ಲಿ ಮಾರ್ಚ್ 31, 2025 ರವರೆಗೆ ಲಭ್ಯವಿದ್ದ ಉಚಿತ ಹಾಟ್‌ಸ್ಟಾರ್ ಪ್ರವೇಶವು ಈಗ ಏಪ್ರಿಲ್ 15, 2025 ರವರೆಗೆ ಲಭ್ಯವಿರಲಿದೆ. ಹೊಸ ಸಿಮ್ ಬಳಕೆದಾರರು ₹299 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಯೋಜನೆಗಳೊಂದಿಗೆ ಈ ಆಫರ್ ಪಡೆಯಬಹುದು. 

ಹೊಸ ಜಿಯೋ ಸಿಮ್ ಖರೀದಿಸಿ ₹299 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ರೀಚಾರ್ಜ್ ಯೋಜನೆಯನ್ನು ಸಕ್ರಿಯಗೊಳಿಸುವ ಬಳಕೆದಾರರಿಗೆ 90 ದಿನಗಳ ಉಚಿತವಾಗಿ ಹಾಟ್‌ಸ್ಟಾರ್ ನೋಡಬಹುದಾಗಿದೆ, ಮೊಬೈಲ್ ಮತ್ತು ಟಿವಿಯಲ್ಲಿ 4K ರೆಸಲ್ಯೂಶನ್‌ನಲ್ಲಿ ಕ್ರಿಕೆಟ್ ಪಂದ್ಯಗಳು ಮತ್ತು ಇತರ ಸ್ಟ್ರೀಮಿಂಗ್ ಅನ್ನು ಆರಾಮವಾಗಿ ನೋಡಬಹುದು. ಈಗಾಗಲೇ ಇರುವ ಗ್ರಾಹಕರು 100 ರೂ ಆಡ್-ಆನ್ ಪ್ಯಾಕ್ ಅನ್ನು ಸಕ್ರಿಯಗೊಳಿಸಿ 90 ದಿನಗಳ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಗೆ ಪ್ರವೇಶ ಪಡೆಯಬಹುದು.

ತಿಂಗಳಿಗೆ 150 ಕಿಮೀ ಓಡುತ್ತಿದ್ದ ಅಂಬಾನಿ ಆಪ್ತ ಹೃದಯಾಘಾತಕ್ಕೆ ಬಲಿ!

ಮಾರ್ಚ್ 17 ರ ಮೊದಲು ಯಾವುದೇ ಯೋಜನೆಯೊಂದಿಗೆ ರೀಚಾರ್ಜ್ ಮಾಡಿರುವ ಈಗ ಇರುವ ಜಿಯೋ ಚಂದಾದಾರರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ 5GB ಉಚಿತ ಡೇಟಾ ಕೂಡ ಸೇರಿದೆ. ಆದರೆ ಈ ಯೋಜನೆಯಲ್ಲಿ ಫೋನ್ ಕರೆಗಳು ಮತ್ತು SMS ಸೇವೆಗಳನ್ನು ಸೇರಿಸಲಾಗಿಲ್ಲ.

ಜಿಯೋ ತನ್ನ ಗ್ರಾಹಕರಿಗೆ ಅದರಲ್ಲೂ ಕ್ರಿಕೆಟ್ ಪ್ರಿಯರಿಗೆ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ವಿವಿಧ ಕ್ರಿಕೆಟ್-ನಿರ್ದಿಷ್ಟ ಯೋಜನೆಗಳನ್ನು ನೀಡುತ್ತದೆ. ಅಂತಹ ಒಂದು ಯೋಜನೆ ರೂ. 195 ಕ್ರಿಕೆಟ್ ಪ್ಯಾಕ್, ಇದು 15GB ಡೇಟಾ ಮತ್ತು 90 ದಿನಗಳ ಉಚಿತ ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ಒದಗಿಸುತ್ತದೆ. ಡೇಟಾ ಮಿತಿಗಳ ಬಗ್ಗೆ ಚಿಂತಿಸದೆ ಲೈವ್ ಕ್ರಿಕೆಟ್ ಪಂದ್ಯಗಳನ್ನು ಆನಂದಿಸಲು ಬಯಸುವ ಬಳಕೆದಾರರಿಗೆ ಈ ಪ್ಯಾಕ್ ಸೂಕ್ತವಾಗಿದೆ.

