ಕೊರೋನಾದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈಲ್ವೆಯ ಭಾಗಶಃ ಖಾಸಗೀಕರಣಕ್ಕೆ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
Fact Check Sep 8, 2020, 11:33 AM IST
ಕೊರೋನಾ ಬಿಕ್ಕಟ್ಟಿನಿಂದಾಗಿ ಎಲ್ಲಾ ದೇಶಗಳ ಆರ್ಥಿಕತೆ ಕುಸಿದಿದೆ. ಅದರಲ್ಲೂ ಅಮೆರಿಕಾದ ಆರ್ಥಿಕತೆ ಭಾರತಕ್ಕಿಂತ ಹೆಚ್ಚು ಕುಸಿದಿದೆ ಎನ್ನಲಾಗುತ್ತಿದೆ. ನಿಜನಾ ಈ ಸುದ್ದಿ?
Fact Check Sep 7, 2020, 9:48 AM IST
ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಆನ್‌ಲೈನ್ ಕ್ಲಾಸ್ ಏನೋ ಶುರುವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳು ಮೊಬೈಲ್ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್ ಒದಗಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಕ್ಕಳಿಗೆ ಖುಷಿಯ ಸುದ್ದಿ ಇದು. ಆದರೆ ನಿಜನಾ ಇದು? ಈ ಸುದ್ದಿಯನ್ನು ಪೂರ್ತಿ ಓದಿ..!
Fact Check Sep 4, 2020, 9:06 AM IST
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದ ಪಾತಕಿ ನಾತುರಾಮ್ ಗೋಡ್ಸೆ ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
Fact Check Aug 31, 2020, 9:34 AM IST
ಮಾದಕ ಮೈಮಾಟ ಹೊಂದಿದ್ದ ಕಾರಣಕ್ಕೆ ಪಾಕಿಸ್ತಾನದ ಲಾಹೋರ್‌ನಲ್ಲಿ ಕಾಲೇಜು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸುದ್ದಿಯೊಂದು ಕಳೆದ ವಾರ ಸಖತ್ ಸದ್ದು ಮಾಡಿತ್ತು. 'ರಿಪಬ್ಲಿಕ್ ಆಫ್ ಬಜ್' ಎಂಬ ವೆಬ್ಸೈಟ್‌ನಲ್ಲಿ ಪ್ರಕಟವಾದ ವರದಿಯಂತೆ ವಿವಾಹಿತೆ, ಎರಡು ಮಕ್ಕಳ ತಾಯಿಯಾದ ಆಸಿಯಾ ಝುಬೈರ್ ಎಂಬಾಕೆಯು ಸೆಕ್ಸೀ ಫಿಗರ್ ಹೊಂದಿರುವ ಕಾರಣ, ಇದು ಕಾಲೇಜು ವಿದ್ಯಾರ್ಥಿಗಳ ಕಣ್ಣಿಗೆ ಬೀಳಲು 'ಅತಿಯಾದ ಆಕರ್ಷಣೆ'ಯಾಗಿರುವುದರಿಂದ ಆಗಸ್ಟ್ 11ರಂದು ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿತ್ತು. ಸಲ್ವಾರ್ ಕಮೀಜ್ ಧರಿಸಿರುವ ಯುವತಿಯೊಬ್ಬಳ ಫೋಟೋ ಹಾಕಿ ಅದೇ ಆಸಿಯಾ ಝುಬೈರ್ ಎಂಬಂತೆ ಬಿಂಬಿಸಲಾಗಿತ್ತು. ಸ್ವತಃ ಝುಬೈರ್ ತನ್ನ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಸ್ಕ್ರೀನ್‌ಶಾಟ್ ಹಾಕಲಾಗಿತ್ತು. ಆಕೆ ವಿಷಯ ಪ್ರಸ್ತಾಪಿಸಿ, 'ನಾನು ಕಾಲೇಜಿಗೆ ಸಲ್ವಾರ್ ಕಮೀಜ್ ಹಾಕಿಕೊಂಡು ಹೋಗುವ ಜೊತೆಗೆ ವಿಷಯಜ್ಞಾನ ಹೊಂದಿರುವೆ. ಅದು ಬಿಟ್ಟು ಅವರಿಗಿನ್ನೇನು ಬೇಕು? ಇದೊಂದು ಅವಮಾನಕಾರಿ ನಡೆ' ಎಂದು ಪೋಸ್ಟ್‌ನಲ್ಲಿ ಹೇಳಿದ್ದರು. ಈ ಸುದ್ದಿ ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ವೈರಲ್ ಆಗಿ, ಈ ಕುರಿತು ಹಲವಾರು ಮೀಮ್ಸ್‌ಗಳು, ಐ ಸಪೋರ್ಟ್ ಆಸಿಯಾ ಎಂಬ ಸ್ಲೋಗನ್‌ಗಳು ಬಹಳವಾಗಿ ಓಡಾಡಿದ್ದವು. ಈ ಸುದ್ದಿಯ ಅಸಲಿಯತ್ತೇನು ಎಂದು ತಡಕಾಡಿದಾಗ ಸಿಕ್ಕಿದ್ದಿಷ್ಟು.
International Aug 29, 2020, 7:21 PM IST
ಫೇಸ್‌ಬುಕ್‌ನಲ್ಲಿ ಪ್ರತಿ ದಿನ 200 ಕೋಟಿಗೂ ಅಧಿಕ ಬಾರಿ ‘ಜೈ ಶ್ರೀರಾಮ್’ ಎಂದು ಬರೆಯಲಾಗುತ್ತಿದೆ. ಅದಕ್ಕೆ ಮತ್ತಷ್ಟುಸಾವಿರಗಳನ್ನು ಸೇರಿಸೋಣ. ಜೈ ಶ್ರೀರಾಮ್, ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
Fact Check Aug 29, 2020, 9:17 AM IST
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಬಾತುಕೋಳಿಗಳ ಫೋಟೋ ತೆಗೆಯುತ್ತಿರುವ ಮತ್ತು ಪುಸ್ತಕ, ದಿನಪತ್ರಿಕೆ, ಲ್ಯಾಪ್‌ಟಾಪನ್ನು ಒಟ್ಟಿಗೇ ಇಟ್ಟುಕೊಂಡು ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಿಜನಾ ಈ ಸುದ್ದಿ?
Fact Check Aug 28, 2020, 9:10 AM IST
ಮೇಲ್ಸೇತುವೆಯೊಂದು ಕುಸಿದು ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದು ಬೆಂಗಳೂರಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ
Fact Check Aug 27, 2020, 6:09 PM IST
ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿದೆ ಎಂಬ ಸುದ್ದಿಗಳ ನಂತರ ಸದ್ಯ ನಕಲಿ ಗೋಡಂಬಿ ಸಹ ಮಾರುಕಟ್ಟೆಗೆ ಬಂದಿದೆ ಎಂಬ ಮತ್ತೊಂದು ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
Fact Check Aug 26, 2020, 9:11 AM IST
ಸವೋಚ್ಚ ನ್ಯಾಯಾಲಯ ‘ಸತ್ಯಮೇವ ಜಯತೇ’ (ಸತ್ಯಕ್ಕೇ ಜಯ) ಎಂಬ ತನ್ನ ಧ್ಯೇಯವಾಕ್ಯವನ್ನು ಬದಲಿಸಿ ‘ಯಥೋ ಧರ್ಮಸ್ಥತೋ ಜಯಃ’ (ಧರ್ಮ ಇರುವೆಡೆ ಜಯ) ಎಂಬ ಹೊಸ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ನಿಜವಾಗಿಯೂ ಸುಪ್ರೀಂಕೋರ್ಟ್ ಧ್ಯೇಯವಾಕ್ಯ ಬದಲಾಯಿತಾ?
