Viral Check: ಶಿಕ್ಷಕರ ಕಾರಿಗೂ ಬಂತು ಲೋಗೋ!

ವೈದ್ಯರು ಮತ್ತು ವಕೀಲರಂತೆ ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಶಿಕ್ಷಕ ಗುರುತಿನ ಲೋಗೋವನ್ನು ಹಾಕಿಕೊಳ್ಳಬಹುದು. ಈ ಹೊಸ ಲೋಗೋಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

Fact Check of New logo approved by Supreme Court for Teachers

ವೈದ್ಯರು ಮತ್ತು ವಕೀಲರಂತೆ ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಶಿಕ್ಷಕ ಗುರುತಿನ ಲೋಗೋವನ್ನು ಹಾಕಿಕೊಳ್ಳಬಹುದು. ಈ ಹೊಸ ಲೋಗೋಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಲೋಗೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ, ‘ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು. ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಈ ಲೋಗೋ ಹಾಕಿಕೊಳ್ಳಲು ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

 

ಆದರೆ ನಿಜಕ್ಕೂ ಸುಪ್ರೀಂಕೋರ್ಟ್‌ ಇಂಥದ್ದೊಂದು ಅವಕಾಶ ನೀಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯ ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಿದಾಗ ಅಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಪತ್ತೆಯಾಗಿದೆ. ಅಲ್ಲದೆ ಈ ಲೋಗೋ ಕಳೆದ ಒಂದೆರಡು ವರ್ಷಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಲೋಗೋವನ್ನು 2017 ರಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಲೂದಿಯಾನಾದ ಸರ್ಕಾರಿ ಶಾಲೆಯ ಪ್ರಾಂಶುಪಾಲಕ ರಾಜೇಶ್‌ ಖನ್ನಾ ಅಭಿವೃದ್ಧಿಪಡಿಸಿದ್ದರು. ಸ್ವತಃ ರಾಜೇಶ್‌ ಖನ್ನಾ ಅವರು ಫೇಸ್‌ಬುಕ್‌ನಲ್ಲಿ ಇದನ್ನು ಅಪ್‌ಲೋಡ್‌ ಮಾಡಿದ್ದಾರೆ. ಅದರ ಹೊರತಾಗಿ ಆದರೆ ಈ ಬಗ್ಗೆ ಸುಪ್ರೀಂಕೋರ್ಟ್‌ ಯಾವುದೇ ನಿರ್ದೇಶನ ಅಥವಾ ಆದೇಶ ನೀಡಿಲ್ಲ. ಹಾಗಾಗಿ ಶಿಕ್ಷಕರೂ ತಮ್ಮ ಕಾರಿನ ಮೇಲೆ ಲೋಗೊ ಹಾಕಿಕೊಳ್ಳಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ ಎಂಬ ಸುದ್ದಿ ಸುಳ್ಳು.

- ವೈರಲ್ ಚೆಕ್ 

 

Latest Videos
Follow Us:
Download App:
  • android
  • ios