ಎಲ್ಲಾ ಹಳೆ ಸಿಮ್ ಕಾರ್ಡ್ ಬದಲಿಸಿಕೊಳ್ಳಬೇಕಾ? ಸರ್ಕಾರದಿಂದ ತಯಾರಿ, ಸ್ಟೋರ್ ಮುಂದೆ ಲೈನ್ ಫಿಕ್ಸ್!

₹195 ಕ್ರಿಕೆಟ್ ಪ್ಯಾಕ್ : 15GB ಡೇಟಾ + 90 ದಿನಗಳ ಹಾಟ್‌ಸ್ಟಾರ್ ಪ್ರವೇಶ
₹949 ಯೋಜನೆ : 84 ದಿನಗಳ ಕಾಲ 2GB ದೈನಂದಿನ 4G ಡೇಟಾ, ಅನಿಯಮಿತ 5G ಡೇಟಾ, ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಒಳಗೊಂಡಿದೆ. ಮಾತ್ರವಲ್ಲ 84 ದಿನಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಪ್ರವೇಶ ಕೂಡ ಇರಲಿದೆ.

ಜಿಯೋ ಫೈಬರ್ ಅಥವಾ ಜಿಯೋ ಏರ್‌ಫೈಬರ್‌ಗೆ ಹೊಸದಾಗಿ ಚಂದಾದಾರರಾಗುವ ಬಳಕೆದಾರರು 50 ದಿನಗಳ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಜೊತೆಗೆ ಇತರ ಹಲವು ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆಯುವ ಅವಕಾಶವಿದೆ. ಜಿಯೋ ಪ್ಲಸ್ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿರುವವರು ತಮ್ಮ ಮೊಬೈಲ್ ಸಾಧನಗಳಲ್ಲಿ 90 ದಿನಗಳ ಹಾಟ್‌ಸ್ಟಾರ್ ಪ್ರವೇಶ ಪಡೆದು ಮಜಾ ಮಾಡಬಹುದು.

ಹೆಚ್ಚಿನ ಡೇಟಾ ಅಗತ್ಯವಿರುವ ಪ್ರಿಪೇಯ್ಡ್ ಬಳಕೆದಾರರು ಆಡ್-ಆನ್ ಡೇಟಾ ಪ್ಯಾಕ್‌ಗಳು ಇಂತಿವೆ
₹219 – 30GB (30 ದಿನಗಳ ಮಾನ್ಯತೆ)
₹289 – 40GB (30 ದಿನಗಳ ಮಾನ್ಯತೆ)
₹359 – 50GB (30 ದಿನಗಳ ಮಾನ್ಯತೆ)

ಜಿಯೋದ ಅನಿಯಮಿತ 5G ಲಭ್ಯವಿರುವ ಪ್ರದೇಶಗಳಲ್ಲಿ, ಗ್ರಾಹಕರು ಅನಿಯಮಿತ ಹೈ-ಸ್ಪೀಡ್ ಡೇಟಾವನ್ನು ಆನಂದಿಸಬಹುದು. ವರದಿಗಳ ಪ್ರಕಾರ ಜಿಯೋಹಾಟ್‌ಸ್ಟಾರ್ ಐಪಿಎಲ್ 2025 ರ ಋತುವಿನಲ್ಲಿ ಡಿಜಿಟಲ್ ಜಾಹೀರಾತಿನಿಂದ ರೂ. 4,500 ಕೋಟಿಗೂ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆಯಿದೆ. ಟೆಲಿಕಾಂ ಕಂಪನಿಯು ಹೊಸ ಎಐ ಆಧಾರಿತ ವಾಣಿಜ್ಯ ತಂತ್ರಗಳು, ದಾಖಲೆಯ ವೀಕ್ಷಕರ ಸಂಖ್ಯೆ ಮತ್ತು ಪ್ರಾಯೋಜಕತ್ವದ ಒಪ್ಪಂದಗಳು ಸೇರಿದಂತೆ ಅಭೂತಪೂರ್ವ ರೀತಿಯಲ್ಲಿ ಐಪಿಎಲ್ ನಿಂದ ಬಂಡವಾಳ ಪಡೆದುಕೊಳ್ಳುತ್ತದೆ. ಸುಮಾರು 600 ಮಿಲಿಯನ್ ಜನರು ದೂರದರ್ಶನ ಮತ್ತು ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಐಪಿಎಲ್ ವೀಕ್ಷಿಸುತ್ತಾರೆ.