Fact Check Aug 25, 2020, 9:25 AM IST
Fact Check: ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪ್ರತಿಮೆಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜವಾಗಿಯೂ ತಲೆಬಾಗಿದ್ರಾ ಮೋದಿ?
Fact Check Aug 24, 2020, 9:46 AM IST
‘ಬರ್ಹೇನ್ ರಾಜ ತಮ್ಮ ರಕ್ಷಣೆಗೆ ಸೇನಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಬದಲಾಗಿ ರೋಬೋಟ್ ಬಾಡಿಗಾರ್ಡ್ ನೇಮಿಸಿಕೊಂಡಿದ್ದಾರೆæ. ಈ ರೋಬೋಟ್‌ನಲ್ಲಿ 360 ಡಿಗ್ರಿ ಸಾಮರ್ಥ್ಯದ ಕ್ಯಾಮೆರಾಗಳಿದ್ದು, 3 ಪಿಸ್ತೂಲ್‌ಗಳನ್ನೂ ಅಳವಡಿಸಲಾಗಿದೆ. 4ನೇ ಕೈಗಾರಿಕಾ ಕ್ರಾಂತಿ ಬಗ್ಗೆ ಈ ರೋಬೋಟ್ ಮಾತನಾಡುತ್ತದೆ. ಇದು 6 ಭಾಷೆಗಳಲ್ಲಿ ಮಾತನಾಡಬಲ್ಲದು ಮತ್ತು 1050 ಜನರೊಂದಿಗೆ ಏಕಕಾಲದಲ್ಲಿ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ?
Fact Check Aug 20, 2020, 1:05 PM IST
ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನದಿಂದ ಬ್ರಿಟಿಷ್ ಪೊಲೀಸ್ ಅಧಿಕಾರಿಯೊಬ್ಬ ನಡು ಬೀದಿಯಲ್ಲಿ ವ್ಯಕ್ತಿಯೊಬ್ಬರನ್ನು ಕಟ್ಟಿಹಾಕಿ ಥಳಿಸುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋವನ್ನು ಒಳಗೊಂಡಿರುವ ದಿನಪತ್ರಿಕೆಯೊಂದರ ತುಣುಕನ್ನು ಪೋಸ್ಟ್ ಮಾಡಿ ನೆಟ್ಟಿಗರು, ‘ ಇದು ಭಗತ್ ಸಿಂಗ್ ಅವರ ಅಪರೂಪದ ಫೋಟೋ. ನೆಹರು ಮತ್ತು ಗಾಂಧಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆಂದು ನಮಗೆಲ್ಲ ಬೋಧಿಸಲಾಗಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದೀಗ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
Fact Check Aug 15, 2020, 11:44 AM IST
ವೈದ್ಯರು ಮತ್ತು ವಕೀಲರಂತೆ ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಶಿಕ್ಷಕ ಗುರುತಿನ ಲೋಗೋವನ್ನು ಹಾಕಿಕೊಳ್ಳಬಹುದು. ಈ ಹೊಸ ಲೋಗೋಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
Fact Check Aug 12, 2020, 9:04 AM IST
ಐತಿಹಾಸಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಸಂತೋಷಕ್ಕಾಗಿ ಫೇಸ್‌ಬುಕ್ ಭಾರತೀಯರೆಲ್ಲರಿಗೆ ಉಡುಗೊರೆ ನೀಡಿದೆ. ತನ್ನ ಕಾಮೆಂಟ್ ಇಮೋಜಿಯಲ್ಲಿ ಹಿಂದೂ ಧ್ವಜ (ಕೇಸರಿ)ವನ್ನೂ ಸೇರ್ಪಡೆ ಮಾಡಿದೆ. ಫೇಸ್‌ಬುಕ್ ಆ್ಯಪ್ ಅಪ್‌ಡೇಟ್ ಮಾಡಿದವರಿಗೆ ಈ ಆಯ್ಕೆ ಕಾಣಿಸುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
Fact Check Aug 8, 2020, 9:26 AM IST