Asianet Suvarna News Asianet Suvarna News

Fact Check: ರೈಲ್ವೆ ಇಲಾಖೆ ಪೂರ್ತಿ ಖಾಸಗೀಕರಣವಾಗುತ್ತಿದೆಯಾ?

ಕೊರೋನಾದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈಲ್ವೆಯ ಭಾಗಶಃ ಖಾಸಗೀಕರಣಕ್ಕೆ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

Fact Check of Indian Railways to be Fully Privatised
Author
Bengaluru, First Published Sep 8, 2020, 11:33 AM IST

ನವದೆಹಲಿ (ಸೆ. 08): ಕೊರೋನಾದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈಲ್ವೆಯ ಭಾಗಶಃ ಖಾಸಗೀಕರಣಕ್ಕೆ ನಿರ್ಧರಿಸಿದೆ. ಈ ಮಧ್ಯೆ ಭಾರತೀಯ ರೈಲ್ವೆಯ ಪೂರ್ತಿ ಖಾಸಗೀಕರಣಕ್ಕೆ ಸರ್ಕಾರ ಸಿದ್ಧವಾಗಿದೆ. ಇದರಿಂದ ದೊಡ್ಡಮಟ್ಟದ ಉದ್ಯೋಗ ನಷ್ಟವಾಗಲಿದೆ.

ರೈಲ್ವೆಗೆ ಸಂಬಂಧಿಸಿದ ಒಟ್ಟು 7 ಕಾರ್ಖಾನೆಗಳನ್ನು ವಿಲೀನಗೊಳಿಸಲಾಗುತ್ತಿದೆ. 3.5 ಲಕ್ಷ ಕಾಯಂ ನೌಕರರನ್ನು ತೆಗೆದುಹಾಕಿ, ಅವರ ಬದಲಿಗೆ ಗುತ್ತಿಗೆ ನೌಕರರ ನೇಮಕಕ್ಕೆ ತಯಾರಿ ನಡೆಸಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ದೇಶಾಭಿಮಾನ ಎಂಬ ವೆಬ್‌ಸೈಟ್‌ನಲ್ಲಿ ಮೊದಲಿಗೆ ಈ ಸುದ್ದಿ ಪ್ರಕಟವಾಗಿದೆ.

 

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಪೂರ್ತಿ ಖಾಸಗೀಕರಣ ಮಾಡಲು ಸಿದ್ಧತೆ ನಡೆಸಿದೆಯೇ ಎಂದು ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಅಲ್ಲಿ ಲಭ್ಯವಾಗಿಲ್ಲ. ಅಷ್ಟೇ ಅಲ್ಲದೆ, ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾಗಿರುವ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ(ಪಿಐಬಿ) ಈ ಬಗ್ಗೆ ಸ್ಪಷ್ಟೀಕರಣ ನೀಡಿ, ವೈರಲ್‌ ಸಂದೇಶದಲ್ಲಿರುವ ಮಾಹಿತಿಗಳು ದಾರಿತಪ್ಪಿಸುವಂತಿವೆ. ಕೆಲವು ಕಡೆ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಸಂಪೂರ್ಣ ನಿಯಂತ್ರಣ ಭಾರತೀಯ ರೈಲ್ವೆ ಬಳಿಯಲ್ಲಿಯೇ ಇರಲಿದೆ ಎಂದು ಹೇಳಿದೆ. ಹಾಗಾಗಿ ವೈರಲ್‌ ಸಂದೇಶ ಸುಳ್ಳು.

- ವೈರಲ್ ಚೆಕ್ 

Follow Us:
Download App:
  • android
  • ios