Asianet Suvarna News Asianet Suvarna News

ಕರ್ನಾಟಕದಲ್ಲಿ ಧರ್ಮಾಧಾರಿತ ಮೀಸಲು ಕೊಟ್ಟಿಲ್ಲ: ಮೋದಿ ಆರೋಪ ತಳ್ಳಿಹಾಕಿದ ಕಾಂಗ್ರೆಸ್‌

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ರಾತ್ರೋರಾತ್ರಿ ಒಬಿಸಿ ಮೀಸಲು ಕೋಟಾದಲ್ಲಿ ಮುಸ್ಲಿಮರಿಗೂ ಸ್ಥಾನ ಕಲ್ಪಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪವನ್ನು ಕಾಂಗ್ರೆಸ್‌ ತಳ್ಳಿಹಾಕಿದೆ. ಕರ್ನಾಟಕದಲ್ಲಿ ಪಕ್ಷ ಯಾರಿಗೂ ಧರ್ಮಾಧಾರಿತ ಮೀಸಲು ನೀಡಿಲ್ಲ ಎಂದು ಪಕ್ಷದ ವಕ್ತಾರ ಜೈರಾಂ ರಮೇಶ್‌ ಹೇಳಿದ್ದಾರೆ.

Congress provided quotas to minorities but not on basis of religion says Jairam Ramesh rav
Author
First Published May 20, 2024, 6:32 AM IST

ಪಟನಾ (ಮೇ.20): ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ರಾತ್ರೋರಾತ್ರಿ ಒಬಿಸಿ ಮೀಸಲು ಕೋಟಾದಲ್ಲಿ ಮುಸ್ಲಿಮರಿಗೂ ಸ್ಥಾನ ಕಲ್ಪಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪವನ್ನು ಕಾಂಗ್ರೆಸ್‌ ತಳ್ಳಿಹಾಕಿದೆ. ಕರ್ನಾಟಕದಲ್ಲಿ ಪಕ್ಷ ಯಾರಿಗೂ ಧರ್ಮಾಧಾರಿತ ಮೀಸಲು ನೀಡಿಲ್ಲ ಎಂದು ಪಕ್ಷದ ವಕ್ತಾರ ಜೈರಾಂ ರಮೇಶ್‌ ಹೇಳಿದ್ದಾರೆ.

ಈ ಕುರಿತು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಂ ರಮೇಶ್‌, ‘ಕರ್ನಾಟಕ ಸೇರಿ ಯಾವುದೇ ರಾಜ್ಯದಲ್ಲಿ ನಾವು ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಮೀಸಲಾತಿ ನೀಡಿಲ್ಲ. ಈ ವಿಷಯದಲ್ಲಿ ಸಂವಿಧಾನದ ನಿಯಮಕ್ಕೆ ನಾವು ಬದ್ಧ. ಯಾರು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೋ ಅಂತಹ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿದ್ದೇವೆ ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮೀಸಲಾತಿಯನ್ನು ಕಸಿದುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ ಭಾರತದ ಸಂವಿಧಾನವನ್ನು ಉಲ್ಲಂಘಿಸಿ ಸಿಎಎ ಜಾರಿ ಮಾಡಿದೆ. ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಹುಲ್‌ ನಕ್ಸಲರ ಭಾಷೆ ಬಳಸುತ್ತಿದ್ದಾರೆ: ಕಾಂಗ್ರೆಸ್ ಸರ್ಕಾರದಲ್ಲಿ ಉದ್ಯಮಿಗಳು ಹೂಡಿಕೆ ಮಾಡಲು 50 ಸಲ ಯೋಚಿಸುತ್ತಾರೆ: ಮೋದಿ ಕಿಡಿ

ಬಿಜೆಪಿಗೆ ಲಾಭ ತಪ್ಪಿಸಲು ನಾನು ಸ್ಪರ್ಧಿಸಿಲ್ಲ: ಪ್ರಿಯಾಂಕಾ

ಅಮೇಠಿ (ಉ.ಪ್ರ.): ‘ನಾನು ದೇಶಾದ್ಯಂತ ಪಕ್ಷದ ಪ್ರಚಾರದತ್ತ ಗಮನ ಹರಿಸಲು ಬಯಸಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಾನು ಮತ್ತು ರಾಹುಲ್ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಬಿಜೆಪಿಗೆ ಲಾಭದಾಯಕ ಆಗುತ್ತಿತ್ತು. ಪ್ರಚಾರಕ್ಕಾಗಿ ಕನಿಷ್ಠ 15 ದಿನ ನಮ್ಮ ನಮ್ಮ ಕ್ಷೇತ್ರಗಳಲ್ಲೇ ಕಳೆಯುವಂತಾಗುತ್ತಿತ್ತು. ದೇಶ ಸುತ್ತಿ ಪ್ರಚಾರ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಇಬ್ಬರಲ್ಲಿ ಒಬ್ಬರು ಸ್ಪರ್ಧಿಸದೇ ಇರಲು ನಿರ್ಧರಿಸಿದೆವು’ ಎಂದರು.

ಪ್ರಧಾನಿ ಮೋದಿಯವರನ್ನ ಹೊಗಳಿದ್ದಕ್ಕೆ ಕಾಶ್ಮೀರದಲ್ಲಿ ಮಾಜಿ ಸರಪಂಚ್‌ನ ಹತ್ಯೆ?

ಇದೇ ವೇಳೆ, ‘ಭವಿಷ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ’ ಎಂಬ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಪ್ರಿಯಾಂಕಾ, ‘ನಾನು ಎಂದಿಗೂ ಸಂಸದೆ ಆಗುವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಮಾಡಿಲ್ಲ. ಪಕ್ಷ ಯಾವ ಕೆಲಸ ನೀಡುತ್ತೋ ಅದನ್ನು ಮಾಡುವೆ. ಚುನಾವಣೆಯಲ್ಲಿ ಹೋರಾಡು ಎಂದು ಜನ ಹೇಳಿದರೆ ಹೋರಾಡುವೆ’ ಎಂದರು.

Latest Videos
Follow Us:
Download App:
  • android
  • ios