ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಆನ್‌ಲೈನ್‌ ಕ್ಲಾಸ್‌ ಏನೋ ಶುರುವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳು ಮೊಬೈಲ್‌ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್ ಒದಗಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಕ್ಕಳಿಗೆ ಖುಷಿಯ ಸುದ್ದಿ ಇದು. ಆದರೆ ನಿಜನಾ ಇದು? ಈ ಸುದ್ದಿಯನ್ನು ಪೂರ್ತಿ ಓದಿ..!

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಹಲವು ತಿಂಗಳಿಂದ ಮುಚ್ಚಿದ್ದು, ಶಾಲಾ-ಕಾಲೇಜು ತೆರೆಯಲು ಕೇಂದ್ರ ಗೃಹ ಇಲಾಖೆಯಿಂದ ಇನ್ನೂ ಗ್ರೀನ್‌ ಸಿಗ್ನಲ್‌ ದೊರೆತಿಲ್ಲ. ಈ ನಡುವೆ ಹಲವು ಶಾಲಾ ಕಾಲೇಜುಗಳು ಆನ್‌ಲೈನ್‌ ತರಗತಿ ನಡೆಸುತ್ತಿದೆ. ಆದರೆ ಸ್ಮಾರ್ಟ್‌ಫೋನ್‌ ಕೊಳ್ಳಲು ಸಾಧ್ಯವಾಗದ ಮಕ್ಕಳು ಈ ತರಗತಿಗಳಿಂದ ವಂಚಿತರಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರವೇ ಎಲ್ಲಾ ವಿದ್ಯಾರ್ಥಿಗಳಿಗೆ ಆ್ಯಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳನ್ನು ಉಚಿತವಾಗಿ ವಿತರಿಸುವ ಯೋಜನೆ ಜಾರಿ ಮಾಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದರ ಜೊತೆಗೆ ವಿದ್ಯಾರ್ಥಿಗಳು ಸ್ಮಾರ್ಟ್‌ ಫೋನ್‌ ಪಡೆಯಲು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಹೆಸರನ್ನು ನೋಂದಾಯಿಸಿ ಎಂದೂ ಹೇಳಲಾಗಿದೆ. ಈ ಸಂದೇಶ ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಗೋಡ್ಸೆ ಫೋಟೋಗೆ ನಮಿಸಿದ್ರಾ ಮೋದಿ?

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಉಚಿತವಾಗಿ ಆ್ಯಂಡ್ರಾಯ್ಡ್‌ ಮೊಬೈಲ್‌ ವಿತರಿಸುತ್ತಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಕೇಂದ್ರ ಸರ್ಕಾರ ಇಂಥ ಯಾವುದೇ ಯೋಜನೆಯನ್ನೂ ಜಾರಿಗೆ ತಂದಿಲ್ಲ ಎಂಬುದು ಸ್ಪಷ್ಟವಾಗಿದೆ.

Scroll to load tweet…

ಅಲ್ಲದೆ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾದ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ (ಪಿಐಬಿ) ಸಹ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಕೇಂದ್ರ ಸರ್ಕಾರ ಇಂಥ ಯಾವುದೇ ಘೋಷಣೆ ಮಾಡಿಲ್ಲ. ಇದು ಸಂಪೂರ್ಣ ನಕಲಿ ಸುದ್ದಿ ಎಂದಿದೆ. ಜೊತೆಗೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳೂ ವರದಿ ಮಾಡಿಲ್ಲ. ಹಾಗಾಗಿ ಇದು ನಕಲಿ ಸುದ್ದಿ.

- ವೈರಲ್ ಚೆಕ್